Tata Nano: ರತನ್ ಟಾಟಾ ಕನಸಿನ ಕಾರಿಗೆ ಮತ್ತೆ ಮರುಜೀವ!

ಟಾಟಾ ಮೋಟಾರ್ಸ್ ಕಂಪನಿಯು ತನ್ನ ಹಳೆಯ ತಲೆಮಾರಿನ ನ್ಯಾನೋ ಮಿನಿ ಕಾರು ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಮರುಪರಿಚಯಿಸುತ್ತಿರುವ ಕುರಿತು ಮಾಹಿತಿ ಲಭ್ಯವಾಗಿದ್ದು, ಸದ್ಯ ಮಾರುಕಟ್ಟೆಯಿಂದ ಸ್ಥಗಿತವಾಗಿರುವ ನ್ಯಾನೋ ಕಾರು ಮಾದರಿಯು ಮುಂಬರುವ ಕೆಲವೇ ದಿನಗಳಲ್ಲಿ ಎಲೆಕ್ಟ್ರಿಕ್ ಆವೃತ್ತಿಯೊಂದಿಗೆ ಬಿಡುಗಡೆಯಾಗಬಹುದು ಎನ್ನಲಾಗಿದೆ.

Tata Nano: ರತನ್ ಟಾಟಾ ಕನಸಿನ ಕಾರಿಗೆ ಮತ್ತೆ ಮರುಜೀವ!
ನೀರಿಕ್ಷಿತ ಟಾಟಾ ನ್ಯಾನೋ ಇವಿ ಚಿತ್ರ

Updated on: Dec 14, 2022 | 8:44 PM

ಭಾರತೀಯ ಕಾರು ಮಾರಾಟ ಉದ್ಯಮದಲ್ಲಿ ಹೊಸ ಕ್ರಾಂತಿ ಸೃಷ್ಠಿ ಮಾಡಿದ್ದ ಟಾಟಾ ನ್ಯಾನೋ(Tata Nano) ಕಾರು ಕಾರಣಾಂತಗಳಿಂದ ಇತ್ತೀಚೆಗೆ ಸ್ಥಗಿತಗೊಂಡಿತ್ತು. ನ್ಯಾನೋ ಕಾರು ಇದೀಗ ಹೊಸ ರೂಪದಲ್ಲಿ ಮರಳಿ ಬಿಡುಗಡೆಗೆ ಸಿದ್ದವಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ನ್ಯಾನೋ ಕಾರು ಮರುಬಿಡುಗಡೆಗಾಗಿ ಟಾಟಾ ಮೋಟಾರ್ಸ್(Tata Motors) ಕಂಪನಿಯು ಮಹತ್ವದ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. 2008ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ನ್ಯಾನೋ ಕಾರು ಕಳೆದ 2019ರಲ್ಲಿ ಮಾರುಕಟ್ಟೆಯಿಂದ ನಿರ್ಗಮಿಸಿತ್ತು. ಆದರೆ ಮಾರುಕಟ್ಟೆಯಲ್ಲಿ ಬೇಡಿಕೆಯೆಂತೆ ನ್ಯಾನೋ ಕಾರನ್ನು ಟಾಟಾ ಕಂಪನಿಯು ಶೀಘ್ರದಲ್ಲಿ ಹೊಸ ರೂಪದಲ್ಲಿ ಬಿಡುಗಡೆಗೆ ಸಿದ್ದವಾಗುತ್ತಿದೆ.

ಭಾರತದಲ್ಲಿ ಸದ್ಯ ಹೊಸ ಕಾರು ಮಾರಾಟದಲ್ಲಿ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ತಲೆಮಾರಿನ ನ್ಯಾನೋ ಕಾರು ಬಿಡುಗಡೆಗೆ ತಯಾರಿ ನಡೆಸುತ್ತಿದೆ. ಆದರೆ ಹೊಸ ನ್ಯಾನೋ ಕಾರು ಮಾದರಿಯು ಈ ಹಿಂದಿನಂತೆ ಪೆಟ್ರೋಲ್ ಎಂಜಿನ್ ನಲ್ಲಿ ಮಾತ್ರ ಖರೀದಿಗೆ ಲಭ್ಯವಿರುವುದಿಲ್ಲ. ಬದಲಾಗಿ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಎಲೆಕ್ಟ್ರಿಕ್ ಮಾದರಿಯಲ್ಲಿ ಬಿಡುಗಡೆಯಾಗುತ್ತಿದೆ. ನ್ಯಾನೋ ಇವಿ ಕಾರು ಬಿಡುಗಡೆಗಾಗಿ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಪ್ಲ್ಯಾಟ್ ಫಾರ್ಮ್ ಅಭಿವೃದ್ದಿಪಡಿಸುತ್ತಿದ್ದು, ಈ ಹಿಂದಿನಿಂಗತಲೂ ಹೊಸ ಕಾರು ಹಲವಾರು ವಿಶೇಷ ತಾಂತ್ರಿಕ ಸೌಲಭ್ಯಗಳಿರಲಿವೆ.

ಇದನ್ನೂ ಓದಿ: ಅಪಘಾತಗಳನ್ನು ತಪ್ಪಿಸಲು ನೆರವಾಗುವ ಎಡಿಎಎಸ್ ಫೀಚರ್ಸ್ ಹೇಗೆ ಕಾರ್ಯನಿರ್ವಹಿಸುತ್ತೆ ಗೊತ್ತಾ?

