Hyundai i20 N line facelift: ಹೊಸ ಫೀಚರ್ಸ್ ಗಳೊಂದಿಗೆ ಹ್ಯುಂಡೈ ಐ20 ಎನ್ ಲೈನ್ ಫೇಸ್ ಲಿಫ್ಟ್ ಬಿಡುಗಡೆ

|

Updated on: Sep 22, 2023 | 2:39 PM

ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ನವೀಕರಿಸಿದ ಹ್ಯುಂಡೈ ಐ20 ಎನ್ ಲೈನ್ ಫೇಸ್ ಲಿಫ್ಟ್ ಬಿಡುಗಡೆ ಮಾಡಿದ್ದು, ಹೊಸ ಕಾರು ಹಲವಾರು ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

Hyundai i20 N line facelift: ಹೊಸ ಫೀಚರ್ಸ್ ಗಳೊಂದಿಗೆ ಹ್ಯುಂಡೈ ಐ20 ಎನ್ ಲೈನ್ ಫೇಸ್ ಲಿಫ್ಟ್ ಬಿಡುಗಡೆ
ಹ್ಯುಂಡೈ ಐ20 ಎನ್ ಲೈನ್ ಫೇಸ್ ಲಿಫ್ಟ್ ಬಿಡುಗಡೆ
Follow us on

ದೇಶದ ಎರಡನೇ ಅತಿದೊಡ್ಡ ಕಾರು ಉತ್ಪಾದನಾ ಕಂಪನಿಯಾಗಿರುವ ಹ್ಯುಂಡೈ ಇಂಡಿಯಾ(Hyundai India) ತನ್ನ ಬಹುನೀರಿಕ್ಷಿತ ಐ20 ಎನ್ ಲೈನ್ ಫೇಸ್ ಲಿಫ್ಟ್(i20 N line facelift) ಬಿಡುಗಡೆ ಮಾಡಿದ್ದು, ಹೊಸ ಕಾರು ಎನ್6 ಮತ್ತು ಎನ್8 ವೆರಿಯೆಂಟ್ ಗಳೊಂದಿಗೆ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 9.99 ಲಕ್ಷ ಆರಂಭಿಕ ಬೆಲೆ ಹೊಂದಿದೆ.

ಐ20 ಎನ್ ಲೈನ್ ಫೇಸ್ ಲಿಫ್ಟ್ ಕಾರಿನ ಎನ್6 ಮ್ಯಾನುವಲ್ ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 9.99 ಲಕ್ಷ ಬೆಲೆ ಹೊಂದಿದ್ದರೆ, ಎನ್6 ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಆವೃತ್ತಿಯು ರೂ. 11.10 ಲಕ್ಷ, ಎನ್8 ಮ್ಯಾನುವಲ್ ರೂ. 11.22 ಲಕ್ಷ ಮತ್ತು ಎನ್8 ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಆವೃತ್ತಿಯು ರೂ. 12.32 ಲಕ್ಷ ಬೆಲೆ ಪಡೆದುಕೊಂಡಿವೆ.

ಹ್ಯುಂಡೈ ಕಂಪನಿಯು ಐ20 ಸ್ಟ್ಯಾಂಡರ್ಡ್ ಮಾದರಿಯಲ್ಲಿ ಇತ್ತೀಚೆಗೆ 1.2 ಲೀಟರ್ ಪೆಟ್ರೋಲ್ ಆವೃತ್ತಿಯನ್ನು ಮಾತ್ರ ಪರಿಚಯಿಸಿದ್ದು, 1.0 ಟರ್ಬೊ ಪೆಟ್ರೋಲ್ ಆವೃತ್ತಿಯನ್ನು ತಗೆದುಹಾಕಿದೆ. ಇದೀಗ ಐ20 ಎನ್ ಲೈನ್ ಆವೃತ್ತಿಯಲ್ಲಿ ಮಾತ್ರ 1.0 ಟರ್ಬೊ ಪೆಟ್ರೋಲ್ ಆವೃತ್ತಿಯನ್ನು ಮಾತ್ರ ಮಾರಾಟ ಮಾಡುವುದಾಗಿ ಸ್ಪಷ್ಟಪಡಿಸಿದ್ದು, ಪ್ರತಿ ವೆರಿಯೆಂಟ್ ನಲ್ಲೂ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇಲ್ಲವೆ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ನೀಡಲಾಗಿದೆ.

ಇದನ್ನೂ ಓದಿ: ಹೋಂಡಾ ಎಲಿವೇಟ್ Vs ಸಿಟ್ರನ್ ಸಿ3 ಏರ್‌ಕ್ರಾಸ್: ಹೊಸ ಎಸ್ ಯುವಿಗಳಲ್ಲಿ ಯಾವುದು ಖರೀದಿಗೆ ಬೆಸ್ಟ್?

ಪರ್ಫಾಮೆನ್ಸ್ ಪ್ರಿಯರಿಗಾಗಿಯೇ ಹ್ಯುಂಡೈ ಕಂಪನಿಯು ತನ್ನ ಪ್ರಮುಖ ಕಾರುಗಳಲ್ಲಿ ಎನ್ ಲೈನ್ ಆವೃತ್ತಿಗಳನ್ನು ಪರಿಚಯಿಸಿದ್ದು, ಐ20 ಲೈನ್ ಕೂಡಾ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ. ಇದೀಗ ನವೀಕೃತ ಮಾದರಿಯು ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಹೊಸ ಕಾರಿನಲ್ಲಿರುವ 1.0 ಲೀಟರ್ ಟರ್ಬೊ ಪೆಟ್ರೋಲ್ ಮಾದರಿಯು 120 ಹಾರ್ಸ್ ಪವರ್ ಮತ್ತು 172 ಎನ್ಎಂ ಟಾರ್ಕ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ.

ಹೊಸ ಐ20 ಎನ್ ಲೈನ್ ಫೇಸ್ ಲಿಫ್ಟ್ ಆವೃತ್ತಿಯು ನವೀಕೃತ ವಿನ್ಯಾಸದೊಂದಿಗೆ ಹಲವಾರು ಫೀಚರ್ಸ್ ಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿದ್ದು, ಎನ್ ಲೈನ್ ಲೊಗೊದೊಂದಿಗೆ ಸ್ಪೋರ್ಟಿಯಾಗಿರುವ ಫ್ರಂಟ್ ಬಂಪರ್, ರೆಡ್ ಆಕ್ಸೆಂಟ್ ಹೊಂದಿರುವ ಪಾರಾಮ್ಯಾಟಿಕ್ ಫ್ರಂಟ್ ಗ್ರಿಲ್, ರೆಡ್ ಆಕ್ಸೆಂಟ್ ಹೊಂದಿರುವ ಟ್ವಿನ್ ಎಕ್ಸಾಸ್ಟ್, ಟೈಲ್ ಲ್ಯಾಂಪ್ ಗಳ ಮೇಲೆ ಡಾರ್ಕ್ ಕ್ರೊಮ್ ಗಾರ್ನಿಶ್ ನೀಡಲಾಗಿದೆ. ಹಾಗೆಯೇ ಹೊಸ ಕಾರಿನಲ್ಲಿ ಫುಲ್ ಎಲ್ಇಡಿ ಹೆಡ್ ಲ್ಯಾಂಪ್ಸ್, 16 ಇಂಚಿನ ಅಲಾಯ್ ವ್ಹೀಲ್ ಗಳು, ಆಲ್ ವ್ಹೀಲ್ ಡಿಸ್ಕ್ ಬ್ರೇಕ್, ಸ್ಪೋರ್ಟಿಯರ್ ಸಸ್ಷೆಂಷನ್ ನೀಡಲಾಗಿದೆ.

ಐ20 ಎನ್ ಲೈನ್ ಫೇಸ್ ಲಿಫ್ಟ್ ಆವೃತ್ತಿಯ ಒಳಭಾಗದಲ್ಲೂ ಹಲವಾರು ಪ್ರೀಮಿಯಂ ಫೀಚರ್ಸ್ ನೀಡಲಾಗಿದ್ದು, ಆಕರ್ಷಕವಾದ ಡ್ಯಾಶ್ ಬೋರ್ಡ್, ಎನ್ ಲೈನ್ ಬ್ಯಾಡ್ಜಿಂಗ್ ಮತ್ತು ರೆಡ್ ಆಕ್ಸೆಂಟ್ ಹೊಂದಿರುವ ಆಸನಗಳು ಮತ್ತು ಸ್ಟೀರಿಂಗ್ ವ್ಹೀಲ್ ಗಮನಸೆಳೆಯುತ್ತವೆ. ಜೊತೆಗೆ ರೆಡ್ ಆ್ಯಂಬಿಯೆಂಟ್ ಲೈಟಿಂಗ್ಸ್, ಮೆಟಲ್ ಫಿನಿಷ್ ಹೊಂದಿರುವ ಪೆಡಲ್, 10.25 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್ ಲೆಸ್ ಫೋನ್ ಚಾರ್ಜಿಂಗ್, ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಸಿಂಗಲ್ ಪೇನ್ ಸನ್ ರೂಫ್, ಬಾಷ್ 7-ಸ್ಪೀಕರ್ಸ್ ಸೌಂಡ್ ಸಿಸ್ಟಂ ಸೌಲಭ್ಯ ನೀಡಲಾಗಿದೆ.

ಇದನ್ನೂ ಓದಿ: ಎಡಿಎಎಸ್ ಫೀಚರ್ಸ್ ಹೊಂದಿರುವ ಟಾಪ್ 5 ಬಜೆಟ್ ಕಾರುಗಳಿವು!

ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಆಲ್ ವ್ಹೀಲ್ ಡಿಸ್ಕ್ ಬ್ರೇಕ್ ಜೊತೆಗೆ 6 ಏರ್ ಬ್ಯಾಗ್ ಗಳು, 3 ಪಾಯಿಂಟ್ ಸೀಟ್ ಬೆಲ್ಟ್, ಸೀಟ್ ಬೆಲ್ಟ್ ರಿಮೆಂಡರ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ರಿವರ್ಸ್ ಕ್ಯಾಮೆರಾ, ಆಟೋಮ್ಯಾಟಿಕ್ ಹೆಡ್ ಲ್ಯಾಂಪ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೋಲ್ ಮತ್ತು ಹಿಲ್ ಅಸಿಸ್ಟ್ ಕಂಟ್ರೋಲ್ ಸೌಲಭ್ಯಗಳಿವೆ.

Published On - 2:34 pm, Fri, 22 September 23