ಮಧ್ಯಮ ಕ್ರಮಾಂಕದ ಎಸ್ ಯುವಿ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹ್ಯುಂಡೈ (Hyundai) ಕಂಪನಿಯು ವೆನ್ಯೂ ಮಾದರಿಯಲ್ಲಿ ಎಸ್(ಒ) ಪ್ಲಸ್ ವೆರಿಯೆಂಟ್ ನಲ್ಲಿ ಹೊಸ ಪ್ರೀಮಿಯಂ ಸೌಲಭ್ಯ ನೀಡಿದ್ದು, ಹೊಸ ಮಾದರಿಯು ಎಲೆಕ್ಟ್ರಿಕ್ ಸನ್ ರೂಫ್ ಜೋಡಣೆಯೊಂದಿಗೆ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 9,99,900 ಬೆಲೆ ಹೊಂದಿದೆ.
ವೆನ್ಯೂ ಎಸ್(ಒ) ಪ್ಲಸ್ ವೆರಿಯೆಂಟ್ ನಲ್ಲಿ ಹ್ಯುಂಡೈ ಕಂಪನಿಯು ಪೆಟ್ರೋಲ್ ಮ್ಯಾನುವಲ್ ಎಂಜಿನ್ ನೊಂದಿಗೆ ಎಲೆಕ್ಟ್ರಿಕ್ ಸನ್ ರೂಫ್ ಜೋಡಣೆ ಹೊಂದಿದ್ದು, ಇದರೊಂದಿಗೆ ಎಲ್ಇಡಿ ಡಿಆರ್ ಎಲ್ಎಸ್, ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ಸ್, 8 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ ಮತ್ತು ವೈರ್ ಲೆಸ್ ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಸರ್ಪೊಟ್ ಹೊಂದಿದೆ.
ಹೊಸ ಸೌಲಭ್ಯ ಹೊಂದಿರುವ ಎಸ್(ಒ) ಪ್ಲಸ್ ವೆರಿಯೆಂಟ್ ಎಸ್(ಒ) ಮತ್ತು ಎಸ್ಎಕ್ಸ್ ವೆರಿಯೆಂಟ್ ಗಳ ನಡುವಿನ ಸ್ಥಾನ ಹೊಂದಿದ್ದು, ಕಡಿಮೆ ಬೆಲೆಯಲ್ಲಿ ಸನ್ ರೂಫ್ ಹೊಂದಿರುವ ಕಂಪ್ಯಾಕ್ಟ್ ಎಸ್ ಯುವಿ ಖರೀದಿಸುವ ಗ್ರಾಹಕರಿಗೆ ಇದು ಅತ್ಯುತ್ತಮ ಮಾದರಿಯಾಗಿದೆ.
ಎಲೆಕ್ಟ್ರಿಕ್ ಸನ್ ರೂಫ್ ನೊಂದಿಗೆ ಎಸ್(ಒ) ಪ್ಲಸ್ ವೆರಿಯೆಂಟ್ ನಲ್ಲಿ ಹಲವಾರು ಸ್ಟ್ಯಾಂಡರ್ಡ್ ಸೌಲಭ್ಯಗಳನ್ನು ನೀಡಿದ್ದು, ಇದರಲ್ಲಿರುವ ವಿವಿಧ ಸುರಕ್ಷಾ ಸೌಲಭ್ಯಗಳು ಗಮನಸೆಳೆಯುತ್ತಿವೆ. ಈ ಮೂಲಕ ಇದರಲ್ಲಿ 6 ಏರ್ ಬ್ಯಾಗ್ ಗಳ ಜೊತೆಗೆ ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಹಿಲ್ ಅಸಿಸ್ಟ್ ಕಂಟ್ರೋಲ್, ರಿಯರ್ ಕ್ಯಾಮೆರಾ ಸೇರಿದಂತೆ ಹಲವಾರು ಸೌಲಭ್ಯಗಳಿದ್ದು, ಇದು ಪ್ರತಿಸ್ಪರ್ಧಿ ಮಾದರಿಗಳಿಗೆ ಮತ್ತಷ್ಟು ಪೈಪೋಟಿ ನೀಡಲಿದೆ.
ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಕಾರುಗಳಿವು!
ಇನ್ನುಳಿದಂತೆ ವೆನ್ಯೂ ಕಾರು ವಿವಿಧ ವೆರಿಯೆಂಟ್ ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ಇದು ಇ, ಎಸ್, ಎಸ್ ಆಪ್ಷನ್, ಎಸ್ ಆಪ್ಷನ್ ಪ್ಲಸ್, ಎಕ್ಸಿಕ್ಲೂಟಿವ್ ಟರ್ಬೊ, ಎಸ್ ಆಪ್ಷನ್ ನೈಟ್ ವೆರಿಯೆಂಟ್ ಗಳೊಂದಿಗೆ ಎಕ್ಸ್ ಶೋರೂಂ ಪ್ರಕಾರ ರೂ. 7.94 ಲಕ್ಷದಿಂದ ರೂ. 13.48 ಲಕ್ಷ ಬೆಲೆ ಹೊಂದಿದೆ. ಇದು 1.2 ಲೀಟರ್ ಪೆಟ್ರೋಲ್, 1.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ನೊಂದಿಗೆ ಖರೀದಿಗೆ ಲಭ್ಯವಿದ್ದು, ಇದು 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿದೆ.