Lotus Eletre: ಐಷಾರಾಮಿ ಲೋಟಸ್ ಎಲೆಟ್ರೆ ಎಲೆಕ್ಟ್ರಿಕ್ ಸೂಪರ್ ಎಸ್‍ಯುವಿ ಬಿಡುಗಡೆ

|

Updated on: Nov 10, 2023 | 7:31 PM

ಲೋಟಸ್ ಕಂಪನಿ ತನ್ನ ಹೊಸ ಲೋಟಸ್ ಎಲೆಟ್ರೆ ಎಲೆಕ್ಟ್ರಿಕ್ ಸೂಪರ್ ಎಸ್‍ಯುವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಹೊಸ ಎಲೆಕ್ಟ್ರಿಕ್ ಕಾರು ಹಲವಾರು ಐಷಾರಾಮಿ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

Lotus Eletre: ಐಷಾರಾಮಿ ಲೋಟಸ್ ಎಲೆಟ್ರೆ ಎಲೆಕ್ಟ್ರಿಕ್ ಸೂಪರ್ ಎಸ್‍ಯುವಿ ಬಿಡುಗಡೆ
ಲೋಟಸ್ ಎಲೆಟ್ರೆ ಎಲೆಕ್ಟ್ರಿಕ್ ಸೂಪರ್ ಎಸ್‍ಯುವಿ ಬಿಡುಗಡೆ
Follow us on

ಬ್ರಿಟಿಷ್ ಐಷಾರಾಮಿ ಕಾರು ಉತ್ಪಾದನಾ ಕಂಪನಿಯಾಗಿರುವ ಲೋಟಸ್ (Lotus) ಮೊದಲ ಬಾರಿಗೆ ಭಾರತಕ್ಕೆ ಅಧಿಕೃತವಾಗಿ ಪ್ರವೇಶಿಸಿದ್ದು, ಮೊದಲ ಕಾರು ಮಾದರಿಯಾಗಿ ಎಲೆಟ್ರೆ (Eletre) ಎಲೆಕ್ಟ್ರಿಕ್ ಸೂಪರ್ ಎಸ್‍ಯುವಿ ಬಿಡುಗಡೆ ಮಾಡಿದೆ. ಹೊಸ ಕಾರು ಮಾದರಿಯು ಒಟ್ಟು ಮೂರು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಎಕ್ಸ್ ಶೋರೂಂ ಪ್ರಕಾರ ರೂ. ರೂ. 2.55 ಕೋಟಿ ಆರಂಭಿಕ ಬೆಲೆ ಹೊಂದಿದೆ.

ಲೋಟಸ್ ಎಲೆಟ್ರೆ ಎಲೆಕ್ಟ್ರಿಕ್ ಎಸ್‍ಯುವಿ ಕಾರಿನ ಆರಂಭಿಕ ಮಾದರಿಯು ರೂ. 2.55 ಕೋಟಿ ಬೆಲೆ ಹೊಂದಿದ್ದರೆ ಮಧ್ಯಮ ಕ್ರಮಾಂಕದ ಮಾದರಿಯು ರೂ.2.75 ಕೋಟಿ ಮತ್ತು ಟಾಪ್ ಎಂಡ್ ಮಾದರಿಯು ರೂ. 2.99 ಕೋಟಿ ಬೆಲೆ ಹೊಂದಿದ್ದು, ಹಲವಾರು ಐಷಾರಾಮಿ ಫೀಚರ್ಸ್ ಗಳೊಂದಿಗೆ ಪರ್ಫಾಮೆನ್ಸ್ ನಲ್ಲೂ ಗಮನಸೆಳೆಯುತ್ತಿದೆ.

ಬ್ಯಾಟರಿ ಪ್ಯಾಕ್ ಮತ್ತು ಪರ್ಫಾಮೆನ್ಸ್

ಎಲೆಟ್ರೆ ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ 112kWh ಬ್ಯಾಟರಿ ಪ್ಯಾಕ್‌ ಜೋಡಣೆ ಮಾಡಲಾಗಿದ್ದು, ವಿವಿಧ ವೆರಿಯೆಂಟ್ ಗಳೊಂದಿಗೆ 603 ಹಾರ್ಸ್ ಪವರ್ ಮತ್ತು 710 ಎನ್ಎಂ ಟಾರ್ಕ್ ಹಾಗೂ ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್ ಸೆಟಪ್ ಮೂಲಕ 905 ಹಾರ್ಸ್ ಪವರ್ ಮತ್ತು 985 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಮೂಲಕ ಇದು ಪ್ರತಿ ಚಾರ್ಜ್ ಗೆ ಗರಿಷ್ಠ 490 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಪ್ರತಿ ಗಂಟೆಗೆ ಗರಿಷ್ಠ 265 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ಇದನ್ನೂ ಓದಿ: ಕಡಿಮೆ ಬೆಲೆಗೆ ಖರೀದಿಗೆ ಲಭ್ಯವಿರುವ ಅತ್ಯುತ್ತಮ ಟಾಪ್ 5 ಸಿಎನ್ ಜಿ ಕಾರುಗಳಿವು!

