Mahindra Recalls: ತಾಂತ್ರಿಕ ಸಮಸ್ಯೆಯಿಂದಾಗಿ ಎಕ್ಸ್‌ಯುವಿ700 ಮತ್ತು ಸ್ಕಾರ್ಪಿಯೋ ಎನ್ ಹಿಂಪಡೆದ ಮಹೀಂದ್ರಾ

|

Updated on: Dec 05, 2022 | 9:10 PM

ಮಧ್ಯಮ ಕ್ರಮಾಂಕದ ಎಸ್ ಯುವಿ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಮಹೀಂದ್ರಾ ಕಂಪನಿಯು ತಾಂತ್ರಿಕ ಸಮಸ್ಯೆ ಕಂಡುಬಂದಿರುವ ಹಿನ್ನಲೆಯಲ್ಲಿ ಹೊಸ ಎಕ್ಸ್‌ಯುವಿ700 ಮತ್ತು ಸ್ಕಾರ್ಪಿಯೋ ಎನ್ ಆಯ್ದು ಯುನಿಟ್ ಗಳನ್ನು ಹಿಂಪಡೆದಿದೆ.

Mahindra Recalls: ತಾಂತ್ರಿಕ ಸಮಸ್ಯೆಯಿಂದಾಗಿ ಎಕ್ಸ್‌ಯುವಿ700 ಮತ್ತು ಸ್ಕಾರ್ಪಿಯೋ ಎನ್ ಹಿಂಪಡೆದ ಮಹೀಂದ್ರಾ
ತಾಂತ್ರಿಕ ಸಮಸ್ಯೆಯಿಂದಾಗಿ ಎಕ್ಸ್‌ಯುವಿ700 ಮತ್ತು ಸ್ಕಾರ್ಪಿಯೋ ಎನ್ ಹಿಂಪಡೆದ ಮಹೀಂದ್ರಾ
Follow us on

ಪ್ರಯಾಣಿಕ ಕಾರುಗಳ ಮಾರಾಟದಲ್ಲಿ ತನ್ನದೇ ಆದ ಜನಪ್ರಿಯತೆ ಹೊಂದಿರುವ ಮಹೀಂದ್ರಾ(Mahindra) ಕಂಪನಿಯು ಹೊಸ ಎಕ್ಸ್‌ಯುವಿ700(XUV700) ಮತ್ತು ಸ್ಕಾರ್ಪಿಯೋ ಎನ್(Scorpio N ) ಕಾರುಗಳ ಮಾರಾಟದಲ್ಲಿ ಭಾರೀ ಪ್ರಮಾಣ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರುಗಳಿಗೆ ಹೆಚ್ಚಿನ ಬೇಡಿಕೆ ನಡುವೆ ತಾಂತ್ರಿಕ ಸಮಸ್ಯೆಗಳು ಗ್ರಾಹಕರಲ್ಲಿ ಅಸಮಾಧಾನ ಉಂಟು ಮಾಡುತ್ತಿವೆ. ಹೌದು, ತಾಂತ್ರಿಕ ಸಮಸ್ಯೆಯ ಕಾರಣಕ್ಕಾಗಿ ಈ ಹಿಂದೇ ಎಕ್ಸ್ ಯುವಿ700 ಕಾರು ಮಾದರಿಯನ್ನು ಎರಡು ಬಾರಿ ಹಿಂಪಡೆದಿದ್ದ(Recalls) ಮಹೀಂದ್ರಾ ಕಂಪನಿಯು ಇದೀಗ ಮತ್ತೆ ಎಕ್ಸ್ ಯುವಿ700 ಜೊತೆಗೆ ಸ್ಕಾರ್ಪಿಯೋ ಎನ್ ಎಸ್ ಯುವಿಯನ್ನು ಸಹ ಹಿಂಪಡೆದಿದೆ.

ಹೊಸ ಎಕ್ಸ್‌ಯುವಿ700 ಮತ್ತು ಸ್ಕಾರ್ಪಿಯೋ ಎನ್ ಕಾರುಗಳ ಮ್ಯಾನುವಲ್ ಆವೃತ್ತಿಗಳಲ್ಲಿ ಹೊಸ ತಾಂತ್ರಿಕ ದೋಷ ಕಂಡುಬಂದಿದ್ದು, ಗ್ರಾಹಕರ ದೂರಗಳ ಆಧಾರದ ಮೇಲೆ ಕಂಪನಿಯು ಎರಡು ಮಾದರಿಗಳ ಸುಮಾರು 19 ಸಾವಿರ ಕಾರುಗಳನ್ನು ಹಿಂದಕ್ಕೆ ಪಡೆದಿದೆ. ಮ್ಯಾನುವಲ್ ಕಾರು ಮಾದರಿಗಳಲ್ಲಿನ ಬೆಲ್ ಹೌಸಿಂಗ್‌ ಒಳಗಿನ ರಬ್ಬರ್ ಅಳವಡಿಕೆಯಲ್ಲಿ ಆಗಿರುವ ಸಮಸ್ಯೆಯುವ ಕ್ಲಚ್ ಬಳಕೆಗೆ ತೊಂದರೆ ಉಂಟುಮಾಡುತ್ತಿದ್ದು, ಜುಲೈ 1 ರಿಂದ ನವೆಂಬರ್ 11 ಅವಧಿಯಲ್ಲಿ ಉತ್ಪಾದನೆಗೊಂಡ ಯುನಿಟ್ ಗಳಲ್ಲಿ ಈ ಹೊಸ ತಾಂತ್ರಿಕ ಸಮಸ್ಯೆ ಕಂಡುಬಂದಿದೆ.

ಇದನ್ನೂ ಓದಿ: ಇನೋವಾ ಕ್ರಿಸ್ಟಾದಲ್ಲಿ ಮತ್ತೆ ಡೀಸೆಲ್ ವರ್ಷನ್ ಬಿಡುಗಡೆ ಮಾಡಲಿದೆ ಟೊಯೊಟಾ!

ಮಹೀಂದ್ರಾ ಕಂಪನಿಯ ಮಾಹಿತಿ ಪ್ರಕಾರ ಬಿಡಿಭಾಗಗಳನ್ನು ಪೂರೈಸುವ ಉತ್ಪಾದನಾ ಘಟಕದಲ್ಲಿನ ತಾಂತ್ರಿಕ ಸಮಸ್ಯೆಗಳಿಂದ ಈ ಸಮಸ್ಯೆ ಉಂಟಾಗಿದ್ದು, ಈ ಕೂಡಲೇ ತಾಂತ್ರಿಕ ಸಮಸ್ಯೆ ಎದುರಿಸುತ್ತಿರುವ ಗ್ರಾಹಕರು ತಮ್ಮ ಹತ್ತಿರದ ಅಧಿಕೃತ ಮಹೀಂದ್ರಾ ಡೀಲರ್ಸ್ ಗಳಲ್ಲಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಮನವಿ ಮಾಡಿದೆ. ಹಾಗೆಯೇ ತಾಂತ್ರಿಕ ಸಮಸ್ಯೆಯನ್ನು ಉಚಿತವಾಗಿ ಬಗೆಹರಿಸುವುದಾಗಿ ಗ್ರಾಹಕರಲ್ಲಿ ಮಾಹಿತಿ ಹಂಚಿಕೊಂಡಿದ್ದು, ಭವಿಷ್ಯದಲ್ಲಿ ಈ ತಾಂತ್ರಿಕ ದೋಷಗಳು ಉಂಟಾಗದಂತೆ ಎಚ್ಚರಿಕೆ ವಹಿಸುವ ಭರವಸೆ ನೀಡಿದೆ.

ಎಕ್ಸ್‌ಯುವಿ700 ಕಾರಿನ ಸುಮಾರು 12,566 ಯುನಿಟ್ ಗಳಲ್ಲಿ ಮತ್ತು ಸ್ಕಾರ್ಪಿಯೋ ಎನ್ ಕಾರಿನ 6,618 ಯುನಿಟ್ ಗಳಲ್ಲಿ ಈ ಸಮಸ್ಯೆ ಕಂಡುಬಂದಿದ್ದು, ಕ್ಲಚ್ ಬಳಕೆಯಲ್ಲಿ ಚಾಲಕರಿಗೆ ಕೆಲವು ಬಾರಿ ಕಿರಿಕಿರಿ ಉಂಟಾಗುತ್ತಿತ್ತು. ಈ ಕುರಿತು ಹಲವು ಗ್ರಾಹಕರಿಂದ ದೂರು ಬಂದ ಹಿನ್ನಲೆಯಲ್ಲಿ ಹಲವು ಪರೀಕ್ಷೆಗಳ ನಂತರ 19 ಸಾವಿರ ಯುನಿಟ್ ಗಳಲ್ಲಿ ಹೊಸ ತಾಂತ್ರಿಕ ಸಮಸ್ಯೆಯಿರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದೆ.

ಇದನ್ನೂ ಓದಿ: ಭಾರತದಲ್ಲಿ ಬಿಡುಗಡೆಗಾಗಿ ಸಿದ್ದಗೊಂಡಿರುವ ಹೊಸ ಕಾರುಗಳಿವು!

ಎಸ್ ಯುವಿ ಮಾರಾಟದಲ್ಲಿ ಅಗ್ರಸ್ಥಾನ
ಸದ್ಯ ಕಾರು ಮಾರುಕಟ್ಟೆಯಲ್ಲಿ ಎಸ್ ಯುವಿ ಮಾರಾಟದಲ್ಲಿ ಹೊಸ ಎಕ್ಸ್‌ಯುವಿ700 ಮತ್ತು ಸ್ಕಾರ್ಪಿಯೋ ಎನ್ ಕಾರುಗಳು ಅಗ್ರಸ್ಥಾನದಲ್ಲಿದ್ದು, ಎರಡು ಕಾರು ಮಾದರಿಗಳಿಗಾಗಿ ಬರೋಬ್ಬರಿ 2.50 ಲಕ್ಷಕ್ಕೂ ಗ್ರಾಹಕರು ವಿತರಣೆ ಪಡೆದುಕೊಳ್ಳಲು ಕಾಯುತ್ತಿದ್ದಾರೆ. 7 ಸೀಟರ್ ಆಸನ ಸೌಲಭ್ಯದೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆ ಹೊಂದಿರುವ ಹೊಸ ಕಾರುಗಳು ಆಕರ್ಷಕ ಬೆಲೆ ಹೊಂದಿದ್ದು, ಹೊಸ ಕಾರುಗಳ ಕೆಲವು ವೆರಿಯೆಂಟ್ ಖರೀದಿಗಾಗಿ ಸುಮಾರು 2 ವರ್ಷಗಳ ಕಾಲ ಕಾಯುವಿಕೆ ಅವಧಿಯನ್ನು ನಿಗದಿಪಡಿಸಲಾಗಿದೆ.

Published On - 9:05 pm, Mon, 5 December 22