Hyundai Kona EV: ಭರ್ಜರಿ ಮೈಲೇಜ್ ನೀಡುವ 2023ರ ಹ್ಯುಂಡೈ ಕೊನಾ ಇವಿ ಅನಾವರಣ

|

Updated on: Mar 09, 2023 | 8:39 PM

ಹ್ಯುಂಡೈ ಕಂಪನಿ ಭಾರತದಲ್ಲಿ ಎರಡನೇ ತಲೆಮಾರಿನ ಕೊನಾ ಇವಿ ಕಾರು ಬಿಡುಗಡೆಗೆ ಸಿದ್ದವಾಗುತ್ತಿದ್ದು, ಹೊಸ ತಲೆಮಾರಿನ ಕೊನಾ ಇವಿ ಕಾರು ಹಲವಾರು ಹೊಸ ಬದಲಾವಣೆಯೊಂದಿಗೆ ಭರ್ಜರಿ ಮೈಲೇಜ್ ಪ್ರೇರಿತ ಸುಧಾರಿತ ಬ್ಯಾಟರಿ ಪ್ಯಾಕ್ ಪಡೆದುಕೊಳ್ಳಲಿದೆ.

ಭಾರತದಲ್ಲಿ ಹೊಸ ಎಲೆಕ್ಟ್ರಿಕ್ ಕಾರು(Electric Scooter) ಮಾದರಿಗಳಿಗೆ ಉತ್ತಮ ಬೇಡಿಕೆ ಹರಿದುಬರುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಹ್ಯುಂಡೈ(Hyundai) ಕಂಪನಿ ಹೊಸ ತಲೆಮಾರಿನ ಕೊನಾ ಇವಿ ಅನಾವರಣಗೊಳಿಸಿದೆ. ಕೊನಾ ಇವಿ(Kona EV) ಮೂಲಕ ಈಗಾಗಲೇ ಪ್ರಮುಖ ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದೀಗ ಕಂಪನಿ ಹೊಸ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಅನಾವರಣಗೊಳಿಸಿದೆ.

ಹ್ಯುಂಡೈ ಕಂಪನಿಯ ಯಶಸ್ವಿ ಇವಿ ಆವೃತ್ತಿಗಳಲ್ಲಿ ಕೊನಾ ಇವಿ ಅಗ್ರಸ್ಥಾನದಲ್ಲಿದ್ದು, ಇದೀಗ ಹೊಸ ತಲೆಮಾರಿನ ಕೊನಾ ಇವಿ ಕಾರು ಭಾರತ ಸೇರಿದಂತೆ ಪ್ರಮುಖ ರಾಷ್ಟ್ರಗಳಲ್ಲಿ ಬಿಡುಗಡೆಯಾಗುತ್ತಿದೆ. ಹೊಸ ಕೊನಾ ಇವಿ ಕಾರು 2ನೇ ತಲೆಮಾರಿನ ವೈಶಿಷ್ಟ್ಯತೆಗಳನ್ನ ಹೊಂದಿದ್ದು, ಹೊಸ ಕಾರು ಈ ಬಾರಿ ಎರಡು ಮಾದರಿಯ ಬ್ಯಾಟರಿ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಮೈಲೇಜ್ ಮತ್ತು ಪರ್ಫಾಮೆನ್ಸ್

ಹೊಸ ಕಾರಿನ ಆರಂಭಿಕ ಮಾದರಿಯು 48.4 ಕೆವಿಹೆಚ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಇದು ಪ್ರತಿ ಚಾರ್ಜ್ ಗೆ ಗರಿಷ್ಠ 342 ಕಿ.ಮೀ ಮೈಲೇಜ್ ನೀಡುತ್ತದೆ. ಹಾಗೆಯೇ ಹೈ ಎಂಡ್ ಮಾದರಿಯು 65.4 ಕೆವಿಹೆಚ್ ಬ್ಯಾಟರಿ ಪ್ಯಾಕ್ ನೊಂದಿಗೆ ಪ್ರತಿ ಚಾರ್ಜ್ ಗೆ 490 ಕಿ.ಮೀ ಮೈಲೇಜ್ ನೀಡುತ್ತದೆ. ಹೊಸ ಇವಿ ಕಾರು ಸುಧಾರಿತ ಬ್ಯಾಟರಿ ಪ್ಯಾಕ್ ಆಯ್ಕೆಯೊಂದಿಗೆ ಡಿಸಿ ಫಾಸ್ಟ್ ಚಾರ್ಜಿಂಗ್ ಸರ್ಪೊಟ್ ಸಹ ಹೊಂದಿರಲಿದ್ದು, ಪರ್ಫಾಮೆನ್ಸ್ ನಲ್ಲೂ ಗಮನಸೆಳೆಯಲಿದೆ. ಇದರಲ್ಲಿ ಆರಂಭಿಕ ಮಾದರಿಯು 153.6 ಹಾರ್ಸ್ ಪವರ್ ಉತ್ಪಾದಿಸಿದ್ದಲ್ಲಿ ಹೈ ಎಂಡ್ ಮಾದರಿಯು 214.5 ಹಾರ್ಸ್ ಪವರ್ ಉತ್ಪಾದಿಸಲಿದ್ದು, ಇದರೊಂದಿಗೆ 255 ಎನ್ಎಂ ಟಾರ್ಕ್ ಉತ್ಪಾದಿಸಲಿದೆ.

ಜೊತೆಗೆ ಹೊಸ ಕಾರಿನ ವಿನ್ಯಾಸದಲ್ಲೂ ಕೂಡಾ ಬದಲಾವಣೆ ಪಡೆದುಕೊಂಡಿದ್ದು, ಹೊಸ ಕಾರು ಈ ಹಿಂದಿನ ಮಾದರಿಗಿಂತಲೂ 60 ಎಂಎಂ ನೊಂದಿಗೆ 4,355 ಎಂಎಂ ಉದ್ದಳತೆ ಹೊಂದಿದೆ. ಇದರೊಂದಿಗೆ ಹೊಸ ಕಾರು 1,825 ಎಂಎಂ ಅಗಲ ಮತ್ತು 1,575 ಎಂಎಂ ಎತ್ತರ ವಿನ್ಯಾಸ ಹೊಂದಿದ್ದು, 466 ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ನೀಡಲಾಗಿದೆ. ಇದರೊಂದಿಗೆ ಹೊಸ ಕಾರಿನ ಮುಂಭಾಗದಲ್ಲಿ ನವೀಕೃತ ಬಂಪರ್, ನವೀಕೃತ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್ ನೀಡಲಾಗಿದೆ.

ಹೊಸ ಸುರಕ್ಷಾ ಸೌಲಭ್ಯಗಳು

ಇನ್ನು ಹೊಸ ಇವಿ ಕಾರಿನಲ್ಲಿ ಹ್ಯುಂಡೈ ಕಂಪನಿಯು ಆಕರ್ಷಕವಾಗ ಇಂಟಿರಿಯರ್ ಜೋಡಣೆ ಮಾಡಿದೆ. ಹೊಸ ಕಾರಿನಲ್ಲಿ ಈ ಬಾರಿ 12.3 ಇಂಚಿನ ಸುಧಾರಿತ ಟಚ್ ಇನ್ಪೊಟೈನ್ ಮೆಂಟ್ ಸಿಸ್ಟಂ, ಅಂಡ್ರಾಯಿಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಪಡೆದುಕೊಂಡಿದೆ. ಹಾಗೆಯೇ ಹೊಸ ಕಾರಿನಲ್ಲಿ ಈ ಬಾರಿ ಹೆಚ್ಚು ಸುರಕ್ಷತೆ ಹೊಂದಿರುವ ಎಡಿಎಎಸ್ ಫೀಚರ್ಸ್ ನೀಡಲಾಗಿದ್ದು, ಇದರಲ್ಲಿ ಹಲವಾರು ಆಕ್ಟಿವ್ ಸೇಫ್ಟಿ ಸೂಟ್ ನೀಡಲಾಗಿದೆ.

ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ ಸೌಲಭ್ಯವು ಕಾರುಗಳ ಸಂಭಾವ್ಯ ಅಪಘಾತಗಳನ್ನ ತಪ್ಪಿಸಲು ನೆರವಾಗಲಿದ್ದು, 360 ಡಿಗ್ರಿ ಕ್ಯಾಮೆರಾ ಜೋಡಣೆ ಮತ್ತು ರಡಾರ್ ಜೋಡಣೆ ಆಧರಿಸಿ ಕಾರ್ಯನಿರ್ವಹಿಸುತ್ತಿದೆ. ಈ ಮೂಲಕ ಹೊಸ ಕೊನಾ ಇವಿ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಿಂತ ರೂ. 1.50 ಲಕ್ಷದಿಂದ ರೂ. 2 ಲಕ್ಷದಷ್ಟು ದುಬಾರಿಯಾಗಲಿದ್ದು, ಮೈಲೇಜ್ ವಿಚಾರದಲ್ಲಿ ಗಮನಸೆಳೆಯಲಿದೆ.

Published On - 8:05 pm, Thu, 9 March 23