AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆ.2 ರಂದು ಬಿಡುಗಡೆಯಾಗಲಿದೆ ಪೆಟ್ರೋಲ್, ಡೀಸೆಲ್ ಎಂಜಿನ್ ಆಯ್ಕೆಯ ಟಾಟಾ ಕರ್ವ್

ಟಾಟಾ ಮೋಟಾರ್ಸ್ ಕಂಪನಿಯು ಕರ್ವ್ ಕೂಪೆ ಎಸ್ ಯುವಿ ಮಾದರಿಯನ್ನು ಅಧಿಕೃತವಾಗಿ ಅನಾವರಣಗೊಳಿಸಿದ್ದು, ಹೊಸ ಕಾರು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾಗಲಿದೆ.

ಸೆ.2 ರಂದು ಬಿಡುಗಡೆಯಾಗಲಿದೆ ಪೆಟ್ರೋಲ್, ಡೀಸೆಲ್ ಎಂಜಿನ್ ಆಯ್ಕೆಯ ಟಾಟಾ ಕರ್ವ್
ಟಾಟಾ ಕರ್ವ್
Praveen Sannamani
Praveen Sannamani|

Updated on:Aug 08, 2024 | 9:22 PM

Share

ಭಾರತದಲ್ಲಿ ಹೊಸ ಕಾರುಗಳ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಟಾಟಾ ಮೋಟಾರ್ಸ್ (Tata Motors) ಕಂಪನಿಯು ತನ್ನ ಬಹುನೀರಿಕ್ಷಿತ ಕರ್ವ್ ಕೂಪೆ ಎಸ್ ಯುವಿ (Curvv coupe-SUV) ಮಾದರಿಯನ್ನು ಅನಾವರಣಗೊಳಿಸಿದ್ದು, ಹೊಸ ಕಾರು ಮುಂದಿನ ತಿಂಗಳು ಸೆಪ್ಟೆಂಬರ್ 2ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ.

ಹೊಸ ತಲೆಮಾರಿನ ಎಸ್ ಯುವಿ ಕಾರುಗಳ ನಿರ್ಮಾಣಕ್ಕಾಗಿ ಆಲ್ಟಾಸ್(ಅಡಾಪ್ಟಿವ್ ಟೆಕ್-ಫಾರ್ವಡ್ ಲೈಫ್ ಸ್ಟೈಲ್ ಆರ್ಕಿಟೆಕ್ಚರ್) ಪ್ಲ್ಯಾಟ್ ಫಾರ್ಮ್ ಅನಾವರಣಗೊಳಿಸುವ ಮೂಲಕ ಕರ್ವ್ ಪರಿಚಯಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಹೊಸ ಕಾರು ಮಾದರಿಯ ಮೂಲಕ ಮಧ್ಯಮ ಗಾತ್ರದ ಎಸ್ ಯುವಿ ವಿಭಾಗದಲ್ಲಿ ಭಾರೀ ಬೇಡಿಕೆಯ ನೀರಿಕ್ಷೆಯಲ್ಲಿದೆ.

Tata Curvv (23)

ಆಲ್ಟಾಸ್ ಪ್ಲ್ಯಾಟ್ ಫಾರ್ಮ್ ಅಡಿಯಲ್ಲಿ 3.6 ಮೀಟರ್ ನಿಂದ 4.6 ಮೀಟರ್ ಉದ್ದಳತೆಯ ಕಾರುಗಳನ್ನು ನಿರ್ಮಾಣ ಮಾಡಬಹುದಾಗಿದ್ದು, ಇದೇ ಪ್ಲ್ಯಾಟ್ ಫಾರ್ಮ್ ಅಡಿಯಲ್ಲಿ ಇದೀಗ ಕರ್ವ್ ಕಾರು ಮಾದರಿಯು ಅಭಿವೃದ್ದಿಗೊಂಡಿದೆ. ಈ ಮೂಲಕ ಇದು ಮಧ್ಯಮ ವರ್ಗದ ಗ್ರಾಹಕರಿಗೂ ಐಷಾರಾಮಿ ಕಾರು ಚಾಲನೆಯ ಅನುಭವ ನೀಡಲಿದ್ದು, ಇದು ಪ್ರಮುಖ ಮೂರು ಎಂಜಿನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಕರ್ವ್ ಕಾರಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು 120 ಹಾರ್ಸ್ ಪವರ್ ಮತ್ತು 170 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲ ತ್ರಿ ಸಿಲಿಂಡರ್ 1.2 ಲೀಟರ್ ಪೆಟ್ರೋಲ್ ಎಂಜಿನ್, 118 ಹಾರ್ಸ್ ಪವರ್ ಉತ್ಪಾದಿಸಬಲ್ಲ 1.5 ಲೀಟರ್ ಡೀಸೆಲ್ ಎಂಜಿನ್ ಮತ್ತು ಪರ್ಫಾಮೆನ್ಸ್ ಪ್ರಿಯರಿಗಾಗಿ 125 ಹಾರ್ಸ್ ಪವರ್, 225 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲ 1.2 ಲೀಟರ್ ಡೈರೆಕ್ಟ್ ಇಂಜೆಕ್ಷನ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗುತ್ತಿದೆ. ಇದರಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯನ್ನು ಎಲ್ಲಾ ವೆರಿಯೆಂಟ್ ನಲ್ಲೂ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಹೆಚ್ಚಿನ ಮಟ್ಟದ ಪರ್ಫಾಮೆನ್ಸ್ ಗಾಗಿ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಮಾಡಬಹುದಾಗಿದೆ.

Tata Curvv (21)

ಹೊಸ ಕರ್ವ್ ಕಾರು ಸ್ಮಾರ್ಟ್, ಪ್ಯೂರ್ ಪ್ಲಸ್, ಕ್ರಿಯೆಟಿವ್, ಕ್ರಿಯೆಟಿವ್ ಪ್ಲಸ್, ಅಕಂಪ್ಲಿಶೇಡ್ ಎಸ್ , ಅಕಂಪ್ಲಿಶೇಡ್ ಪ್ಲಸ್ ಎಸ್ ಎನ್ನುವ ಆರು ವೆರಿಯೆಂಟ್ ಗಳನ್ನು ಹೊಂದಿದ್ದು, ನೆಕ್ಸಾನ್ ಕಾರಿನಿಂದ ಕೆಲವು ತಾಂತ್ರಿಕ ಅಂಶಗಳನ್ನು ಮತ್ತು ಹ್ಯಾರಿಯರ್ ಕಾರಿನಲ್ಲಿರುವ ಕೆಲವು ತಾಂತ್ರಿಕ ಅಂಶಗಳನ್ನು ಎರವಲು ಪಡೆದುಕೊಂಡಿದೆ.

ಕರ್ವ್ ಕಾರಿನಲ್ಲಿ ಸ್ಪೋರ್ಟಿಯಾಗಿರುವ ಕೂಪೆ ಎಸ್ ಯುವಿ ವಿನ್ಯಾಸದೊಂದಿಗೆ ಡ್ಯುಯಲ್ ಟೋನ್ ಬಂಪರ್, ರೂಫ್ ಟಾಪ್ ಮೌಂಟೆಡ್ ಸ್ಪಾಯ್ಲರ್, 18 ಇಂಚಿನ ಅಲಾಯ್ ವ್ಹೀಲ್, ಫ್ಲಶ್ ಡೋರ್ ಹ್ಯಾಂಡಲ್ಸ್, ಪನೊರಮಿಕ್ ಸನ್ ರೂಫ್, ಗೆಸ್ಚರ್ ಕಂಟ್ರೋಲ್ ಹೊಂದಿರುವ ಟೈಲ್ ಗೇಟ್ ಹೊಂದಿದ್ದು, ಕಾರಿನ ಒಳಭಾಗದಲ್ಲಿ 12.3 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, ಮುಂಭಾಗದಲ್ಲಿ ವೆಂಟಿಲೆಟೆಡ್ ಆಸನಗಳು, 2 ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ಹಿಂಬದಿ ಆಸನಗಳಿವೆ.

Tata Curvv (22)

ಸುರಕ್ಷತೆಗಾಗಿ ಹೊಸ ಕಾರಿನಲ್ಲಿ ಹಲವಾರು ಫೀಚರ್ಸ್ ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಇದರಲ್ಲಿ ಆರು ಏರ್ ಬ್ಯಾಗ್ ಗಳೊಂದಿಗೆ ಆಲ್ ವ್ಹೀಲ್ ಡಿಸ್ಕ್ ಬ್ರೇಕ್ಸ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, 360 ಡಿಗ್ರಿ ಕ್ಯಾಮೆರಾ, ಆಟೋ ಹೋಲ್ಡ್ ಅಸಿಸ್ಟ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಸೌಲಭ್ಯಗಳಿವೆ. ಹಾಗೆಯೇ ಹೈಎಂಡ್ ಮಾದರಿಗಳಿಗಾಗಿ ಹೆಚ್ಚಿನ ಮಟ್ಟದ ಸುರಕ್ಷಾ ಫೀಚರ್ಸ್ ಹೊಂದಿರುವ ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಂ ನೀಡಲಾಗಿದೆ.

Tata Curvv (20)

ಈ ಮೂಲಕ ಕರ್ವ್ ಕಾರು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 10 ಲಕ್ಷದಿಂದ ರೂ. 18 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗುವ ನೀರಿಕ್ಷೆಗಳಿದ್ದು, ಇದು ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ಹೋಂಡಾ ಎಲಿವೇಟ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಸೇರಿ ಪ್ರಮುಖ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.

Published On - 9:20 pm, Thu, 8 August 24

Follow Us
Praveen Sannamani
Praveen Sannamani

Praveen Sannamani is a enthusiast and passionate Journalist in Kannada Language. Automobile and Current affairs are the interested areas