ಹೊಸ ವರ್ಷಕ್ಕೆ ನಾಲ್ಕು ವಿನೂತನ ಕಾರುಗಳನ್ನು ಬಿಡುಗಡೆ ಮಾಡಲಿದೆ ಟಾಟಾ ಮೋಟಾರ್ಸ್

|

Updated on: Dec 22, 2023 | 9:40 PM

ಹೊಸ ಕಾರುಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಮುಂಬರುವ ಕೆಲವೇ ದಿನಗಳಲ್ಲಿ ಮತ್ತಷ್ಟು ಹೊಸ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದ್ದು, 2024ರ ಅಂತ್ಯಕ್ಕೆ ಒಟ್ಟು ನಾಲ್ಕು ವಿನೂತನ ಕಾರುಗಳನ್ನು ರಸ್ತೆಗಿಳಿಸುವ ಯೋಜನೆಯಲ್ಲಿದೆ.

ಹೊಸ ವರ್ಷಕ್ಕೆ ನಾಲ್ಕು ವಿನೂತನ ಕಾರುಗಳನ್ನು ಬಿಡುಗಡೆ ಮಾಡಲಿದೆ ಟಾಟಾ ಮೋಟಾರ್ಸ್
ಟಾಟಾ ಮೋಟಾರ್ಸ್
Follow us on

ಹೊಸ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್(Tata Motors) ಕಂಪನಿ ಪ್ರತಿಸ್ಪರ್ಧಿ ಕಾರುಗಳ ಮಾದರಿಗೆ ಪೈಪೋಟಿಯಾಗಿ ಮತ್ತಷ್ಟು ಹೊಸ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದೆ. ಹೊಸ ಇವಿ ಕಾರುಗಳು ವಿವಿಧ ಸೆಗ್ಮೆಂಟ್ ಗಳಲ್ಲಿ ಬಿಡುಗಡೆಯಾಗಲಿದ್ದು, ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿವೆ. ಹಾಗಾದ್ರೆ ಟಾಟಾ ಮೋಟಾರ್ಸ್ ಬಿಡುಗಡೆ ಮಾಡಲಿರುವ ಆ ಹೊಸ ಕಾರುಗಳು ಯಾವುವು? ಅವುಗಳ ವಿಶೇಷತೆಗಳೇನು? ಈ ಎಲ್ಲಾ ಮಾಹಿತಿ ಇಲ್ಲಿದೆ.

ಆಲ್ಟ್ರೊಜ್ ಫೇಸ್ ಲಿಫ್ಟ್

ಟಾಟಾ ಮೋಟಾರ್ಸ್ ಕಂಪನಿಯು ಶೀಘ್ರದಲ್ಲಿಯೇ ನವೀಕೃತ ವಿನ್ಯಾಸ ಮತ್ತು ಹೆಚ್ಚಿನ ಮಟ್ಟದ ತಾಂತ್ರಿಕ ಅಂಶಗಳೊಂದಿಗೆ ಆಲ್ಟ್ರೊಜ್ ಫೇಸ್ ಲಿಫ್ಟ್ ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಹೊಸ ಕಾರಿನಲ್ಲಿ ಈ ಬಾರಿ ಸ್ಟ್ಯಾಂಡರ್ಡ್ ಆವೃತ್ತಿಯ ಜೊತೆಗೆ ರೇಸರ್ ಎಡಿಷನ್ ಸಹ ಬಿಡುಗಡೆಯಾಗಲಿದ್ದು, ಇದು ಟರ್ಬೊ ಪೆಟ್ರೋಲ್ ಎಂಜಿನ್ ನೊಂದಿಗೆ ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯಲಿದೆ. ಹೊಸ ಫೇಸ್ ಲಿಫ್ಟ್ ಮಾದರಿಯಲ್ಲಿ ಈ ಬಾರಿ 10.25 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, 7 ಇಂಚಿನ ಡಿಜಿಟಲ್ ಇನ್ ಸ್ಟ್ರಮೆಂಟ್ ಕ್ಲಸ್ಟರ್, ಫ್ರಂಟ್ ವೆಂಟಿಲೆಷನ್ ಸೀಟುಗಳು, ವೈರ್ ಲೆಸ್ ಚಾರ್ಜಿಂಗ್, ಏರ್ ಪ್ಯೂರಿಫೈರ್ ಸೇರಿದಂತೆ ಸ್ಟ್ಯಾಂಡರ್ಡ್ ಆಗಿ 6 ಏರ್ ಬ್ಯಾಗ್ ಗಳನ್ನು ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಹೊಸ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 7 ಲಕ್ಷದಿಂದ ರೂ. 11 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಲಿದೆ.

ಪಂಚ್ ಎಲೆಕ್ಟ್ರಿಕ್

ಟಾಟಾ ಬಹುನೀರಿಕ್ಷಿತ ಪಂಚ್ ಇವಿ ಕಾರು ಹೊಸ ವರ್ಷದ ಆರಂಭದಲ್ಲಿ ಬಿಡುಗಡೆಯಾಗುವ ನೀರಿಕ್ಷೆಗಳಿದ್ದು, ಇದು ಸಣ್ಣ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನ ಮೂಡಿಸಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಟಿಯಾಗೋ ಇವಿ ಆವೃತ್ತಿಯಲ್ಲಿರುವಂತೆ ತಂತ್ರಜ್ಞಾನ ಮತ್ತು ಫೀಚರ್ಸ್ ಹೊಂದಿರಲಿರುವ ಪಂಚ್ ಇವಿ ಕಾರು ವಿವಿಧ ಸಾಮರ್ಥ್ಯದ ಎರಡು ಬ್ಯಾಟರಿ ಪ್ಯಾಕ್ ಆಯ್ಕೆ ಹೊಂದಿರಬಹುದಾಗಿದ್ದು, ಇದು ಪ್ರತಿ ಚಾರ್ಜ್ ಗೆ 280 ರಿಂದ 320 ಕಿಲೋ ಮೀಟರ್ ಮೈಲೇಜ್ ನೀಡಬಹುದಾಗಿದೆ. ಈ ಮೂಲಕ ಇದು ನಗರದಲ್ಲಿ ಸಂಚಾರಕ್ಕೆ ಹೆಚ್ಚಿನ ಬೇಡಿಕೆ ಪಡೆದುಕೊಳ್ಳಬಹುದಾಗಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 12 ಲಕ್ಷದಿಂದ ರೂ. 14 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಅತ್ಯುತ್ತಮ ರೀಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

ಹ್ಯಾರಿಯರ್ ಎಲೆಕ್ಟ್ರಿಕ್

ಟಾಟಾ ಮೋಟಾರ್ಸ್ ಕಂಪನಿಯು 2024ರ ವರ್ಷಾಂತ್ಯದಲ್ಲಿ ಹ್ಯಾರಿಯರ್ ಇವಿ ಪರಿಚಯಿಸಬಹುದಾಗಿದ್ದು, ಇದು ಎಲೆಕ್ಟ್ರಿಕ್ ವಾಹನಗಳ ಎರಡನೇ ತಲೆಮಾರಿನ ತಂತ್ರಜ್ಞಾನದೊಂದಿಗೆ ಅಭಿವೃದ್ದಿಗೊಳ್ಳುತ್ತಿದೆ. ಪ್ರತಿ ಸ್ಪರ್ಧಿಗಳಿಂತಲೂ ಹೆಚ್ಚಿನ ಐಷಾರಾಮಿ ಫೀಚರ್ಸ್ ಹೊಂದಿರುವ ಹ್ಯಾರಿಯರ್ ಇವಿ ಕಾರು ಸುಧಾರಿತ ಬ್ಯಾಟರಿ ಪ್ಯಾಕ್ ಪಡೆದುಕೊಂಡಿದೆ. ಹೊಸ ಕಾರಿನಲ್ಲಿ 60 ಕೆವಿಹೆಚ್ ಬ್ಯಾಟರ್ ಪ್ಯಾಕ್ ಜೋಡಣೆ ಮಾಡಬಹುದಾಗಿದ್ದು, ಇದು ಪ್ರತಿ ಚಾರ್ಜ್ ಗೆ 450ರಿಂದ 500 ಕಿ.ಮೀ ಮೈಲೇಜ್ ನೊಂದಿಗೆ ಎಡಿಎಎಸ್ ಫೀಚರ್ಸ್ ಹೊಂದಿರಲಿದೆ. ಈ ಮೂಲಕ ಇದು ಮಧ್ಯಮ ಕ್ರಮಾಂಕದ ಬಲಿಷ್ಠ ಎಲೆಕ್ಟ್ರಿಕ್ ಎಸ್ ಯುವಿ ಮಾದರಿಯಾಗಿ ಗುರುತಿಸಿಕೊಳ್ಳಲಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 25 ಲಕ್ಷದಿಂದ ರೂ. 30 ಲಕ್ಷ ಬೆಲೆ ಹೊಂದಿರಬಹುದಾಗಿದೆ.

ಇದನ್ನೂ ಓದಿ: ಜನಪ್ರಿಯ ಎಸ್​ಯುವಿ ಕಾರುಗಳ ಖರೀದಿ ಮೇಲೆ ಭರ್ಜರಿ ಇಯರ್ ಎಂಡ್ ಆಫರ್ ಘೋಷಣೆ

ಕರ್ವ್ ಎಸ್ ಯುವಿ

ಟಾಟಾ ಮೋಟಾರ್ಸ್ ಕಂಪನಿ ಹ್ಯಾರಿಯರ್ ಇವಿ ನಂತರ ಕರ್ವ್ ಕೂಪೆ ಎಸ್ ಯುವಿ ಬಿಡುಗಡೆ ಮಾಡುವ ಯೋಜನೆ ಹೊಂದಿದೆ. ಇದು 2024ರ ಅಂತ್ಯದಲ್ಲಿ ಬಿಡುಗಡೆಯಾಗಬಹುದಾಗಿದ್ದು, ಇದು ತಂತ್ರಜ್ಞಾನ ಮತ್ತು ಫೀಚರ್ಸ್ ವಿಚಾರದಲ್ಲಿ ಗಮನಸೆಳೆಯಲಿದೆ. ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿನ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಸ್ಕೋಡಾ ಕುಶಾಕ್, ಫೋಕ್ಸ್ ವ್ಯಾಗನ್ ಟೈಗನ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದ್ದು, ಇದರಲ್ಲಿ ಹೊಸ 1.5 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಪರಿಚಯಿಸಬಹುದಾಗಿದೆ. ಇದು ಸಾಮಾನ್ಯ ಆವೃತ್ತಿಯೊಂದಿಗೆ 115 ಹಾರ್ಸ್ ಪವರ್ ಮತ್ತು ಟರ್ಬೊ ಆವೃತ್ತಿಯೊಂದಿಗೆ 140 ಹಾರ್ಸ್ ಪವರ್ ಉತ್ಪಾದನೆ ಮೂಲಕ ಇಂಧನ ದಕ್ಷತೆಯಲ್ಲೂ ಗಮನಸೆಳೆಯಲಿದೆ.

ಕರ್ವ್ ಕಾನ್ಸಪ್ಟ್ ಕಾರು ಮಾದರಿಯಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಪೆಟ್ರೋಲ್ ಎಂಜಿನ್ ಜೊತೆಗೆ ಸಿಎನ್ ಜಿ ಆಯ್ಕೆಯನ್ನು ಸಹ ನೀಡಬಹುದಾಗಿದ್ದು, ತದನಂತರವಷ್ಟೇ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಬಿಡುಗಡೆಯಾಗಬಹುದಾಗಿದೆ.