ಟೆಸ್ಲಾ ಸಂಸ್ಥೆಗೆ ಈ ವರ್ಷ ಭಾರತದಿಂದ 15,000 ಕೋಟಿ ರೂನಷ್ಟು ಮೌಲ್ಯದ ವಾಹನ ಬಿಡಿಭಾಗಗಳು ಸರಬರಾಜಾಗಲಿವೆ: ಸಚಿವ ಗೋಯಲ್

Piyush Goyal on Tesla: ಟೆಸ್ಲಾ ಸಂಸ್ಥೆ ತನ್ನ ಎಲೆಕ್ಟ್ರಿಕ್ ಕಾರುಗಳ ತಯಾರಿಕೆಗೆ ಬೇಕಾದ ಕೆಲ ಬಿಡಿಭಾಗಗಳನ್ನು ಭಾರತೀಯ ಕಂಪನಿಗಳಿಂದ ತರಿಸಿಕೊಳ್ಳುತ್ತದೆ. ಕಳೆದ ವರ್ಷ 1 ಬಿಲಿಯನ್ ಡಾಲರ್ ಮೌಲ್ಯದಷ್ಟು ಆಟೊ ಕಾಂಪೊನೆಂಟ್​​ಗಳನ್ನು ಟೆಸ್ಲಾ ಭಾರತದಿಂದ ಪಡೆದಿತ್ತು. ಈ ವರ್ಷ ಇದರ ಪ್ರಮಾಣ 1.7ರಿಂದ 1.9 ಬಿಲಿಯನ್ ಡಾಲರ್​ಗೆ ಏರಬಹುದು ಎಂದು ಕೇಂದ್ರ ವಾಣಿಜ್ಯ ಸಚಿವ ಪೀಯುಶ್ ಗೋಯಲ್ ಹೇಳಿದ್ದಾರೆ.

ಟೆಸ್ಲಾ ಸಂಸ್ಥೆಗೆ ಈ ವರ್ಷ ಭಾರತದಿಂದ 15,000 ಕೋಟಿ ರೂನಷ್ಟು ಮೌಲ್ಯದ ವಾಹನ ಬಿಡಿಭಾಗಗಳು ಸರಬರಾಜಾಗಲಿವೆ: ಸಚಿವ ಗೋಯಲ್
ಟೆಸ್ಲಾ ಕಾರು
Follow us
|

Updated on:Sep 13, 2023 | 6:32 PM

ನವದೆಹಲಿ, ಸೆಪ್ಟೆಂಬರ್ 13: ಕೇಂದ್ರ ವಾಣಿಜ್ಯ ಸಚಿವ ಪಿಯೂಶ್ ಗೋಯಲ್ (Piyush Goyal) ನೀಡಿರುವ ಮಾಹಿತಿ ಪ್ರಕಾರ ಇಲಾನ್ ಮಸ್ಕ್ ಮಾಲಕತ್ವದ ಟೆಸ್ಲಾ ಸಂಸ್ಥೆ ಈ ವರ್ಷ ಭಾರತದಿಂದ ಆಮದು ಮಾಡಿಕೊಳ್ಳುವ ವಾಹನ ಬಿಡಿಭಾಗಗಳು (Auto components) ಎರಡು ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ. ಟೆಸ್ಲಾ ಸಂಸ್ಥೆ (Tesla Inc.) 1.7ರಿಂದ 1.9 ಬಿಲಿಯನ್ ಡಾಲರ್ (ಸುಮಾರು 14ರಿಂದ 16 ಸಾವಿರ ಕೋಟಿ ರೂ) ಮೌಲ್ಯದಷ್ಟು ವಾಹನ ಬಿಡಿಭಾಗಗಳನ್ನು ಭಾರತದಿಂದ ಪಡೆಯಲು ಯೋಜಿಸಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ವಾಹನ ಬಿಡಿಭಾಗ ತಯಾರಕರ ಸಂಸ್ಥೆಯ (ACMA) ವಾರ್ಷಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಈ ವಿಚಾರದ ಬಗ್ಗೆ ವಾಣಿಜ್ಯ ಸಚಿವರು ಬೆಳಕು ಚೆಲ್ಲಿದ್ದಾರೆ.

