ಜನಪ್ರಿಯ ಎಸ್ಯುವಿ ಕಾರುಗಳ ಖರೀದಿ ಮೇಲೆ ಭರ್ಜರಿ ಇಯರ್ ಎಂಡ್ ಆಫರ್ ಘೋಷಣೆ
ವರ್ಷಾಂತ್ಯದಲ್ಲಿ ಹೊಸ ಕಾರುಗಳ ಖರೀದಿ ಮೇಲೆ ವಿವಿಧ ಕಂಪನಿಗಳು ಭರ್ಜರಿ ಆಫರ್ ಘೋಷಣೆ ಮಾಡಿದ್ದು, ಹೊಸ ಆಫರ್ ಗಳಲ್ಲಿ ಎಸ್ ಯುವಿ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಲಾಗುತ್ತಿದೆ.
ಹೊಸ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಮಧ್ಯಮ ಕ್ರಮಾಂಕದ ಎಸ್ ಯುವಿಗಳ (SUV’s) ಖರೀದಿ ಮೇಲೆ ವಿವಿಧ ಕಾರು ಕಂಪನಿಗಳು ಆಕರ್ಷಕ ಆಫರ್ ನೀಡುತ್ತಿದ್ದು, ವರ್ಷಾಂತ್ಯದ ಆಫರ್ ಗಳಲ್ಲಿ ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಇದು ಸುವರ್ಣಾವಕಾಶ ಎನ್ನಬಹುದು. ಹೊಸ ಆಫರ್ ಗಳಲ್ಲಿ ಕ್ಯಾಶ್ ಡಿಸ್ಕೌಂಟ್, ಎಕ್ಸ್ ಚೆಂಜ್ ಡಿಸ್ಕೌಂಟ್, ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ಆಕರ್ಷಕ ಬೆಲೆಗಳಲ್ಲಿ ಆಕ್ಸೆಸರಿಸ್ ಪ್ಯಾಕೇಜ್ ಪಡೆದುಕೊಳ್ಳಬಹುದಾಗಿದೆ.
2024ರಿಂದ ಬೆಲೆ ಹೆಚ್ಚಳಕ್ಕೆ ಸಿದ್ದವಾಗಿರುವ ಕಾರು ಉತ್ಪಾದನಾ ಕಂಪನಿಗಳು ಹೊಸ ವರ್ಷ ಆರಂಭಕ್ಕೂ ಮುನ್ನ ಭರ್ಜರಿ ಆಫರ್ ಗಳೊಂದಿಗೆ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಪ್ರಮುಖ ಕಾರು ಉತ್ಪಾದನಾ ಕಂಪನಿಗಳಾದ ಮಾರುತಿ ಸುಜುಕಿ, ಹ್ಯುಂಡೈ, ಮಹೀಂದ್ರಾ, ಎಂಜಿ ಮೋಟಾರ್, ಸ್ಕೋಡಾ, ಸಿಟ್ರನ್, ಫೋಕ್ಸ್ ವ್ಯಾಗನ್ ಮತ್ತು ಜೀಪ್ ಕಂಪನಿಯು ತಮ್ಮ ವಿವಿಧ ಕಾರು ಮಾದರಿಗಳಿಗಾಗಿ ಹೆಚ್ಚಿನ ಆಫರ್ ನೀಡುತ್ತಿವೆ.
ಹೊಸ ಆಫರ್ ಗಳಲ್ಲಿ ಮಾರುತಿ ಸುಜುಕಿ ಕಂಪನಿಯು ಹೆಚ್ಚಿನ ಆಫರ್ ನೀಡುತ್ತಿದ್ದು, ಜಿಮ್ನಿ, ಫ್ರಾಂಕ್ಸ್ ಮತ್ತು ಗ್ರ್ಯಾಂಡ್ ವಿಟಾರಾ ಕಾರುಗಳ ಮೇಲೆ ಭರ್ಜರಿ ಆಫರ್ ನೀಡುತ್ತಿದೆ. ಜಿಮ್ನಿ ಕಾರಿನ ಮೇಲೆ ರೂ. 2 ಲಕ್ಷದ ತನಕ ಆಫರ್ ಲಭ್ಯವಿದ್ದು, ಫ್ರಾಂಕ್ಸ್ ಕಾರಿನ ಮೇಲೆ ರೂ. 40 ಸಾವಿರ ತನಕ ಮತ್ತು ಗ್ರ್ಯಾಂಡ್ ವಿಟಾರಾ ಮೇಲೆ ರೂ. 25 ಸಾವಿರದಿಂದ ರೂ. 30 ಸಾವಿರ ಸಾವಿರ ಆಫರ್ ನೀಡುತ್ತಿದೆ.
