Car Tips: ಕಾರಿನ ಟೈರ್ ಎಷ್ಟು ವರ್ಷಗಳ ನಂತರ ಬದಲಾಯಿಸಬೇಕು?, ಸರಿಯಾದ ಸಮಯ ಯಾವುದು?

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 18, 2024 | 12:23 PM

ಕಾರ್ ಟೈರ್‌ಗಳಿಗೆ ವಯಸ್ಸು ಎಂಬುದು ಇರುತ್ತದೆ ಮತ್ತು ಅವುಗಳ ಡೇಟ್ ಮೀರಿ ಬಳಸಿದರೆ, ತುಂಬಾ ಅಪಾಯಕಾರಿ. ಇದು ಕಾರು ಅಪಘಾತಕ್ಕೆ ಕಾರಣವಾಗಬಹುದು. ಇಂದು ನಾವು ಕಾರಿನ ಟೈರ್‌ಗಳ ಸ್ಥಿತಿ ಮತ್ತು ಅವುಗಳನ್ನು ಯಾವಾಗ ಬದಲಾಯಿಸಬೇಕು ಎಂಬುದರ ಕುರಿತು ಹೇಳಲಿದ್ದೇವೆ. ಹೆಚ್ಚಿನ ಕಾರು ಮಾಲೀಕರು ತಮ್ಮ ಕಾರುಗಳಲ್ಲಿ ಟೈರ್ ಬ್ಲಾಸ್ಟ್ ಆದ ನಂತರವೇ ಹೊಸ ಟೈರ್‌ಗಳನ್ನು ಅಳವಡಿಸುತ್ತಾರೆ, ಇದು ಸಂಪೂರ್ಣವಾಗಿ ತಪ್ಪು.

Car Tips: ಕಾರಿನ ಟೈರ್ ಎಷ್ಟು ವರ್ಷಗಳ ನಂತರ ಬದಲಾಯಿಸಬೇಕು?, ಸರಿಯಾದ ಸಮಯ ಯಾವುದು?
ಸಾಂದರ್ಭಿಕ ಚಿತ್ರ
Follow us on

ನಾವೆಲ್ಲರೂ ಕಾರಿನ ವೈಶಿಷ್ಟ್ಯಗಳು, ವಿನ್ಯಾಸ ಮತ್ತು ಲೈಟ್ಸ್ ಇತ್ಯಾದಿಗಳ ಬಗ್ಗೆ ಗಮನ ಹರಿಸುತ್ತೇವೆ, ಆದರೆ ಇವುಗಳಲ್ಲಿ ಪ್ರಮುಖವಾದವು ಟೈರ್​​ಗಳಾಗಿವೆ. ಕಾರಿನ ಟೈರ್‌ಗಳಿಗೆ ಹೆಚ್ಚಿನ ಒತ್ತು ನೀಡಬೇಕು, ಆದರೂ ಅನೇಕ ಜನರು ಅವುಗಳನ್ನು ನಿರ್ಲಕ್ಷಿಸುತ್ತಾರೆ. ಇಂದು ನಾವು ಕಾರಿನ ಟೈರ್‌ಗಳ ಸ್ಥಿತಿ ಮತ್ತು ಅವುಗಳನ್ನು ಯಾವಾಗ ಬದಲಾಯಿಸಬೇಕು ಎಂಬುದರ ಕುರಿತು ಹೇಳಲಿದ್ದೇವೆ. ಈ ಹಳೆಯ ಟೈರ್‌ಗಳು ನಿಮಗೆ ಅಪಾಯ ಅಥವಾ ಹಾನಿಯನ್ನು ಉಂಟುಮಾಡಬಹುದು. ಹೆಚ್ಚಿನ ಕಾರು ಮಾಲೀಕರು ತಮ್ಮ ಕಾರುಗಳಲ್ಲಿ ಟೈರ್ ಬ್ಲಾಸ್ಟ್ ಆದ ನಂತರವೇ ಹೊಸ ಟೈರ್‌ಗಳನ್ನು ಅಳವಡಿಸುತ್ತಾರೆ, ಇದು ಸಂಪೂರ್ಣವಾಗಿ ತಪ್ಪು.