ಕಳೆದ ವರ್ಷ ಟೆಸ್ಲಾ ಸಂಸ್ಥೆ ಭಾರತದಿಂದ 1 ಬಿಲಿಯನ್ ಡಾಲರ್ ಮೊತ್ತದಷ್ಟು ವಾಹನ ಬಿಡಿಭಾಗಗಳನ್ನು ಪಡೆದಿತ್ತು. ಈ ವರ್ಷ ಈ ಪ್ರಮಾಣ ಎರಡು ಪಟ್ಟು ಹೆಚ್ಚಾಗುವ ನಿರೀಕ್ಷೆ ಇದೆ. 1.7 ಬಿಲಿಯನ್ ಡಾಲರ್​ನಿಂದ 1.9 ಬಿಲಿಯನ್ ಡಾಲರ್​ನಷ್ಟು ಪ್ರಮಾಣದಲ್ಲಿ ವಾಹನ ಬಿಡಿಭಾಗಗಳನ್ನು ಭಾರತದಿಂದ ಸರಬರಾಜು ಪಡೆಯಲು ಟೆಸ್ಲಾ ಗುರಿ ಇಟ್ಟುಕೊಂಡಿದೆ ಎಂದು ಪೀಯುಶ್ ಗೋಯಲ್ ಹೇಳಿದ್ದಾರೆ.

ಇದನ್ನೂ ಓದಿ: ಭಾರತದ ಆರ್ಥಿಕ ಕಾರಿಡಾರ್, ಆಟೊಮೊಬೈಲ್ ನೀತಿ: ರಷ್ಯಾ ಅಧ್ಯಕ್ಷರಿಂದ ನರೇಂದ್ರ ಮೋದಿ ಗುಣಗಾನ

ಭಾರತದ ವಾಹನ ಬಿಡಿಭಾಗ ತಯಾರಿಕೆಯ ಉದ್ಯಮ ಶಕ್ತಿಯುತವಾಗಿ ಬೆಳೆಯುತ್ತಿದೆ. ದೇಶದ ಜಿಡಿಪಿಯ ಶೇ. 2.3ರಷ್ಟು ಭಾಗವನ್ನು ಈ ಉದ್ಯಮ ಹೊಂದಿದೆ. 2025ರಷ್ಟರಲ್ಲಿ ಈ ಉದ್ಯಮದಲ್ಲಿ ಭಾರತದ ವಿಶ್ವದ ಮೂರನೇ ಅತಿದೊಡ್ಡ ದೇಶವಾಗಬಹುದು ಎಂಬ ನಿರೀಕ್ಷೆ ಇದೆ.

ಟೆಸ್ಲಾ ಮುಖ್ಯಸ್ಥ ಇಲಾನ್ ಮಸ್ಕ್ ಇತ್ತೀಚೆಗಷ್ಟೇ ಭಾರತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದರು. ಪ್ರಧಾನಿ ಮೋದಿ ಅವರ ಮೇಕ್ ಇನ್ ಇಂಡಿಯಾ ಆಶಯವನ್ನು ಅವರು ಶ್ಲಾಘಿಸಿದ್ದರು. ಅದೇ ಹೊತ್ತಿನಲ್ಲಿ ಟೆಸ್ಲಾ ಸಂಸ್ಥೆ ಭಾರತದಲ್ಲಿ ಅಸೆಂಬ್ಲಿಂಗ್ ಘಟಕ ಆರಂಭಿಸುವ ಬಗ್ಗೆ ವರದಿಗಳು ಬಂದವು. ಹಾಗೆಯೇ, ತನ್ನ ವಾಹನ ತಯಾರಿಕೆಗೆ ಬೇಕಾದ ಬಿಡಿಭಾಗ ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳ ಪೂರೈಕೆ ಜಾಲವನ್ನೂ ಭಾರತಕ್ಕೆ ತರಲು ಟೆಸ್ಲಾ ಯೋಜಿಸಿದೆ ಎಂಬಂತಹ ಸುದ್ದಿಯೂ ಇದೆ.

ಇದನ್ನೂ ಓದಿ: ಮುಂದಿನ ವರ್ಷ ಭಾರತದ ಹಣದುಬ್ಬರ ಶೇ. 3ಕ್ಕಿಂತಲೂ ಕಡಿಮೆ; ಡೋಯ್ಚ ಬ್ಯಾಂಕ್ ಭವಿಷ್ಯ

ಆದರೆ, ಭಾರತದಲ್ಲಿ ಈಗಾಗಲೇ ಇರುವ ಆಟೊ ಕಾಂಪೊನೆಂಟ್ ಉದ್ಯಮದಿಂದಲೇ ಟೆಸ್ಲಾ ತನಗೆ ಬೇಕಾದ ಬಿಡಿಭಾಗಗಳನ್ನು ಪಡೆಯಬೇಕು ಎಂಬುದು ಸರ್ಕಾರದ ಅಪೇಕ್ಷೆ. ಈ ಬಗ್ಗೆ ಸರ್ಕಾರದಿಂದ ಇನ್ನೂ ಅಧಿಕೃತ ಹೇಳಿಕೆ ಬಂದಿಲ್ಲ. ಟೆಸ್ಲಾ ಸಂಸ್ಥೆಯಿಂದಲೂ ಮಾಹಿತಿ ಸಿಕ್ಕಿಲ್ಲ. ಆದರೆ, ಇಲಾನ್ ಮಸ್ಕ್ ಪ್ರಧಾನಿ ಮೋದಿಯನ್ನು ಪ್ರತ್ಯೇಕವಾಗಿ ಭೇಟಿ ಮಾಡಿರುವುದು ಹೌದು. ಹಾಗೆಯೇ, ಟೆಸ್ಲಾದ ಎಕ್ಸಿಕ್ಯೂಟಿವ್​​ಗಳು ಭಾರತದ ಹಿರಿಯ ಅಧಿಕಾರಿಗಳು ಹಾಗು ಸಚಿವರ ಜೊತೆ ಚರ್ಚೆ ಮಾಡಿರುವುದೂ ಹೌದು.

ಟೆಸ್ಲಾ ವಿಶ್ವದ ಅತಿದೊಡ್ಡ ಎಲೆಕ್ಟ್ರಿಕ್ ಕಾರು ತಯಾರಕ ಸಂಸ್ಥೆ ಎನಿಸಿದೆ. ಭಾರತದಲ್ಲಿ ಅಧಿಕ ಆಮದು ಸಂಕ ಇರುವುದರಿಂದ ಟೆಸ್ಲಾ ಕಾರುಗಳು ಭಾರತದ ಮಾರುಕಟ್ಟೆಗೆ ಬರಲು ಸಾಧ್ಯವಾಗಿಲ್ಲ. ಭಾರತದ ವಾಹನ ಮಾರುಕಟ್ಟೆಗೆ ಬರಲು ಇಲ್ಲಿಯೇ ವಾಹನಗಳ ತಯಾರಿಕೆ ಆಗಬೇಕು. ಹೀಗಾಗಿ, ಟೆಸ್ಲಾ ಸಂಸ್ಥೆ ಭಾರತದಲ್ಲಿ ತಯಾರಿಕಾ ಘಟಕ ಸ್ಥಾಪಿಸುವುದು ಅನಿವಾರ್ಯ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:28 pm, Wed, 13 September 23

