Energy crisis: ವಿದ್ಯುತ್ ಬಿಕ್ಕಟ್ಟಿನಿಂದಾಗಿ ಇವಿ ವಾಹನಳ ಬಳಕೆಗೆ ಬಿತ್ತು ಬ್ರೇಕ್!

ವಿಶ್ವಾದ್ಯಂತ ಇವಿ ವಾಹನಗಳ ಬಳಕೆ ಹೆಚ್ಚುತ್ತಿರುವ ಸಮಯದಲ್ಲಿ ಇವಿ ವಾಹನಗಳಿಗೆ ಸಮರ್ಪಕವಾದ ವಿದ್ಯುತ್ ಪೂರೈಕೆಯು ಸಾಕಷ್ಟು ಸವಾಲಾಗಿದೆ. ವಿದ್ಯುತ್ ಕೊರತೆಯ ನಡುವೆ ಇವಿ ವಾಹನಗಳ ಬಳಕೆಯು ಕೆಲವು ರಾಷ್ಟ್ರಗಳಲ್ಲಿ ಹೊಸ ಸಮಸ್ಯೆಗಳಿಗೆ ಕಾರಣವಾಗುತ್ತಿದ್ದು, ವಿದ್ಯುತ್ ಬಿಕ್ಕಟ್ಟು ಪರಿಣಾಮ ತಾತ್ಕಾಲಿಕವಾಗಿ ಬಳಕೆಗೆ ನಿಷೇಧ ಹೇರಲಾಗುತ್ತಿದೆ.

Energy crisis: ವಿದ್ಯುತ್ ಬಿಕ್ಕಟ್ಟಿನಿಂದಾಗಿ ಇವಿ ವಾಹನಳ ಬಳಕೆಗೆ ಬಿತ್ತು ಬ್ರೇಕ್!
ವಿದ್ಯುತ್ ಬಿಕ್ಕಟ್ಟಿನಿಂದಾಗಿ ಇವಿ ವಾಹನಳ ಬಳಕೆಗೆ ಬಿತ್ತು ಬ್ರೇಕ್!
Follow us
TV9 Web
| Updated By: Praveen Sannamani

Updated on:Dec 06, 2022 | 8:30 PM

ಹೆಚ್ಚುತ್ತಿರುವ ಇಂಧನಗಳ ದರ ಮತ್ತು ಮಾಲಿನ್ಯ ಕಾರಣಕ್ಕಾಗಿ ವಿಶ್ವಾದ್ಯಂತ ಎಲೆಕ್ಟ್ರಿಕ್ ವಾಹನಗಳ(Electric Vehicles) ಬಳಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆದ್ರೆ ಇವಿ ವಾಹನ ಬಳಕೆಯು ಭವಿಷ್ಯದಲ್ಲಿ ಹೊಸ ಸಮಸ್ಯೆಗಳಿಗೆ ಕಾರಣವಾಗಬಹುದು ಎನ್ನಲಾಗುತ್ತಿದ್ದು, ಇದೇ ಕಾರಣಕ್ಕೆ ಯುರೋಪಿನ ಮುಖ್ಯ ರಾಷ್ಟ್ರವೊಂದು ಇವಿ ವಾಹನಗಳ ಬಳಕೆಯನ್ನು ಬ್ಯಾನ್ ಮಾಡಿದೆ. ಹೌದು, ಇವಿ ವಾಹನಗಳ ಬಳಕೆಯು ಪರಿಸರ ಸ್ನೇಹಿಯಾಗಿದ್ದರೂ ಇವಿ ವಾಹನಗಳಿಗೆ ಮುಖ್ಯವಾಗಿರುವ ಸಮರ್ಪಕ ವಿದ್ಯುತ್ ಪೂರೈಕೆಯು ಹೊಸ ಸವಾಲಾಗಿ ಪರಿಣಮಿಸುತ್ತಿದೆ.

