Maruti Suzuki: ಭರ್ಜರಿ ಮೈಲೇಜ್ ಪ್ರೇರಿತ ಗ್ರ್ಯಾಂಡ್ ವಿಟಾರಾ ಸಿಎನ್​ಜಿ ಬಿಡುಗಡೆ

|

Updated on: Jan 07, 2023 | 11:30 AM

ಮಾರುತಿ ಸುಜುಕಿ ಕಂಪನಿಯು ಹೊಸ ಗ್ರ್ಯಾಂಡ್ ವಿಟಾರಾ ಸಿಎನ್ ಜಿ ವರ್ಷನ್ ಬಿಡುಗಡೆಯಾಗಿದ್ದು, ಹೊಸ ಸಿಎನ್ ಜಿ ಮಾದರಿಯು ಡೆಲ್ಟಾ ಮತ್ತು ಜೆಟಾ ವೆರಿಯೆಂಟ್ ನಲ್ಲಿ ಖರೀದಿಗೆ ಲಭ್ಯವಿದೆ.

Maruti Suzuki: ಭರ್ಜರಿ ಮೈಲೇಜ್ ಪ್ರೇರಿತ ಗ್ರ್ಯಾಂಡ್ ವಿಟಾರಾ ಸಿಎನ್​ಜಿ ಬಿಡುಗಡೆ
ಮಾರುತಿ ಸುಜುಕಿ ಹೊಸ ಗ್ರ್ಯಾಂಡ್ ವಿಟಾರಾ ಸಿಎನ್ ಜಿ ವರ್ಷನ್ ಬಿಡುಗಡೆ
Follow us on

ಕಾರು ಮಾರುಕಟ್ಟೆಯಲ್ಲಿ ಡೀಸೆಲ್ ಮಾದರಿಗಳ ಸ್ಥಗಿತದ ನಂತರ ಮಾರುತಿ ಸುಜುಕಿ(Maruti Suzuki) ಕಂಪನಿಯು ಪರ್ಯಾಯ ಇಂಧನ ಪ್ರೇರಿತ ಕಾರುಗಳ ಮೇಲೆ ಹೆಚ್ಚಿನ ಆಸಕ್ತಿ ತೋರುತ್ತಿದೆ. ಪರ್ಯಾಯ ಇಂಧನ ಚಾಲಿತ ಕಾರುಗಳ ಅಭಿವೃದ್ದಿಗಾಗಿ ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಸಿಎನ್ ಜಿ(CNG) ಕಾರುಗಳ ಬಿಡುಗಡೆ ಹೆಚ್ಚಿಸುತ್ತಿದೆ. ಇದೀಗ ಕಂಪನಿಯು ನೆಕ್ಸಾದ ಪ್ರಮುಖ ಕಾರು ಮಾದರಿಯಾದ ಗ್ರ್ಯಾಂಡ್ ವಿಟಾರಾದಲ್ಲೂ(Grand Vitara) ಸಿಎನ್ ಜಿ ವರ್ಷನ್ ಬಿಡುಗಡೆ ಮಾಡಿದೆ.

ವೆರಿಯೆಂಟ್ ಮತ್ತು ದರ

ಹೊಸ ಗ್ರ್ಯಾಂಡ್ ವಿಟಾರಾ ಸಿಎನ್ ಜಿ ವರ್ಷನ್ ಆವೃತ್ತಿಯು ಸಾಮಾನ್ಯ ಮಾದರಿಯಲ್ಲಿನ ಡೆಲ್ಟಾ ಮತ್ತು ಜಿಟಾ ವೆರಿಯೆಂಟ್ ಆಧರಿಸಿ ನಿರ್ಮಾಣಗೊಂಡಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 12.85 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 14.84 ಲಕ್ಷ ಬೆಲೆ ಹೊಂದಿದೆ. ಸಿಎನ್ ಜಿ ಮಾದರಿಯು ಸಾಮಾನ್ಯ ಪೆಟ್ರೋಲ್ ಆವೃತ್ತಿಗಿಂತಲೂ ರೂ. 95 ಸಾವಿರದಷ್ಟು ದುಬಾರಿಯಾಗಿದ್ದು, ಹೆಚ್ಚಿನ ಮಟ್ಟದ ಇಂಧನ ದಕ್ಷತೆ ಬಯಸುವ ಗ್ರಾಹಕರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.

ಪರ್ಫಾಮೆನ್ಸ್ ಮತ್ತು ಮೈಲೇಜ್

ಗ್ರ್ಯಾಂಡ್ ವಿಟಾರಾ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿಯು 1.5 ಲೀಟರ್ ಕೆ15 ಪೆಟ್ರೋಲ್ ಎಂಜಿನ್ ಜೊತೆ ಎಸ್-ಸಿಎನ್ ಜಿ ಕಿಟ್ ಜೋಡಿಸಿದೆ. ಹೊಸ ಕಾರಿನಲ್ಲಿ ಸದ್ಯಕ್ಕೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆ ಮಾತ್ರ ಲಭ್ಯವಿದ್ದು, ಇದು ಪ್ರತಿ ಕೆಜಿ ಸಿಎನ್ ಜಿಗೆ ಗರಿಷ್ಠ 26.6 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಜೊತೆಗೆ ಹೊಸ ಕಾರು ಪರ್ಫಾಮೆನ್ಸ್ ನಲ್ಲೂ ಗಮನಸೆಳೆಯಲಿದ್ದು, 88 ಬಿಎಚ್ ಪಿ ಮತ್ತು 121 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಡಿಸೈನ್ ಮತ್ತು ಫೀಚರ್ಸ್

ಹೊಸ ಗ್ರ್ಯಾಂಡ್ ವಿಟಾರಾ ಸಿಎನ್ ಜಿ ಕಾರಿನಲ್ಲಿ ಮಾರುತಿ ಸುಜುಕಿ ಕಂಪನಿ ಪೆಟ್ರೋಲ್ ಮಾದರಿಯಲ್ಲಿರುವಂತೆ ವಿನ್ಯಾಸದೊಂದಿಗೆ ಹಲವಾರು ಸ್ಟ್ಯಾಂಡರ್ಡ್ ಫೀಚರ್ಸ್ ನೀಡಿದೆ. ಜೊತೆಗೆ ಹೊಸ ಕಾರಿನಲ್ಲಿ ಸಿಎನ್ ಜಿ ಬ್ಯಾಡ್ಜ್ ನೊಂದಿಗೆ 9 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, ಸ್ಟಾರ್ಟ್ ಅಂಡ್ ಸ್ಟಾಪ್ ಬಟನ್, ಕ್ರೂಸ್ ಕಂಟ್ರೋಲ್, ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ಪವರ್ ವಿಂಡೋ, ರಿಯರ್ ಪಾರ್ಕಿಂಗ್ ಸೆನ್ಸಾರ್ ಸೇರಿದಂತೆ 17 ಇಂಚಿನ ಅಲಾಯ್ ವ್ಹೀಲ್ ಜೋಡಿಸಿದೆ.

ಈ ಮೂಲಕ ಗ್ರಾಹಕರು ಹೊಸ ಗ್ರ್ಯಾಂಡ್ ವಿಟಾರಾ ಕಾರನ್ನು ತಮ್ಮ ಆದ್ಯತೆಗೆ ಅನುಗುಣವಾಗಿ ವಿವಿಧ ಎಂಜಿನ್ ಮಾದರಿಗಳನ್ನು ಆಯ್ಕೆ ಮಾಡಬಹುದಾಗಿದೆ. ಹೊಸ ಕಾರಿನಲ್ಲಿ ಈಗಾಗಲೇ 1.5 ಲೀಟರ್ ಪೆಟ್ರೋಲ್ ಜೊತೆಗೆ ಸ್ಟ್ರಾಂಗ್-ಹೈಬ್ರಿಡ್ ಆವೃತ್ತಿಗಳನ್ನು ಕೂಡಾ ಖರೀದಿಸಬಹುದಾಗಿದೆ. ಇದೀಗ ಸಿಎನ್ ಜಿ ಮಾದರಿಯು ಕೂಡಾ ಹೊಸ ಸಂಚಲನ ಮೂಡಿಸಲು ಸಜ್ಜಾಗಿದ್ದು, ಹೊಸ ಕಾರು ಎಸ್ ಯುವಿ ವಿಭಾಗದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳಲಿದೆ.

Published On - 6:47 pm, Fri, 6 January 23