Affordable Cars with ADAS: ಎಡಿಎಎಸ್ ಫೀಚರ್ಸ್ ಹೊಂದಿರುವ ಟಾಪ್ 5 ಬಜೆಟ್ ಕಾರುಗಳಿವು!

ಭಾರತದಲ್ಲಿ ನಿರ್ಮಾಣವಾಗುತ್ತಿರುವ ಹೊಸ ಕಾರುಗಳಲ್ಲಿ ಇದೀಗ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೌಲಭ್ಯ ಹೊಂದಿರುವ ಕಾರುಗಳಿಗೆ ಭಾರೀ ಬೇಡಿಕೆ ಹರಿದುಬರುತ್ತಿದೆ.

Affordable Cars with ADAS: ಎಡಿಎಎಸ್ ಫೀಚರ್ಸ್ ಹೊಂದಿರುವ ಟಾಪ್ 5 ಬಜೆಟ್ ಕಾರುಗಳಿವು!
ಎಡಿಎಎಸ್ ಫೀಚರ್ಸ್ ಹೊಂದಿರುವ ಟಾಪ್ 5 ಬಜೆಟ್ ಕಾರುಗಳಿವು!
Follow us
|

Updated on: Sep 12, 2023 | 8:06 PM

ಹೊಸ ಕಾರುಗಳಲ್ಲಿ(News Cars) ಇತ್ತೀಚೆಗೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಕೇವಲ ಐಷಾರಾಮಿ ಕಾರುಗಳಲ್ಲಿ ಮಾತ್ರವಲ್ಲ ಮಧ್ಯಮ ಕ್ರಮಾಂಕದ ಕಾರುಗಳ ಸುರಕ್ಷತೆಯೂ ಕೂಡಾ ಸಾಕಷ್ಟು ಸುಧಾರಿಸಿದೆ. ಹೊಸ ಸುರಕ್ಷಾ ಸೌಲಭ್ಯಗಳಲ್ಲಿ ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ(ಎಡಿಎಎಸ್) ಸೌಲಭ್ಯಕ್ಕೆ ಭಾರೀ ಬೇಡಿಕೆ ಹರಿದುಬರುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಾರು ಉತ್ಪಾದನಾ ಕಂಪನಿಗಳು ಬಜೆಟ್ ಬೆಲೆಯ ಕಾರುಗಳಿಗೂ ಈ ಹೊಸ ಸುರಕ್ಷಾ ವೈಶಿಷ್ಟ್ಯತೆಯನ್ನು ಪರಿಚಯಿಸುತ್ತಿವೆ. ಹಾಗಾದ್ರೆ ಭಾರತದಲ್ಲಿ ಸದ್ಯ ಖರೀದಿಗೆ ಲಭ್ಯವಿರುವ ಬಜೆಟ್ ಬೆಲೆಯ ಎಡಿಎಎಸ್ ಫೀಚರ್ಸ್ ಕಾರುಗಳು ಯಾವುವು? ಅವುಗಳ ವಿಶೇಷತೆಗಳೇನು? ಈ ಎಲ್ಲಾ ಮಾಹಿತಿ ಇಲ್ಲಿದೆ.

ಎಡಿಎಎಸ್ ಸುರಕ್ಷಾ ಸೌಲಭ್ಯವು ಆಧುನಿಕ ಕಾರು ಮಾದರಿಗಳಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದು ಸಂಭಾವ್ಯ ಅಪಘಾತಗಳನ್ನು ತಗ್ಗಿಸಲು ಸಾಕಷ್ಟು ನೆರವಾಗುತ್ತಿದೆ. ಎಡಿಎಎಸ್ ಸೌಲಭ್ಯವು ರಡಾರ್ ಸೆನ್ಸಾರ್ ಮೂಲಕ ಕಾರ್ಯನಿರ್ವಹಣೆ ಮಾಡಲಿದ್ದು, ಇದು ಅಪಘಾತಗಳ ಸಂಖ್ಯೆ ತಗ್ಗಿಸಲು ಮಹತ್ವದ ಪಾತ್ರವಹಿಸುತ್ತಿದೆ. ಇದರಿಂದ ಗ್ರಾಹಕರು ಈ ಹೊಸ ಫೀಚರ್ಸ್ ಹೊಂದಿರುವ ಕಾರುಗಳ ಖರೀದಿಗೆ ಮುಗಿಬಿದ್ದಿದ್ದು, ರೂ. 15 ಲಕ್ಷದಿಂದ ರೂ. 20 ಲಕ್ಷ ಬಜೆಟ್ ಬೆಲೆಯ ಹಲವು ಕಾರುಗಳು ಇದೀಗ ಎಡಿಎಎಸ್ ಫೀಚರ್ಸ್ ನೊಂದಿಗೆ ಸದ್ದು ಮಾಡುತ್ತಿವೆ.

ಇದನ್ನೂ ಓದಿ: ಆಕರ್ಷಕ ಬೆಲೆಗೆ ಬಹುನೀರಿಕ್ಷಿತ ಹೋಂಡಾ ಎಲಿವೇಟ್ ಎಸ್ ಯುವಿ ಬಿಡುಗಡೆ

ಹ್ಯುಂಡೈ ವೆನ್ಯೂ

ಭಾರತದಲ್ಲಿ ಸದ್ಯ ಎಡಿಎಎಸ್ ಫೀಚರ್ಸ್ ಹೊಂದಿರುವ ಅತಿ ಕಡಿಮೆ ಬೆಲೆಯ ಕಾರು ಮಾದರಿಯಾಗಿ 2023ರ ಹ್ಯುಂಡೈ ವೆನ್ಯೂ ಗುರುತಿಸಿಕೊಂಡಿದೆ. ಹೊಸ ವೆನ್ಯೂ ಕಾರಿನ ಎಸ್ಎಕ್ಸ್ ಆಪ್ಷನ್ 1.0 ಲೀಟರ್ ಟರ್ಬೊ ಪೆಟ್ರೋಲ್, 1.5 ಲೀಟರ್ ಡೀಸೆಲ್ ಮತ್ತು ಎನ್ ಲೈನ್ ಎನ್8 ವೆರಿಯೆಂಟ್ ಗಳಲ್ಲಿ ಲೆವಲ್ 1 ಎಡಿಎಎಸ್ ಫೀಚರ್ಸ್ ನೀಡಲಾಗಿದ್ದು, ಎಕ್ಸ್ ಶೋರೂಂ ಪ್ರಕಾರ ರೂ. 12.35 ಲಕ್ಷ ಆರಂಭಿಕ ಬೆಲೆ ಹೊಂದಿದೆ. ಇದರಲ್ಲಿರುವ ಎಡಿಎಎಸ್ ನಲ್ಲಿ ಫಾರ್ವಡ್ ಕೂಲಿಷನ್ ಅವಾಯ್ಡ್ ಅಸಿಸ್ಟ್, ಲೇನ್ ಕೀಪಿಂಗ್ ಅಸಿಸ್ಟ್, ಲೇನ್ ಡಿಪಾರ್ಚರ್ ವಾರ್ನಿಂಗ್, ಡ್ರೈವರ್ ಅಟ್ಷೆಷನ್ ವಾರ್ನಿಂಗ್, ಲೇನ್ ಫಾಲೋವಿಂಗ್ ಅಸಿಸ್ಟ್ ಮತ್ತು ಹೈ ಭೀಮ್ ಅಸಿಸ್ಟ್ ಸೌಲಭ್ಯಗಳನ್ನು ನೀಡಲಾಗಿದೆ.

ಎಡಿಎಎಸ್ ಸೌಲಭ್ಯವನ್ನು ಕಾರು ಉತ್ಪಾದನಾ ಕಂಪನಿಗಳು ಕಾರು ಮಾದರಿಗಳಿಗೆ ಅನುಗುಣವಾಗಿ ಲೆವಲ್ 1, ಲೆವಲ್ 2, ಲೆವಲ್ 3, ಲೆವಲ್ 4 ಮತ್ತು ಲೆವಲ್ 5 ಹಂತಗಳಲ್ಲಿ ಜೋಡಣೆ ಮಾಡುತ್ತಿದ್ದು, ಇದೀಗ ಹೊಸ ವೆನ್ಯೂ ಕಾರಿನಲ್ಲಿ ಸಾಮಾನ್ಯ ಆಕ್ಟಿವ್ ಸೇಫ್ಟಿ ಫೀಚರ್ಸ್ ಹೊಂದಿರುವ ಲೆವಲ್ 1 ಎಡಿಎಎಸ್ ಜೋಡಿಸಲಾಗಿದೆ.

ಹೋಂಡಾ ಸಿಟಿ ಸೆಡಾನ್

ಭಾರತದಲ್ಲಿ ಎಡಿಎಎಸ್ ಫೀಚರ್ಸ್ ಹೊಂದಿರುವ ಬಜೆಟ್ ಕಾರುಗಳ ಪಟ್ಟಿಯಲ್ಲಿ 5ನೇ ತಲೆಮಾರಿನ ಹೋಂಡಾ ಸಿಟಿ ಸೆಡಾನ್ ಕೂಡಾ ಒಂದಾಗಿದೆ. ಸಿಟಿ ಸೆಡಾನ್ ಕಾರಿನ ಹೈ ಎಂಡ್ ಮಾದರಿಯಲ್ಲಿ ಲೆವಲ್ 2 ಎಡಿಎಎಸ್ ಜೋಡಿಸಲಾಗಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 12.59 ಲಕ್ಷ ಬೆಲೆ ಹೊಂದಿದೆ.

ಹ್ಯುಂಡೈ ವೆರ್ನಾ

ಎಡಿಎಎಸ್ ಫೀಚರ್ಸ್ ಹೊಂದಿರುವ ಬಜೆಟ್ ಬೆಲೆಯ ಕಾರುಗಳಲ್ಲಿ ಹ್ಯುಂಡೈ ವೆರ್ನಾ ಸೆಡಾನ್ ಕೂಡಾ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ. ವೆರ್ನಾ ಕಾರಿನ ಎಸ್ಎಕ್ಸ್ ಆಪ್ಷನ್ ವೆರಿಯೆಂಟ್ ನಲ್ಲಿ ಎಡಿಎಎಸ್ ಫೀಚರ್ಸ್ ನೀಡಲಾಗಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 14.66 ಲಕ್ಷ ಬೆಲೆ ಹೊಂದಿದೆ.

ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ಟೊಯೊಟಾ ರೂಮಿಯಾನ್ ಬಿಡುಗಡೆ

ಹೋಂಡಾ ಎಲಿವೇಟ್

ಹೋಂಡಾ ಹೊಸ ಎಲೆವೇಟ್ ಕಂಪ್ಯಾಕ್ಟ್ ಎಸ್ ಯುವಿಯಲ್ಲೂ ಎಡಿಎಎಸ್ ಫೀಚರ್ಸ್ ನೀಡಲಾಗಿದೆ. ಎಲಿವೇಟ್ ಕಾರಿನ ಜೆಡ್ಎಕ್ಸ್ ಟಾಪ್ ಎಂಡ್ ಮಾದರಿಯಲ್ಲಿ ಹೊಸ ಸುರಕ್ಷಾ ಸೌಲಭ್ಯವನ್ನು ಜೋಡಣೆ ಮಾಡಲಾಗಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 14.90 ಲಕ್ಷ ಆರಂಭಿಕ ಬೆಲೆ ಹೊಂದಿದೆ. ಇದರಲ್ಲಿರುವ ಎಡಿಎಎಸ್ ನಲ್ಲಿ ಕೂಲಿಷನ್ ಬ್ರೇಕಿಂಗ್ ಸಿಸ್ಟಂ, ಲೇನ್ ಡಿಫಾರ್ಚರ್ ವಾರ್ನಿಂಗ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಅಸಿಸ್ಟ್ ರೋಡ್ ಡಿಪಾರ್ಚರ್ ವಾರ್ನಿಂಗ್ ಮತ್ತು ಆಟೋಮ್ಯಾಟಿಕ್ ಹೈ ಭೀಮ್ ಅಸಿಸ್ಟ್ ಸೌಲಭ್ಯಗಳಿವೆ.

ಎಂಜಿ ಆಸ್ಟರ್

ಎಡಿಎಎಸ್ ಫೀಚರ್ಸ್ ಹೊಂದಿರುವ ಬಜೆಟ್ ಕಾರುಗಳಲ್ಲಿ ಎಂಜಿ ಆಸ್ಟರ್ ಕೂಡಾ ಪ್ರಮುಖವಾಗಿದೆ. ಹೆಚ್ಚಿನ ಮಟ್ಟದ ಸೇಫ್ಟಿ ಫೀಚರ್ಸ್ ಹೊಂದಿರುವ ಎಡಿಎಎಸ್ ಹೊಂದಿರುವ ಆಸ್ಟರ್ ಎಸ್ ಯುವಿ ಎಕ್ಸ್ ಶೋರೂಂ ಪ್ರಕಾರ ರೂ. 17 ಲಕ್ಷ ಬೆಲೆ ಹೊಂದಿದ್ದು, ಶೀಘ್ರದಲ್ಲಿಯೇ ಮತ್ತಷ್ಟು ವೆರಿಯೆಂಟ್ ಗಳಲ್ಲಿ ಹೊಸ ಸೇಫ್ಟಿ ಫೀಚರ್ಸ್ ನೀಡಲಾಗುತ್ತಿದೆ.