ಮಧ್ಯಮ ಕ್ರಮಾಂಕದ ಎಸ್ ಯುವಿ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ (Mahindra) ಕಂಪನಿ ಥಾರ್ (Thar) ಹೊಸ ಆವೃತ್ತಿ ಬಿಡುಗಡೆ ಮಾಡಿದೆ. ಥಾರ್ ಕಾರಿನಲ್ಲಿ ಅಡ್ವೆಂಚರ್ ಪ್ರಿಯರಿಗಾಗಿ ವಿಶೇಷ ಫೀಚರ್ಸ್ ಹೊಂದಿರುವ ಅರ್ಥ್ ಎಡಿಷನ್ (Earth Edition) ಪರಿಚಯಿಸಿದೆ. ಹೊಸ ಕಾರು ಹಲವಾರು ವಿಶೇಷತೆಗಳನ್ನು ಹೊಂದಿದ್ದು, ಡಸರ್ಟ್ ಫ್ಯೂರಿ ಫಿನಿಶ್‌ನೊಂದಿಗೆ ಸಖತ್ ಸ್ಟೈಲಿಶ್ ಆಗಿ ಮಿಂಚುತ್ತಿದೆ.
ವಿಶೇಷ ಫೀಚರ್ಸ್ ಮತ್ತು ಆಕರ್ಷಕ ಬಣ್ಣದ ಆಯ್ಕೆ ಹೊಂದಿರುವ ಮಹೀಂದ್ರಾ ಥಾರ್ ಅರ್ಥ್ ಎಡಿಷನ್ ಬಿಡುಗಡೆಯಾಗಿದ್ದು, ಇದು ಥಾರ್ ಮರುಭೂಮಿಯಿಂದ ಪ್ರೇರಣೆ ಪಡೆದುಕೊಂಡಿದೆ. ಹೊಸ ಆವೃತ್ತಿಯು ಸಾಮಾನ್ಯ ಥಾರ್ ಕಾರಿನಂತೆ ಪ್ರಮುಖ ನಾಲ್ಕು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದನ್ನು ಗ್ರಾಹಕರು ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಖರೀದಿಸಬಹುದಾಗಿದೆ. ಜೊತೆಗೆ ಹೊಸ ಕಾರು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಗಳನ್ನು ಹೊಂದಿದ್ದು, ಬೆಲೆಯಲ್ಲೂ ತುಸು ದುಬಾರಿಯಾಗಿರುತ್ತದೆ. ಥಾರ್ ಅರ್ಥ್ ಮಾದರಿಯು ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 15.40 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 17.60 ಲಕ್ಷ ಬೆಲೆ ಹೊಂದಿದ್ದು, ವಿಶೇಷವಾದ 4×4 ಡ್ರೈವ್ ಅನುಭವವನ್ನು ನೀಡುತ್ತದೆ.
ಇದನ್ನೂ ಓದಿ: 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಹೊಂದಿರುವ ಫೇಮಸ್ ಎಸ್‌ಯುವಿ ಕಾರುಗಳಿವು!
ಹೊಸ ಕಾರಿನಲ್ಲಿರುವ ಡೆಸರ್ಟ್ ಫ್ಯೂರಿ ಸ್ಯಾಟಿನ್ ಮ್ಯಾಟ್ ಫಿನಿಶ್ ಸಾಕಷ್ಟು ಆಕರ್ಷಕವಾಗಿದ್ದು, ಇದು ಮರುಭೂಮಿಯ ಮರಳು ಮತ್ತು ಅದರ ವಿನ್ಯಾಸವನ್ನು ನೆನಪಿಸುತ್ತದೆ. ಜೊತೆಗೆ ಕಾರಿನ ಬಾಗಿಲುಗಳು ಮತ್ತು ಹಿಂಭಾಗದ ಫೆಂಡರ್‌ಗಳ ಮೇಲೆ ಡಿಕಾಲ್‌ಗಳು, ಸಿಲ್ವರ್ ಅಲಾಯ್‌ಗಳು ಮತ್ತು ಮ್ಯಾಟ್ ಬ್ಲಾಕ್ ಬ್ಯಾಡ್ಜ್ ಪಡೆದುಕೊಂಡಿವೆ. ಇದರೊಂದಿಗೆ ಬಿ-ಪಿಲ್ಲರ್‌ಗಳ ಮೇಲೂ ಅರ್ಥ್ ಎಡಿಷನ್ ಬ್ಯಾಡ್ಜ್ ನೀಡಲಾಗಿದ್ದು, ಕಾರಿನ ಒಳಭಾಗದಲ್ಲಿ ಬೀಜ್ ಲೆಥೆರೆಟ್ ಸೀಟ್‌ಗಳು ಮತ್ತು ಹೆಡ್‌ರೆಸ್ಟ್‌ಗಳನ್ನು ನೀಡಲಾಗಿದೆ.