ದೇಶಿಯ ಮಾರುಕಟ್ಟೆಯಲ್ಲಿ ಸದ್ಯ ಪರ್ಸನಲ್ ಮೊಬಿಲಿಟಿ ವಿಭಾಗದಲ್ಲಿ ಸಣ್ಣಗಾತ್ರದ ಇವಿ ಕಾರುಗಳು ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಗ್ರಾಹಕರ ಬೇಡಿಕೆ ಆಧರಿಸಿ ಟಾಟಾ ಕಂಪನಿಯು ನ್ಯಾನೋ ಇವಿ ಅಭಿವೃದ್ದಿಪಡಿಸುತ್ತಿದೆ. ಹೊಸ ಇವಿ ಕಾರು ಸಾಮಾನ್ಯ ಕಾರಿನ ವಿನ್ಯಾಸವನ್ನೇ ಆಧರಿಸಿದ್ದರೂ ತಾಂತ್ರಿಕವಾಗಿ ಗ್ರಾಹಕರನ್ನು ಸೆಳೆಯಲಿದೆ. ಎಲೆಕ್ಟ್ರಿಕ್ ಕಾರು ಮಾದರಿಗಾಗಿ ವಿಶೇಷ ಡಿಸೈನ್ ವಿನ್ಯಾಸವನ್ನು ಸಿದ್ದಪಡಿಸಲಾಗುತ್ತಿದ್ದು, ಇದು ಭಾರತದಲ್ಲಿ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಕಾರು ಮಾದರಿಯಾಗಿ ಗುರುತಿಸಿಕೊಳ್ಳಲಿದೆ.

ಸದ್ಯ ಮಾರುಕಟ್ಟೆಗೆ ಲಗ್ಗೆಯಿಟ್ಟಿರುವ ಟಿಯಾಗೋ ಎಲೆಕ್ಟ್ರಿಕ್ ಕಾರಿನ ತಾಂತ್ರಿಕ ಅಂಶಗಳನ್ನು ಆಧರಿಸಿ ಬಿಡುಗಡೆಯಾಗಲಿರುವ ಹೊಸ ನ್ಯಾನೋ ಇವಿ ಕಾರು ಅತ್ಯುತ್ತಮ ಮೈಲೇಜ್ ಹಿಂದಿರುಗಿಸಲಿದೆ. ಟಿಯಾಗೋ ಇವಿ ಕಾರಿನ ಬೆಸ್ ವೆರಿಯೆಂಟ್ ನಲ್ಲಿರುವ 19.2kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಹೊಂದಿರಲಿರುವ ನ್ಯಾನೋ ಇವಿ ಕಾರು, ಪ್ರತಿ ಚಾರ್ಜ್ ಗೆ 250 ರಿಂದ 280 ಕಿ.ಮೀ ಮೈಲೇಜ್ ನೀಡಲಿದೆ. ಆದರೆ ಈ ಕುರಿತು ಟಾಟಾ ಕಂಪನಿಯು ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲವಾದರೂ ಮುಂಬರುವ ಕೇವಲ ದಿನಗಳಲ್ಲಿ ಹೊಸ ಕಾರಿನ ಮಾಹಿತಿ ಬಹಿರಂಗಪಡಿಸಲಿದೆ. ಹೊಸ ಕಾರು ರೂ. 5 ಲಕ್ಷದಿಂದ ರೂ. 6 ಲಕ್ಷ ಅಂತರದಲ್ಲಿ ಬಿಡುಗಡೆಯಾಗಬಹುದಾಗಿದ್ದು, ಹಲವಾರು ಹೊಸ ಫೀಚರ್ಸ್ ಗಳಿರಲಿವೆ.

ಇದನ್ನೂ ಓದಿ: ಭಾರತದಲ್ಲೂ ಬಿಡುಗಡೆಯಾಲಿದೆ ಪ್ರತಿ ಚಾರ್ಜ್ ಗೆ 452 ಕಿ.ಮೀ ಮೈಲೇಜ್ ನೀಡುವ ಎಂಜಿ 4 ಇವಿ

ಈ ಹಿಂದೆ ನ್ಯಾನೋ ಕಾರನ್ನು ಸುರಕ್ಷತೆಯ ಕಾರಣಕ್ಕೆ ಕಾರು ಉತ್ಪಾದನೆ ನಿಲ್ಲಿಸಿದ್ದ ಟಾಟಾ ಮೋಟಾರ್ಸ್ ಕಂಪನಿಯು ಈ ಎಲೆಕ್ಟ್ರಿಕ್ ಮಾದರಿಯೊಂದಿಗೆ ಹಲವಾರು ಹೊಸ ಬದಲಾವಣೆ ಪರಿಚಯಿಸುತ್ತಿದೆ. ಸಿಂಗಲ್ ಬಾಕ್ಸಿ ವಿನ್ಯಾಸದೊಂದಿಗೆ ಹಲವಾರು ಪ್ರೀಮಿಯಂ ಫೀಚರ್ಸ್ ಗಳಿರಲಿದ್ದು, ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಿದೆ. ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ ಕನಿಷ್ಠ ನಾಲ್ಕು ಸ್ಟಾರ್ ರೇಟಿಂಗ್ ಪಡೆದುಕೊಳ್ಳಲಿರುವ ಹೊಸ ಕಾರು ಮೈಲೇಜ್ ಮತ್ತು ಬೆಲೆಯಲ್ಲಿ ಗಮನಸೆಳೆಯಲಿದೆ ಎನ್ನಬಹುದು.

Published On - 8:25 pm, Wed, 14 December 22