ICOTY (ವರ್ಷದ ಭಾರತೀಯ ಕಾರು) ಪ್ರಶಸ್ತಿಯ 20 ನೇ ಆವೃತ್ತಿಯ ಸ್ಪರ್ಧಿಗಳನ್ನು ಘೋಷಿಸಲಾಗಿದೆ. ಪ್ರಮುಖ ವಾಹನ ತಯಾರಕರಿಂದ ವೈವಿಧ್ಯಮಯ ಶ್ರೇಣಿಯ ವಾಹನಗಳನ್ನು ಇದರಲ್ಲಿ ಪ್ರದರ್ಶಿಸಲಾಗಿದೆ. ಈ ಲಿಸ್ಟ್ನಲ್ಲಿ ಜನಪ್ರಿಯ ಎಸ್‌ಯುವಿಯ ಅತ್ಯಾಕರ್ಷಕ ಹೊಸ ರೂಪಾಂತರ ಮತ್ತು ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಮೇಲುಗೈ ಸಾಧಿಸಿರುವ ಕಾರುಗಳಿವೆ. ಮುಖ್ಯವಾಗಿ ಮಹೀಂದ್ರ ಥಾರ್ ರೋಕ್ಸ್, ಮಾರುತಿ ಸುಜುಕಿ ಸ್ವಿಫ್ಟ್ ಸೇರಿದಂತೆ ಕೆಲ ಕಾರುಗಳಿವೆ.
ಭಾರತೀಯ ವಾಹನ ಕ್ಷೇತ್ರವು ಈ ವರ್ಷ ಹಲವು ವಿಭಾಗಗಳಲ್ಲಿ ಬಹಳಷ್ಟು ಕಾರುಗಳನ್ನು ಬಿಡುಗಡೆ ಮಾಡಿದೆ. ಸದ್ಯ ವರ್ಷಾಂತ್ಯ ಹತ್ತಿರವಾಗುತ್ತಿದ್ದಂತೆ, ವಾರ್ಷಿಕ ಇಂಡಿಯನ್ ಕಾರ್ ಆಫ್ ದಿ ಇಯರ್ (ICOTY) ಪ್ರಶಸ್ತಿಗಳನ್ನು ನೀಡಲು ತಯಾರಾಗಿದೆ. ಈ ಪ್ರಶಸ್ತಿಗಳಲ್ಲಿ, ಉದ್ಯಮ ತಜ್ಞರು ಮೂರು ವಿಭಾಗಗಳಲ್ಲಿ ಅತ್ಯುತ್ತಮವಾದ ಮೂರು ಕಾರುಗಳನ್ನು ಗುರುತಿಸುತ್ತಾರೆ. ಒಟ್ಟಾರೆಯಾಗಿ, ಪ್ರೀಮಿಯಂ ಕಾರು ವಿಭಾಗದಲ್ಲಿ ಮತ್ತು ಗ್ರೀನ್ ಕಾರ್ (EV) ವಿಭಾಗದಲ್ಲಿ ಆಯ್ಕೆ ಮಾಡಲಾಗುತ್ತದೆ.
ಮಹೀಂದ್ರ ಥಾರ್ ರೋಕ್ಸ್
ಮಾರುತಿ ಡಿಜೈರ್
ಮಾರುತಿ ಸ್ವಿಫ್ಟ್
ಎಂಜಿ ವಿಂಡ್ಸರ್ ಇವಿ
ಸಿಟ್ರೊಯೆನ್ ಬಸಾಲ್ಟ್
ಟಾಟಾ ಕರ್ವ್ & ಟಾಟಾ ಕರ್ವ್ EV
ಟಾಟಾ ಪಂಚ್ ಇವಿ
BYD eMAX 7
ಇದನ್ನೂ ಓದಿ: ಹೊಸ DND ಆ್ಯಪ್: ಕೋಟಿಗಟ್ಟಲೆ ಮೊಬೈಲ್ ಬಳಕೆದಾರರಿಗೆ ಬಿಗ್ ರಿಲೀಫ್ ನೀಡಿದ TRAI
ಕಿಯಾ ಕಾರ್ನೀವಲ್
BYD ಸೀಲ್
ಮಿನಿ ಕೂಪರ್ ಎಸ್
ಮೆರ್ಸಿಡೀಸ್-ಬೆನ್ಜ್ E-ವರ್ಗ
ಮೆರ್ಸಿಡೀಸ್-ಬೆನ್ಜ್ EQS SUV & Maybach EQS SUV
BMW 5 ಸರಣಿ
BMW i5
BMW M5
ಗ್ರೀನ್ ಕಾರ್ ಪ್ರಶಸ್ತಿ (ICOTY):
ಟಾಟಾ ಪಂಚ್ ಇವಿ
ಟಾಟಾ ಕರ್ವ್ ಇವಿ
ಎಂಜಿ ವಿಂಡ್ಸರ್ ಇವಿ
BYD eMAX 7
BYD ಸೀಲ್
ಮಿನಿ ಕಂಟ್ರಿಮ್ಯಾನ್ ಇವಿ
BMW i5
ಟಾಟಾ, ಮೆರ್ಸಿಡೀಸ್-ಬೆನ್ಜ್ ಮತ್ತು BMW ಮೂರು ಕಂಪನಿಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ವಿಶೇಷ ಎಂದರೆ ಈ ಕಂಪನಿ ಮೂರು ಪಟ್ಟಿಯಲ್ಲಿದೆ. ಮಾರುತಿ, BYD ಮತ್ತು Mini ವಾರ್ಷಿಕ ಸ್ಪರ್ಧೆಯಲ್ಲಿ ತಲಾ ಎರಡು ಕಾರುಗಳೊಂದಿಗೆ ಸ್ಪರ್ಧಿಸುತ್ತಿವೆ. ಈ ವರ್ಷದ ICOTY ನಲ್ಲಿ ಮಹೀಂದ್ರಾ, ಕಿಯಾ, ಎಮ್ಜಿ ಮತ್ತು ಸಿಟ್ರಾನ್ ತಲಾ ಒಂದು ಕಾರಿನೊಂದಿಗೆ ಸ್ಪರ್ಧಿಸುತ್ತಿದೆ.
And now for the big award, the Indian Car Of The Year 2025. This year’s shortlist of eight cars actually has three battery electrics – Tata Punch EV, BYD eMAX 7 and MG Windsor.
And when you consider the Curvv also has an EV version, this the most electric heavy lineup for… pic.twitter.com/Mu1uEbPqJ5— Kushan Mitra (@kushanmitra) December 18, 2024
ICOTY ವಾರ್ಷಿಕ ಈವೆಂಟ್ ಆಗಿದ್ದು, ಭಾರತದಲ್ಲಿನ ಎಲ್ಲಾ ಪ್ರಮುಖ 20 ಪತ್ರಕರ್ತರರು ತೀರ್ಪುಗಾರರಾಗಿ ಭಾಗವಹಿಸುತ್ತಾರೆ. ಇವರು ಮೂರು ವಿಭಾಗಗಳಲ್ಲಿ ವಿಜೇತರನ್ನು ಆಯ್ಕೆ ಮಾಡುತ್ತಾರೆ. ಕಾರ್ದೇಖೋದ ಪ್ರಧಾನ ಸಂಪಾದಕ, ಅಮೇಯಾ ದಾಂಡೇಕರ್ ಕೂಡ ಮೇಲೆ ತಿಳಿಸಲಾದ ಕಾರುಗಳನ್ನು ಮೌಲ್ಯಮಾಪನ ಮಾಡುವ ತೀರ್ಪುಗಾರರ ಒಂದು ಭಾಗವಾಗಿದೆ. ಬೆಲೆ, ಇಂಧನ ದಕ್ಷತೆ, ವಿನ್ಯಾಸ, ಸೌಕರ್ಯ, ಸುರಕ್ಷತೆ ಮತ್ತು ಕಾರ್ಯಕ್ಷಮತೆ ಸೇರಿದಂತೆ ಎಲ್ಲ ಅಂಶಗಳನ್ನು ಗಮನಿಸಿ ವಿಜೇತರನ್ನು ನಿರ್ಧರಿಸಲಾಗುತ್ತದೆ.
ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