ರೂ.10 ಲಕ್ಷಕ್ಕೆ ಖರೀದಿಗೆ ಲಭ್ಯವಿರುವ ಬೆಸ್ಟ್ ಕಂಪ್ಯಾಕ್ಟ್ ಎಸ್ ಯುವಿ ಕಾರುಗಳಿವು!

ಹೊಸ ಕಾರುಗಳ ಮಾರಾಟದಲ್ಲಿ ಸದ್ಯ ಕಂಪ್ಯಾಕ್ಟ್ ಎಸ್ ಯುವಿ ಮಾದರಿಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಈ ವಿಭಾಗದಲ್ಲಿ ಹಲವು ಹೊಸ ಕಾರುಗಳು ಖರೀದಿಗೆ ಲಭ್ಯವಿವೆ.

Follow us
|

Updated on: Apr 01, 2023 | 9:18 PM

ಕಾರು ಮಾರಾಟದಲ್ಲಿ ಸದ್ಯ ಕಂಪ್ಯಾಕ್ಟ್ ಎಸ್ ಯುವಿ(Compact SUV) ಮಾದರಿಗಳು ಹೆಚ್ಚಿನ ಬೇಡಿಕೆಯಲ್ಲಿದ್ದು, ಈ ವಿಭಾಗದಲ್ಲಿ ಕಳೆದ ಕೆಲ ವರ್ಷಗಳಲ್ಲಿ ಹಲವಾರು ಹೊಸ ಕಾರು ಮಾದರಿಗಳು ಲಗ್ಗೆಯಿಟ್ಟಿವೆ. ಕಂಪ್ಯಾಕ್ಟ್ ಎಸ್ ಯುವಿ ಮಾದರಿಗಳು ಅತ್ಯುತ್ತಮ ಗ್ರೌಂಡ್ ಕ್ಲಿಯೆರೆನ್ಸ್ ನೊಂದಿಗೆ ಹಲವಾರು ಪ್ರೀಮಿಯಂ ಫೀಚರ್ಸ್ ಹೊಂದಿದ್ದು, ಇವುಗಳನ್ನ ರೂ. 8 ಲಕ್ಷದಿಂದ ರೂ. 10 ಲಕ್ಷ ಬಜೆಟ್ ಬೆಲೆಯಲ್ಲೂ ಖರೀದಿಸಬಹುದಾಗಿದೆ.

ಟಾಟಾ ನೆಕ್ಸಾನ್ ಕಂಪ್ಯಾಕ್ಟ್ ಎಸ್ ಯುವಿ ವಿಭಾಗದಲ್ಲಿ ಸದ್ಯ ಟಾಟಾ ನೆಕ್ಸಾನ್ ಮಾದರಿಯು ಅಗ್ರಸ್ಥಾನದಲ್ಲಿದ್ದು, ಇದು ವಿವಿಧ ವೆರಿಯೆಂಟ್ ಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದೆ. ನೆಕ್ಸಾನ್ ಕಾರು ಮಾದರಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ರೂ. 7.80 ಲಕ್ಷ ಆರಂಭಿಕ ಬೆಲೆ ಹೊಂದಿದೆ. ಇದರಲ್ಲಿ ಹೆಚ್ಚಿನ ಫೀಚರ್ಸ್ ಹೊಂದಿರುವ ಟಾಪ್ ಎಂಡ್ ವೆರಿಯೆಂಟ್ ತುಸು ದುಬಾರಿ ಎನ್ನಿಸಲಿದ್ದು, ಇದು ಪ್ರಯಾಣಿಕರ ಸುರಕ್ಷತೆಯಲ್ಲಿ ಗರಿಷ್ಠ ರೇಟಿಂಗ್ಸ್ ಹೊಂದಿದೆ.

ಮಾರುತಿ ಸುಜುಕಿ ಹೊಸ ಬ್ರೆಝಾ ಟಾಟಾ ನೆಕ್ಸಾನ್ ನಂತರ ಅತ್ಯುತ್ತಮ ಕಂಪ್ಯಾಕ್ಟ್ ಎಸ್ ಯುವಿ ಕಾರುಗಳ ವಿಭಾಗದಲ್ಲಿ ಗಮನಸೆಳೆಯುವ ಸೆಳೆಯುವ ಮಾದರಿಯೆಂದರೆ ಮಾರುತಿ ಸುಜುಕಿ ಹೊಸ ಬ್ರೆಝಾ. ಇದು ಇದೀಗ ಸಾಕಷ್ಟು ಹೊಸ ಫೀಚರ್ಸ್ ಮೂಲಕ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದ್ದು, ರೂ. 8.18 ಲಕ್ಷ ಆರಂಭಿಕ ಬೆಲೆಯೊಂದಿಗೆ ಪೆಟ್ರೋಲ್ ಮತ್ತು ಸಿಎನ್ ಜಿ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಹೊಸ ಬ್ರೆಝಾದಲ್ಲಿ ಈ ಬಾರಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಹೆಚ್ಚಿನ ಮೈಲೇಜ್ ಬಯಸುವ ಗ್ರಾಹಕರಿಗೆ ಅತ್ಯುತ್ತಮ ಆಯ್ಕೆ ಎನ್ನಬಹುದು.

ಇದನ್ನೂ ಓದಿ: ದಾಖಲೆ ನಿರ್ಮಿಸಲು ಸಜ್ಜಾದ ಮಾರುತಿ ಸುಜುಕಿ ಹೊಸ ಜಿಮ್ನಿ ಮತ್ತು ಫ್ರಾಂಕ್ಸ್!

