Ola S1 Air: ಅಚ್ಚರಿ ಬೆಲೆಯಲ್ಲಿ ಬಿಡುಗಡೆಯಾದ ಓಲಾ ಎಸ್1 ಏರ್ ಇವಿ ಸ್ಕೂಟರ್!

|

Updated on: Oct 22, 2022 | 5:48 PM

ಓಲಾ ಎಲೆಕ್ಟ್ರಿಕ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಹೊಸದಾಗಿ ಎಸ್1 ಏರ್ ಎನ್ನುವ ಮತ್ತೊಂದು ಬಜೆಟ್ ಬೆಲೆಯು ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ.

Ola S1 Air: ಅಚ್ಚರಿ ಬೆಲೆಯಲ್ಲಿ ಬಿಡುಗಡೆಯಾದ ಓಲಾ ಎಸ್1 ಏರ್ ಇವಿ ಸ್ಕೂಟರ್!
Ola S1 Air
Follow us on

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಹೊಸ ಸಂಚಲನಕ್ಕೆ ಕಾರಣವಾಗಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಮೂರನೇ ಇವಿ ಸ್ಕೂಟರ್ ಉತ್ಪನ್ನವನ್ನು ಬಿಡುಗಡೆ ಮಾಡಿದ್ದು, ಹೊಸ ಎಸ್1 ಏರ್ ಇವಿ ಸ್ಕೂಟರ್ ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 79,999 ಬೆಲೆ ಹೊಂದಿದೆ. ಎಸ್1 ಪ್ರೊ ಮತ್ತು ಎಸ್1 ಬಿಡುಗಡೆಯ ನಂತರ ಕಂಪನಿಯು ಇದೀಗ ಎಸ್1 ಏರ್ ಸ್ಕೂಟರ್ ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಸಾಂಪ್ರದಾಯಿಕ ಪೆಟ್ರೋಲ್ ಸ್ಕೂಟರ್ ಗಳಿಂತಲೂ ಅತಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆ ಪ್ರವೇಶಿಸಿದೆ.

ಹೊಸ ಇವಿ ಸ್ಕೂಟರ್ ಬಿಡುಗಡೆಯೊಂದಿಗೆ ಹೊಸ ಷರತ್ತು ವಿಧಿಸಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಈ ತಿಂಗಳು 24ರ ಒಳಗಾಗಿ ಬುಕಿಂಗ್ ಮಾಡುವ ಗ್ರಾಹಕರಿಗೆ ಮಾತ್ರ ರೂ. 79,999 ದರ ವಿಧಿಸಲಿದ್ದು, 25ರ ನಂತರ ಬುಕಿಂಗ್ ಸಲ್ಲಿಸುವ ಗ್ರಾಹಕರಿಗೆ ರೂ. 84,999 ಬೆಲೆ ವಿಧಿಸುವುದಾಗಿ ಘೋಷಣೆ ಮಾಡಿದೆ.

ಬ್ಯಾಟರಿ ಪ್ಯಾಕ್ ಮತ್ತು ಮೈಲೇಜ್

ಹೊಸ ಎಸ್1 ಏರ್ ಇವಿ ಸ್ಕೂಟರ್ ನಲ್ಲಿ ಕಂಪನಿಯು 2.5kWh ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ಹೊಸ ಸ್ಕೂಟರ್ ಪ್ರತಿ ಚಾರ್ಜ್ ಗೆ ಗರಿಷ್ಠ 101 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. 2.5kWh ಬ್ಯಾಟರಿ ಪ್ಯಾಕ್ ಅನ್ನು ಚಾರ್ಜ್ ಮಾಡಲು ಕಂಪನಿಯು 500 ವೊಲ್ಟೊ ಪೋರ್ಟಬಲ್ ಚಾರ್ಜರ್ ನೀಡಿದ್ದು, ಇದು ಪೂರ್ತಿಯಾಗಿ ಚಾರ್ಜ್ ಆಗಲು ಕನಿಷ್ಠ ನಾಲ್ಕು ಗಂಟೆ ತೆಗೆದುಕೊಳ್ಳುತ್ತದೆ.

Ola S1 Air

ಎಲೆಕ್ಟ್ರಿಕ್ ಮೋಟಾರ್ ಮತ್ತು ಪರ್ಫಾಮೆನ್ಸ್

ಎಸ್1 ಏರ್ ಇವಿ ಸ್ಕೂಟರ್ ನಲ್ಲಿರುವ ಹಬ್ ಎಲೆಕ್ಟ್ರಿಕ್ ಮೋಟಾರ್ 4.5 ಕಿಲೋವ್ಯಾಟ್ ಅಥವಾ 6.03 ಬಿಎಚ್ ಪಿ ಉತ್ಪಾದಿಸಲಿದ್ದು, ಕೇವಲ 4.3 ಸೆಕೆಂಡ್ ಗಳಲ್ಲಿ ಸೊನ್ನೆಯಿಂದ 40 ಕಿ.ಮೀ ವೇಗಪಡೆದುಕೊಳ್ಳುತ್ತದೆ. ಹಾಗೆಯೇ ಹೊಸ ಸ್ಕೂಟರ್ ಪ್ರತಿ ಗಂಟೆಗೆ 90 ಕಿ.ಮೀ ಟಾಪ್ ಸ್ಪೀಡ್ ತಲುಪಲಿದ್ದು, ಬಜೆಟ್ ಬೆಲೆಯಲ್ಲೂ ಆಕರ್ಷಕ ಫೀಚರ್ಸ್ ಹೊಂದಿರಲಿದೆ.

