AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ola EV Scooter: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಪ್ರಮುಖ ಇವಿ ಸ್ಕೂಟರ್ ಗಳ ಖರೀದಿಯ ಮೇಲೆ ಅತ್ಯುತ್ತಮ ಆಫರ್ ಗಳನ್ನು ಘೋಷಣೆ ಮಾಡಿದೆ.

Ola EV Scooter: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ
ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಭರ್ಜರಿ ಆಫರ್
Follow us
Praveen Sannamani
|

Updated on:Oct 22, 2023 | 6:02 PM

ದೇಶದ ಅಗ್ರಗಣ್ಯ ಎಲೆಕ್ಟ್ರಿಕ್ ಸ್ಕೂಟರ್(Electric Scooter) ಉತ್ಪಾದನಾ ಕಂಪನಿಯಾಗಿರುವ ಓಲಾ ಎಲೆಕ್ಟ್ರಿಕ್(Ola Electric) ತನ್ನ ಪ್ರಮುಖ ಇವಿ ಉತ್ಪನ್ನಗಳ ಮೇಲೆ ಭರ್ಜರಿ ಆಫರ್ ನೀಡುತ್ತಿದ್ದು, ಹೊಸ ಇವಿ ಸ್ಕೂಟರ್ ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಇದು ಸುವರ್ಣಾವಕಾಶ ಎನ್ನಬಹುದು.

ಪ್ರಸ್ತುತ ಮಾರುಕಟ್ಟೆಯಲ್ಲಿ ಓಲಾ ಎಲೆಕ್ಟ್ರಿಕ್ ಕಂಪನಿಯು ಎಸ್1 ಪ್ರೊ, ಎಸ್1 ಏರ್ ಮತ್ತು ಎಸ್1ಎಕ್ಸ್ ಇವಿ ಸ್ಕೂಟರ್ ಗಳನ್ನು ಮಾರಾಟ ಮಾಡುತ್ತಿದ್ದು, ಹೊಸ ಇವಿ ಸ್ಕೂಟರ್ ಗಳನ್ನು ಖರೀದಿಸುವ ಗ್ರಾಹಕರಿಗೆ ಹಲವಾರು ಆಫರ್ ಗಳು ದೊರೆಯಲಿವೆ.

Ola EV Scooter

ಓಲಾ ಎಲೆಕ್ಟ್ರಿಕ್ ಕಂಪನಿಯು ದಸರಾ ವಿಶೇಷತೆಗಾಗಿ ಭಾರತ್ ಇವಿ ಫೆಸ್ಟ್ ಅಭಿಯಾನ ಕೈಗೊಂಡಿದ್ದು, ಹೊಸ ಇವಿ ಅಭಿಯಾನದಡಿ ಹೊಸ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಆಕರ್ಷಕ ಕ್ಯಾಶ್ ಬ್ಯಾಕ್, ಎಕ್ಸ್ ಚೆಂಜ್ ಮತ್ತು ವಿಸ್ತರಿತ ಬ್ಯಾಟರಿ ವಾರಂಟಿಗಳು ದೊರೆಯಲಿವೆ. ಭಾರತ್ ಇವಿ ಫೆಸ್ಟ್ ಅಭಿಯಾನವು ಇದೇ ತಿಂಗಳು 22ರಿಂದ 24ರ ತನಕ ನಡೆಯಲಿದ್ದು, 72 ಗಂಟೆಗಳ ಕಾಲ ನಡೆಯಲಿರುವ ಅಭಿಯಾನದಲ್ಲಿ ಭಾರೀ ಪ್ರಮಾಣದಲ್ಲಿ ಇವಿ ಸ್ಕೂಟರ್ ಮಾರಾಟ ಯೋಜನೆ ಹೊಂದಿದೆ.

ಹೊಸ ಆಫರ್ ಗಳ ಮೂಲಕ ಓಲಾ ಎಲೆಕ್ಟ್ರಿಕ್ ಕಂಪನಿಯು ರೂ. 24,500 ಮೌಲ್ಯದ ವಿವಿಧ ಆಫರ್ ಗಳೊಂದಿಗೆ ರೂ. 2 ಸಾವಿರ ಮೌಲ್ಯದ ವಿಶೇಷ ಕೊಡುಗೆಗಳನ್ನು ನೀಡುತ್ತಿದ್ದು, ದಸರಾ ಸಂಭ್ರಮದಲ್ಲಿ ಇವಿ ಸ್ಕೂಟರ್ ಖರೀದಿ ಯೋಜನೆಯಲ್ಲಿದ್ದ ಗ್ರಾಹಕರಿಗೆ ಇದು ಅತ್ಯುತ್ತಮ ಕೊಡುಗೆಯಾಗಲಿವೆ. ಹೊಸ ಆಫರ್ ಗಳಲ್ಲಿ ಓಲಾ ಎಲೆಕ್ಟ್ರಿಕ್ ಕಂಪನಿಯು ಎಸ್1 ಎಕ್ಸ್ ಹೈಎಂಡ್ ವೆರಿಯೆಂಟ್ ಆಗಿರುವ ಎಕ್ಸ್1 ಎಕ್ಸ್ ಪ್ಲಸ್ ಮಾದರಿಯ ಮೇಲೆ ರೂ. 5 ಸಾವಿರ ಡಿಸ್ಕೌಂಟ್ ನೊಂದಿಗೆ 5 ವರ್ಷಗಳ ಕಾಲ ಉಚಿತವಾಗಿ ಬ್ಯಾಟರಿ ಪ್ಯಾಕ್ ಮೇಲಿನ ವಾರಂಟಿ ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ: ಬಿಡುಗಡೆಗೆ ಸಿದ್ದವಾಗಿದೆ ಭರ್ಜರಿ ಮೈಲೇಜ್ ನೀಡುವ ಸಿಎನ್‌ಜಿ ಬೈಕ್!

ಹಾಗೆಯೇ ಪೆಟ್ರೋಲ್ ಎಂಜಿನ್ ಪ್ರೇರಿತ ಸ್ಕೂಟರ್ ಗಳನ್ನು ಎಸ್1 ಪ್ರೊ, ಎಸ್1 ಏರ್ ಮತ್ತು ಎಸ್1 ಎಕ್ಸ್ ಪ್ಲಸ್ ಎಲೆಕ್ಟ್ರಿಕ್ ಮಾದರಿಗಳೊಂದಿಗೆ ಎಕ್ಸ್ ಚೆಂಜ್ ಮಾಡಿಕೊಳ್ಳುವ ಗ್ರಾಹಕರಿಗೆ ರೂ. 10 ಸಾವಿರ ಎಕ್ಸ್ ಚೆಂಜ್ ಬೋನಸ್ ನೀಡುತ್ತಿದ್ದು, ದೇಶಾದ್ಯಂತ ತೆರೆಯಲಾಗಿರುವ ಸುಮಾರು 1 ಸಾವಿರ ಓಲಾ ಇವಿ ಎಕ್ಸ್ಪಿರೆನ್ಸ್ ಸೆಂಟರ್ ಗಳಲ್ಲಿ ಎಕ್ಸ್ ಚೆಂಜ್ ಮಾಡಿಕೊಳ್ಳಬಹುದಾಗಿದೆ.

ಓಲಾ ಎಲೆಕ್ಟ್ರಿಕ್ ಕಂಪನಿಯು ನೀಡುತ್ತಿರುವ ಆಫರ್ ಗಳಲ್ಲಿ ರೂ. 2 ಸಾವಿರ ಮೌಲ್ಯದ ರೇಫರ್ಲ್ ಕೇರ್ ಪ್ಲಸ್ ಘೋಷಣೆ ಮಾಡಿದ್ದು, ನೀವು ಮತ್ತೊಬ್ಬ ಗ್ರಾಹಕನಿಗೆ ಓಲಾ ಇವಿ ಸ್ಕೂಟರ್ ಖರೀದಿಗೆ ಮಾಡುವಂತೆ ಸಲಹೆ ನೀಡುವ ಮೂಲಕ ರೇಫರ್ಲ್ ಕೇರ್ ಪ್ಲಸ್ ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದೆ.