ಕೇವಲ 2.95 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುವ ಲೋಟಸ್ ಎಲೆಟ್ರೆ ಆರ್ ಎಲೆಕ್ಟ್ರಿಕ್ ಎಸ್‍ಯುವಿಯು ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್ ಸೆಟಪ್ ನೊಂದಿಗೆ 905 ಹಾರ್ಸ್ ಪವರ್ ಉತ್ಪಾದಿಸಲಿದ್ದು, ಇದು ವಿವಿಧ ಐದು ಡ್ರೈವ್ ಮೋಡ್‌ಗಳ ಮೂಲಕ ಸಾಮಾನ್ಯ ಆವೃತ್ತಿಯು ಪ್ರತಿ ಚಾರ್ಜ್ ಗೆ ಗರಿಷ್ಠ 600 ಕಿ.ಮೀ ಮೈಲೇಜ್ ನೀಡುತ್ತದೆ.

ಇದರೊಂದಿಗೆ ಲೋಟಸ್ ಎಲೆಟ್ರೆ ಎಲೆಕ್ಟ್ರಿಕ್ ಎಸ್‍ಯುವಿಯಲ್ಲಿ ಸೂಪರ್ ಫಾಸ್ಟ್ ಚಾರ್ಜರ್ ಸರ್ಪೊಟ್ ನೀಡಲಾಗಿದ್ದು, ಈ ಮೂಲಕ ಕೇವಲ 20 ನಿಮಿಷಗಳಲ್ಲಿ ಶೇ. 10 ರಿಂದ ಶೇ. 80ರ ತನಕ ಚಾರ್ಜ್ ಮಾಡಬಹುದಾಗಿದ್ದು, ಹಲವಾರು ಹೊಸ ತಂತ್ರಜ್ಞಾನ ಪ್ರೇರಣೆ ಹೊಂದಿದೆ.

ವಿನ್ಯಾಸ ಮತ್ತು ವೈಶಿಷ್ಟ್ಯತೆಗಳು

ಹೊಸ ಎಲೆಟ್ರೆ ಎಲೆಕ್ಟ್ರಿಕ್ ಎಸ್‍ಯುವಿಯು ಸೂಪರ್ ಕಾರುಗಳಲ್ಲಿ ಹಲವಾರು ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಇದರಲ್ಲಿ 22 ಇಂಚಿನ 10 ಸ್ಪೋಕ್ ಫೋರ್ಜ್ಡ್ ವ್ಹೀಲ್, ಪರ್ಫಾಮೆನ್ಸ್ ಗೆ ಪೂರಕವಾದ ಆಕ್ಟಿವ್ ಏರ್ ಸಸ್ಪೆನ್ಷನ್, ಟಾರ್ಕ್ ವೆಕ್ಟರಿಂಗ್ ಮತ್ತು ಪ್ರಕಾಶಮಾನವಾದ ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್‌ಲೈಟ್‌ ಜೊತೆಗೆ ಆಕ್ಟಿವ್ ಫ್ರಂಟ್ ಗ್ರಿಲ್ ಪಡೆದುಕೊಂಡಿದೆ.

ಹಾಗೆಯೇ ಕನೆಕ್ಟಿವಿಟಿ ಸೌಲಭ್ಯಕ್ಕಾಗಿ ಲೋಟಸ್ ಆಪರೇಟಿಂಗ್ ಸಿಸ್ಟಮ್ ಮತ್ತು ಲೋಟಸ್ ಹೈಪರ್ ಓಎಸ್ ನೀಡಲಾಗಿದ್ದು, 15.1 ಇಂಚಿನ ಲ್ಯಾಂಡ್ ಸ್ಕೇಫ್ ಇನ್ಪೋಟೈನ್ ಮೆಂಟ್ ಸಿಸ್ಟಂ, ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ, ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜಿಂಗ್, 12 ಹಂತಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಎಲೆಕ್ಟ್ರಿಕ್ ಫ್ರಂಟ್ ಸೀಟುಗಳು, ಫೋರ್ ಜೋನ್ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಸೇರಿದಂತೆ ಹಲವಾರು ಐಷಾರಾಮಿ ಫೀಚರ್ಸ್ ಗಳಿವೆ.

ಇದನ್ನೂ ಓದಿ: ಭಾರತದಲ್ಲಿ ಐದು ಹೊಸ ಎಸ್ ಯುವಿ ಬಿಡುಗಡೆ ಮಾಡಲಿದೆ ಟೊಯೊಟಾ

ಇನ್ನು ಲೋಟಸ್ ಕಾರು ಉತ್ಪಾದನಾ ಕಂಪನಿಯು ಭಾರತದಲ್ಲಿ ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಇದು ಸದ್ಯಕ್ಕೆ ಚೀನಿ ಜನಪ್ರಿಯ ಕಾರು ಉತ್ಪಾದನಾ ಕಂಪನಿಯಾಗಿರುವ ಗೀಲಿ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ.