ಭಾರತದ ಜನಪ್ರಿಯ ಎಸ್ ಯುವಿ ಕಾರು ಖರೀದಿಸಿದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗನ ಪುತ್ರಿ

|

Updated on: Dec 08, 2023 | 6:45 PM

ಭಾರತದಲ್ಲಿ ಮಾರಾಟಗೊಳ್ಳುವ ಜನಪ್ರಿಯ ಎಸ್ ಯುವಿಗಳಲ್ಲಿ ಮಹೀಂದ್ರಾ ನಿರ್ಮಾಣದ ಕಾರುಗಳು ಮುಂಚೂಣಿಯಲ್ಲಿದ್ದು, ಇತ್ತೀಚೆಗೆ ಆಸ್ಟ್ರೇಲಿಯಾದಲ್ಲೂ ಮಹೀಂದ್ರಾ ಹೊಸ ಎಸ್ ಯುವಿ ಕಾರುಗಳು ಭಾರೀ ಬೇಡಿಕೆ ಪಡೆದುಕೊಳ್ಳುತ್ತಿರುವುದು ವಿಶೇಷವಾಗಿದೆ.

ಭಾರತದ ಜನಪ್ರಿಯ ಎಸ್ ಯುವಿ ಕಾರು ಖರೀದಿಸಿದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗನ ಪುತ್ರಿ
ಮಹೀಂದ್ರಾ ಎಕ್ಸ್ ಯುವಿ700
Follow us on

ಮಧ್ಯಮ ಕ್ರಮಾಂಕದ ಎಸ್ ಯುವಿ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಿರುವ ಮಹೀಂದ್ರಾ (Mahinda) ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ವಿವಿಧ ಕಾರು ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಭರ್ಜರಿ ಬೇಡಿಕೆಯೊಂದಿಗೆ ಪ್ರತಿಸ್ಪರ್ಧಿ ಮಾದರಿಗಳಿಗೆ ಉತ್ತಮ ಸ್ಪರ್ಧೆ ನೀಡುತ್ತಿದೆ. ಮಹೀಂದ್ರಾ ಕಂಪನಿಯು ಕೇವಲ ಭಾರತದಲ್ಲಿ ಮಾತ್ರವಲ್ಲವಲ್ಲದೆ ಸಾಗರೋತ್ತರ ಕಾರು ಮಾರಾಟದಲ್ಲೂ ಹಲವಾರು ಮಾರಾಟ ದಾಖಲೆಗಳನ್ನು ನಿರ್ಮಿಸುತ್ತಿದ್ದು, ಇತ್ತೀಚೆಗೆ ಆಸ್ಟ್ರೇಲಿಯಾ ಕ್ರಿಕೆಟ್ ವಿಮರ್ಶಕ ಮತ್ತು ಮಾಜಿ ಕ್ರಿಕೆಟಿಗರಾಗಿರುವ ಮ್ಯಾಥ್ಯೂ ಹೇಡನ್ ಪುತ್ರಿ ಗ್ರೇಸಿ ಹೇಡನ್ (Grace Hayden) ಎಕ್ಸ್ ಯುವಿ700 ಎಸ್ ಯುವಿ ಖರೀದಿಸಿದ್ದಾರೆ.

ಗ್ರೀಸಿ ಹೇಡನ್ ಎಕ್ಸ್ ಯುವಿ700 ಎಸ್ ಯುವಿ ಖರೀದಿಗೂ ಮುನ್ನ ಮ್ಯಾಥ್ಯೂ ಹೇಡನ್ ಕೂಡಾ ಸ್ಕಾರ್ಪಿಯೋ-ಎನ್ ಎಸ್ ಯುವಿ ವಿತರಣೆಯನ್ನು ಪಡೆದುಕೊಂಡಿದ್ದು, ಈ ಮೂಲಕ ಮಹೀಂದ್ರಾ ಹೊಸ ಎಸ್ ಯುವಿ ಕಾರುಗಳು ವಿದೇಶದಲ್ಲೂ ಹೊಸ ಸಂಚಲನ ಮೂಡಿಸಿವೆ. ಮಹೀಂದ್ರಾ ಕಂಪನಿಯು ಸದ್ಯ ಭಾರತ ಸೇರಿದಂತೆ ಮಧ್ಯ ಪ್ರಾಚ್ಯ ರಾಷ್ಟ್ರಗಳು, ದಕ್ಷಿಣ ಆಫ್ರಿಕಾ, ಯುಎಸ್ ಮತ್ತು ಆಸ್ಟ್ರೇಲಿಯಾದಲ್ಲೂ ಉತ್ತಮ ಬೇಡಿಕೆ ಹೊಂದಿದ್ದು, ಹೊಸ ತಲೆಮಾರಿನ ಎಕ್ಸ್ ಯುವಿ700 ಮತ್ತು ಸ್ಕಾರ್ಪಿಯೋ ಎಸ್ ಯುವಿ ಮಾದರಿಗಳಿಗೆ ಹೆಚ್ಚಿನ ಬೇಡಿಕೆ ದಾಖಲಾಗುತ್ತಿದೆ.

ವಿನೂತನ ವೈಶಿಷ್ಟ್ಯತೆಗಳು ಮತ್ತು ಬಲಿಷ್ಠ ಎಂಜಿನ್ ನೊಂದಿಗೆ ಐಷಾರಾಮಿ ಡ್ರೈವಿಂಗ್ ಅನುಭವ ನೀಡುವ ಎಕ್ಸ್ ಯುವಿ700 ಕಾರು ಮಾದರಿಯು ಸಾಮಾನ್ಯ ರಸ್ತೆಗಳಲ್ಲಿ ಮಾತ್ರವಲ್ಲದೆ ಆಫ್-ರೋಡ್ ಚಾಲನೆಯಲ್ಲೂ ಗಮನಸೆಳೆಯುತ್ತದೆ. ಹೀಗಾಗಿ ವಿದೇಶಿ ಮಾರುಕಟ್ಟೆಗಳಲ್ಲೂ ಗಮನಸೆಳೆಯುತ್ತಿರುವ ಹೊಸ ಎಕ್ಸ್ ಯುವಿ700 ಮಾದರಿಯು ಮುಂಬರುವ ದಿನಗಳಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಇದನ್ನೂ ಓದಿ: ಬಜೆಟ್ ಬೆಲೆಗೆ ಖರೀದಿಸಬಹುದಾದ ಅತ್ಯುತ್ತಮ 7 ಸೀಟರ್ ಕಾರುಗಳಿವು!

ಕಾರು ಉತ್ಪಾದನೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಭಾರತೀಯ ಆಟೋ ಉದ್ಯಮದ ಕುರಿತಾದ ಅಧ್ಯಯನಕ್ಕೆ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಗ್ರೀಸಿ ಹೇಡನ್ ಅವರು ಮಹೀಂದ್ರಾ ಕಾರು ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ಅಚ್ಚರಿ ವ್ಯಕ್ತಪಡಿಸಿದ್ದರು. ಭರ್ಜರಿ ಫೀಚರ್ಸ್ ಹೊಂದಿರುವ ಎಕ್ಸ್ ಯುವಿ700 ಕಾರನ್ನು ಆಸ್ಟ್ರೇಲಿಯಾಕ್ಕೆ ಹಿಂದಿರುಗಿದ ತಕ್ಷಣವೇ ಖರೀದಿಸಿದ ಗ್ರೀಸಿ ಹೇಡನ್, ಹೊಸ ಕಾರಿನ ವಿಶೇಷತೆಗಳ ಬಗೆಗೆ ಸಾಕಷ್ಟು ಉತ್ಸುಕರಾಗಿದ್ದಾರೆ.

ಇನ್ನು ಎಕ್ಸ್ ಯುವಿ700 ಎಸ್ ಯುವಿ ಕಾರು ಮಾದರಿಯು ಭಾರತದಲ್ಲಿ ಬಿಡುಗಡೆಯ ನಂತರ 1 ಲಕ್ಷಕ್ಕೂ ಯುನಿಟ್ ಮಾರಾಟಗೊಂಡಿದ್ದು, ಹೊಸ ಕಾರು ಮಾದರಿ ಖರೀದಿಗಾಗಿ ಇದುವರೆಗೆ ಸುಮಾರು 2 ಲಕ್ಷಕ್ಕೂ ಹೆಚ್ಚು ಗ್ರಾಹಕರು ಬುಕಿಂಗ್ ದಾಖಲಿಸಿದ್ದಾರೆ. ಉತ್ಪಾದನಾ ಪ್ರಮಾಣ ಆಧರಿಸಿ ಇದುವರೆಗೆ 1 ಲಕ್ಷ ಗ್ರಾಹಕರಿಗೆ ವಿತರಣೆ ಮಾಡಿರುವ ಮಹೀಂದ್ರಾ ಕಂಪನಿಯು ಇದೀಗ ವಿದೇಶ ಮಾರುಕಟ್ಟೆಗಳಲ್ಲೂ ಗಮನಾರ್ಹವಾದ ಬೆಳವಣಿಗೆ ಸಾಧಿಸುತ್ತಿದೆ.