ವಾಸ್ತವವಾಗಿ, ಕಾರ್ ಟೈರ್‌ಗಳಿಗೆ ವಯಸ್ಸು ಎಂಬುದು ಇರುತ್ತದೆ ಮತ್ತು ಅವುಗಳ ಡೇಟ್ ಮೀರಿ ಬಳಸಿದರೆ, ತುಂಬಾ ಅಪಾಯಕಾರಿ. ಇದು ಕಾರು ಅಪಘಾತಕ್ಕೆ ಕಾರಣವಾಗಬಹುದು. ನೀವು ಕಾರ್ ಟೈರ್‌ಗಳನ್ನು ಎಷ್ಟು ಸಮಯದವರೆಗೆ ಬಳಸಬಹುದು ಎಂಬುದನ್ನು ಇಂದು ನಾವು ನಿಮಗೆ ಹೇಳುತ್ತೇವೆ.

5-6 ವರ್ಷಗಳ ಬಳಕೆಯ ನಂತರ ಟೈರ್ ಅನ್ನು ಬದಲಾಯಿಸಬೇಕು:

ಟೈರ್​ನ ಹೊರಮೈಯು ಪರಿಪೂರ್ಣವಾಗಿ ಕಂಡುಬಂದರೂ ಸಹ, ಅದರ ರಬ್ಬರ್​ನ ಗುಣಮಟ್ಟವು ಕಾಲಾನಂತರದಲ್ಲಿ ಕ್ಷೀಣಿಸುತ್ತದೆ. 5-6 ವರ್ಷಗಳ ಬಳಕೆಯ ನಂತರ ಅದನ್ನು ಬದಲಾಯಿಸಬೇಕು. ಕೆಲವು ತಯಾರಕರು 10 ವರ್ಷಕ್ಕಿಂತ ಹಳೆಯದಾದ ಟೈರ್‌ಗಳನ್ನು ಮಿತವಾಗಿ ಬಳಸಿದ್ದರೂ ಸಹ ಬದಲಾಯಿಸಬೇಕೆಂದು ಶಿಫಾರಸು ಮಾಡುತ್ತಾರೆ.

ಮೈಲೇಜ್:

ಸಾಮಾನ್ಯವಾಗಿ, ಟೈರುಗಳು 40 ರಿಂದ 60 ಸಾವಿರ ಕಿಲೋಮೀಟರ್​ಗಳಷ್ಟು ಚಲಿಸಬಹುದು. ನೀವು ನಿಯಮಿತವಾಗಿ ಹೆಚ್ಚು ದೂರದವರೆಗೆ ಓಡಿಸಿದರೆ ಅಥವಾ ಕೆಟ್ಟ ರಸ್ತೆಗಳಲ್ಲಿ ಹೆಚ್ಚು ಓಡಿಸಿದರೆ ಟೈರ್‌ಗಳು ಬೇಗನೆ ಸವೆಯಬಹುದು.

ಟೈರ್ ಸ್ಥಿತಿಯನ್ನು ಪರಿಶೀಲಿಸಿ:

ಟೈರ್ ಟ್ರೆಡ್ ಆಳ ಕನಿಷ್ಠ 1.6 ಮಿಮೀ ಇರಬೇಕು. ಇದಕ್ಕಿಂತ ಕಡಿಮೆ ಇದ್ದರೆ ಟೈರ್ ಬದಲಾಯಿಸಬೇಕಾಗುತ್ತದೆ. ನೀವು ಇದನ್ನು “ಟ್ರೇಡ್ ವೇರ್ ಇಂಡಿಕೇಟರ್” (TWI) ಗಾಗಿ ಪರಿಶೀಲಿಸಬಹುದು. ಟೈರ್​ನಲ್ಲಿ ಯಾವುದೇ ಬಿರುಕುಗಳು ಅಥವಾ ಉಬ್ಬುಗಳು ಕಂಡುಬಂದರೆ ಅದನ್ನು ತಕ್ಷಣವೇ ಬದಲಾಯಿಸಿ. ಟೈರ್​ನ ಸ್ಥಿತಿ ಸಮವಾಗಿಲ್ಲದಿದ್ದರೆ ವೀಲ್ ಅಲೈನ್ಮೆಂಟ್ ಮಾಡುವ ಮೂಲಕ ಪರಿಶೀಲಿಸಿ. ಹಾಗೆಯೆ ಕೆಟ್ಟ ರಸ್ತೆಗಳಲ್ಲಿ ಅತಿಯಾಗಿ ಓಡಿಸಿದರೆ ಟೈರ್‌ಗಳು ಬೇಗನೆ ಸವೆಯುತ್ತವೆ ಮತ್ತು ಬೇಗನೆ ಬದಲಾಯಿಸಬೇಕಾಗಬಹುದು.

ಇದನ್ನೂ ಓದಿ: ಭಾರತದಲ್ಲಿ ವಾಹನ ನಂಬರ್ ಪ್ಲೇಟ್‌ಗಳಲ್ಲಿ ಎಷ್ಟು ಬಣ್ಣಗಳಿವೆ?: ಪ್ರತಿಯೊಂದರ ಅರ್ಥ ಏನು ಗೊತ್ತೇ?

ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ:

ಟೈರ್​ನಲ್ಲಿ ಸರಿಯಾದ ಒತ್ತಡವನ್ನು ಕಾಪಾಡಿಕೊಳ್ಳುವುದು ಮುಖ್ಯ. ಕಡಿಮೆ ಗಾಳಿ ತುಂಬಿದ ಟೈರ್‌ಗಳು ಬೇಗನೆ ಸವೆಯಬಹುದು. ನೀವು ಟೈರ್‌ಗಳ ಸ್ಥಿತಿಯನ್ನು ನಿರ್ಲಕ್ಷಿಸಿದರೆ, ಅದು ಸುರಕ್ಷತೆಗೆ ಅಪಾಯವನ್ನುಂಟುಮಾಡುತ್ತದೆ. ದೋಷಪೂರಿತ ಟೈರ್ ವಾಹನದ ಹಿಡಿತವನ್ನು ದುರ್ಬಲಗೊಳಿಸುತ್ತದೆ, ಸ್ಕಿಡ್ ಆಗುವ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಸಮಯಕ್ಕೆ ಟೈರ್ ಬದಲಾಯಿಸುವುದು ಬಹಳ ಮುಖ್ಯ.

ಕಾರಿನ ಟೈರ್‌ಗಳಲ್ಲಿ ಉತ್ತಮ ಹಿಡಿತ ಇರಬೇಕು, ಇದರಿಂದಾಗಿ ಬ್ರೇಕ್ ಹಾಕುವಾಗ ಕಾರು ಸಮಯಕ್ಕೆ ನಿಲ್ಲುತ್ತದೆ ಮತ್ತು ಯಾವುದೇ ಅಹಿತಕರ ಘಟನೆ ಸಂಭವಿಸುವುದಿಲ್ಲ. ಬ್ರೇಕ್ ಹಾಕುವಾಗ ನಿಮ್ಮ ಕಾರು ಜಾರುತ್ತಿದ್ದರೆ, ಟೈರ್ ಬದಲಾಯಿಸುವ ಸಮಯ ಬಂದಿದೆ ಎಂದು ನೀವು ಅರ್ಥಮಾಡಿಕೊಳ್ಳಬಹುದು.

ಆಟೋಮೊಬೈಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