ಇವಿ ವಾಹನಗಳಿಗೆ ಹೆಚ್ಚಿನ ಮಟ್ಟದ ವಿದ್ಯುತ್ ಪೂರೈಕೆಗಾಗಿ ಪ್ರಮುಖ ರಾಷ್ಟ್ರಗಳು ಹೊಸ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದು, ಸದ್ಯ ಲಭ್ಯವಿರುವ ವಿದ್ಯುತ್ ಉತ್ಪಾದನಾ ಪ್ರಮಾಣವನ್ನು ಮುಂಬರುವ ದಿನಗಳಲ್ಲಿ ದ್ವಿಗುಣಗೊಳಿಸಬೇಕಿದೆ. ಆದರೆ ಲಭ್ಯವಿರುವ ವಿದ್ಯುತ್ ಪ್ರಮಾಣವು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇವಿ ವಾಹನಗಳಿಗೆ ಅನುಗುಣವಾಗಿ ಲಭ್ಯವಿಲ್ಲ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಯುರೋಪಿನ ಮುಖ್ಯ ಆರ್ಥಿಕ ಕೇಂದ್ರಗಳಲ್ಲಿ ಒಂದಾಗಿರುವ ಸ್ವಿಜರ್ಲ್ಯಾಂಡ್ ನಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ತಾತ್ಕಾಲಿಕವಾಗಿ ಬ್ಯಾನ್ ಮಾಡಲಾಗಿದೆ.

ಚಳಿಗಾಲ ಆರಂಭವಾಗಿರುವುದರಿಂದ ಸ್ವಿಜರ್ಲ್ಯಾಂಡ್ ನಲ್ಲಿ ವಿದ್ಯುತ್ ಉತ್ಪಾದನೆಯು ಗಣನೀಯವಾಗಿ ಇಳಿಕೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿ ಇವಿ ವಾಹನಗಳ ಬಳಕೆಯನ್ನು ಮುಂದಿನ ಕೆಲ ತಿಂಗಳು ಕಾಲ ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಚಳಿಗಾಲ ಆರಂಭವಾಗಿರುವುದರಿಂದ ಸ್ವಿಜರ್ಲ್ಯಾಂಡ್ ನ ಪ್ರಮುಖ ಡ್ಯಾಂಗಳಿಗೆ ಹರಿದುಬರುವ ನೀರಿನ ಮೂಲಗಳು ಮಂಜುಗಡ್ಡೆಗಳಾಗಿ ಬದಲಾಗುತ್ತಿದ್ದು, ಜಲವಿದ್ಯುತ್ ಉತ್ಪಾದನಾ ಪ್ರಮಾಣವು ಹಂತ-ಹಂತವಾಗಿ ಕಡಿತವಾಗುತ್ತಿದೆ. ಪ್ರತಿಕೂಲಕರ ವಾತಾವರಣದಿಂದ ಸ್ವಿಜರ್ಲ್ಯಾಂಡ್ ರಾಷ್ಟ್ರವು ಮುಖ್ಯವಾಗಿ ಜಲವಿದ್ಯುತ್ ಉತ್ಪಾದನೆಯನ್ನು ಅವಲಂಬಿಸಿದ್ದು, ಚಳಿಗಾಲದಲ್ಲಿ ವಿದ್ಯುತ್ ಬಳಕೆಯ ಪ್ರಮಾಣವು ಹೆಚ್ಚಳವಾಗುವುದು ಮತ್ತೊಂದು ಸವಾಲಾಗಿದೆ.

ಸ್ವಿಜರ್ಲ್ಯಾಂಡ್ ನಲ್ಲಿ ಚಳಿಗಾಲದ ಸಂದರ್ಭದಲ್ಲಿ ವಿದ್ಯುತ್ ಬಳಕೆಯ ಪ್ರಮಾಣವು ತೀವ್ರವಾಗಿ ಏರಿಕೆಯಾಗಲಿದ್ದು, ಈ ಹಿನ್ನಲೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಬ್ರೇಕ್ ಹಾಕಲಾಗಿದೆ. ವಿದ್ಯುತ್ ಉತ್ಪಾದನಾ ಪ್ರಮಾಣವನ್ನು ಆಧರಿಸಿ ಮುಂದಿನ ಕೆಲವು ತಿಂಗಳು ಕಾಲ ಇವಿ ವಾಹನಗಳನ್ನು ಬಳಸದಂತೆ ಆದೇಶ ಹೊರಡಿಸಲಾಗಿದೆ. ಆದರೆ ತುರ್ತು ಸೇವೆಗಳಲ್ಲಿ ನಿಯೋಜಿಸಲಾಗಿರುವ ಇವಿ ವಾಹನಗಳ ಬಳಕೆಗೆ ವಿನಾಯ್ತಿ ನೀಡಲಾಗಿದೆ. ಚಳಿಗಾಲದ ಸಂದರ್ಭದಲ್ಲಿ ಪ್ರಮುಖ ರಾಷ್ಟ್ರಗಳಿಂದ ಸ್ವಿಜರ್ಲ್ಯಾಂಡ್ ವಿದ್ಯುತ್ ಆಮದು ಮಾಡಿಕೊಳ್ಳಲಿದ್ದು, ಈ ಬಾರಿ ಅದು ಕೂಡಾ ಹೊಡೆತ ಕೊಡುವ ಸಾಧ್ಯತೆಗಳಿವೆ. ಯಾಕೆಂದರೆ ರಷ್ಯಾ-ಯುಕ್ರೇನ್ ಯುದ್ದದಿಂದಾಗಿ ಯುರೋಪಿನ ಆಮದು ನೀತಿಗಳಲ್ಲಿನ ಕೆಲವು ಕಠಿಣ ಕ್ರಮಗಳು ವಿದ್ಯುತ್ ಆಮದು ಮೇಲೆ ಪರಿಣಾಮ ಬೀರಬಹುದಾಗಿದೆ.

ಈ ಎಲ್ಲಾ ಕಾರಣಗಳಿಂದ ಸ್ವಿಜರ್ಲ್ಯಾಂಡ್ ನಲ್ಲಿ ಮುಂದಿನ ಕೆಲ ತಿಂಗಳು ಕಾಲ ಇವಿ ವಾಹನಗಳು ಸ್ತಬ್ಧಗೊಳ್ಳಲಿದ್ದು, ಸಾಂಪ್ರಾದಾಯಿಕ ವಾಹನಗಳ ಬಳಕೆಯೇ ಮುಂದುವರಿಯಿದೆ. ಇನ್ನು ವಿಶ್ವಾದ್ಯಂತ ಇವಿ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದರೂ ಅದಕ್ಕೆ ಪೂರಕವಾಗಿ ವಿದ್ಯುತ್ ಉತ್ಪಾದನಾ ಮೂಲಗಳು ಕೂಡಾ ಸುಧಾರಣೆಗೊಳ್ಳಬೇಕಿದೆ. ಸದ್ಯ ಭಾರತದಲ್ಲಿನ ಇವಿ ಬಳಕೆ ಪ್ರಮಾಣವನ್ನು ನೋಡಿದರೆ ಮುಂಬರುವ ದಿನಗಳಲ್ಲಿ ಅದು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆಗಳಿವೆ. ಇವಿ ವಾಹನಗಳು ಪ್ರಸ್ತುತ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದು, ಮುಂದಿನ ಕೆಲ ವರ್ಷಗಳಲ್ಲಿ ಗ್ರಾಮೀಣ ಭಾಗದಲ್ಲೂ ಇವಿ ವಾಹನಗಳ ಬಳಕೆ ಹೆಚ್ಚಲಿದೆ. ಆಗ ಖಂಡಿತವಾಗಿಯೂ ವಿದ್ಯುತ್ ಪೂರೈಕೆಯಲ್ಲಿ ಹೊಸ ಸವಾಲುಗಳು ಎದುರಾಗುವ ಸಾಧ್ಯತೆಯಿದೆ ಎನ್ನಬಹುದು.

Published On - 8:30 pm, Tue, 6 December 22

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