Hyundai: ಹ್ಯುಂಡೈ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ

|

Updated on: Apr 21, 2024 | 7:33 PM

ಹ್ಯುಂಡೈ ಇಂಡಿಯಾ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳ ಮೇಲೆ ಏಪ್ರಿಲ್ ಅವಧಿಯ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್ ಗಳು ತಿಂಗಳಾಂತ್ಯದ ತನಕ ಲಭ್ಯವಿರಲಿವೆ.

Hyundai: ಹ್ಯುಂಡೈ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ
ಹ್ಯುಂಡೈ ಕಾರುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ
Follow us on

ಮಧ್ಯಮ ಕ್ರಮಾಂಕದ ಪ್ರೀಮಿಯಂ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹ್ಯುಂಡೈ ಇಂಡಿಯಾ (Hyundai India) ಕಂಪನಿಯು ತನ್ನ ಪ್ರಮುಖ ಕಾರುಗಳ ಖರೀದಿಯ ಮೇಲೆ ಆಕರ್ಷಕ ಆಫರ್ ಗಳನ್ನು ನೀಡುತ್ತಿದ್ದು, ಹೊಸ ಆಫರ್ ಗಳಲ್ಲಿ ಕಂಪನಿಯು ಕ್ಯಾಶ್ ಬ್ಯಾಕ್, ಎಕ್ಸ್ ಚೆಂಜ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್ ಗಳನ್ನು ನೀಡುತ್ತಿದೆ. ಹೊಸ ಆಫರ್ ಗಳಲ್ಲಿ ಗ್ರಾಹಕರ ವಿವಿಧ ಕಾರು ಮಾದರಿಗಳನ್ನು ಆಧರಿಸಿ ರೂ. 30 ಸಾವಿರದಿಂದ ರೂ. 2 ಲಕ್ಷ ತನಕ ಆಫರ್ ಪಡೆದುಕೊಳ್ಳಬಹುದಾಗಿದ್ದು, ಯಾವ ಕಾರಿನ ಮೇಲೆ ಎಷ್ಟು ಪ್ರಮಾಣದ ಆಫರ್ ಲಭ್ಯವಿದೆ ಎನ್ನುವ ಮಾಹಿತಿ ಇಲ್ಲಿದೆ.

ವೆನ್ಯೂ ಮತ್ತು ವೆನ್ಯೂ ಎನ್ ಲೈನ್

ಹೊಸ ಆಫರ್ ಗಳಲ್ಲಿ ಹ್ಯುಂಡೈ ಕಂಪನಿಯು ವೆನ್ಯೂ ಮತ್ತು ವೆನ್ಯೂ ಎನ್ ಲೈನ್ ಕಾರುಗಳ ಮೇಲೆ ಆಕರ್ಷಕ ಆಫರ್ ಘೋಷಣೆ ಮಾಡಿದ್ದು, ವೆನ್ಯೂ ಎನ್ ಲೈನ್ ಮೇಲೆ ರೂ. 30 ಸಾವಿರ ಮತ್ತು ಸಾಮಾನ್ಯ ವೆನ್ಯೂ ಮೇಲೆ ರೂ. 35 ಸಾವಿರದಷ್ಟು ಆಫರ್ ನೀಡುತ್ತಿದೆ. ಹೊಸ ಆಫರ್ ಗಳಲ್ಲಿ ಎಕ್ಸ್ ಚೆಂಜ್ ಬೋನಸ್ ಮತ್ತು ಕ್ಯಾಶ್ ಡಿಸ್ಕೌಂಟ್ ನೀಡಲಾಗುತ್ತಿದ್ದು, ಸಾಮಾನ್ಯ ವೆನ್ಯೂ ಡೀಸೆಲ್ ಹೊರತುಪಡಿಸಿ ಇನ್ನುಳಿದ ಎಲ್ಲಾ ವೆರಿಯೆಂಟ್ ಗಳಿಗೆ ಆಫರ್ ಅನ್ವಯಿಸುತ್ತದೆ.

ವೆನ್ಯೂ ಮತ್ತು ವೆನ್ಯೂ ಎನ್ ಲೈನ್ ಕಾರುಗಳು 1.0 ಲೀಟರ್ ಟರ್ಬೊ ಪೆಟ್ರೋಲ್, 1.2 ಲೀಟರ್ ಎನ್ಎ ಪೆಟ್ರೋಲ್ ಮತ್ತು 1.5 ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ಹೊಂದಿದ್ದು, ಇವು ಎಕ್ಸ್ ಶೋರೂಂ ಪ್ರಕಾರ ರೂ. 7.94 ಲಕ್ಷದಿಂದ 13.48 ಲಕ್ಷ ಮತ್ತು ರೂ. 12.08 ಲಕ್ಷದಿಂದ ರೂ. 13.90 ಲಕ್ಷ ಬೆಲೆ ಹೊಂದಿವೆ.