2021ರ ಅಂತ್ಯದಲ್ಲಿ ಬಿಡುಗಡೆಗೊಂಡಿದ್ದ ಹೊಸ ಎಕ್ಸ್ ಯುವಿ700 ಕಾರು ಮಾದರಿಯು ಬಿಡುಗಡೆಯಾದ ಮೊದಲ ದಿನವೇ ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಬುಕಿಂಗ್ ಪಡೆದುಕೊಳ್ಳುವ ಮೂಲಕ ಹೊಸ ದಾಖಲೆ ನಿರ್ಮಿಸಿತ್ತು. ತದನಂತರದಲ್ಲಿ ಬುಕಿಂಗ್ ಪ್ರಮಾಣವು 2.50 ಲಕ್ಷಕ್ಕೂ ಅಧಿಕ ದಾಖಲಾಗಿದ್ದು, ಇದರಲ್ಲಿ ಇದೀಗ 1 ಲಕ್ಷ ಯುನಿಟ್ ಕಾರುಗಳನ್ನು ಅಧಿಕೃತವಾಗಿ ವಿತರಣೆ ಮಾಡಲಾಗಿದೆ. ಹೊಸ ಎಕ್ಸ್‌ಯುವಿ700 ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಗ್ರಾಹಕರ ಬೇಡಿಕೆಯೆಂತೆ 5 ಸೀಟರ್ ಮತ್ತು 7 ಸೀಟರ್ ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 14.01 ಲಕ್ಷಕ್ಕೆ ಮತ್ತು ಹೆಚ್ಚಿನ ಮಟ್ಟದ ಫೀಚರ್ಸ್ ಹೊಂದಿರುವ ಟಾಪ್ ಎಂಡ್ ಮಾದರಿಯನ್ನು ರೂ. 26.57 ಲಕ್ಷ ಬೆಲೆ ಹೊಂದಿದೆ.

ಇದನ್ನೂ ಓದಿ: ಭಾರತದಲ್ಲಿ ಖರೀದಿಗೆ ಲಭ್ಯವಿರುವ ಟಾಪ್ 5 ಸುರಕ್ಷಿತ ಕಾರುಗಳಿವು!

ಎಕ್ಸ್ ಯುವಿ700 ಕಾರಿನಲ್ಲಿ 2.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2-ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಗಳಿದ್ದು, ಇದರಲ್ಲಿ 2.0-ಲೀಟರ್ ಪೆಟ್ರೋಲ್ ಮಾದರಿಯು 198-ಬಿಎಚ್‌ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ 2.2-ಲೀಟರ್ ಡೀಸೆಲ್ ಮಾದರಿಯು 183-ಬಿಎಚ್‌ಪಿ ಮತ್ತು 450-ಎನ್ಎಂ ಟಾರ್ಕ್ ಉತ್ಪಾದನಾ ವೈಶಿಷ್ಟ್ಯತೆ ಹೊಂದಿದೆ. ಹಾಗೆಯೇ ಹೊಸ ಕಾರಿನಲ್ಲಿ ಹೆಚ್ಚಿನ ಸುರಕ್ಷತೆಗಾಗಿ ಅಡ್ವಾನ್ಸ್ ಡ್ರೈವರ್ ಅಸಿಸ್ಟೆಡ್ ಸಿಸ್ಟಂ ಜೊತೆಗೆ 7 ಏರ್‌ಬ್ಯಾಗ್, ಎಬಿಎಸ್ ಜೊತೆಗೆ ಇಬಿಡಿ, ಎಲೆಕ್ಟ್ರಾನಿಕ್ ಲಾಕಿಂಗ್, ಟ್ರಾಕ್ಷನ್ ಕಂಟ್ರೋಲ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋ ಹೆಡ್‌ಲ್ಯಾಂಪ್ ಬೂಸ್ಟರ್, ವ್ಯಯಕ್ತಿಕರಣಗೊಳಿಸಿದ ಸೇಫ್ಟಿ ಅಲರ್ಟ್, ಡ್ರೈವರ್ ಡ್ರಾಸಿನೆಸ್ ಅಲರ್ಟ್, ಲೆನ್ ಕಿಪ್ ಅಸಿಸ್ಟ್ ಸೌಲಭ್ಯಗಳಿವೆ.

Published On - 3:56 pm, Fri, 8 December 23