Tata Nexon facelift: ಭರ್ಜರಿ ಮೈಲೇಜ್ ನೀಡುತ್ತೆ ಟಾಟಾ ನೆಕ್ಸಾನ್ ಫೇಸ್ ಲಿಫ್ಟ್

ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಫೇಸ್ ಲಿಫ್ಟ್ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಕಾರು ಪ್ರೀಮಿಯಂ ಫೀಚರ್ಸ್ ಗಳೊಂದಿಗೆ ಭರ್ಜರಿ ಮೈಲೇಜ್ ನೀಡುತ್ತದೆ.

Tata Nexon facelift: ಭರ್ಜರಿ ಮೈಲೇಜ್ ನೀಡುತ್ತೆ ಟಾಟಾ ನೆಕ್ಸಾನ್ ಫೇಸ್ ಲಿಫ್ಟ್
Follow us
|

Updated on:Sep 21, 2023 | 3:37 PM

ಟಾಟಾ ಮೋಟಾರ್ಸ್(Tata Motors) ಕಂಪನಿಯು ತನ್ನ ಬಹುನೀರಿಕ್ಷಿತ ನೆಕ್ಸಾನ್ ಫೇಸ್ ಲಿಫ್ಟ್(Nexon facelift) ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ಸ್ಮಾರ್ಟ್, ಸ್ಮಾರ್ಟ್ ಪ್ಲಸ್, ಪ್ಯೂರ್, ಪ್ಯೂರ್ ಎಸ್, ಕ್ರಿಯೆಟಿವ್, ಕ್ರಿಯೆಟಿವ್ ಪ್ಲಸ್, ಫಿಯರ್ ಲೆಸ್, ಫಿಯರ್ ಲೆಸ್ ಪ್ಲಸ್ ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದೆ. ಇದರಲ್ಲಿ ಆರಂಭಿಕ ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 8.10 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 12.99 ಲಕ್ಷ ಬೆಲೆ ಹೊಂದಿದೆ.

ಸುಧಾರಿತ ತಂತ್ರಜ್ಞಾನ ಪ್ರೇರಿತ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಿರುವ ನೆಕ್ಸಾನ್ ಫೇಸ್ ಲಿಫ್ಟ್ ಆವೃತ್ತಿಯು ಆಕರ್ಷಕ ವಿನ್ಯಾಸ ಮತ್ತು ಪ್ರೀಮಿಯಂ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ವಿವಿಧ ಎಂಜಿನ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ. ಹೊಸ ಕಾರಿನಲ್ಲಿ 1.2 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಮಾಡಬಹುದಾಗಿದ್ದು, ಹೊಸ ಕಾರಿನಲ್ಲಿ ಟರ್ಬೊ ಪೆಟ್ರೋಲ್ ಆವೃತ್ತಿಯು ಈ ಬಾರಿ ಪ್ರಮುಖ ಆಕರ್ಷಣೆಯಾಗಿದೆ.

1.2 ಲೀಟರ್ ಸಾಮಾನ್ಯ ಪೆಟ್ರೋಲ್ ಮಾದರಿಯು 5 ಸ್ಪೀಡ್ ಮ್ಯಾನುವಲ್ ಮತ್ತು 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿದ್ದರೆ 1.2 ಲೀಟರ್ ಟರ್ಬೊ ಪೆಟ್ರೋಲ್ ಮಾದರಿಯು 6-ಮ್ಯಾನುವಲ್ ಮತ್ತು 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿದೆ. ಹಾಗೆಯೇ 1.5 ಲೀಟರ್ ಡೀಸೆಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿದ್ದು, ಇದರಲ್ಲಿ ಟರ್ಬೊ ಪೆಟ್ರೋಲ್ ಮಾದರಿಯು 120 ಹಾರ್ಸ್ ಪವರ್ ಮತ್ತು 170 ಎನ್ಎಂ ಉತ್ಪಾದನೆ ಮಾಡಬಲ್ಲದು.

Tata Nexon facelift (1)

ಇದನ್ನೂ ಓದಿ: ಮಹೀಂದ್ರಾ ಬೊಲೆರೊ ನಿಯೋ ಪ್ಲಸ್ ಆಂಬ್ಯುಲೆನ್ಸ್ ವರ್ಷನ್ ಬಿಡುಗಡೆ

ಈ ಮೂಲಕ ಹೊಸ ಕಾರಿನ ಸಾಮಾನ್ಯ ಪೆಟ್ರೋಲ್ ಮಾದರಿಯು ಪ್ರತಿ ಲೀಟರ್ ಗೆ ಗರಿಷ್ಠ 17.18 ಕಿ.ಮೀ ಮೈಲೇಜ್ ನೀಡಲಿದ್ದರೆ, ಟರ್ಬೊ ಪೆಟ್ರೋಲ್ ಮಾದರಿಯು 17.01 ಕಿ.ಮೀ ಮೈಲೇಜ್ ನೀಡುತ್ತದೆ. ಇದರಲ್ಲಿ ಡೀಸೆಲ್ ಮಾದರಿಯು ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಪ್ರತಿ ಲೀಟರ್ ಗೆ ಗರಿಷ್ಠ 23.23 ಕಿ.ಮೀ ಮೈಲೇಜ್ ನೀಡಲಿದರೆ ಆಟೋಮ್ಯಾಟಿಕ್ ಮಾದರಿಯು ಪ್ರತಿ ಲೀಟರ್ ಗೆ 24.08 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ಮಾಹಿತಿ ಹಂಚಿಕೊಂಡಿದೆ.

