TVS Ronin Special Edition: ವಿಶೇಷ ಫೀಚರ್ಸ್ ಹೊಂದಿರುವ ಟಿವಿಎಸ್ ರೋನಿನ್ ಸ್ಪೆಷಲ್ ಎಡಿಷನ್ ಬಿಡುಗಡೆ

|

Updated on: Oct 29, 2023 | 9:35 PM

ಟಿವಿಎಸ್ ಮೋಟಾರ್ ಕಂಪನಿಯು ವಿಶೇಷ ಫೀಚರ್ಸ್ ಹೊಂದಿರುವ ರೋನಿನ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದೆ.

TVS Ronin Special Edition: ವಿಶೇಷ ಫೀಚರ್ಸ್ ಹೊಂದಿರುವ ಟಿವಿಎಸ್ ರೋನಿನ್ ಸ್ಪೆಷಲ್ ಎಡಿಷನ್ ಬಿಡುಗಡೆ
ಟಿವಿಎಸ್ ರೋನಿನ್ ಸ್ಪೆಷಲ್ ಎಡಿಷನ್ ಬಿಡುಗಡೆ
Follow us on

ದೇಶದ ಜನಪ್ರಿಯ ದ್ವಿಚಕ್ರ ವಾಹನ ಉತ್ಪಾದನಾ ಕಂಪನಿಯಾಗಿರುವ ಟಿವಿಎಸ್ ಮೋಟಾರ್ (TVS Motor) ಹಬ್ಬದ ಋತುವಿನಲ್ಲಿ ತನ್ನ ನೆಚ್ಚಿನ ಗ್ರಾಹಕರಿಗಾಗಿ ರೋನಿನ್ ಸ್ಪೆಷಲ್ ಎಡಿಷನ್ (Ronin Special Edition) ಬಿಡುಗಡೆ ಮಾಡಿದ್ದು, ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 1,72,700 ಬೆಲೆ ಹೊಂದಿದೆ.

ಮಾರ್ಡನ್ ರೆಟ್ರೊ ವಿನ್ಯಾಸದೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ರೋನಿನ್ ಬೈಕ್ ಮಾದರಿಯಲ್ಲಿ ವಿಶೇಷ ಫೀಚರ್ಸ್ ಹೊಂದಿರುವ ಸ್ಪೆಷಲ್ ಎಡಿಷನ್ ಪರಿಚಯಿಸಲಾಗಿದ್ದು, ಇದು ಸ್ಟ್ಯಾಂಡರ್ಡ್ ಮಾದರಿಯಲ್ಲಿರುವ ಫೀಚರ್ಸ್ ಸೇರಿದಂತೆ ಕೆಲವು ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ: ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಭರ್ಜರಿ ಆಫರ್ ಘೋಷಣೆ

ಹೊಸ ರೋನಿನ್ ಸ್ಪೆಷಲ್ ಎಡಿಷನ್ ನಲ್ಲಿ ಟ್ರಿಪಲ್ ಟೋನ್ ಗ್ರಾಫಿಕ್ಸ್ ಸ್ಕೀಮ್ ನೀಡಲಾಗಿದ್ದು, ಇದರಲ್ಲಿ ಗ್ರೇ ಪ್ರೈಮರಿ ಆಗಿದ್ದರೆ ವೈಟ್ ಸೆಕೆಂಡರಿ ಹಾಗೂ ರೆಡ್ ಸ್ಟ್ರಿಪ್ ಥರ್ಡ್ ಟೋನ್ ಆಗಿದೆ. ಹಾಗೆಯೇ ಹೊಸ ಬೈಕಿನಲ್ಲಿ ಟಿವಿಎಸ್ ರೋನಿನ್ ಬ್ರ್ಯಾಂಡಿಂಗ್‌ ಒಳಗೊಂಡ ವ್ಹೀಲ್ ರಿಮ್, ಯುಎಸ್ ಬಿ ಚಾರ್ಜರ್, ಆಕರ್ಷಕವಾಗಿ ವಿನ್ಯಾಸಗೊಂಡಿರುವ ಇಎಫ್ಐ ಕವರ್ ಮತ್ತು ಬೆಜೆಲ್‌ ಬ್ಲ್ಯಾಕ್ ಥೀಮ್ ಹೊಂದಿರುವ ಹೆಡ್‌ಲ್ಯಾಂಪ್ ಹೊಂದಿದೆ.

ರೋನಿನ್ ಮಾದರಿಯನ್ನು ಮತ್ತಷ್ಟು ಪ್ರೀಮಿಯಂ ಮಾದರಿಯಾಗಿ ಗುರುತಿಸಲು ಫುಲ್ ಎಲ್ಇಡಿ ಲೈಟಿಂಗ್ಸ್, ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಎಲ್ ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ರೈನ್ ಮತ್ತು ರೋಡ್ ರೈಡ್ ಮೋಡ್ ಗಳೊಂದಿಗೆ ಸುರಕ್ಷತೆಗಾಗಿ ಮುಂಭಾಗ ಚಕ್ರದಲ್ಲಿ 300 ಎಂಎಂ ಡಿಸ್ಕ್ ಬ್ರೇಕ್, ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಮತ್ತು ಸಿಂಗಲ್ ಚಾನಲ್ ಎಬಿಎಸ್ ಹೊಂದಿದೆ. ಇದರೊಂದಿಗೆ ಹೊಸ ಬೈಕಿನಲ್ಲಿ ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಅಸಿಸ್ಟ್ ಸೇರಿದಂತೆ ಹಲವಾರು ಫೀಚರ್ಸ್ ಗಳಿದ್ದು, ಡಿಜಿಟಲ್ ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ಮೂಲಕ ಬೈಕ್ ಸವಾರರು ಮೇಸೆಜ್ ನೋಟಿಫಿಕೇಶನ್ ಹಾಗೂ ಫೋನ್ ಕಾಲ್ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.

ಇದನ್ನೂ ಓದಿ: ಬಿಡುಗಡೆಗೆ ಸಿದ್ದವಾಗಿದೆ ಭರ್ಜರಿ ಮೈಲೇಜ್ ನೀಡುವ ಸಿಎನ್‌ಜಿ ಬೈಕ್!

ಎಂಜಿನ್ ಮತ್ತು ಪರ್ಫಾಮೆನ್ಸ್

ರೋನಿನ್ ಸ್ಪೆಷಲ್ ಎಡಿಷನ್ ನಲ್ಲಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆಯೇ 225.9 ಸಿಸಿ ಸಿಂಗಲ್ ಸಿಲಿಂಡರ್ ಆಯಿಲ್ ಕೂಲ್ಡ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಇದು ಸ್ಲಿಪ್ಪರ್ ಕ್ಲಚ್ ಮತ್ತು ಗ್ಲೈಡ್ ಥ್ರೂ ಟೆಕ್ನಾಲಜಿಯೊಂದಿಗೆ 5 ಸ್ವೀಡ್ ಗೇರ್ ಬಾಕ್ಸ್ ಮೂಲಕ 20.4 ಹಾರ್ಸ್ ಪವರ್ ಮತ್ತು 19.93 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.