ಸಿಎನ್ ಜಿ(CNG) ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ(Maruti Suzuki) ಕಂಪನಿಯು ತನ್ನ ಹೊಸ ಬಲೆನೊ ಸಿಎನ್ ಜಿ ಬಿಡುಗಡೆ ಮಾಡಿದ್ದು, ಹೊಸ ಕಾರು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 8.28 ಲಕ್ಷ ಬೆಲೆ ಆರಂಭಿಕ ಬೆಲೆ ಹೊಂದಿದೆ. ಹೊಸ ಸಿಎನ್ ಜಿ ಮಾದರಿಯು ಸ್ಟ್ಯಾಂಡರ್ಡ್ ಬಲೆನೊ ಕಾರಿನ ಡೆಲ್ಟಾ ಮತ್ತು ಜಿಟಾ ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಆರಂಭಿಕ ಮಾದರಿಯು ರೂ. 8.25 ಲಕ್ಷ ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 9.29 ಲಕ್ಷ ಬೆಲೆ ಹೊಂದಿದೆ.
ಹೊಸ ಸಿಎನ್ ಜಿ ಬಲೆನೊ ಮಾದರಿಯು ಸಾಮಾನ್ಯ ಪೆಟ್ರೋಲ್ ಮಾದರಿಗಿಂತ ರೂ. 95 ಸಾವಿರದಷ್ಟು ಹೆಚ್ಚುವರಿ ಬೆಲೆ ಹೊಂದಿದ್ದು, ಇದು ಮಾರುತಿ ಸುಜುಕಿ ನೆಕ್ಸಾ ಮಾದರಿಗಳಲ್ಲಿ ಮೊದಲ ಸಿಎನ್ ಜಿ ಕಾರು ಆವೃತ್ತಿಯಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಸದ್ಯ ಖರೀದಿಸಬಹುದಾದ ಅತಿಹೆಚ್ಚು ಸುರಕ್ಷಿತ ಮಧ್ಯಮ ಕ್ರಮಾಂಕದ ಕಾರುಗಳಿವು!
ಎಂಜಿನ್ ಮತ್ತು ಮೈಲೇಜ್
ಹೊಸ ಬಲೆನೊ ಸಿಎನ್ ಜಿ ಮಾದದರಿಯಲ್ಲಿ ಮಾರುತಿ ಸುಜುಕಿ ಕಂಪನಿಯು 1.2 ಲೀಟರ್ ನ್ಯಾಚುರಲಿ ಆಸ್ಪೆರೆಡ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೊತೆಗೆ ಎಸ್-ಸಿಎನ್ ಜಿ ಕಿಟ್ ಅಳವಡಿಸಿದ್ದು, ಹೊಸ ಕಾರು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆದುಕೊಂಡಿದೆ. ಇದು 76 ಬಿಎಚ್ ಪಿ ಮತ್ತು 98.5 ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಪ್ರತಿ ಕೆ.ಜಿ ಸಿಎನ್ ಜಿಗೆ ಗರಿಷ್ಠ 30.61 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.
ಗ್ಲಾಂಝಾ ಆವೃತ್ತಿಯಲ್ಲೂ ಬಿಡುಗಡೆಯಾಗಲಿದೆ ಸಿಎನ್ಜಿ
ಮಾರುತಿ ಸುಜುಕಿಯು ಬಲೆನೊದಲ್ಲಿ ಸಿಎನ್ ಜಿ ವರ್ಷನ್ ಬಿಡುಗಡೆ ಮಾಡಿರುವುದರಿಂದ ರೀಬ್ಯಾಡ್ಜ್ ಆವೃತ್ತಿಯಾಗಿರುವ ಟೊಯೊಟಾ ಗ್ಲಾಂಝಾದಲ್ಲೂ ಕೂಡಾ ಹೊಸ ಸಿಎನ್ ಮಾದರಿಯು ಶೀಘ್ರದಲ್ಲಿಯೇ ಬಿಡುಗಡೆಯಾಗುವ ನೀರಿಕ್ಷೆಯಿದೆ.
ವಿನ್ಯಾಸ ಮತ್ತು ಫೀಚರ್ಸ್
ಹೊಸ ಬಲೆನೊ ಸಿಎನ್ ಜಿ ಮಾದರಿಯಲ್ಲಿ ಬ್ಯಾಡ್ಜ್ ಹೊರತಾಗಿ ಸಾಮಾನ್ಯ ಪೆಟ್ರೋಲ್ ಮಾದರಿಯೆಂತೆ ವಿನ್ಯಾಸ ಹೊಂದಿದ್ದು, ಹೊಸ ಕಾರಿನಲ್ಲಿ ಎಲ್ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್, 7.0 ಇಂಚಿನ ಇನ್ಪೋಟೈನ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ ಕನೆಕ್ಟಿವಿಟಿ, ವಾಯ್ಸ್ ಅಸಿಸ್ಟ್, ಕಾರ್ ಕನೆಕ್ಟ್, ಸ್ಟಾರ್ಟ್/ಸ್ಟಾಪ್ ಬಟನ್ ಸೌಲಭ್ಯಗಳಿವೆ. ಹಾಗೆಯೇ ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಎಬಿಎಸ್ ಜೊತೆ ಇಬಿಡಿ, 6 ಏರ್ ಬ್ಯಾಗ್, ರಿಯರ್ ವ್ಯೂ ಕ್ಯಾಮೆರಾ, ರಿಯರ್ ಪಾರ್ಕಿಂಗ್ ಸೆನ್ಸಾರ್, ಎಲೆಕ್ಟ್ರಿಕ್ ಪವರ್ಡ್ ರಿಯರ್ ವ್ಯೂ ಮಿರರ್, ಪವರ್ ವಿಂಡೋ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ ಸೌಲಭ್ಯಗಳಿವೆ.
ಇದನ್ನೂ ಓದಿ: ನ.25 ರಂದು ಅನಾವರಣಗೊಳ್ಳಲಿದೆ ಭರ್ಜರಿ ಮೈಲೇಜ್ ನೀಡುವ ಟೊಯೊಟಾ ಇನೋವಾ ಹೈಕ್ರಾಸ್
ಸಿಎನ್ಜಿ ಕಾರು ಮಾರಾಟದಲ್ಲಿ ಅಗ್ರಸ್ಥಾನ
ಭಾರತದಲ್ಲಿ ಸದ್ಯ ಎಸ್-ಸಿಎನ್ಜಿ ತಂತ್ರಜ್ಞಾನದೊಂದಿಗೆ ಸಿಎನ್ ಜಿ ಕಾರು ಮಾರಾಟದಲ್ಲಿ ಮಾರುತಿ ಸುಜುಕಿಯು ಅಗ್ರಸ್ಥಾನ ಕಾಯ್ದುಕೊಂಡಿದೆ. ಸುಮಾರು 10 ಕಾರುಗಳಲ್ಲಿ ಸಿಎನ್ ಜಿ ವರ್ಷನ್ ಬಿಡುಗಡೆ ಮಾಡಿರುವ ಮಾರುತಿ ಸುಜುಕಿಯು ಇದುವರೆಗೆ ಸುಮಾರು 1 ಮಿಲಿಯನ್ ಗೂ ಅಧಿಕ ಮಾರಾಟ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದು, ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಕಾರುಗಳಲ್ಲಿ ಸಿಎನ್ ಜಿ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.
Published On - 8:33 pm, Mon, 31 October 22