5 ಹೊಸ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಸಿಟ್ರನ್ ಇಸಿ3 ಎಲೆಕ್ಟ್ರಿಕ್

|

Updated on: Aug 25, 2024 | 9:06 PM

ಸಿಟ್ರನ್ ಇಂಡಿಯಾ ಕಂಪನಿಯು ತನ್ನ ಬಹುಬೇಡಿಕೆಯ ಇಸಿ3 ಎಲೆಕ್ಟ್ರಿಕ್ ಕಾರು ಮಾದರಿಯನ್ನು ಹೊಸ ಫೀಚರ್ಸ್ ಗಳೊಂದಿಗೆ ಉನ್ನತೀಕರಿಸುತ್ತಿದೆ.

5 ಹೊಸ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಸಿಟ್ರನ್ ಇಸಿ3 ಎಲೆಕ್ಟ್ರಿಕ್
ಸಿಟ್ರನ್ ಇಸಿ3 ಎಲೆಕ್ಟ್ರಿಕ್
Follow us on

ಹೊಸ ಕಾರು ಮಾದರಿಗಳೊಂದಿಗೆ ಗ್ರಾಹಕರ ಗಮನಸೆಳೆಯುತ್ತಿರುವ ಸಿಟ್ರನ್ ಇಂಡಿಯಾ (Citroen India) ಕಂಪನಿಯು ತನ್ನ ಬಹುಬೇಡಿಕೆಯ ಇಸಿ3 (eC3) ಎಲೆಕ್ಟ್ರಿಕ್ ಕಾರು ಮಾದರಿಯನ್ನು ಹೊಸ ಫೀಚರ್ಸ್ ಗಳೊಂದಿಗೆ ಉನ್ನತೀಕರಿಸುತ್ತಿದೆ. ಗ್ರಾಹಕರ ಅಭಿಪ್ರಾಯಗಳನ್ನು ಆಧರಿಸಿ ಹೊಸ ಫೀಚರ್ಸ್ ನೀಡಲಾಗುತ್ತಿದ್ದು,  ಎಕ್ಸ್ ಶೋರೂಂ ಪ್ರಕಾರ ಸದ್ಯಕ್ಕೆ ರೂ. 11.61 ಲಕ್ಷ ಆರಂಭಿಕ ಬೆಲೆಯೊಂದಿಗೆ ಮಾರಾಟವಾಗುತ್ತಿದೆ.

ಇಸಿ3 ಎಲೆಕ್ಟ್ರಿಕ್ ಕಾರು ಲೈವ್, ಫೀಲ್ ಮತ್ತು ಶೈನ್ ಎನ್ನುವ ಮೂರು ವೆರಿಯೆಂಟ್ ಗಳನ್ನು ಹೊಂದಿದ್ದು, ಇದರಲ್ಲಿ ಸ್ಪೆಷಲ್ ಎಡಿಷನ್ ಕೂಡಾ ಖರೀದಿಗೆ ಲಭ್ಯವಿದೆ. ಇದೀಗ ಎಲ್ಲಾ ವೆರಿಯೆಂಟ್ ಗಳಿಗೂ ಅನ್ವಯಿಸುವಂತೆ ಹೊಸ ಫೀಚರ್ಸ್ ಗಳನ್ನು ನೀಡಲಾಗುತ್ತಿದ್ದು, ಇವು ಕಾರು ಚಾಲನೆಯನ್ನು ಮತ್ತಷ್ಟು ಅರಾಮದಾಯಕ ಮತ್ತು ಸುರಕ್ಷಿತವಾಗಿಸಲಿವೆ.

ಸಿಟ್ರನ್ ಕಂಪನಿಯು ಇಸಿ3 ಕಾರಿನಲ್ಲಿ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಪವರ್ಡ್ ವಿಂಗ್ ಮಿರರ್, ಮರು ಹೊಂದಾಣಿಕೆ ಮಾಡಲಾಗಿರುವ ರಿಯರ್ ವಿಂಡೋ ಸ್ವಿಚ್ಸ್, ಎಲ್ಇಡಿ ಹೆಡ್ ಲ್ಯಾಂಪ್ಸ್ ಮತ್ತು ಸುರಕ್ಷತೆಗಾಗಿ 6 ಏರ್ ಬ್ಯಾಗ್ ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತಿದೆ. ಹೊಸ ಫೀಚರ್ಸ್ ಗಳಲ್ಲಿ ಏರ್ ಬ್ಯಾಗ್ ಹೊರತುಪಡಿಸಿ ಇನ್ನುಳಿದ ಫೀಚರ್ಸ್ ಗಳು ವೆರಿಯೆಂಟ್ ನಿಂದ ವೆರಿಯೆಂಟ್ ಗಳಿಗೆ ಬದಲಾಗಲಿದ್ದು, ಟಾಪ್ ಎಂಡ್ ಮಾದರಿಯಲ್ಲಿ ಹೆಚ್ಚಿನ ಫೀಚರ್ಸ್ ನೋಡಬಹುದಾಗಿದೆ.

ಹೊಸ ಫೀಚರ್ಸ್ ಗಳನ್ನು ಇತ್ತೀಚೆಗೆ ಬಿಡುಗಡೆಯಾದ ಬಸಾಲ್ಟ್ ಎಸ್ ಯುವಿಯಲ್ಲೂ ಎರವಲು ಪಡೆದುಕೊಳ್ಳುತ್ತಿದ್ದು, ಇದೀಗ ಗ್ರಾಹಕರು ಬಜೆಟ್ ಬೆಲೆಯಲ್ಲೂ ಅತ್ಯುತ್ತಮ ಫೀಚರ್ಸ್ ಗಳನ್ನು ಅನುಭವಿಸಬಹುದಾಗಿದೆ. ಇದರ ಹೊರತಾಗಿ ಇನ್ನುಳಿದ ಸ್ಟ್ಯಾಂಡರ್ಡ್ ಫೀಚರ್ಸ್ ಗಳನ್ನು ವೆರಿಯೆಂಟ್ ಗಳಿಗೆ ಅನುಗುಣವಾಗಿ ಜೋಡಣೆಯಾಗಿದ್ದು, ಬೆಲೆ ಕೂಡಾ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಆಕರ್ಷಕವಾಗಿದೆ.

ಇಸಿ3 ಎಲೆಕ್ಟ್ರಿಕ್ ಕಾರು ಮಾದರಿಯಲ್ಲಿ ಸಿಟ್ರನ್ ಕಂಪನಿಯು 29.2 ಕೆವಿಹೆಚ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ಇದು ಸಿಂಗಲ್ ಮೋಟಾರ್ ನೊಂದಿಗೆ 56 ಹಾರ್ಸ್ ಪವರ್ ಮತ್ತು 143 ಎನ್ಎಂ ಟಾರ್ಕ್ ಉತ್ಪಾದಿಸುವ ಮೂಲಕ ಪ್ರತಿ ಚಾರ್ಜ್ ಗೆ ಗರಿಷ್ಠ 320 ಕಿ.ಮೀ ಮೈಲೇಜ್ ನೀಡುತ್ತದೆ. ಇದು ಸದ್ಯ ಎಂಜಿ ಕಾಮೆಟ್ ಮತ್ತು ಟಾಟಾ ಪಂಚ್ ಎಲೆಕ್ಟ್ರಿಕ್ ಕಾರು ಮಾದರಿಗೆ ನೇರ ಪೈಪೋಟಿ ನೀಡುತ್ತಿದ್ದು, ಹೊಸ ಫೀಚರ್ಸ್ ಗಳು ಮತ್ತಷ್ಟು ಬೇಡಿಕೆ ಹೆಚ್ಚಿಸುವ ನೀರಿಕ್ಷೆಗಳಿವೆ.