TVS Raider 125: ಸ್ಮಾರ್ಟ್ಎಕ್ಸ್ ಕನೆಕ್ಟ್ ಟೆಕ್ ಹೊಂದಿರುವ ಟಿವಿಎಸ್ ರೈಡರ್ 125 ಬಿಡುಗಡೆ

ಟಿವಿಎಸ್ ಮೋಟಾರ್ ಕಂಪನಿಯು ತನ್ನ ಜನಪ್ರಿಯ 125 ಸಿಸಿ ಬೈಕ್ ಮಾದರಿಯಾದ ರೈಡರ್ 125 ಆವೃತ್ತಿಯಲ್ಲಿ ಟಾಪ್ ಎಂಡ್ ವೆರಿಯೆಂಟ್ ಬಿಡುಗಡೆ ಮಾಡಲಿದ್ದು, ಹೊಸ ಬೈಕ್ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 99,900 ಬೆಲೆ ಹೊಂದಿದೆ.

TVS Raider 125: ಸ್ಮಾರ್ಟ್ಎಕ್ಸ್ ಕನೆಕ್ಟ್ ಟೆಕ್ ಹೊಂದಿರುವ ಟಿವಿಎಸ್ ರೈಡರ್ 125 ಬಿಡುಗಡೆ
ಟಿವಿಎಸ್ ರೈಡರ್ 125
Follow us
Praveen Sannamani
|

Updated on:Oct 20, 2022 | 1:00 PM

ಟಿವಿಎಸ್ ರೈಡರ್ 125 (TVS Raider 125): ಹೊಸ ಆವೃತ್ತಿಯು ವಿಶೇಷವಾಗಿ ಸ್ಮಾರ್ಟ್ಎಕ್ಸ್ ಕನೆಕ್ಟ್ ಸೌಲಭ್ಯದೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದ್ದು, ಹೊಸ ಬೈಕಿನಲ್ಲಿ ಬ್ಲೂಟೂಥ್ ಸಂಪರ್ಕಿತ 5 ಇಂಚಿನ ಟಿಎಫ್ ಟಿ ಡಿಸ್ ಪ್ಲೇ ಜೊತೆಗೆ ಹಲವಾರು ಹೊಸ ಫೀಚರ್ಸ್ ನೀಡಲಾಗಿದೆ. ಹೊಸ ಬೈಕಿನಲ್ಲಿ ಕಂಪನಿಯಲ್ಲಿ ಸ್ಮಾರ್ಟ್ಎಕ್ಸ್ ಕನೆಕ್ಟ್ ಸೇರಿದಂತೆ ಇಕೋ ಮತ್ತು ಪವರ್ ಎನ್ನುವ ಎರಡು ಹೊಸ ರೈಡಿಂಗ್ ಮೋಡ್ ಗಳನ್ನು ಸಹ ನೀಡಲಾಗಿದ್ದು, ಎಂಜಿನ್ ಆಯ್ಕೆಯಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ.

ಸ್ಮಾರ್ಟ್ಎಕ್ಸ್ ಕನೆಕ್ಟ್ ವಿಶೇಷತೆಗಳೇನು?

ಬ್ಲೂಟೂಥ್ ಸಂಪರ್ಕಿತ 5 ಇಂಚಿನ ಟಿಎಫ್ ಟಿ ಡಿಸ್ ಪ್ಲೇ ನಲ್ಲಿ ಬಳಕೆದಾರರಿಗೆ ಪೂರಕವಾದ ಹಲವಾರು ಮಾಹಿತಿಗಳು ಲಭ್ಯವಿರಲಿದ್ದು, ಇದರಲ್ಲಿ ಮುಖ್ಯವಾಗಿ ಟರ್ನ್ ಬೈ ಟರ್ನ್ ನ್ಯಾವಿಗೇಷನ್, ವಾಯ್ಸ್ ಕಮಾಂಡ್, ಕಾಲ್ ಅಲರ್ಟ್, ಮೇಸೆಜ್ ನೋಟಿಫಿಕೇಷನ್, ಮ್ಯೂಸಿಕ್ ಕಂಟ್ರೋಲ್, ಲೋ ಬ್ಯಾಟರಿ ಅಲರ್ಟ್, ಸರ್ವಿಸ್ ರಿಮೆಂಡರ್, ಗೇರ್ ಪೋಷಿಷನ್ ಇಂಡಿಕೇಟರ್, ಐಡಿಯಲ್ ಗೇರ್ ಶಿಫ್ಟ್, ಡಿಸ್ಟೆನ್ಸ್ ಟು ಎಂಟಿ ಮತ್ತು ಇಂಧನ ದಕ್ಷತೆ ಮಾಹಿತಿಯನ್ನು ನೀಡುತ್ತದೆ.

