ಮುಂದಿನ ವರ್ಷ ಭಾರತದ ಹಣದುಬ್ಬರ ಶೇ. 3ಕ್ಕಿಂತಲೂ ಕಡಿಮೆ; ಡೋಯ್ಚ ಬ್ಯಾಂಕ್ ಭವಿಷ್ಯ

Deutsche Bank On Inflation in India: ಭಾರತದಲ್ಲಿ ಆಹಾರವಸ್ತುಗಳ ಬೆಲೆ ಏರಿಕೆಯು ಹಣದುಬ್ಬರ ನಿಯಂತ್ರಣ ಪ್ರಯತ್ನಕ್ಕೆ ತೊಡರುಗಾಲಾಗಿದೆ. ಇವುಗಳ ಬೆಲೆ ಏರಿಕೆ ಆಗದೇ ಇದ್ದಲ್ಲಿ ಭಾರತದಲ್ಲಿ ಹಣದುಬ್ಬರ ಬಹಳ ಬೇಗ ನಿಯಂತ್ರಣಕ್ಕೆ ಬರಬಹುದು. ಡೋಯ್ಚ ಬ್ಯಾಂಕ್​ನ ಆರ್ಥಿಕ ತಜ್ಞರ ಪ್ರಕಾರ ಮುಂದಿನ ವರ್ಷದ ಜುಲೈನಲ್ಲಿ ಹಣದುಬ್ಬರ ಶೇ. 2.9ಕ್ಕೆ ಇಳಿಯಬಹುದು. ರಾಷ್ಟ್ರೀಯ ಸಾಂಖ್ಯಿಕ ಕಚೇರಿಯಿಂದ ಬಿಡುಗಡೆ ಆದ ಆಗಸ್ಟ್ ತಿಂಗಳ ಹಣದುಬ್ಬರ ವರದಿ ಬೆನ್ನಲ್ಲೇ ಡೋಯ್ಚ ಬ್ಯಾಂಕ್ ಈ ಅಭಿಪ್ರಾಯಕ್ಕೆ ಬಂದಿದೆ.

ಮುಂದಿನ ವರ್ಷ ಭಾರತದ ಹಣದುಬ್ಬರ ಶೇ. 3ಕ್ಕಿಂತಲೂ ಕಡಿಮೆ; ಡೋಯ್ಚ ಬ್ಯಾಂಕ್ ಭವಿಷ್ಯ
ಬೆಲೆ ಏರಿಕೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 13, 2023 | 2:50 PM

ನವದೆಹಲಿ, ಸೆಪ್ಟೆಂಬರ್ 13: ಕಳೆದ ತಿಂಗಳು ಭಾರತದ ಹಣದುಬ್ಬರ (Inflation) ಶೇ. 6.83ಕ್ಕೆ ಇಳಿದಿರುವುದು ವರದಿಯಾಗಿದೆ. ಇದೇ ಹೊತ್ತಿನಲ್ಲಿ ಜರ್ಮನಿ ಮೂಲದ ಡೋಯ್ಚ ಬ್ಯಾಂಕ್ (Deutsche Bank) ಭಾರತದಲ್ಲಿ ಹಣದುಬ್ಬರ ಸ್ಥಿತಿ ನಿಯಂತ್ರಣಕ್ಕೆ ಬರುವ ಸಾಧ್ಯತೆ ಇದೆ ಎಂದಿದೆ. ಈ ಬ್ಯಾಂಕ್ ಮಾಡಿರುವ ಅಂದಾಜು ಪ್ರಕಾರ 2024ರ ಮಧ್ಯಭಾಗದಲ್ಲಿ ಭಾರತದ ಹಣದುಬ್ಬರ ದರ ಶೇ. 3ಕ್ಕಿಂತಲೂ ಕಡಿಮೆಗೆ ಇಳಿಯಬಹುದು. ಕಳೆದ ಎರಡು ತಿಂಗಳಲ್ಲಿ ಆದಂತೆ ಮುಂದಿನ ತಿಂಗಳುಗಳಲ್ಲಿ ಆಹಾರ ಬೆಲೆ ಅಸ್ವಾಭಾವಿಕವಾಗಿ ಹೆಚ್ಚಾಗದೇ ಇದ್ದ ಪಕ್ಷದಲ್ಲಿ ಭಾರತದಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಬರುವ ವಾತಾವರಣ ಇದೆ ಎಂದು ಡೋಯ್ಚ ಬ್ಯಾಂಕ್ ಅಭಿಪ್ರಾಯಪಟ್ಟಿದೆ.

‘ಗ್ರಾಹಕ ಬೆಲೆ ಅನುಸೂಚಿ (ಸಿಪಿಐ) ಹಣದುಬ್ಬರ 2023ರ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಸರಾಸರಿಯಾಗಿ ಶೇ. 6.4ರಿಂದ ಶೇ. 6.5 ಇರುವ ಸಾಧ್ಯತೆ ಇದೆ. ಮುಂದಿನ ವರ್ಷದ ಇದೇ ಅವಧಿಯಲ್ಲಿ ಹಣದುಬ್ಬರ ಸರಾಸರಿಯಾಗಿ ಶೇ. 4ಕ್ಕಿಂತಲೂ ಕಡಿಮೆ ಆಗಬಹುದು. ಆದರೆ, ಮುಂದಿನ ವರ್ಷ ಈಗ ಆದಂತೆ ಬೆಲೆ ಏರಿಕೆಯ ಆಘಾತಗಳು ಎರಗಬಾರದು’ ಎಂದು ಡೋಯ್ಚ ಬ್ಯಾಂಕ್​ನ ಭಾರತ ಮತ್ತು ದಕ್ಷಿಣ ಏಷ್ಯಾ ವಿಭಾಗದ ಮುಖ್ಯ ಆರ್ಥಿಕ ತಜ್ಞ ಕೌಶಿಕ್ ದಾಸ್ ನಿನ್ನೆ (ಸೆ. 12) ಹೇಳಿದ್ದಾರೆ.

ಇದನ್ನೂ ಓದಿ: ಆಹಾರವಸ್ತುಗಳ ಬೆಲೆ ಇಳಿಕೆಯ ಎಫೆಕ್ಟ್; ರೀಟೇಲ್ ಹಣದುಬ್ಬರ ಆಗಸ್ಟ್​ನಲ್ಲಿ ಶೇ. 6.83ಕ್ಕೆ ಇಳಿಕೆ

ಇವರ ಪ್ರಕಾರ, ಹಣದುಬ್ಬರ 2024ರ ಜುಲೈ ತಿಂಗಳಲ್ಲಿ ಶೇ. 2.9, ಆಗಸ್ಟ್ ತಿಂಗಳಲ್ಲಿ ಶೇ. 3.3ರಷ್ಟು ಇರುತ್ತದೆ. ಮರು ವರ್ಷ, ಅಂದರೆ 2025ರಲ್ಲಿ ಜನವರಿಯಿಂದ ಮಾರ್ಚ್​ವರೆಗಿನ ಅವಧಿಯಲ್ಲಿ ಹಣದುಬ್ಬರ ಸರಾಸರಿಯಾಗಿ ಶೇ. 4.5ರಷ್ಟು ಇರಬಹುದು ಎಂಬ ಅನಿಸಿಕೆಗೆ ಬಂದಿದ್ದಾರೆ.

ಆಗಸ್ಟ್ ತಿಂಗಳ ಹಣದುಬ್ಬರ ಅಂಕಿ ಅಂಶಗಳ ವರದಿಯನ್ನು ಸರ್ಕಾರ ಬಿಡುಗಡೆ ಮಾಡಿದ ಬೆನ್ನಲ್ಲೆ ಡೋಯ್ಚ ಬ್ಯಾಂಕ್​ನ ಆರ್ಥಿಕ ತಜ್ಞರ ಈ ಅನಿಸಿಕೆ ಬಂದಿದೆ. ಕಳೆದ ಬಾರಿಯ ಎಂಪಿಸಿ ಸಭೆಯಲ್ಲಿ ಆರ್​ಬಿಐ ಮಾಡಿದ ಅಂದಾಜು ಪ್ರಕಾರ ಭಾರತದಲ್ಲಿ ಈ ವರ್ಷದ ಜುಲೈನಿಂದ ಸೆಪ್ಟೆಂಬರ್​ವರೆಗಿನ ಮೂರು ತಿಂಗಳ ಅವಧಿಯಲ್ಲಿ ಸರಾಸರಿಯಾಗಿ ಹಣದುಬ್ಬರ ಶೇ. 6.2ರಷ್ಟು ಇರಲಿದೆ.

ಇದನ್ನೂ ಓದಿ: ಟ್ರಾಯ್ ಕಾಯ್ದೆ ತಿದ್ದುಪಡಿಗೆ ಕೇಂದ್ರ ಚಿಂತನೆ; ಖಾಸಗಿ ಕ್ಷೇತ್ರದವರಿಗೂ ಟ್ರಾಯ್ ಅಧ್ಯಕ್ಷರಾಗಲು ಅವಕಾಶ?

ಹಾಗೆಯೇ, ಅಕ್ಟೋಬರ್​ನಿಂದ ಡಿಸೆಂಬರ್​ವರೆಗಿನ ಅವಧಿಯಲ್ಲಿ ಶೇ. 5.7, 2024ರಲ್ಲಿ ಮೊದಲ ಆರು ತಿಂಗಳಲ್ಲಿ ಸರಾಸರಿಯಾಗಿ ಶೇ. 5.2ರಷ್ಟು ಹಣದುಬ್ಬರ ಇರಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಭಿಪ್ರಾಯಪಟ್ಟಿದೆ.

ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್​ಎಸ್​ಒ) ಹಣದುಬ್ಬರದ ಅಂಕಿ ಅಂಶಗಳನ್ನು ಪ್ರತೀ ತಿಂಗಳೂ ಬಿಡುಗಡೆ ಮಾಡುತ್ತದೆ. ಅಕ್ಟೋಬರ್​ನಲ್ಲಿ 6ನೇ ತಾರೀಖಿನಂದು ಆರ್​ಬಿಐನ ಎಂಪಿಸಿ ಸಭೆಯ ನಿರ್ಧಾರಗಳು ಹೊರಬರಲಿದೆ. ಅದಾಗಿ ಆರು ದಿನಕ್ಕೆ, ಅಂದರೆ ಅಕ್ಟೋಬರ್ 12ರಂದು ಎನ್​ಎಸ್​ಒ ಸೆಪ್ಟೆಂಬರ್ ತಿಂಗಳ ಹಣದುಬ್ಬರದ ಮಾಹಿತಿಯನ್ನು ಬಿಡುಗಡೆ ಮಾಡಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