Top Selling Car: ಮಾರಾಟದಲ್ಲಿ ದಾಖಲೆ ನಿರ್ಮಿಸಿದ ವ್ಯಾಗನ್ಆರ್: ಇದೀಗ ಮಾರುತಿಯ ನಂ. 1 ಕಾರು

ಮಾರುತಿ ಸುಜುಕಿಯ ವ್ಯಾಗನ್ಆರ್ ದಾಖಲೆಯ 24,078 ಯುನಿಟ್‌ಗಳ ಮಾರಾಟದೊಂದಿಗೆ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದು ವರ್ಷದಿಂದ ವರ್ಷಕ್ಕೆ ಶೇ. 36 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಬಜೆಟ್ ಸ್ನೇಹಿ, ಅತ್ಯುತ್ತಮ ಮೈಲೇಜ್ ಮತ್ತು ಸಿಎನ್‌ಜಿ ಆಯ್ಕೆಯಿಂದಾಗಿ, ಕಳೆದ ಜನವರಿಯಲ್ಲಿ ಇದು ಗ್ರಾಹಕರ ಮೊದಲ ಆಯ್ಕೆಯಾಗಿತ್ತು.

Top Selling Car: ಮಾರಾಟದಲ್ಲಿ ದಾಖಲೆ ನಿರ್ಮಿಸಿದ ವ್ಯಾಗನ್ಆರ್: ಇದೀಗ ಮಾರುತಿಯ ನಂ. 1 ಕಾರು
Wagonr
Edited By:

Updated on: Feb 10, 2025 | 1:49 PM

Maruti Suzuki January 2025 Car Sales Report: ನೀವು ಮಾರುತಿ ಸುಜುಕಿ ಕಂಪನಿಯ ಕಾರುಗಳ ಅಭಿಮಾನಿಯಾಗಿದ್ದರೆ ಅಥವಾ ಹೊಸ ಕಾರು ಖರೀದಿಸಲು ಯೋಜಿಸುತ್ತಿದ್ದರೆ, ಈ ವರದಿ ನಿಮಗಾಗಿ. ಮಾರುತಿ ಸುಜುಕಿ ಜನವರಿ 2025 ರಲ್ಲಿ ಒಟ್ಟು 1,73,599 ಕಾರುಗಳನ್ನು ಮಾರಾಟ ಮಾಡಿದೆ. ಇದು ಕಳೆದ ವರ್ಷ ಜನವರಿ 2024 ಕ್ಕಿಂತ ಶೇಕಡಾ 4 ರಷ್ಟು ಹೆಚ್ಚಾಗಿದೆ. ಅನೇಕ ಜನಪ್ರಿಯ ಕಾರುಗಳ ಮಾರಾಟವು ಭಾರಿ ಜಿಗಿತವನ್ನು ಕಂಡಿದೆ. ಜನವರಿ 2025 ರ ಮಾರಾಟ ವರದಿ ಮತ್ತು ಗ್ರಾಹಕರು ಯಾವ ಕಾರುಗಳನ್ನು ಹೆಚ್ಚು ಇಷ್ಟಪಟ್ಟಿದ್ದಾರೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಜನವರಿ 2025 ರ ಟಾಪ್ 5 ಬೆಸ್ಟ್ ಸೆಲ್ಲರ್ ಮಾರುತಿ ಕಾರುಗಳು:

ಮಾರುತಿ ಸುಜುಕಿಯ ವ್ಯಾಗನ್ಆರ್ ದಾಖಲೆಯ 24,078 ಯುನಿಟ್‌ಗಳ ಮಾರಾಟದೊಂದಿಗೆ ಹೆಚ್ಚು ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದು ವರ್ಷದಿಂದ ವರ್ಷಕ್ಕೆ ಶೇ. 36 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಬಜೆಟ್ ಸ್ನೇಹಿ, ಅತ್ಯುತ್ತಮ ಮೈಲೇಜ್ ಮತ್ತು ಸಿಎನ್‌ಜಿ ಆಯ್ಕೆಯಿಂದಾಗಿ, ಕಳೆದ ಜನವರಿಯಲ್ಲಿ ಇದು ಗ್ರಾಹಕರ ಮೊದಲ ಆಯ್ಕೆಯಾಗಿತ್ತು. ಬಲೆನೊ ಎರಡನೇ ಸ್ಥಾನದಲ್ಲಿದೆ, ಇದನ್ನು 19,965 ಗ್ರಾಹಕರು ಖರೀದಿಸಿದ್ದಾರೆ. ಪ್ರೀಮಿಯಂ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಬಲೆನೊ ನಂಬರ್ 1 ಸ್ಥಾನದಲ್ಲಿದೆ.