ತಾಜಾ ಸುದ್ದಿ
ನಾನು ಸಾತನೂರಿಂದ ಸ್ಪರ್ಧಿಸಿದ್ದರೆ ಡಿಕೆಶಿ ಶಾಸಕನಾಗುತ್ತಿರಲಿಲ್ಲ: ಹೆಚ್ಡಿಕೆ
ನಾನು ಸಾತನೂರಿಂದ ಸ್ಪರ್ಧಿಸಿದ್ದರೆ ಡಿಕೆಶಿ ಶಾಸಕನಾಗುತ್ತಿರಲಿಲ್ಲ: ಹೆಚ್ಡಿಕೆ
ಕುಮಾರಸ್ವಾಮಿ ಅಭಿನಂದನಾ ಕಾರ್ಯಕ್ರಮದ ಫ್ಲೆಕ್ಸ್ ಗಳಲ್ಲಿ ರೇವಣ್ಣಗೆ ಜಾಗವಿಲ್ಲ
ಕುಮಾರಸ್ವಾಮಿ ಅಭಿನಂದನಾ ಕಾರ್ಯಕ್ರಮದ ಫ್ಲೆಕ್ಸ್ ಗಳಲ್ಲಿ ರೇವಣ್ಣಗೆ ಜಾಗವಿಲ್ಲ
ಹೇಮಾವತಿ ನಮ್ಮದು, ಜೀವ ಕೊಟ್ಟೇವು, ನೀರನ್ನು ಮಾತ್ರ ಕೊಡಲ್ಲ: ರೈತ ಮುಖಂಡರು
ಹೇಮಾವತಿ ನಮ್ಮದು, ಜೀವ ಕೊಟ್ಟೇವು, ನೀರನ್ನು ಮಾತ್ರ ಕೊಡಲ್ಲ: ರೈತ ಮುಖಂಡರು
ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಆಫರ್ ಘೋಷಿಸಿದ ಆ್ಯಪಲ್
ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಆಫರ್ ಘೋಷಿಸಿದ ಆ್ಯಪಲ್
ಆಹಾರ ಹೇಗೆ ಸೇವನೆ ಮಾಡಬೇಕು, ಪದ್ಧತಿ ಹೇಗಿರಬೇಕು? ಈ ವಿಡಿಯೋ ನೋಡಿ
ಆಹಾರ ಹೇಗೆ ಸೇವನೆ ಮಾಡಬೇಕು, ಪದ್ಧತಿ ಹೇಗಿರಬೇಕು? ಈ ವಿಡಿಯೋ ನೋಡಿ
ಮನಸ್ಸಿನ ನಿಯಂತ್ರಣದಿಂದ ಇಂದಿನ ಎಲ್ಲ ಒತ್ತಡವನ್ನೂ ಸರಿಮಾಡಿಕೊಳ್ಳುವಿರಿ
ಮನಸ್ಸಿನ ನಿಯಂತ್ರಣದಿಂದ ಇಂದಿನ ಎಲ್ಲ ಒತ್ತಡವನ್ನೂ ಸರಿಮಾಡಿಕೊಳ್ಳುವಿರಿ
ಹೊಸಕೋಟೆಯ ನಳಪಾಕ ಹೋಟೆಲ್​​ ಗೋಬಿಯಲ್ಲಿ ಹುಳ ಪತ್ತೆ: ಮುಂದೇನಾಯ್ತು ನೋಡಿ
ಹೊಸಕೋಟೆಯ ನಳಪಾಕ ಹೋಟೆಲ್​​ ಗೋಬಿಯಲ್ಲಿ ಹುಳ ಪತ್ತೆ: ಮುಂದೇನಾಯ್ತು ನೋಡಿ
ಜವಾಬ್ದಾರಿವಹಿಸಿಕೊಂಡವರ  ಪ್ರಮಾದಗಳಿಂದ ಪಕ್ಷಕ್ಕೆ ಹಿನ್ನಡೆಯಾಯಿತು: ಯತ್ನಾಳ್
ಜವಾಬ್ದಾರಿವಹಿಸಿಕೊಂಡವರ  ಪ್ರಮಾದಗಳಿಂದ ಪಕ್ಷಕ್ಕೆ ಹಿನ್ನಡೆಯಾಯಿತು: ಯತ್ನಾಳ್
ಪ್ರಜ್ವಲ್ ರೇವಣ್ಣಗೆ ಜುಲೈ 8ರವರೆಗೆ ನ್ಯಾಯಾಂಗ ಕಸ್ಟಡಿ, ಪುನಃ ಸೆಂಟ್ರಲ್ ಜೈಲ
ಪ್ರಜ್ವಲ್ ರೇವಣ್ಣಗೆ ಜುಲೈ 8ರವರೆಗೆ ನ್ಯಾಯಾಂಗ ಕಸ್ಟಡಿ, ಪುನಃ ಸೆಂಟ್ರಲ್ ಜೈಲ
ದೇಶ ನಮ್ಮದು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಕಾಂಗ್ರೆಸ್: ಜಮೀರ್ ಅಹ್ಮದ್
ದೇಶ ನಮ್ಮದು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು ಕಾಂಗ್ರೆಸ್: ಜಮೀರ್ ಅಹ್ಮದ್