Mahinda: ಮಹೀಂದ್ರಾ ಬೊಲೆರೊ ನಿಯೋ ಪ್ಲಸ್ ಆಂಬ್ಯುಲೆನ್ಸ್ ವರ್ಷನ್ ಬಿಡುಗಡೆ

ಮಹೀಂದ್ರಾ ಬೊಲೆರೊ ನಿಯೋ ಪ್ಲಸ್ ಆಂಬ್ಯುಲೆನ್ಸ್ ವರ್ಷನ್ ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿ ಹಲವಾರು ಹೊಸ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

Mahinda: ಮಹೀಂದ್ರಾ ಬೊಲೆರೊ ನಿಯೋ ಪ್ಲಸ್ ಆಂಬ್ಯುಲೆನ್ಸ್ ವರ್ಷನ್ ಬಿಡುಗಡೆ
ಮಹೀಂದ್ರಾ ಬೊಲೆರೊ ನಿಯೋ ಪ್ಲಸ್ ಆಂಬ್ಯುಲೆನ್ಸ್ ವರ್ಷನ್
Follow us
|

Updated on:Sep 20, 2023 | 8:13 PM

ಮಧ್ಯಮ ಕ್ರಮಾಂಕದ ಎಸ್ ಯುವಿ ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ(Mahindra) ಕಂಪನಿಯು ಬೊಲೆರೊ ನಿಯೋ ಪ್ಲಸ್ ಆಂಬ್ಯುಲೆನ್ಸ್ (Bolero Neo+ Ambulance) ವರ್ಷನ್ ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 13.99 ಲಕ್ಷ ಬೆಲೆ ಹೊಂದಿದೆ.

ಆರೋಗ್ಯ ಕ್ಷೇತ್ರದಲ್ಲಿನ ಬೇಡಿಕೆಗೆ ಅನುಗುಣವಾಗಿ ಮಹೀಂದ್ರಾ ಕಂಪನಿಯು ವಿಶೇಷ ಫೀಚರ್ಸ್ ಹೊಂದಿರುವ ಬೊಲೆರೊ ನಿಯೋ ಪ್ಲಸ್ ಆಂಬ್ಯುಲೆನ್ಸ್ ವರ್ಷನ್ ಅಭಿವೃದ್ದಿಪಡಿಸಿದ್ದು, ಇದು ಟೈಪ್ ಬಿ ಆಂಬ್ಯುಲೆನ್ಸ್ ವಿಭಾಗಕ್ಕೆ ಸಂಬಂಧಿಸಿದ AIS:125 (ಭಾಗ 1) ಮಾನದಂಡಗಳೊಂದಿಗೆ ನಿರ್ಮಾಣವಾಗಿದೆ.

ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ರೂ. 10 ಲಕ್ಷ ಬಜೆಟ್ ಒಳಗಿನ ಕಾರುಗಳಿವು!

ಸ್ಟ್ಯಾಂಡರ್ಡ್ ಮಾದರಿಗಿಂತಲೂ ಗುಣಮಟ್ಟದಲ್ಲಿ ಸಾಕಷ್ಟು ಸುಧಾರಣೆಗೊಂಡಿರುವ ನಿಯೋ ಪ್ಲಸ್ ಆಂಬ್ಯುಲೆನ್ಸ್ ವರ್ಷನ್ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಹೊಂದಿದ್ದು, ಹೊಸ ಕಾರನ್ನು ಸಾಮಾನ್ಯ ಗ್ರಾಹಕರು ಖರೀದಿಸುವುದಾದರೆ ರೂ. 13.99 ಲಕ್ಷ ಬೆಲೆ ಅನ್ವಯಿಸಲಿದ್ದರೆ ಇ-ಮಾರ್ಕೆಟ್‌ಪ್ಲೇಸ್ (GeM) ಮೂಲಕ ಖರೀದಿ ಮಾಡುವುದಾರರೇ ರೂ. 12.31 ಲಕ್ಷ ದರ ಅನ್ವಯಿಸುತ್ತದೆ.

ಹೊಸ ಬೊಲೆರೊ ನಿಯೋ ಪ್ಲಸ್ ಆಂಬ್ಯುಲೆನ್ಸ್ ವರ್ಷನ್ ನಲ್ಲಿ ಮಹೀಂದ್ರಾ ಕಂಪನಿ ವಿಶಾಲವಾದ ಕ್ಯಾಬಿನ್ ಗಾಗಿ ದೊಡ್ಡದಾದ ವೀಲ್‌ಬೇಸ್‌ ನೀಡಿದ್ದು, 3ನೇ ತಲೆಮಾರಿನ ವೈಶಿಷ್ಟ್ಯತೆ ಒಳಗೊಂಡಿರುವ ಸ್ಟೀಲ್ ಬಾಡಿ ಚಾರ್ಸಿಸ್ ಹೊಂದಿರುತ್ತದೆ. ಇದರೊಂದಿಗೆ ನಗರದ ಟ್ರಾಫಿಕ್ ಅನ್ನು ಸುಲಭವಾಗಿ ನಿಭಾಯಿಸುವುದರ ಜೊತೆ ಗ್ರಾಮೀಣ ಪ್ರದೇಶಗಳಲ್ಲಿ ಕಠಿಣವಾದ ಭೂಪ್ರದೇಶಗಳಲ್ಲೂ ಸುಲಭವಾಗಿ ಮತ್ತು ಸುರಕ್ಷಿತವಾಗಿ ಚಾಲನೆಗೊಳ್ಳುವ ವೈಶಿಷ್ಟ್ಯತೆ ಹೊಂದಿದೆ.

ಇದನ್ನೂ ಓದಿ: ಎಡಿಎಎಸ್ ಫೀಚರ್ಸ್ ಹೊಂದಿರುವ ಟಾಪ್ 5 ಬಜೆಟ್ ಕಾರುಗಳಿವು!

AIS:125 (ಭಾಗ 1) ಮಾನದಂಡಗಳೊಂದಿಗೆ ಹಲವಾರು ಸುರಕ್ಷಾ ಫೀಚರ್ಸ್ ಗಳನ್ನು ಅಳವಡಿಸಲಾಗಿದ್ದು, ಇದು ಹವಾನಿಯಂತ್ರಿತ ಕ್ಯಾಬಿನ್‌ನೊಂದಿಗೆ D+4 ಆಸನಗಳು, ಪೂರ್ಣ ಗಾತ್ರದ ಸ್ಟ್ರೆಚರ್ ಜೊತೆಗೆ ಆಮ್ಲಜನಕ ಸಿಲಿಂಡರ್, ನೈರ್ಮಲ್ಯಕ್ಕಾಗಿ ವಾಶ್‌ಬಾಸಿನ್, ತುರ್ತು ಸಂದರ್ಭಗಳಲ್ಲಿ ಅನುಕೂಲಕರ ಸಂವಹನಕ್ಕಾಗಿ ಸಾರ್ವಜನಿಕ ವಿಳಾಸ ವ್ಯವಸ್ಥೆ ಹೊಂದಿದೆ. ಈ ಮೂಲಕ ತ್ವರಿತವಾಗಿ ತುರ್ತು ಪರಿಸ್ಥಿತಿಗಳನ್ನು ಸುಲಭವಾಗಿ ನಿರ್ವಹಿಸಲು ವಿಶೇಷ ವಿನ್ಯಾಸ ಮತ್ತು ವೈಶಿಷ್ಟ್ಯತೆಗಳನ್ನು ಹೊಂದಿದ್ದು, ಇದು ವೆಚ್ಚ-ಪರಿಣಾಮಕಾರಿ ಮತ್ತು ವಿಶ್ವಾಸಾರ್ಹ ಪರಿಹಾರಗಳನ್ನು ಪೂರೈಸಲು ಸಹಕಾರಿಯಾಗಿದೆ.

Published On - 8:01 pm, Wed, 20 September 23