ಇದನ್ನು ಓದಿ: ಅ.23ರಿಂದ ಆರಂಭವಾಗಲಿದೆ ಅತ್ಯಧಿಕ ಮೈಲೇಜ್ ನೀಡುವ ಆಲ್ಟ್ರಾವಯೊಲೆಟ್ ಎಫ್77 ಇವಿ ಬೈಕ್ ಬುಕಿಂಗ್

ಡಿಸೈನ್ ಮತ್ತು ಫೀಚರ್ಸ್

ಹೊಸ ಎಸ್1 ಏರ್ ಸ್ಕೂಟರ್ ಅನ್ನು ಮೊದಲೆರಡು ಮಾದರಿಗಿಂತಲೂ ವಿಭಿನ್ನ ವಿನ್ಯಾಸ ನೀಡಿದ್ದು, ಸಸ್ಷೆಂಷನ್ ಸೌಲಭ್ಯಕ್ಕಾಗಿ ಹೊಸ ಸ್ಕೂಟರಿನ ಮುಂಭಾಗದಲ್ಲಿ ಸ್ಪೋರ್ಟ್ಸ್ ಕನ್ವರ್ಷನಲ್ ಟೆಲಿಸ್ಕೊಪಿಕ್ ಮತ್ತು ಹಿಂಬದಿಯಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ವರ್ ನೀಡಲಾಗಿದೆ.

Ola S1 Air

ಹೊಸ ಸ್ಕೂಟರ್ ನಲ್ಲಿ ಕನೆಕ್ಟೆಡ್ ಫೀಚರ್ಸ್ ಗಳಿಗಾಗಿ 7 ಇಂಚಿನ ಟಚ್ ಸ್ಕೀನ್ ಡಿಸ್ ಪ್ಲೇ ನೀಡಲಾಗಿದ್ದು, ಇನ್ ಬಿಲ್ಟ್ ಮೂವ್ ಎಸ್ಒ ಹೊಂದಿರುವ ಹೊಸ ಸ್ಕೂಟರ್ ನಲ್ಲಿ ವೆಕೆಷನ್ ಮೋಡ್, ಮಲ್ಟಿಪಲ್ ಪ್ರೊಫೈಲ್, ಕಾಲಿಂಗ್, ನ್ಯಾವಿಗೇಷನ್ ಸೌಲಭ್ಯಗಳಿವೆ.

ಹಾಗೆಯೇ ಹೊಸ ಸ್ಕೂಟರಿನಲ್ಲಿ ಕಡಿಮೆ ಸಾಮರ್ಥ್ಯದ ಬ್ಯಾಟರಿ ನೀಡಿರುವುದರಿಂದ ಈ ಬಾರಿ ಪ್ಲ್ಯಾಟ್ ಫುಟ್ ರೇಸ್ಟ್ ಸಿಗಲಿದ್ದು, ನಿಯೋ ಮಿಂಟ್, ಕೋಲ್ ಗ್ಲಾಮ್, ಲಿಕ್ವಿಡ್ ಸಿಲ್ವರ್ ಮತ್ತು ಜೆಟ್ ಬ್ಲ್ಯಾಕ್, ಪೊರ್ಸೊಲೈನ್ ವೈಟ್ ಬಣ್ಣಗಳ ಆಯ್ಕೆಗಳಿವೆ.

ಇದನ್ನು ಓದಿ: ಸ್ಮಾರ್ಟ್ಎಕ್ಸ್ ಕನೆಕ್ಟ್ ಟೆಕ್ ಹೊಂದಿರುವ ಟಿವಿಎಸ್ ರೈಡರ್ 125 ಬಿಡುಗಡೆ!

ಖರೀದಿ ಮತ್ತು ವಿತರಣೆ

ಹೊಸ ಎಸ್1 ಏರ್ ಇವಿ ಸ್ಕೂಟರ್ ಬಿಡುಗಡೆಯೊಂದಿಗೆ ಇಂದಿನಿಂದಲೇ ಬುಕಿಂಗ್ ಆರಂಭಿಸಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು 2023ರ ಫೆಬ್ರವರಿ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಿದ್ದು, ಎಪ್ರಿಲ್ ಹೊತ್ತಿಗೆ ಗ್ರಾಹಕರ ಕೈಸೇರಲಿದೆ.

Published On - 4:53 pm, Sat, 22 October 22