ಇನ್ನು ಆಫ್ ರೋಡ್ ಪ್ರಿಯರಿಗಾಗಿಯೇ ವಿಶೇಷವಾಗಿ ಸಿದ್ದಗೊಂಡಿರುವ ಥಾರ್ ಕಾರು ಮಾದರಿಯು ಸದ್ಯ ತ್ರಿ ಡೋರ್ ಸೌಲಭ್ಯದೊಂದಿಗೆ ಮಾರಾಟವಾಗುತ್ತಿದೆ. ಇದುವರೆಗೆ ಇದು ಬರೋಬ್ಬರಿ 1.10 ಲಕ್ಷಕ್ಕೂ ಹೆಚ್ಚು ಯುನಿಟ್ ಮಾರಾಟಗೊಂಡಿದ್ದು, ಆಫ್ ರೋಡ್ ಜೊತೆ ಲೈಫ್‌ಸ್ಟೈಲ್ ಕಾರು ಮಾದರಿಯಾಗಿಯೂ ಬದಲಾಗುತ್ತಿದೆ. ಹೀಗಾಗಿ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಶೀಘ್ರಯಲ್ಲಿಯೇ ತ್ರಿ ಡೋರ್ ಜೊತೆಗೆ ಫೈವ್ ಡೋರ್ ಮಾದರಿಯನ್ನು ಸಹ ಬಿಡುಗಡೆ ಮಾಡುತ್ತಿದೆ.
ಇದನ್ನೂ ಓದಿ: ಭಾರತದಲ್ಲಿ ರೀ ಎಂಟ್ರಿಗೆ ಸಜ್ಜಾದ ಫೋರ್ಡ್ ಹೊಸ ಕಾರುಗಳು ಹೇಗಿರಲಿವೆ?
ಹೊಸ ಥಾರ್ ಕಾರಿನ ಒಳಭಾಗದ ಸೌಲಭ್ಯಗಳು ಪ್ರಸ್ತುತ ಮಾದರಿಗಿಂತಲೂ ಹೆಚ್ಚು ಪ್ರೀಮಿಯಂ ಆಗಿರಲಿವೆ. ಇದರಲ್ಲಿ ಆಕರ್ಷಕ ಡ್ಯಾಶ್‌ಬೋರ್ಡ್‌ನೊಂದಿಗೆ ಆ್ಯಪಲ್ ಕಾರ್‌ಪ್ಲೇ ಮತ್ತು ಅಂಡ್ರಾಯಿಡ್ ಆಟೋ ನೀಡಲಾಗಿದ್ದು, 10 ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಸೇರಿದಂತೆ ಹಲವು ಫೀಚರ್ಸ್ ಗಳಿವೆ. ಜೊತೆಗೆ ಹೊಸ ಕಾರಿನಲ್ಲಿ ರೂಫ್ ಮೌಂಟೆಡ್ ಆಡಿಯೋ ಸ್ಪಿಕರ್ಸ್, ಮಲ್ಟಿ ಕಲರ್ ಇನ್ಫಾಮೆಷನ್ ಡಿಸ್‌ಪ್ಲೇ, ಸ್ಟೀರಿಂಗ್ ಮೌಟೆಂಟ್ ಕಂಟ್ರೋಲ್, ಸನ್ ರೂಫ್ ಸೇರಿದಂತೆ ಹಲವಾರು ಹೊಸ ತಾಂತ್ರಿಕ ಸೌಲಭ್ಯಗಳನ್ನು ನೀಡಲಾಗಿದೆ.
Published On - 10:24 pm, Sun, 3 March 24