ಇನ್ನು ಹೊಸ ನೆಕ್ಸಾನ್ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಪ್ರತಿಸ್ಪರ್ಧಿ ಮಾದರಿಗಳಿಗೆ ಅನುಗುಣವಾಗಿ ಹಲವಾರು ಹೊಸ ಫೀಚರ್ಸ್ ಪಡೆದುಕೊಂಡಿದ್ದು, ಕರ್ವ್ ಕಾನ್ಸೆಪ್ಟ್ ವಿನ್ಯಾಸ ಪ್ರೇರಿತ ಫ್ರಂಟ್ ಗ್ರಿಲ್, ಸ್ಪೋರ್ಟಿ ಬಂಪರ್, ಹೊಸ ವಿನ್ಯಾಸ ಪ್ರೇರಿತ ಸ್ಪ್ಲೀಟ್ ಹೆಡ್ ಲ್ಯಾಂಪ್ಸ್, ಫ್ಲಕ್ಸ್ ಸ್ಕಿಡ್ ಪ್ಲೇಟ್, ಹಿಂಬದಿಯಲ್ಲಿ ವಿಸ್ತರಿತ ಎಲ್ಇಡಿ ಟೈಲ್ ಲೈಟ್, ಡ್ಯುಯಲ್ ಟೋನ್ ಅಲಾಯ್ ವ್ಹೀಲ್ ಗಳು, ಎಲ್ ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್, ಮರುವಿನ್ಯಾಸಗೊಳಿಸಲಾದ ರೂಫ್ ಮೌಂಟೆಡ್ ಸ್ಪ್ಲಾಯರ್ ಸೇರಿದಂತೆ ಹಲವಾರು ಫೀಚರ್ಸ್ ಗಳಿವೆ.

ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ರೂ. 10 ಲಕ್ಷ ಬಜೆಟ್ ಒಳಗಿನ ಕಾರುಗಳಿವು!

ಹೊಸ ಕಾರಿನ ಹೊರಭಾಗದಂತೆ ಒಳಭಾಗದಲ್ಲೂ ಆಕರ್ಷಕವಾದ ಒಳವಿನ್ಯಾಸ ನೀಡಲಾಗಿದ್ದು, ಡ್ಯುಯಲ್ ಟೋನ್ ಡ್ಯಾಶ್ ಬೋರ್ಡ್ ಸೇರಿದಂತೆ ಟು ಸ್ಪೋಕ್ ಸ್ಟೀರಿಂಗ್ ವ್ಹೀಲ್, 10.25 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, ಸೆಂಟ್ರಲ್ ಕಂಟ್ರೋಲ್ ಪ್ಯಾನೆಲ್, ಫುಲ್ ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್, ಫ್ರಂಟ್ ವೆಂಟಿಲೆಟೆಡ್ ಸೀಟುಗಳು, 360 ಡಿಗ್ರಿ ವ್ಯೂ ಕ್ಯಾಮೆರಾ, ವೈರ್ ಲೆಸ್ ಚಾರ್ಜರ್ ಮತ್ತು ಕಾರ್ ಕನೆಕ್ಟ್ ಸೌಲಭ್ಯಗಳಿವೆ.

ಇದರೊಂದಿಗೆ ನೆಕ್ಸಾನ್ ಫೇಸ್ ಲಿಫ್ಟ್ ಕಾರು ಸುರಕ್ಷತೆಯಲ್ಲೂ ಗಮನಸೆಳೆಯುತ್ತಿದ್ದು, ಸ್ಟ್ಯಾಂಡರ್ಡ್ 6 ಏರ್ ಬ್ಯಾಗ್ ಗಳು , ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್, ಎಲ್ಲಾ ಆಸನಗಳಲ್ಲೂ ತ್ರಿ ಪಾಯಿಂಟ್ ಸೀಟ್ ಬೆಲ್ಟ್, ಎಮರ್ಜೆನ್ಸಿ ಕಾಲ್ ಅಸಿಸ್ಟ್ ಮತ್ತು ಇಎಸ್ ಸಿ ತಂತ್ರಜ್ಞಾನ ನೀಡಲಾಗಿದೆ. ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಈಗಾಗಲೇ ಫೈವ್ ಸ್ಟಾರ್ ಸೇಫ್ಟಿ ರೇಟಿಂಗ್ಸ್ ಹೊಂದಿರುವ ನೆಕ್ಸಾನ್ ಕಾರು ಇದೀಗ ಮತ್ತಷ್ಟು ಬಲಿಷ್ಠವಾಗಿದ್ದು, ಅಪಘಾತಗಳ ಸಂದರ್ಭದಲ್ಲಿ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ಖಾತ್ರಿಪಡಿಸುತ್ತದೆ.

Published On - 3:27 pm, Thu, 21 September 23