ರೆನಾಲ್ಟ್ ಕೈಗರ್ ಮತ್ತು ನಿಸ್ಸಾನ್ ಮ್ಯಾಗ್ನೈಟ್ ಬಜೆಟ್ ಬೆಲೆಯ ಕಂಪ್ಯಾಕ್ಟ್ ಎಸ್ ಯುವಿ ಕಾರುಗಳ ವಿಭಾಗದಲ್ಲಿ ರೆನಾಲ್ಟ್ ಕೈಗರ್ ಮತ್ತು ನಿಸ್ಸಾನ್ ಮ್ಯಾಗ್ನೈಟ್ ಕಾರುಗಳು ಕೂಡಾ ಪ್ರಮುಖವಾಗಿವೆ. ಈ ಕಾರುಗಳು ಒಂದೇ ಪ್ಲ್ಯಾಟ್ ಫಾರ್ಮ್ ಅಡಿ ನಿರ್ಮಾಣಗೊಂಡಿದ್ದು, ಎಂಜಿನ್ ಆಯ್ಕೆ ಕೂಡಾ ಒಂದೇ ಆಗಿದೆ. ಆದರೆ ವಿಭಿನ್ನವಾದ ವಿನ್ಯಾಸದೊಂದಿಗೆ ಎರಡು ಕಾರು ಮಾದರಿಗಳು ಗ್ರಾಹಕರನ್ನ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಹೊಸ ನಿಸ್ಸಾನ್ ಮ್ಯಾಗ್ನೈಟ್ ಕಾರು ಮಾದರಿಯು ಎಕ್ಸ್ ಶೋರೂಂ ಪ್ರಕಾರ ರೂ. 8.19 ಲಕ್ಷ ಆರಂಭಿಕ ಬೆಲೆ ಹೊಂದಿದ್ದರೆ ರೆನಾಲ್ಟ್ ಕೈಗರ್ ಕಾರು ಮಾದರಿಯು ರೂ. 8.25 ಲಕ್ಷ ಆರಂಭಿಕ ಬೆಲೆ ಹೊಂದಿದೆ. ಹೊಸ ಕಾರುಗಳಲ್ಲಿ ಎರಡು ಮಾದರಿಯ ಪೆಟ್ರೋಲ್ ಎಂಜಿನ್ ಆಯ್ಕೆಗಳು ಲಭ್ಯವಿದ್ದು, ಇವುಗಳು ಸುರಕ್ಷತೆಯಲ್ಲೂ ಗಮನಸೆಳೆದಿವೆ.

ಮಹೀಂದ್ರಾ ಎಕ್ಸ್ ಯುವಿ300 ಅತ್ಯುತ್ತಮ ಕಂಪ್ಯಾಕ್ಟ್ ಎಸ್ ಯುವಿ ಕಾರುಗಳ ಪಟ್ಟಿಯಲ್ಲಿ ಮಹೀಂದ್ರಾ ಎಕ್ಸ್ ಯುವಿ300 ಕೂಡಾ ಪ್ರಮುಖವಾಗಿದೆ. ಇದು ಸುರಕ್ಷಾ ವಿಚಾರದಲ್ಲಿ ಪ್ರತಿಸ್ಪರ್ಧಿ ಮಾದರಿಗಿಂತಲೂ ಹೆಚ್ಚಿನ ರೇಟಿಂಗ್ಸ್ ಹೊಂದಿದ್ದು, ಇದು ಎಕ್ಸ್ ಶೋರೂಂ ರೂ. 8.41 ಲಕ್ಷ ಬೆಲೆ ಹೊಂದಿದೆ. ಇದು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

ಇದನ್ನೂ ಓದಿ: ಹೊಸ ಸಿ3 ಏರ್ ಕ್ರಾಸ್ ಕಾರು ಬಿಡುಗಡೆಗೆ ಸಿದ್ದವಾದ ಸಿಟ್ರನ್ ಇಂಡಿಯಾ

ಹ್ಯುಂಡೈ ವೆನ್ಯೂ ಮತ್ತು ಕಿಯಾ ಸೊನೆಟ್ ಅತ್ಯುತ್ತಮ ಕಂಪ್ಯಾಕ್ಟ್ ಎಸ್ ಯುವಿ ಕಾರು ವಿಭಾಗದಲ್ಲಿ ಹ್ಯುಂಡೈ ವೆನ್ಯೂ ಮತ್ತು ಕಿಯಾ ಸೊನೆಟ್ ಮಾದರಿಗಳು ಕೂಡಾ ಉತ್ತಮವಾಗಿವೆ. ಇವು ಎಕ್ಸ್ ಶೋರೂಂ ಪ್ರಕಾರ ರೂ. 8. 70 ಲಕ್ಷದಿಂದ ರೂ. 8.90 ಲಕ್ಷ ಬೆಲೆ ಹೊಂದಿದ್ದು, ಈ ಎರಡೂ ಕಾರಗಳಲ್ಲೂ ಒಂದೇ ಮಾದರಿಯ ಎಂಜಿನ್ ಆಯ್ಕೆ ನೀಡಲಾಗಿದೆ. ವೆನ್ಯೂ ಮತ್ತು ಸೊನೆಟ್ ಕಾರುಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳು ಲಭ್ಯವಿದ್ದು, ಇವುಗಳಲ್ಲಿ ಟರ್ಬೊ ಆವೃತ್ತಿಗಳು ಹೆಚ್ಚಿನ ಬೇಡಿಕೆ ಹೊಂದಿವೆ.