Ola S1 X: ಅತಿ ಕಡಿಮೆ ಬೆಲೆಯಲ್ಲಿ ಎಸ್1 ಎಕ್ಸ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಓಲಾ ಎಲೆಕ್ಟ್ರಿಕ್

|

Updated on: Apr 15, 2024 | 7:49 PM

ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಹೊಸ ಎಸ್1 ಎಕ್ಸ್ ಸರಣಿ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳನ್ನು ಕೆಲವು ಬದಲಾವಣೆಗಳೊಂದಿಗೆ ಮರುಪರಿಚಯಿಸಿದ್ದು, ಹೊಸ ಇವಿ ಸ್ಕೂಟರ್ ಗಳಲ್ಲಿ ಬೆಲೆ ಇಳಿಕೆ ಘೋಷಿಸಲಾಗಿದೆ.

Ola S1 X: ಅತಿ ಕಡಿಮೆ ಬೆಲೆಯಲ್ಲಿ ಎಸ್1 ಎಕ್ಸ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಓಲಾ ಎಲೆಕ್ಟ್ರಿಕ್
ಅತಿ ಕಡಿಮೆ ಬೆಲೆಯಲ್ಲಿ ಎಸ್1 ಎಕ್ಸ್ ಇವಿ ಸ್ಕೂಟರ್ ಬಿಡುಗಡೆ ಮಾಡಿದ ಓಲಾ ಎಲೆಕ್ಟ್ರಿಕ್
Follow us on

ಎಲೆಕ್ಟ್ರಿಕ್ ಸ್ಕೂಟರ್(Electric Scooter) ಮಾರಾಟದಲ್ಲಿ ಅಗ್ರಸ್ಥಾನದಲ್ಲಿರುವ ಓಲಾ ಎಲೆಕ್ಟ್ರಿಕ್(Ola Electric) ಕಂಪನಿಯು ತನ್ನ ಹೊಸ ಎಸ್1 ಎಕ್ಸ್ (S1 X) ಸರಣಿ ಇವಿ ಸ್ಕೂಟರ್ ಗಳ ಬೆಲೆ ಬದಲಾವಣೆಯೊಂದಿಗೆ ಮರುಪರಿಚಯಿಸಿದ್ದು, ಹೊಸ ಎಸ್1 ಎಕ್ಸ್ ಇವಿ ಸ್ಕೂಟರ್ ಮಾದರಿಗಳು ಎಕ್ಸ್ ಶೋರೂಂ ಪ್ರಕಾರ ರೂ. 69,999 ಬೆಲೆ ಹೊಂದಿವೆ. ಹೊಸ ದರಪಟ್ಟಿಯಲ್ಲಿ ಎಸ್1 ಎಕ್ಸ್ ಇವಿ ಸ್ಕೂಟರ್ ಗಳು ರೂ. 5 ಸಾವಿರದಿಂದ ರೂ. 10 ಸಾವಿರ ತನಕ ಬೆಳೆ ಇಳಿಕೆ ಪಡೆದುಕೊಂಡಿವೆ.

ಎಸ್1 ಎಕ್ಸ್ ಸರಣಿ ಇವಿ ಸ್ಕೂಟರ್ ಗಳಲ್ಲಿ ಗ್ರಾಹಕರು ತಮ್ಮ ಆದ್ಯತೆಗೆ ಅನುಗುಣವಾಗಿ ಎಸ್1 ಎಕ್ಸ್(2ಕೆವಿಹೆಚ್), ಎಸ್1 ಎಕ್ಸ್(3ಕೆವಿಹೆಚ್) ಮತ್ತು ಎಸ್1 ಎಕ್ಸ್(4ಕೆವಿಹೆಚ್) ವೆರಿಯೆಂಟ್ ಗಳನ್ನು ಖರೀದಿಸಬಹುದಾಗಿದ್ದು, ಇದರಲ್ಲಿ ಎಸ್1 ಎಕ್ಸ್(2ಕೆವಿಹೆಚ್) ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 69,999 ಬೆಲೆ ಹೊಂದಿದ್ದರೆ, ಎಸ್1 ಎಕ್ಸ್(3ಕೆವಿಹೆಚ್) ಮಾದರಿಯು ರೂ. 84,999 ಮತ್ತು ಎಸ್1 ಎಕ್ಸ್(4ಕೆವಿಹೆಚ್) ಮಾದರಿಯು ರೂ. 99,999 ಬೆಲೆ ಹೊಂದಿದೆ.