MG Astor 2025: ಭಾರತದಲ್ಲಿ ಸನ್‌ರೂಫ್ ಇರುವ ಅತ್ಯಂತ ಅಗ್ಗದ SUV ಬಿಡುಗಡೆ, ಬೆಲೆ ಎಷ್ಟು ನೋಡಿ

ಜನವರಿಯಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ 17,081 ಯುನಿಟ್‌ಗಳನ್ನು ಮಾರಾಟ ಮಾಡಿದೆ ಮತ್ತು ಇದು ವರ್ಷದಿಂದ ವರ್ಷಕ್ಕೆ ಶೇ. 11 ರಷ್ಟು ಬೆಳವಣಿಗೆಯಾಗಿದೆ. ಸ್ಪೋರ್ಟಿ ವಿನ್ಯಾಸ ಮತ್ತು ಹೆಚ್ಚಿನ ಕಾರ್ಯಕ್ಷಮತೆಯನ್ನು ಹೊಂದಿರುವ ಈ ಹ್ಯಾಚ್‌ಬ್ಯಾಕ್ ಅನ್ನು ಜನರು ಇಷ್ಟಪಡುತ್ತಿದ್ದಾರೆ. ಮಾರುತಿಯ ನಾಲ್ಕನೇ ಅತ್ಯುತ್ತಮ ಮಾರಾಟವಾದ ಕಾರು ಗ್ರ್ಯಾಂಡ್ ವಿಟಾರಾ ಆಗಿದ್ದು, ಕಳೆದ ತಿಂಗಳು ಇದನ್ನು 15,748 ಗ್ರಾಹಕರು ಖರೀದಿಸಿದ್ದಾರೆ ಮತ್ತು ವರ್ಷದಿಂದ ವರ್ಷಕ್ಕೆ ಶೇ 17 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. 5ನೇ ಸ್ಥಾನದಲ್ಲಿ ಡಿಜೈರ್ ಸೆಡಾನ್ ಇದ್ದು, ಇದನ್ನು 15,383 ಗ್ರಾಹಕರು ಖರೀದಿಸಿದ್ದಾರೆ.

ಈ ಮಾರುತಿ ಕಾರುಗಳ ಮಾರಾಟ ಕಡಿಮೆಯಾಗಿದೆ:

ಜನವರಿ 2025 ರಲ್ಲಿ, ಸೆಲೆರಿಯೊ ಮಾರಾಟವು 56% ರಷ್ಟು ಕುಸಿದು ಕೇವಲ 1,954 ಯುನಿಟ್‌ಗಳು ಮಾರಾಟವಾದವು. ಅದೇ ಸಮಯದಲ್ಲಿ, ಎಸ್-ಪ್ರೆಸೊ ಮಾರಾಟವು ಶೇಕಡಾ 16 ರಷ್ಟು ಕುಸಿದು ಕೇವಲ 2,895 ಯೂನಿಟ್‌ಗಳಿಗೆ ತಲುಪಿದೆ. ಆಲ್ಟೊ ಕೆ10 ಅನ್ನು 12,395 ಗ್ರಾಹಕರು ಖರೀದಿಸಿದ್ದು, ಇದು ವರ್ಷದಿಂದ ವರ್ಷಕ್ಕೆ ಶೇ. 8 ರಷ್ಟು ಕುಸಿತವಾಗಿದೆ. ಕಳೆದ ತಿಂಗಳು ಬ್ರೆಝಾ SUV ಮಾರಾಟವು 4% ರಷ್ಟು ಕುಸಿದಿದ್ದು, 14,747 ಗ್ರಾಹಕರು ಅದನ್ನು ಖರೀದಿಸಿದ್ದಾರೆ. ಎರ್ಟಿಗಾ ಎಂಪಿವಿ ಮಾರಾಟವು ಶೇ 3 ರಷ್ಟು ಕುಸಿದು 14,248 ಕ್ಕೆ ತಲುಪಿದೆ. XL6 ಮಾರಾಟವು ಶೇಕಡಾ ಒಂದು ರಷ್ಟು ಕುಸಿದು 4,403 ಯೂನಿಟ್‌ಗಳಿಗೆ ತಲುಪಿದೆ. ಕಳೆದ ತಿಂಗಳು 11,250 ಯುನಿಟ್ ಈಕೊ ವ್ಯಾನ್ ಮಾರಾಟವಾಗಿದ್ದು, ಇದು ವರ್ಷದಿಂದ ವರ್ಷಕ್ಕೆ ಶೇ. 6 ರಷ್ಟು ಕುಸಿತವಾಗಿದೆ. ಕಳೆದ ಜನವರಿಯಲ್ಲಿ ಕೇವಲ 163 ಯುನಿಟ್‌ಗಳಷ್ಟು ಜಿಮ್ನಿ ಮಾರಾಟವಾಗಿತ್ತು.

ಅಟೋಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