ಇದನ್ನೂ ಓದಿ: ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಭರ್ಜರಿ ರೇಟಿಂಗ್ಸ್ ಪಡೆದುಕೊಂಡ ಹೊಸ ಮಾರುತಿ ಸುಜುಕಿ ಸ್ವಿಫ್ಟ್

ಅಲ್ಕಾಜರ್ ಮತ್ತು ಟುಸಾನ್

ಹ್ಯುಂಡೈ ಕಂಪನಿಯು ಅಲ್ಕಾಜರ್ ಎಸ್ ಯುವಿ ಮೇಲೆ ರೂ. 55 ಸಾವಿರದಷ್ಟು ಆಫರ್ ನೀಡುತ್ತಿದ್ದು, ಇದರಲ್ಲಿ ಎಕ್ಸ್ ಚೆಂಜ್ ಬೋನಸ್ ಮತ್ತು ಕ್ಯಾಶ್ ಬ್ಯಾಕ್ ಡಿಸ್ಕೌಂಟ್ ಲಭ್ಯವಿದೆ. ಹಾಗೆಯೇ ಮಧ್ಯಮ ಕ್ರಮಾಂಕದ ಐಷಾರಾಮಿ ಕಾರು ಆವೃತ್ತಿಯಾಗಿರುವ ಟುಸಾನ್ ಮೇಲೆ ರೂ. 2 ಲಕ್ಷದಷ್ಟು ಕ್ಯಾಶ್ ಬ್ಯಾಕ್ ಆಫರ್ ನೀಡುತ್ತಿದೆ. ಟುಸಾನ್ ಕಾರಿನ ಡೀಸೆಲ್ ಮಾದರಿಯ ಮೇಲೆ ಹೆಚ್ಚಿನ ಆಫರ್ ಲಭ್ಯವಿದ್ದು, ಪೆಟ್ರೋಲ್ ಮಾದರಿಯ ಮೇಲೆ ರೂ. 50 ಸಾವಿರದಷ್ಟು ಆಫರ್ ಸಿಗಲಿದೆ. ಸದ್ಯ ಮಾರುಕಟ್ಟೆಯಲ್ಲಿ ಅಲ್ಕಾಜರ್ ಕಾರು ಎಕ್ಸ್ ಶೋರೂಂ ಪ್ರಕಾರ ರೂ.16.78 ಲಕ್ಷ ಬೆಲೆ ಹೊಂದಿದ್ದರೆ ಟುಸಾನ್ ಕಾರು ರೂ. 29.02 ಲಕ್ಷದಿಂದ ರೂ.31.67 ಲಕ್ಷ ಬೆಲೆ ಹೊಂದಿದೆ.

ಇದನ್ನೂ ಓದಿ: ಸಖತ್ ಕ್ಯೂಟ್ ಆಗಿರೋ ಇವಿ ಕಾರು ಖರೀದಿಸಿದ ನಟಿ ನಮ್ರತಾ ಗೌಡ

ಕೊನಾ ಎಲೆಕ್ಟ್ರಿಕ್

ಹ್ಯುಂಡೈ ಕಂಪನಿಯು ಕೊನಾ ಇವಿ ಕಾರಿನ ಏಪ್ರಿಲ್ ಅವಧಿಗಾಗಿ ಅತಿ ದೊಡ್ಡ ಆಫರ್ ನೀಡುತ್ತಿದೆ. ಕೊನಾ ಇವಿ ಖರೀದಿದಾರರು ವಿವಿಧ ಆಫರ್ ಗಳೊಂದಿಗೆ ರೂ. 4 ಲಕ್ಷ ತನಕ ಉಳಿತಾಯ ಮಾಡಬಹುದಾಗಿದ್ದು, ಇವಿ ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಇದು ಅತ್ಯುತ್ತಮ ಎನ್ನಬಹುದಾಗಿದೆ. ಕೊನಾ ಇವಿ ಕಾರು ಸದ್ಯ ಮಾರುಕಟ್ಟೆಯಲ್ಲಿ ಎಕ್ಸ್ ಶೋರೂಂ ಪ್ರಕಾರ ರೂ. 19.84 ಲಕ್ಷದಿಂದ ರೂ. 20.03 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಇದು 39.2kWh ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಪ್ರತಿ ಚಾರ್ಜ್ ಗೆ 452 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.