2023 Hero HF Deluxe: 2023ರ ಹೀರೋ ಹೆಚ್ಎಫ್ ಡಿಲಕ್ಸ್ ಬೈಕ್ ಬಿಡುಗಡೆ

|

Updated on: Jun 03, 2023 | 9:16 PM

ಹೀರೋ ಮೊಟೋಕಾರ್ಪ್ ಕಂಪನಿಯು ತನ್ನ ನವೀಕೃತ ಹೆಚ್ಎಫ್ ಡಿಲಕ್ಸ್ ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದೆ.

2023 Hero HF Deluxe: 2023ರ ಹೀರೋ ಹೆಚ್ಎಫ್ ಡಿಲಕ್ಸ್ ಬೈಕ್ ಬಿಡುಗಡೆ
2023ರ ಹೀರೋ ಹೆಚ್ಎಫ್ ಡಿಲಕ್ಸ್ ಬೈಕ್ ಬಿಡುಗಡೆ
Follow us on

ಕಮ್ಯೂಟರ್ ಬೈಕ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಹೀರೋ ಮೊಟೋಕಾರ್ಪ್(Hero Motocorp) ಕಂಪನಿಯು ತನ್ನ ಜನಪ್ರಿಯ ಬೈಕ್ ಮಾದರಿಯಾದ ಹೆಚ್ಎಫ್ ಡಿಲಕ್ಸ್(HF Delux) ನವೀಕೃತ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ಆಲ್ ಬ್ಲ್ಯಾಕ್ ಥೀಮ್ ಜೊತೆಗೆ ಹಲವಾರು ಹೊಸ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

2023ರ ಹೀರೋ ಹೆಚ್ಎಫ್ ಡಿಲಕ್ಸ್ ಬೈಕ್ ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 60,760 ಬೆಲೆ ಹೊಂದಿದ್ದು, ಹೊಸ ಆವೃತ್ತಿಯಲ್ಲಿ ಕ್ಯಾನವಾಸ್ ಬ್ಲ್ಯಾಕ್ ಎಡಿಷನ್ ಪರಿಚಯಿಸಲಾಗಿದೆ. ಜೊತೆಗೆ ಆಲ್ ಬ್ಲ್ಯಾಕ್ ಥೀಮ್ ಹೊಸ ಬೈಕಿನ ಪ್ರಮುಖ ಆಕರ್ಷಣೆಯಾಗಿದ್ದು, ನೆಕ್ಸಸ್ ಬ್ಲ್ಯೂ, ಕ್ಯಾಂಡಿ ಬ್ಲೆಝಿಂಗ್ ರೆಡ್, ಹೇವಿ ಗ್ರೇ, ಬ್ಲ್ಯಾಕ್ ಮತ್ತು ಸ್ಪೋರ್ಟ್ ರೆಡ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಇದನ್ನೂ ಓದಿ: ಬಜೆಟ್ ಬೆಲೆಯ ಎಥರ್ 450ಎಸ್ ಇವಿ ಸ್ಕೂಟರ್ ಬಿಡುಗಡೆ

ಹೊಸ ಬೈಕ್ ಫೀಚರ್ಸ್

ಹೊಸ ಹೆಚ್ಎಫ್ ಡಿಲಕ್ಸ್ ಬೈಕಿನಲ್ಲಿ ಹೀರೋ ಕಂಪನಿಯು ಈ ಬಾರಿ ಹಲವಾರು ಆಕರ್ಷಕ ಫೀಚರ್ಸ್ ಜೋಡಣೆ ಮಾಡಿದ್ದು, ಅಲಾಯ್ ವ್ಹೀಲ್ ಜೊತೆಗೆ ಟ್ಯೂಬ್ ಲೆಸ್ ಟೈರ್, ಸೈಡ್ ಸ್ಟ್ಯಾಂಡ್ ಇಂಡಿಕೇಟರ್, ಟೋಯ್ ಗಾರ್ಡ್ ಸೌಲಭ್ಯಗಳನ್ನು ನೀಡಿದೆ. ಹಾಗೆಯೇ ಹಾಲೋಜನ್ ಲೈಟಿಂಗ್ಸ್, ಯುಎಸ್ ಬಿ ಚಾರ್ಜಿಂಗ್ ಪೋರ್ಟ್ ಸೌಲಭ್ಯಗಳನ್ನು ನೀಡಿದ್ದು, ಹೊಸ ಬೈಕ್ 805 ಎಂಎಂ ಆಸನದ ಎತ್ತರದೊಂದಿಗೆ ಒಟ್ಟು 112 ಕಿ.ಮೀ ತೂಕ ಹೊಂದಿದೆ.

ಎಂಜಿನ್ ಮತ್ತು ಮೈಲೇಜ್

ಹೀರೋ ಮೊಟೋಕಾರ್ಪ್ ಕಂಪನಿಯು ಹೊಸ ಬೈಕಿನಲ್ಲಿ ಕಳೆದ ಏಪ್ರಿಲ್ 1ರಿಂದ ಕಡ್ಡಾಯವಾಗಿ ಜಾರಿಗೆ ಬಂದಿರುವ ಬಿಎಸ್6 ಎರಡನೇ ಹಂತದ ಮಾನದಂಡಗಳನ್ನು ಪೂರೈಸಿರುವ ಎಂಜಿನ್ ಜೋಡಣೆ ಮಾಡಿದೆ. ಹೊಸ ತಂತ್ರಜ್ಞಾನ ಪ್ರೇರಿತ 97.2 ಸಿಸಿ ಎಂಜಿನ್ ಮಾದರಿಯು 4-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 7.9 ಹಾರ್ಸ್ ಪವರ್ ಮತ್ತು 8.05 ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದ್ದು, ಇದು ಉತ್ತಮ ಇಂಧನ ದಕ್ಷತೆ ಹೊಂದಿದೆ.

ಇದನ್ನೂ ಓದಿ: ಸಬ್ಸಿಡಿ ಕಡಿತ: ಓಲಾ ಎಸ್1 ಮತ್ತು ಎಸ್ 1 ಪ್ರೊ ಇವಿ ಸ್ಕೂಟರ್ ಬೆಲೆಯಲ್ಲಿ ಭಾರೀ ಏರಿಕೆ

ಹೊಸ ಬೈಕಿನಲ್ಲಿ ನವೀಕೃತ ಎಂಜಿನ್ ಜೊತೆಗೆ ಹೀರೋ ಕಂಪನಿಯು ಐ ತ್ರಿ ಎಸ್ ತಂತ್ರಜ್ಞಾನ ಬಳಕೆ ಮಾಡಿದ್ದು, ಇದರಿಂದಾಗಿ ಹೊಸ ಬೈಕ್ ಪ್ರತಿ ಲೀಟರ್ ಪೆಟ್ರೋಲ್ ಗೆ ಗರಿಷ್ಠ 65ರಿಂದ 70 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿಯು ಭರವಸೆ ನೀಡಿದೆ. ಹಾಗೆಯೇ ಹೊಸ ಫೀಚರ್ಸ್ ಗಳು ಗ್ರಾಹಕರ ಸ್ನೇಹಿಗಳಾಗಿದ್ದು, ಇವು ಹೀರೋ ಮೊಟೋಕಾರ್ಪ್ ಕಂಪನಿಯ ಮಾರಾಟ ಹೆಚ್ಚಿಸಲು ಮತ್ತಷ್ಟು ಸಹಕಾರಿಯಾಗಲಿವೆ.

ಇನ್ನು ಹೀರೋ ಮೊಟೋಕಾರ್ಪ್ ಕಂಪನಿಯು ಭಾರತದಲ್ಲಿ ಮಾತ್ರವಲ್ಲ ವಿಶ್ವದ ಮುಂಚೂಣಿ ಬೈಕ್ ಮಾರಾಟ ಕಂಪನಿಯಾಗಿ ಹೊರಹೊಮ್ಮಿದ್ದು, ಬಜೆಟ್ ಬೈಕ್ ಮಾದರಿಗಳ ಜೊತೆಗೆ ವಿವಿಧ ವಿಭಾಗಗಳಲ್ಲಿ ಪ್ರೀಮಿಯಂ ಬೈಕ್ ಮಾದರಿಗಳನ್ನು ಸಹ ಮಾರಾಟ ಮಾಡುತ್ತಿದೆ.