ಇದನ್ನೂ ಓದಿ: ಬಜೆಟ್ ಬೆಲೆಗೆ ಖರೀದಿಸಬಹುದಾದ ಅತ್ಯುತ್ತಮ 7 ಸೀಟರ್ ಕಾರುಗಳಿವು!
ಟಾಟಾ ಮೋಟಾರ್ಸ್ ಕಂಪನಿಯು ವರ್ಷಾಂತ್ಯದ ಆಫರ್ ಗಳ ಮೂಲಕ ಹಳೆಯ ಸಫಾರಿ ಮತ್ತು ಹ್ಯಾರಿಯರ್ ಆವೃತ್ತಿಗಳ ಮೇಲೆ ರೂ. 1.50 ಲಕ್ಷದ ತನಕ ಆಫರ್ ನೀಡುತ್ತಿದೆ. ಜೊತೆಗೆ ಎಲೆಕ್ಟ್ರಿಕ್ ಕಾರುಗಳ ಮೇಲೂ ಉತ್ತಮ ಆಫರ್ ನೀಡುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ನೆಕ್ಸಾನ್ ಇವಿ, ಟಿಗೋರ್ ಇವಿ ಮತ್ತು ಟಿಯಾಗೋ ಇವಿ ಕಾರುಗಳ ಮೇಲೆ ರೂ. 1.90 ಲಕ್ಷದಿಂದ ರೂ. 2.60 ಲಕ್ಷದ ತನಕ ಆಫರ್ ನೀಡುತ್ತಿದೆ.
ಮಹೀಂದ್ರಾ ಕಂಪನಿಯು ಕೂಡಾ ವರ್ಷಾಂತ್ಯದಲ್ಲಿ ಭರ್ಜರಿ ಆಫರ್ ನೀಡುತ್ತಿದ್ದು, ಗ್ರಾಹಕರು ರೂ. 96 ಸಾವಿರದಿಂದ ರೂ. 4.20 ಲಕ್ಷದ ತನಕ ಆಫರ್ ಪಡೆದುಕೊಳ್ಳಬಹುದಾಗಿದೆ. ಎಕ್ಸ್ ಯುವಿ400 ಇವಿ ಕಾರಿನ ಮೇಲೆ ಗರಿಷ್ಠ 4.20 ಲಕ್ಷದ ಆಫರ್ ನೀಡಲಾಗುತ್ತಿದ್ದು, ಎಕ್ಸ್ ಯುವಿ 300 ಕಾರಿನ ಮೇಲೆ ರೂ. 1.72 ಲಕ್ಷದ ತನಕ, ಬೊಲೆರೊ ನಿಯೋ ಕಾರಿನ ಮೇಲೆ ರೂ. 1.11 ಲಕ್ಷದ ತನಕ, ಬೊಲೆರೊ ಕಾರಿನ ಮೇಲೆ ರೂ. 96 ಸಾವಿರ ತನಕ ಆಫರ್ ಗಳು ಲಭ್ಯವಿವೆ.
ವರ್ಷಾಂತ್ಯದ ಹೊಸ ಆಫರ್ ಗಳಲ್ಲಿ ಹ್ಯುಂಡೈ ಕಂಪನಿಯು ಸಹ ಭರ್ಜರಿ ಆಫರ್ ನೀಡುತ್ತಿದ್ದು, ಅಲ್ಕಾಜರ್ ಮತ್ತು ಟುಸಾನ್ ಕಾರುಗಳ ಮೇಲೆ ಹೆಚ್ಚಿನ ಆಫರ್ ಲಭ್ಯವಿವೆ. ಅಲ್ಕಾಜರ್ ಕಾರಿನ ಮೇಲೆ ರೂ. 20 ಸಾವಿರದಿಂದ ರೂ. 35 ಸಾವಿರ ತನಕ ಆಫರ್ ನೀಡಲಾಗುತ್ತಿದ್ದು, ಟುಸಾನ್ ಕಾರು ಖರೀದಿಯ ಮೇಲೆ ರೂ. 1.50 ಲಕ್ಷದ ತನಕ ಕ್ಯಾಶ್ ಬ್ಯಾಕ್ ಆಫರ್ ನೀಡುತ್ತಿದೆ.
