ಟಾಟಾ ನೆಕ್ಸಾನ್ ಇವಿ ಮ್ಯಾಕ್ಸ್ ಡಾರ್ಕ್ ಎಡಿಷನ್ ಬಿಡುಗಡೆ

|

Updated on: Apr 18, 2023 | 9:55 PM

ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಯಲ್ಲಿ ಹೊಸ ಎಡಿಷನ್ ಬಿಡುಗಡೆ ಮಾಡಿದೆ.

ಎಲೆಕ್ಟ್ರಿಕ್ ಕಾರು(Electric Cars) ಮಾರಾಟದಲ್ಲಿ ಸದ್ಯ ಟಾಟಾ ನೆಕ್ಸಾನ್ ಇವಿ(Tata Nexon EV) ಅಗ್ರಸ್ಥಾನದಲ್ಲಿದೆ. ನೆಕ್ಸಾನ್ ಇವಿ ಕಾರು ಬಿಡುಗಡೆಯ ನಂತರ ಇದರಲ್ಲಿ ಟಾಟಾ ಕಂಪನಿ ಗ್ರಾಹಕರ ಬೇಡಿಕೆಯೆಂತೆ ಹಲವಾರು ಬದಲಾವಣೆಗಳನ್ನ ಪರಿಚಯಿಸಿದೆ. ಜೊತೆಗೆ ನೆಕ್ಸಾನ್ ಇವಿ ಕಾರಿನಲ್ಲಿ ವಿವಿಧ ಎಡಿಷನ್ ಸಹ ಬಿಡುಗಡೆ ಮಾಡಲಾಗಿದ್ದು, ಇದೀಗ ಡಾರ್ಕ್ ಎಡಿಷನ್ ಪರಿಚಯಿಸಲಾಗಿದೆ. ಹೊಸ ಆವೃತ್ತಿಯು ವಿಶೇಷ ಬಣ್ಣದ ಆಯ್ಕೆಯೊಂದಿಗೆ ಹಲವಾರು ಹೊಸ ಫೀಚರ್ಸ್ ಪಡೆದುಕೊಂಡಿದ್ದು, ಹೊಸ ಕಾರಿನ ಮತ್ತಷ್ಟು ಮಾಹಿತಿ ಇಲ್ಲಿದೆ.

ಎಲೆಕ್ಟ್ರಿಕ್ ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಟಾಟಾ ಮೋಟಾರ್ಸ್ ಕಂಪನಿಯು ಇದೀಗ ನೆಕ್ಸಾನ್ ಇವಿ ಮ್ಯಾಕ್ಸ್ ಮಾದರಿಯಲ್ಲಿ ಹೊಸ ಡಾರ್ಕ್ ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಆವೃತ್ತಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 19.04 ಲಕ್ಷ ಆರಂಭಿಕ ಬೆಲೆ ಹೊಂದಿದೆ.

ನೆಕ್ಸಾನ್ ಇವಿ ಕಾರಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಗ್ರಾಹಕರ ಬೇಡಿಕೆ ಆಧರಿಸಿ ಡಾರ್ಕ್ ಎಡಿಷನ್ ಬಿಡುಗಡೆ ಮಾಡಿದೆ. ಹೊಸ ಆವೃತ್ತಿಯಲ್ಲಿ ಎಕ್ಸ್ ಜೆಡ್ ಪ್ಲಸ್ ಲಕ್ಸ್ ಮತ್ತು ಫಾಸ್ಟ್ ಚಾರ್ಜರ್ ಪ್ರೇರಣೆ ಹೊಂದಿರುವ ಎಕ್ಸ್ ಜೆಡ್ ಪ್ಲಸ್ ಲಕ್ಸ್ ವೆರಿಯೆಂಟ್ ಗಳು ಖರೀದಿಗೆ ಲಭ್ಯವಿದೆ. ಇದು ಸ್ಟ್ಯಾಂಡರ್ಡ್ ನೆಕ್ಸಾನ್ ಇವಿ ಮಾದರಿಗಿಂತಲೂ ವಿಭಿನ್ನ ವೈಶಿಷ್ಟ್ಯತೆಗಳನ್ನ ಹೊಂದಿದ್ದು, ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್ ನೀಡಲಾಗಿದೆ.

ಇದನ್ನೂ ಓದಿ: ರೂ.10 ಲಕ್ಷಕ್ಕೆ ಖರೀದಿಗೆ ಲಭ್ಯವಿರುವ ಬೆಸ್ಟ್ ಕಂಪ್ಯಾಕ್ಟ್ ಎಸ್ ಯುವಿ ಕಾರುಗಳಿವು!

ಹೊಸ ಆವೃತ್ತಿಯು ಪ್ರತಿ ಚಾರ್ಜ್ ಗೆ 453 ಕಿ.ಮೀ ಮೈಲೇಜ್ ನೀಡುವ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಿದ್ದು, ಇದರಲ್ಲಿ ಇಂಟಿರಿಯರ್ ಸೌಲಭ್ಯಗಳು ಆಕರ್ಷಕವಾಗಿವೆ. ಹೊಸ ಕಾರಿನ ಒಳಭಾಗದಲ್ಲಿರುವ ಹೊಸ 10.25 ಇಂಚಿನ ಇನ್ಪೋಟೈನ್ ಮೆಂಟ್ ಸಿಸ್ಟಂ ಪ್ರಮುಖ ಆಕರ್ಷಣೆಯಾಗಿದ್ದು, ಬ್ಲೂ ಹೈಲೆಟ್ಸ್ ಗಳು ಹೊಸ ಕಾರಿಗೆ ಮತ್ತಷ್ಟು ಖದರ್ ನೀಡಿವೆ.

ಇನ್ನು ದೇಶಾದ್ಯಂತ ಹೆಚ್ಚುತ್ತಿರುವ ಇಂಧನಗಳ ದರ ಏರಿಕೆ ಪರಿಣಾಮ ಹೊಸ ಕಾರು ಖರೀದಿದಾರರು ಇವಿ ವಾಹನಗಳತ್ತ ಆಕರ್ಷಿತರಾಗುತ್ತಿದ್ದು, ವಿವಿಧ ಇವಿ ಕಾರುಗಳೊಂದಿಗೆ ಟಾಟಾ ಕಂಪನಿಯು ಸದ್ಯ ಅಗ್ರಸ್ಥಾನ ಕಾಯ್ದುಕೊಂಡಿದೆ. ಕಳೆದ ಕೆಲವು ತಿಂಗಳ ಹಿಂದಷ್ಟೇ ಪ್ರತಿ ತಿಂಗಳು 400 ರಿಂದ 500 ಯುನಿಟ್ ಇವಿ ಕಾರುಗಳನ್ನ ಮಾತ್ರ ಮಾರಾಟ ಮಾಡುತ್ತಿದ್ದ ಟಾಟಾ ಕಂಪನಿಯು ಇದೀಗ ಎಲ್ಲಾ ಹಳೆಯ ದಾಖಲೆಗಳು ಅಳಿಸಿ ಹೊಸ ಗುರಿ ಸಾಧನೆ ಮಾಡಿದೆ.

ಇದನ್ನೂ ಓದಿ: ಹೊಸ ಸಿ3 ಏರ್ ಕ್ರಾಸ್ ಕಾರು ಬಿಡುಗಡೆಗೆ ಸಿದ್ದವಾದ ಸಿಟ್ರನ್ ಇಂಡಿಯಾ

ಹೊಸ ಕಾರು ಮಾದರಿಗಳೊಂದಿಗೆ ಪ್ರತಿಸ್ಪರ್ಧಿ ಕಂಪನಿಯಾದ ಹ್ಯುಂಡೈಗೆ ಭರ್ಜರಿ ಪೈಪೋಟಿ ನೀಡುತ್ತಿರುವ ಟಾಟಾ ಮೋಟಾರ್ಸ್ ಕಂಪನಿ ಇವಿ ಕಾರು ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಕಳೆದ ತಿಂಗಳ ಮಾರ್ಚ್ ಅವಧಿಯಲ್ಲಿನ ಕಾರು ಮಾರಾಟ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿರುವ ಟಾಟಾ ಮೋಟಾರ್ಸ್ ಕಂಪನಿ ಒಟ್ಟು 44,047 ಕಾರುಗಳನ್ನ ಮಾರಾಟ ಮಾಡಿದೆ. ಇದರಲ್ಲಿ ಕಂಪನಿಯು ಈ ಹಿಂದಿಗಿಂತಲೂ ಹೆಚ್ಚಿನ ಮಟ್ಟದ ಎಲೆಕ್ಟ್ರಿಕ್ ಕಾರುಗಳನ್ನ ಸಹ ಮಾರಾಟ ಮಾಡಿದ್ದು, ಕಳೆದ ತಿಂಗಳು ಒಟ್ಟು 6,509 ಎಲೆಕ್ಟ್ರಿಕ್ ಕಾರುಗಳನ್ನ ಮಾರಾಟಗೊಳಿಸಿದೆ.

Published On - 9:55 pm, Tue, 18 April 23