Toyota: ಟೊಯೊಟಾ ಬಹುನೀರಿಕ್ಷಿತ ಟೈಸರ್ ಸಬ್ ಕಂಪ್ಯಾಕ್ಟ್ ಎಸ್​ಯುವಿ ಟೀಸರ್ ಪ್ರಕಟ

|

Updated on: Apr 02, 2024 | 3:10 PM

ಟೊಯೊಟಾ ಕಂಪನಿ ಭಾರತದಲ್ಲಿ ತನ್ನ ಹೊಸ ಟೈಸರ್ ಸಬ್ ಕಂಪ್ಯಾಕ್ಟ್ ಎಸ್​ಯುವಿ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಟೀಸರ್ ಪ್ರಕಟಿಸಿದೆ.

Toyota: ಟೊಯೊಟಾ ಬಹುನೀರಿಕ್ಷಿತ ಟೈಸರ್ ಸಬ್ ಕಂಪ್ಯಾಕ್ಟ್ ಎಸ್​ಯುವಿ ಟೀಸರ್ ಪ್ರಕಟ
ಟೊಯೊಟಾ ಟೈಸರ್
Follow us on

ಮಧ್ಯಮ ಕ್ರಮಾಂಕದ ಐಷಾರಾಮಿ ಕಾರುಗಳ ಮೂಲಕ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಟೊಯೊಟಾ ಇಂಡಿಯಾ (Toyota India) ಕಂಪನಿ ಇದೀಗ ಹೊಸ ಟೈಸರ್ ಸಬ್ ಕಂಪ್ಯಾಕ್ಟ್ ಎಸ್​ಯುವಿ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಮಾರುತಿ ಸುಜುಕಿ ಕಂಪನಿ ಜೊತೆಗಿನ ಸಹಭಾಗಿತ್ವ ಯೋಜನೆ ಅಡಿ ಅಭಿವೃದ್ದಿಗೊಳ್ಳುತ್ತಿದೆ. ಹೊಸ ಟೈಸರ್ ಕಾರು ಮಾರುತಿ ಸುಜುಕಿಯ ಫ್ರಾಂಕ್ಸ್ ರೀಬ್ಯಾಡ್ಜ್ ಮಾದರಿಯಾಗಿದ್ದು, ಇದು ಹಲವಾರು ವಿಶೇಷತೆಗಳೊಂದಿಗೆ ಬಿಡುಗಡೆಯಾಗಲಿದೆ.

ಮಾಹಿತಿಗಳ ಪ್ರಕಾರ, ಹೊಸ ಟೊಯೊಟಾ ಟೈಸರ್ ಕಾರು ಇದೇ ತಿಂಗಳು 11ರಂದು ಅಧಿಕೃತವಾಗಿ ಬಿಡುಗಡೆಯಾಗಲಿದ್ದು, ಇದು ಫ್ರಾಂಕ್ಸ್ ಕಾರಿಗಿಂತಲೂ ಉತ್ತಮ ವಿನ್ಯಾಸದೊಂದಿಗೆ ಗಮನಸೆಳೆಯಲಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಟೊಯೊಟಾ ಮತ್ತು ಮಾರುತಿ ಸುಜುಕಿ ಕಂಪನಿಗಳು ತಮ್ಮ ಪ್ರಮುಖ ಕಾರುಗಳನ್ನು ಆಧರಿಸಿ ಗ್ಲಾಂಝಾ, ಅರ್ಬನ್ ಕ್ರೂಸರ್, ಅರ್ಬನ್ ಕ್ರೂಸರ್ ಹೈರೈಡರ್ ಮತ್ತು ರೂಮಿಯಾನ್ ರೀಬ್ಯಾಡ್ಜ್ ಕಾರುಗಳನ್ನು ಮಾರಾಟ ಮಾಡುತ್ತಿದ್ದು, ಇದೀಗ ಕಂಪ್ಯಾಕ್ಟ್ ಎಸ್ ಯುವಿ ವಿಭಾಗಕ್ಕಾಗಿ ಹೊಸ ಟೈಸರ್ ನಿರ್ಮಾಣಗೊಳಿಸಿವೆ.

ಇದನ್ನೂ ಓದಿ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಇರಲಿ ಈ ಬಗ್ಗೆ ಎಚ್ಚರ!

ಹೊಸ ಟೈಸರ್ ಕಾರು ತಾಂತ್ರಿಕವಾಗಿ ಫ್ರಾಂಕ್ಸ್ ಕಾರು ಮಾದರಿಯನ್ನೇ ಆಧರಿಸಿದ್ದು, ವಿನ್ಯಾಸದಲ್ಲಿ ಮಾತ್ರ ಬದಲಾವಣೆಗಳನ್ನು ತರಲಾಗಿದೆ. ಹೀಗಾಗಿ ಹೊಸ ಕಾರಿನಲ್ಲಿ ಫ್ರಾಂಕ್ಸ್ ಕಾರಿನಲ್ಲಿರುವಂತೆಯೇ 1.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.2 ಲೀಟರ್ ಎನ್ಎ ಪೆಟ್ರೋಲ್ ಎಂಜಿನ್ ಆಯ್ಕೆ ಲಭ್ಯವಿರಲಿದೆ. ಜೊತೆಗೆ ಇದು ಫ್ರಾಂಕ್ಸ್ ನಲ್ಲಿರುವಂತೆಯೇ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಗಳನ್ನು ಪಡೆದುಕೊಳ್ಳಲಿದ್ದು, ಕೆಲವು ಹೆಚ್ಚುವರಿ ಪ್ರೀಮಿಯಂ ಫೀಚರ್ಸ್ ಹೊಂದಿರಲಿದೆ.

ಈ ಮೂಲಕ ಟೈಸರ್ ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಹ್ಯುಂಡೈ ವೆನ್ಯೂ, ಟಾಟಾ ನೆಕ್ಸಾನ್, ನಿಸ್ಸಾನ್ ಮ್ಯಾಗ್ನೈಟ್ ಕಾರುಗಳಿಗೆ ಉತ್ತಮ ಪ್ರತಿಸ್ಪರ್ಧಿಯಾಗಿ ಮಾರಾಟಗೊಳ್ಳುತ್ತಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 8 ಲಕ್ಷದಿಂದ ರೂ. 13.50 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳಬಹುದಾಗಿದೆ. ಜೊತೆಗೆ ಹೊಸ ಕಾರಿನಲ್ಲಿ ಹಲವಾರು ವಿಶೇಷತೆಗಳನ್ನು ಜೋಡಣೆ ಮಾಡುತ್ತಿರುವ ಟೊಯೊಟಾ ಕಂಪನಿಯು ಫ್ರಾಂಕ್ಸ್ ಕಾರಿಗಿಂತಲೂ ಹೆಚ್ಚಿನ ವಾರಂಟಿ ಘೋಷಣೆ ಮಾಡುತ್ತಿದ್ದು, ಹೊಸ ಕಾರಿಗಾಗಿ 3 ವರ್ಷ ಅಥವಾ 1 ಲಕ್ಷ ಕಿ.ಮೀ ತನಕ ಆಫರ್ ಸಿಗಲಿದೆ.

Published On - 2:49 pm, Tue, 2 April 24