ಹೊಸ ಇವಿ ಸ್ಕೂಟರ್ ಬಿಡುಗಡೆಯೊಂದಿಗೆ ಬುಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಮುಂದಿನ ವಾರವೇ ವಿತರಣೆ ಆರಂಭಿಸುವ ಭರವಸೆ ನೀಡಿದ್ದು, ಹೊಸ ಸ್ಕೂಟರ್ ಗಳು ವಿನೂತನ ಫೀಚರ್ಸ್ ಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳಲಿವೆ.

ಇದನ್ನೂ ಓದಿ: ಬಿಡುಗಡೆಯಾಗಲಿರುವ ಹೊಸ ಯಮಹಾ ಆರ್‌ಎಕ್ಸ್100 ವಿಶೇಷತೆಗಳೇನು?

ಓಲಾ ಬಿಡುಗಡೆ ಮಾಡಿರುವ 2ಕೆವಿಹೆಚ್ ಬ್ಯಾಟರಿ ಪ್ಯಾಕ್ ಹೊಂದಿರುವ ಎಸ್1 ಎಕ್ಸ್ ಮಾದರಿಯು ಪ್ರತಿ ಚಾರ್ಜ್ ಗೆ 95 ಕಿ.ಮೀ ಮೈಲೇಜ್ ನೀಡಲಿದ್ದರೆ, 3ಕೆವಿಹೆಚ್ ಬ್ಯಾಟರಿ ಪ್ಯಾಕ್ ಹೊಂದಿರುವ ಎಸ್1 ಎಕ್ಸ್ ಮಾದರಿಯು ಪ್ರತಿ ಚಾರ್ಜ್ ಗೆ 151 ಕಿ.ಮೀ ಮೈಲೇಜ್ ನೀಡುತ್ತದೆ. ಹಾಗೆಯೇ 4ಕೆವಿಹೆಚ್ ಬ್ಯಾಟರಿ ಪ್ಯಾಕ್ ಹೊಂದಿರುವ ಎಸ್1 ಎಕ್ಸ್ ಮಾದರಿಯು ಪ್ರತಿ ಚಾರ್ಜ್ ಗೆ 190 ಕಿ.ಮೀ ಐಡಿಸಿ ಮೈಲೇಜ್ ನೀಡಲಿದ್ದು, ಎಲ್ಲಾ ಮಾದರಿಗಳಿಗೂ ಅನ್ವಯಿಸುವಂತೆ ಇಕೋ, ನಾರ್ಮಲ್ ಮತ್ತು ಸ್ಪೋರ್ಟ್ ಎನ್ನುವ ಮೂರು ರೈಡಿಂಗ್ ಮೋಡ್ ಗಳನ್ನು ನೀಡಲಾಗಿದೆ. ಈ ಮೂಲಕ ಹೊಸ ಇವಿ ಸ್ಕೂಟರ್ ಗಳು ಪ್ರತಿ ಗಂಟೆಗೆ 85 ರಿಂದ 90 ಕಿ.ಮೀ ಟಾಪ್ ಸ್ಪೀಡ್ ಹೊಂದಿದ್ದು, ಇವು 112 ಕೆಜಿ ತೂಕ ಹೊಂದಿವೆ.

ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ಕೈನೆಟಿಕ್ ಇ-ಲೂನಾ ಮೊಪೆಡ್ ಬಿಡುಗಡೆ

ಇದರೊಂದಿಗೆ ಹೊಸ ಎಸ್1 ಎಕ್ಸ್ ಸರಣಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಖರೀದಿ ಮೇಲೆ ಓಲಾ ಕಂಪನಿಯು ದಾಖಲೆ ಮಟ್ಟದ ವಾರಂಟಿ ಆಫರ್ ಗಳನ್ನು ನೀಡುತ್ತಿದ್ದು, ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟಾರ್ ಮೇಲೆ 8 ವರ್ಷಗಳು ಅಥವಾ 80 ಸಾವಿರ ಕಿ.ಮೀ ತನಕ ವಾರಂಟಿ ನೀಡಲಾಗುತ್ತಿದೆ.