ಸಿಟ್ರನ್ ಇಂಡಿಯಾ ಕಂಪನಿಯು ಸಹ ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದ್ದು, ಪ್ರಮುಖ ಎಸ್ ಯುವಿ ಕಾರುಗಳ ಖರೀದಿ ಮೇಲೆ ರೂ. 3.50 ಲಕ್ಷದ ತನಕ ಆಫರ್ ನೀಡುತ್ತಿದೆ. ಹೊಸ ಆಫರ್ ಗಳಲ್ಲಿ ಸಿ5 ಏರ್ ಕ್ರಾಸ್ ಕಾರಿನ ಮೇಲೆ ಗರಿಷ್ಠ ರೂ. 3.50 ಲಕ್ಷದ ಆಫರ್ ನೀಡುತ್ತಿದ್ದು, ಸಿ3 ಏರ್ ಕ್ರಾಸ್ ಕಾರಿನ ಮೇಲೆ ರೂ. 1.50 ಲಕ್ಷ ಆಫರ್ ಲಭ್ಯವಿದೆ.
ಇದನ್ನೂ ಓದಿ: ಪೆಟ್ರೋಲ್ ಕಾರುಗಳು Vs ಪೆಟ್ರೋಲ್ ಸಿಎನ್‌ಜಿ ಕಾರುಗಳು.. ಖರೀದಿಗೆ ಯಾವುದು ಬೆಸ್ಟ್?
ಜೀಪ್ ಕಂಪನಿ ಕೂಡಾ ತನ್ನ ಪ್ರಮುಖ ಎಸ್ ಯುವಿ ಕಾರುಗಳ ಮೇಲೆ ಐತಿಹಾಸಿಕ ಆಫರ್ ನೀಡುತ್ತಿದ್ದು, ಐಷಾರಾಮಿ ಗ್ರ್ಯಾಂಡ್ ಚರೋಕಿ ಎಸ್ ಯುವಿ ಮೇಲೆ ರೂ. 11.85 ಲಕ್ಷ ಆಫರ್ ನೀಡಲಾಗಿದೆ. ಹಾಗೆಯೇ ಮೆರಿಡಿಯನ್ ಎಸ್ ಯುವಿ ಮೇಲೆ ರೂ. 4 ಲಕ್ಷದ ತನಕ ಮತ್ತು ಕಂಪಾಸ್ ಎಸ್ ಯುವಿ ಮೇಲೆ ರೂ. 90 ಸಾವಿರ ತನಕ ಆಫರ್ ನೀಡುತ್ತಿದೆ.
ಇನ್ನುಳಿದಂತೆ ಫೋಕ್ಸ್ ವ್ಯಾಗನ್, ಸ್ಕೋಡಾ ಕಂಪನಿಗಳು ತಮ್ಮ ಜನಪ್ರಿಯ ಕಾರುಗಳಾದ ಕುಶಾಕ್ ಕಾರಿನ ಮೇಲೆ ರೂ. 1.25 ಲಕ್ಷ, ಟೈಗನ್ ಕಾರಿನ ಮೇಲೆ ರೂ. 1.46 ಲಕ್ಷ, ಕೊಡಿಯಾಕ್ ಎಸ್ ಯುವಿ ಮೇಲೆ ರೂ. 2.66 ಲಕ್ಷ ಮತ್ತು ಟಿಗ್ವಾನ್ ಕಾರಿನ ಮೇಲೆ ರೂ. 4.20 ಲಕ್ಷದ ತನಕ ಆಫರ್ ನೀಡಲಾಗುತ್ತಿದೆ. ಹೊಸ ಆಫರ್ ಗಳು ಈ ತಿಂಗಳಾಂತ್ಯದ ತನಕ ಮಾತ್ರ ಲಭ್ಯವಿರಲಿದ್ದು, ಜನವರಿ 1ರಿಂದಲೇ ಅಧಿಕೃತವಾಗಿ ಹೆಚ್ಚುವರಿ ಬೆಲೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿವೆ.