Flight Tickets: ಕೇವಲ 150 ರೂ.ಗೆ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ..

|

Updated on: Apr 18, 2024 | 9:37 PM

ಭಾರತದಲ್ಲಿ ವಿಮಾನಯಾನವು ಇದೀಗ ಹೆಚ್ಚು ಕೈಗೆಟುಕುವ ದರವನ್ನು ಪಡೆದುಕೊಂಡಿದ್ದು, ಉಡಾನ್ ಯೋಜನೆಯ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಕಡಿಮೆ ದರದಲ್ಲಿ ವಿಮಾನಯಾನ ಒದಗಿಸುವ ಗುರಿಯನ್ನು ಹೊಂದಿದೆ.

Flight Tickets: ಕೇವಲ 150 ರೂ.ಗೆ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ..
ಉಡಾನ್ ಯೋಜನೆಯಡಿ ವಿಮಾನ ಪ್ರಯಾಣ
Follow us on

ದೇಶಿಯ ವಿಮಾನಯಾನ ಕ್ಷೇತ್ರದಲ್ಲಿ ಮಹತ್ವದ ಬದವಲಾವಣೆ ಪರಿಚಯಿಸುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಕೇಂದ್ರ ಸರ್ಕಾರದ ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆಯು ಪ್ರಾದೇಶಿಕ ಸಂಪರ್ಕ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗಿದೆ. ಅಕ್ಟೋಬರ್ 21, 2016 ರಂದು ನಾಗರಿಕ ವಿಮಾನಯಾನ ಸಚಿವಾಲಯವು ಪ್ರಾರಂಭಿಸಿರುವ ಉಡಾನ್ ಯೋಜನೆಯು ಸಬ್ಸಿಡಿ ಮೂಲಕ ಪ್ರತಿಯೊಬ್ಬ ನಾಗರಿಕರಿಗೂ ವಿಮಾನಯಾನ ಒದಗಿಸುವ ಗುರಿಯನ್ನು ಹೊಂದಿದೆ.

ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸುವ ಉಡಾನ್ ಯೋಜನೆಯ ಧ್ಯೇಯವನ್ನು ಸಾಕಾರಗೊಳಿಸುತ್ತ ಇದೀಗ ಮತ್ತೊಂದು ಮಹತ್ವದ ಘೋಷಣೆ ಮಾಡಲಾಗಿದ್ದು, ಪ್ರಯಾಣಿಕರಿಗೆ ವಿಮಾನಯಾನ ಒದಗಿಸಲು ಕೈಗೆಟುಕುವ ದರಗಳನ್ನು ನಿಗದಿಪಡಿಸಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವಲ್ಲಿ ಮತ್ತು ಪ್ರಯಾಣಿಕರಿಗೆ ಸುಲಭವಾದ ಸಾರಿಗೆಯನ್ನು ಒದಗಿಸುವ ಮೂಲಕ ವಿವಿಧ ಪ್ರದೇಶಗಳಲ್ಲಿ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಇದು ಸಹಕಾರಿಯಾಗಲಿದೆ ಎನ್ನಲಾಗಿದೆ.

ಅಸ್ಸಾಂನ ಲೀಲಾಬಾರಿ ಮತ್ತು ತೇಜ್‌ಪುರ ನಡುವಿನ ಮಾರ್ಗದಲ್ಲಿ ಅಲಯನ್ಸ್ ಏರ್ ಕಂಪನಿಯು ಕೇವಲ 150 ರೂ. ಕ್ಕೆ ಪ್ರಯಾಣದ ಆಫರ್ ನೀಡುತ್ತಿದ್ದು, 50 ನಿಮಿಷಗಳ 147 ಕಿ.ಮೀ ಪ್ರಯಾಣವನ್ನು ಕೇವಲ 150 ರೂ. ಗಳಲ್ಲಿ ಪೂರೈಸಬಹುದಾಗಿದೆ. ಜೊತೆಗೆ ದೇಶದ ಪ್ರಮುಖ 22 ಮಾರ್ಗಗಳಲ್ಲಿ ರೂ. 1 ಸಾವಿರಕ್ಕಿಂತಲೂ ಕಡಿಮೆ ಮೂಲ ದರದಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದ್ದು, ಇವು ದೇಶದೊಳಗೆ ವಿವಿಧ ಸ್ಥಳಗಳನ್ನು ಅನ್ವೇಷಿಸಲು ಬಯಸುವ ಪ್ರಯಾಣಿಕರಿಗೆ ವಿಮಾನ ಪ್ರಯಾಣವನ್ನು ಹೆಚ್ಚು ಸುಲಭ ಮತ್ತು ಅನುಕೂಲಕರವಾಗಿಸಲಿವೆ ಎನ್ನಬಹುದು.

ಇದನ್ನೂ ಓದಿ: ಹೊಸ ಕಾರುಗಳಲ್ಲಿ ಮತ್ತೊಂದು ಕಡ್ಡಾಯ ಸೇಫ್ಟಿ ಫೀಚರ್ಸ್ ಜಾರಿಗೆ ಮುಂದಾದ ಕೇಂದ್ರ ಸರ್ಕಾರ

ಈ ಮೂಲಕ ಜನಪ್ರಿಯ ವಿಮಾನ ಮಾರ್ಗಗಳಲ್ಲಿ ಸ್ಪರ್ಧಾತ್ಮಕ ದರಗಳನ್ನು ನೀಡುವ ಮೂಲಕ ವಿಮಾನಯಾನ ಸಂಸ್ಥೆಗಳು ಹೆಚ್ಚಿನ ಪ್ರಯಾಣಿಕರನ್ನು ಆಕರ್ಷಿಸಲು ಮತ್ತು ವಾಯುಯಾನ ಉದ್ಯಮದ ಒಟ್ಟಾರೆ ಬೆಳವಣಿಗೆಯನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಲಿವೆ. ಜೊತೆಗೆ ಪ್ರಾದೇಶಿಕ ಸಂಪರ್ಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲು ಮಹತ್ವದ ಪಾತ್ರ ವಹಿಸಲಿದ್ದು, ಇದು ಪ್ರತಿಯೊಬ್ಬ ನಾಗರಿಕರಿಗೂ ವಿಮಾನಯಾನದ ಕನಸನ್ನು ಮಾಡಲು ನೆರವಾಗುತ್ತಿದೆ.