ಇದಲ್ಲದೇ ಓಲಾ ಎಲೆಕ್ಟ್ರಿಕ್ ಕಂಪನಿ ತನ್ನ ಪಾಲುದಾರ ಹಣಕಾಸು ಸಂಸ್ಥೆಗಳ ಕ್ರೆಡಿಕ್ ಕಾರ್ಡ್ ಗಳ ಮೂಲಕ ಖರೀದಿಸುವ ಗ್ರಾಹಕರಿಗೆ ಹೆಚ್ಚುವರಿಯಾಗಿರುವ ರೂ. 7,500 ಹೆಚ್ಚುವರಿ ಆಫರ್ ನೀಡಲಿದ್ದು, ಶೇ. 5.99 ಬಡ್ಡಿದರದಲ್ಲಿ ಗ್ರಾಹಕರಿಗೆ ವಿಶೇಷ ಸಾಲಸೌಲಭ್ಯಗಳನ್ನು ಒದಗಿಸುತ್ತದೆ.

ಇದನ್ನೂ ಓದಿ: ಸ್ಪೋರ್ಟಿ ಫೀಚರ್ಸ್ ಹೊಂದಿರುವ ಬಜಾಜ್ ಪಲ್ಸರ್ ಎನ್150 ಬೈಕ್ ಬಿಡುಗಡೆ

ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿ ಎರಡನೇ ತಲೆಮಾರಿನ ಎಸ್1 ಪ್ರೊ ಮಾದರಿಯ ಎಕ್ಸ್ ಶೋರೂಂ ಪ್ರಕಾರ ರೂ. 1,47,499 ಬೆಲೆ ಹೊಂದಿದ್ದರೆ, ಎಸ್1 ಏರ್ ಸ್ಕೂಟರ್ ಮಾದರಿಯು 1,19,999 ಬೆಲೆ ಹೊಂದಿದೆ. ಇದರೊಂದಿಗೆ ಎಸ್1 ಎಕ್ಸ್ ಪ್ಲಸ್ ಆವೃತ್ತಿಯು ರೂ. 1,09,99 ಬೆಲೆ ಹೊಂದಿದ್ದರೆ ಎಸ್1 ಎಕ್ಸ್ 3ಕೆವಿಹೆಚ್ ಬ್ಯಾಟರಿ ಪ್ಯಾಕ್ ನೊಂದಿಗೆ ರೂ. 99,999 ಮತ್ತು 2ಕೆವಿಹೆಚ್ ಬ್ಯಾಟರಿ ಪ್ಯಾಕ್ ಮಾದರಿಯು ರೂ. 89,999 ಬೆಲೆ ಹೊಂದಿದೆ.