TVS Raider 125

ಟಿವಿಎಸ್ ರೈಡರ್ ಸ್ಮಾರ್ಟ್ ಕನೆಕ್ಟ್

ಎಂಜಿನ್ ಮತ್ತು ಪರ್ಫಾಮೆನ್ಸ್

ಹೊಸ ರೈಡರ್ 125 ಬೈಕ್ ಮಾದರಿಯಲ್ಲಿ ಟಿವಿಎಸ್ ಮೋಟಾರ್ ಕಂಪನಿಯು 124.8 ಸಿಸಿ ಸಿಂಗಲ್ ಸಿಲಿಂಡರ್ ಸೋಕ್ ಎಂಜಿನ್ ಹೊಂದಿದ್ದು, ಇದು 5-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 11.2 ಬಿಎಚ್ ಪಿ ಮತ್ತು 11.2 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ. ಹಾಗೆಯೇ ಹೊಸ ಬೈಕಿನಲ್ಲಿ ಹೆಚ್ಚಿನ ಮಟ್ಟದ ಇಂಧನ ದಕ್ಷತೆಗಾಗಿ ಕಂಪನಿಯು ಇಂಟೆಲಿಗೋ ಸೈಲೆಂಟ್ ಎಂಜಿನ್ ಸ್ಮಾರ್ಟ್ ಸಿಸ್ಟಂ ಸೌಲಭ್ಯವನ್ನು ಜೋಡಣೆ ಮಾಡಿದ್ದು, ಇದು ಟ್ರಾಫಿಕ್ ದಟ್ಟಣೆ ವೇಳೆ ಹೆಚ್ಚಿನ ಮಟ್ಟದ ಇಂಧನ ಬಳಕೆಯನ್ನು ಕಡಿತಗೊಳಿಸಿ ಮೈಲೇಜ್ ಹೆಚ್ಚಳಕ್ಕೆ ಸಹಕಾರಿಯಾಗಲಿದೆ.

ಇದನ್ನು ಓದಿ: ಅ.23ರಿಂದ ಆರಂಭವಾಗಲಿದೆ ಅತ್ಯಧಿಕ ಮೈಲೇಜ್ ನೀಡುವ ಆಲ್ಟ್ರಾವಯೊಲೆಟ್ ಎಫ್77 ಇವಿ ಬೈಕ್ ಬುಕಿಂಗ್

ರೈಡರ್ 125 ವಿವಿಧ ವೆರಿಯೆಂಟ್

ಟಿವಿಎಸ್ ಕಂಪನಿಯು ರೈಡರ್ 125 ಬೈಕಿನಲ್ಲಿ ಸ್ಮಾರ್ಟ್ಎಕ್ಸ್ ಕನೆಕ್ಟ್ ಜೊತೆಗೆ ಡ್ರಮ್ ಮತ್ತು ಡಿಸ್ಕ್ ಎನ್ನುವ ಎರಡು ಆರಂಭಿಕ ಮಾದರಿಗಳನ್ನು ಸಹ ಮಾರಾಟ ಮಾಡುತ್ತಿದ್ದು, ಇದರಲ್ಲಿ ಸ್ಮಾರ್ಟ್ಎಕ್ಸ್ ಕನೆಕ್ಟ್ ಇತರೆ ಮಾದರಿಗಿಂತಲೂ ತುಸು ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ಹೊಂದಿಲಿದೆ.

ಸುರಕ್ಷಾ ಸೌಲಭ್ಯಗಳು

ಹೊಸ ರೈಡರ್ 125 ಬೈಕ್ ಮಾದರಿಯಲ್ಲಿ ಕಂಪನಿಯು ಹಲವಾರು ಸುರಕ್ಷಾ ಫೀಚರ್ಸ್ ನೀಡುತ್ತಿದ್ದು, ಸ್ಮಾರ್ಟ್ಎಕ್ಸ್ ಕನೆಕ್ಟ್ ವೆರಿಯೆಂಟ್ ನಲ್ಲಿ 240 ಎಂಎಂ ಮುಂಭಾಗದ ಸಿಂಗಲ್ ಡಿಸ್ಕ್, 130 ಎಂಎಂ ಹಿಂಬದಿಯ ಡ್ರಮ್ ಬ್ರೇಕ್ ನೀಡುತ್ತದೆ.

ಈ ಮೂಲಕ 125 ಸಿಸಿ ಬೈಕ್ ಮಾದರಿಯಲ್ಲಿ ಉತ್ತಮ ಬೇಡಿಕೆ ಹೊಂದಿರುವ ರೈಡರ್ ಬೈಕ್ ಸ್ಮಾರ್ಟ್ಎಕ್ಸ್ ಕನೆಕ್ಟ್ ವೆರಿಯೆಂಟ್ ನೊಂದಿಗೆ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದ್ದು, ಗ್ರಾಹಕರ ಬೇಡಿಕೆಯೆಂತೆ ಹೊಸ ಬೈಕ್ ಮಾದರಿಯು ಬ್ಲ್ಯಾಕ್ ಮತ್ತು ಯೆಲ್ಲೊ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

Published On - 12:41 pm, Thu, 20 October 22

ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಮುಡಾದಿಂದ 142 ಜನ ಬೇನಾಮಿಯಾಗಿ ಸೈಟು ಪಡೆದಿದ್ದಾರೆ: ಶಿವಲಿಂಗೇಗೌಡ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಬಿಗ್ ಬಾಸ್​ನಿಂದ ಧನರಾಜ್​ಗೆ ಎಷ್ಟು ಹಣ ಸಿಕ್ತು? ಸುತ್ತಿ ಬಳಸಿ ಉತ್ತರ
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