Published On - 5:57 pm, Sun, 22 October 23

ಬಾಹ್ಯಾಕಾಶಕ್ಕೆ ಹಾರಿದ ಮಗನನ್ನು ಕಂಡು ಭಾವುಕರಾದ ಶುಭಾಂಶು ಶುಕ್ಲಾ ತಾಯಿ
ಬಾಹ್ಯಾಕಾಶಕ್ಕೆ ಹಾರಿದ ಮಗನನ್ನು ಕಂಡು ಭಾವುಕರಾದ ಶುಭಾಂಶು ಶುಕ್ಲಾ ತಾಯಿ
ಭಾರತ-ಪಾಕಿಸ್ತಾನದ ಯುದ್ಧ ನಿಲ್ಲಿಸಿದ್ದು ನಾನೇ; ಹಳೇ ರಾಗ ಹಾಡಿದ ಟ್ರಂಪ್
ಭಾರತ-ಪಾಕಿಸ್ತಾನದ ಯುದ್ಧ ನಿಲ್ಲಿಸಿದ್ದು ನಾನೇ; ಹಳೇ ರಾಗ ಹಾಡಿದ ಟ್ರಂಪ್
ಯತ್ನಾಳ್, ಈಶ್ವರಪ್ಪ ಜೋಡಿಗೆ ಕನ್ನಡಿ ತೋರಿಸಿದ ರಾಜ್ಯ ಬಿಜೆಪಿ ಉಸ್ತುವಾರಿ
ಯತ್ನಾಳ್, ಈಶ್ವರಪ್ಪ ಜೋಡಿಗೆ ಕನ್ನಡಿ ತೋರಿಸಿದ ರಾಜ್ಯ ಬಿಜೆಪಿ ಉಸ್ತುವಾರಿ
ಅಣ್ಣಾವ್ರ ಮೊಮ್ಮಗನಿಗೆ ದುನಿಯಾ ವಿಜಿ ಆಕ್ಷನ್ ಕಟ್, ಭರದಿಂದ ಸಾಗಿದೆ ಶೂಟಿಂಗ್
ಅಣ್ಣಾವ್ರ ಮೊಮ್ಮಗನಿಗೆ ದುನಿಯಾ ವಿಜಿ ಆಕ್ಷನ್ ಕಟ್, ಭರದಿಂದ ಸಾಗಿದೆ ಶೂಟಿಂಗ್
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಗಳು ದಿನಕ್ಕೊಂದು ಬಯಲಾಗುತ್ತಿವೆ: ಚಲವಾದಿ
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಗಳು ದಿನಕ್ಕೊಂದು ಬಯಲಾಗುತ್ತಿವೆ: ಚಲವಾದಿ
ಪೊಲೀಸ್ ಮತ್ತು ಪ್ರತಿಭಟನೆಕಾರರ ನಡುವೆ ಸಿಲುಕಿ ಒದ್ದಾಡಿದ ರೇಣುಕಾಚಾರ್ಯ
ಪೊಲೀಸ್ ಮತ್ತು ಪ್ರತಿಭಟನೆಕಾರರ ನಡುವೆ ಸಿಲುಕಿ ಒದ್ದಾಡಿದ ರೇಣುಕಾಚಾರ್ಯ
ರಾಜು ಕಾಗೆ ಕೇಳಿದ ಕೆಲಸಗಳೆಲ್ಲವನ್ನೂ ಮಾಡಿಕೊಟ್ಟಿದ್ದೇನೆ: ಶಿವಕುಮಾರ್
ರಾಜು ಕಾಗೆ ಕೇಳಿದ ಕೆಲಸಗಳೆಲ್ಲವನ್ನೂ ಮಾಡಿಕೊಟ್ಟಿದ್ದೇನೆ: ಶಿವಕುಮಾರ್
ಹಿಮಾಚಲ ಪ್ರದೇಶದ ಕುಲುವಿನಲ್ಲಿ ಮೇಘಸ್ಫೋಟ; ಸೈಂಜ್ ಕಣಿವೆಯಲ್ಲಿ ಪ್ರವಾಹ
ಹಿಮಾಚಲ ಪ್ರದೇಶದ ಕುಲುವಿನಲ್ಲಿ ಮೇಘಸ್ಫೋಟ; ಸೈಂಜ್ ಕಣಿವೆಯಲ್ಲಿ ಪ್ರವಾಹ
ಕೇವಲ ನಾಲ್ಕು ದಿನಗಳ ಪರಿಚಯ ದೈಹಿಕ ಸಂಪರ್ಕದವರೆಗೆ ಮುಂದುವರಿಯಿತು
ಕೇವಲ ನಾಲ್ಕು ದಿನಗಳ ಪರಿಚಯ ದೈಹಿಕ ಸಂಪರ್ಕದವರೆಗೆ ಮುಂದುವರಿಯಿತು
ಕ್ಷಮೆ ಕೇಳಲು ಶಿವರಾಜ್​ಕುಮಾರ್ ಮನೆ ಎದುರು ಕಾಯುತ್ತಿರುವ ಮಡೆನೂರು ಮನು
ಕ್ಷಮೆ ಕೇಳಲು ಶಿವರಾಜ್​ಕುಮಾರ್ ಮನೆ ಎದುರು ಕಾಯುತ್ತಿರುವ ಮಡೆನೂರು ಮನು