ದೇಶಿಯ ಮಾರುಕಟ್ಟೆಯಲ್ಲಿನ ಎಲೆಕ್ಟ್ರಿಕ್ ಕಾರು (Electirc Cars) ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಟಾಟಾ ಮೋಟಾರ್ಸ್ (Tata Motors) ಕಂಪನಿಯು ತನ್ನ ಬಹುನೀರಿಕ್ಷಿತ ಪಂಚ್ ಇವಿ ಬಿಡುಗಡೆಗಾಗಿ ಸಿದ್ದವಾಗುತ್ತಿದ್ದು, ಹೊಸ ಇವಿ ಕಾರು ಇದೇ ತಿಂಗಳು 21ಕ್ಕೆ ಅಧಿಕೃತವಾಗಿ ಮಾರುಕಟ್ಟೆಗೆ ಲಗ್ಗೆಯಿಡುವುದು ಬಹುತೇಕ ಖಚಿತವಾಗಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ನೆಕ್ಸಾನ್ ಇವಿ, ಟಿಗೋರ್ ಇವಿ, ಟಿಯಾಗೋ ಇವಿ ಮೂಲಕ ಹೊಸ ಸಂಚಲನ ಮೂಡಿಸಿರುವ ಟಾಟಾ ಕಂಪನಿಯು ಇದೀಗ ಪಂಚ್ ಮೈಕ್ರೊ ಎಸ್ ಯುವಿಯಲ್ಲೂ ಇವಿ ಆವೃತ್ತಿ ಬಿಡುಗಡೆ ಮಾಡುತ್ತಿದ್ದು, ಹೊಸ ಇವಿ ಕಾರು ಟಾಟಾ ಕಂಪನಿಯ ಎರಡನೇ ತಲೆಮಾರಿನ ಇವಿ ವಾಹನಗಳ ತಂತ್ರಜ್ಞಾನ ಪ್ರೇರಿತ ಅಲ್ಫಾ ಪ್ಲ್ಯಾಟ್ ಫಾರ್ಮ್ ಮೇಲೆ ಅಭಿವೃದ್ದಿಗೊಳ್ಳುತ್ತಿದೆ.
ಇದನ್ನೂ ಓದಿ: ಕಡಿಮೆ ಬೆಲೆಗೆ ಖರೀದಿಗೆ ಲಭ್ಯವಿರುವ ಅತ್ಯುತ್ತಮ ಟಾಪ್ 5 ಸಿಎನ್ ಜಿ ಕಾರುಗಳಿವು!
ಆಕರ್ಷಕ ಬೆಲೆಯೊಂದಿಗೆ ಮೈಲೇಜ್ ನಲ್ಲಿ ಗಮನಸೆಳೆಯಲಿರುವ ಪಂಚ್ ಇವಿ ಕಾರು ಪೆಟ್ರೋಲ್ ಮಾದರಿಯೆಂತೆಯೇ ಭರ್ಜರಿ ಬೇಡಿಕೆ ಪಡೆದುಕೊಳ್ಳಲಿದ್ದು, ಇದು ಟಿಯಾಗೋ ಇವಿ ಆವೃತ್ತಿಯಲ್ಲಿರುವಂತೆ ವಿವಿಧ ತಂತ್ರಜ್ಞಾನ ಮತ್ತು ಫೀಚರ್ಸ್ ಗಳನ್ನು ಹೊಂದಿರಲಿದೆ. ಹೊಸ ಪಂಚ್ ಇವಿ ಕಾರಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಲಿಕ್ವಿಡ್ ಕೂಲ್ಡ್ 24 ಕೆವಿಹೆಚ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಬಹುದಾಗಿದ್ದು, ಇದು ಪ್ರತಿ ಚಾರ್ಜ್ ಗೆ 280 ರಿಂದ 310 ಕಿಲೋ ಮೀಟರ್ ಮೈಲೇಜ್ ನೀಡಬಹುದಾಗಿದೆ.
ಅಲ್ಫಾ ಪ್ಲ್ಯಾಟ್ ಫಾರ್ಮ್ ನೊಂದಿಗೆ ಹೊಸ ಕಾರಿನಲ್ಲಿ ಅತ್ಯುತ್ತಮ ಬ್ಯಾಟರಿ ಪ್ಯಾಕ್ ಮತ್ತು ಫೀಚರ್ಸ್ ನೀಡಲಾಗುತ್ತಿದ್ದು, ಹೀಗಾಗಿ ಇದು ಪ್ರಸ್ತುತ ಮಾರುಕಟ್ಟೆಯಲ್ಲಿನ ಟಿಯಾಗೋ ಇವಿ ಗಿಂತಲೂ ಹೆಚ್ಚಿನ ಸ್ಥಾನ ಪಡೆದುಕೊಳ್ಳಲಿದೆ. ಹಾಗೆಯೇ ಹೊಸ ಪಂಚ್ ಇವಿ ಕಾರಿನಲ್ಲಿ ಪೆಟ್ರೋಲ್ ಮಾದರಿಯಲ್ಲಿರುವಂತೆ ವೆರಿಯೆಂಟ್ ಆಯ್ಕೆ ನೀಡಬಹುದಾಗಿದ್ದು, ಜಿಪ್ ಟ್ರಾನ್ ಪವರ್ ಟ್ರೈನ್ ನೊಂದಿಗೆ ಪರ್ಫಾಮೆನ್ಸ್ ನಲ್ಲೂ ಗಮನಸೆಳೆಯುತ್ತದೆ.
ಇನ್ನುಳಿದಂತೆ ಹೊಸ ಇವಿ ಕಾರಿನಲ್ಲಿ ಫ್ರಂಟ್ ಬಂಪರ್ ನಲ್ಲಿ ಮೌಂಟ್ ಮಾಡಲಾದ ಚಾರ್ಜಿಂಗ್ ಪಾಯಿಂಟ್ ಸೇರಿದಂತೆ ಆಲ್ ವ್ಹೀಲ್ ಡಿಸ್ಕ್ ಬ್ರೇಕ್, ಆಕರ್ಷಕವಾದ ಅಲಾಯ್ ವ್ಹೀಲ್ ಗಳನ್ನು ನೀಡಲಾಗಿದ್ದು, ಪೆಟ್ರೋಲ್ ಮಾದರಿಗಿಂತ ಎಲೆಕ್ಟ್ರಿಕ್ ಆವೃತ್ತಿಯನ್ನು ತುಸು ಬದಲಾವಣೆಗೊಳಿಸುವ ಉದ್ದೇಶದಿಂದ ಮರುವಿನ್ಯಾಸಗೊಳಿಸಲಾದ ಫ್ರಂಟ್ ಬಂಪರ್, ಗ್ರಿಲ್ ನಲ್ಲಿ ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ. ಹಾಗೆಯೇ ಹೊಸ ಇವಿ ಕಾರಿನ ಟಾಪ್ ಎಂಡ್ ಮಾದರಿಯಲ್ಲಿ ಹೆಚ್ಚುವರಿಯಾಗಿ ಎಲ್ಇಡಿ ಹೆಡ್ ಲೈಟ್ಸ್, 10.25 ಇಂಚಿನ ಟಚ್ ಸ್ಕ್ರೀನ್, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಸೇರಿದಂತೆ ಹಲವಾರು ಪ್ರೀಮಿಯಂ ಫೀಚರ್ಸ್ ನೀಡಲಾಗಿದೆ.
ಇದನ್ನೂ ಓದಿ: ಬಜೆಟ್ ಬೆಲೆಗೆ ಖರೀದಿಸಬಹುದಾದ ಅತ್ಯುತ್ತಮ 7 ಸೀಟರ್ ಕಾರುಗಳಿವು!
ಈ ಮೂಲಕ ಹೊಸ ಪಂಚ್ ಇವಿ ಕಾರು ಮಾದರಿಯು ಸಿಟ್ರನ್ ಇಸಿ3 ಮಾದರಿಗೆ ನೇರವಾಗಿ ಪೈಪೋಟಿ ನೀಡಲಿದ್ದು, ಇದು ಟಿಗೋರ್ ಇವಿ ಮಾದರಿಗಿಂತಲೂ ತುಸು ದುಬಾರಿಯಾಗಿರಬಹುದಾಗಿದೆ ಎನ್ನಲಾಗಿದೆ. ಸಿಟ್ರನ್ ಇಸಿ3 ಕಾರು ಸದ್ಯ ಮಾರುಕಟ್ಟೆಯಲ್ಲಿ ರೂ. 9.99 ಲಕ್ಷದಿಂದ ರೂ. 12.67 ಲಕ್ಷ ಬೆಲೆ ಹೊಂದಿದ್ದರೆ ಟಿಗೋರ್ ಇವಿ ಕಾರು ರೂ. 8.69 ಲಕ್ಷದಿಂದ ರೂ. 12.04 ಲಕ್ಷ ಬೆಲೆ ಹೊಂದಿದೆ. ಹೀಗಾಗಿ ಹೊಸ ಪಂಚ್ ಇವಿ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 9.50 ಲಕ್ಷದಿಂದ ರೂ. 13 ಲಕ್ಷ ಬೆಲೆ ಅಂತರದಲ್ಲಿ ಮಾರಾಟಗೊಳ್ಳುವ ಸಾಧ್ಯತೆಗಳಿದ್ದು, ಹೊಸ ಕಾರು ಮುಂದಿನ ವರ್ಷ ಜನವರಿಯಲ್ಲಿ ಗ್ರಾಹಕರ ಕೈಸೇರಲಿದೆ.
Published On - 6:44 pm, Fri, 8 December 23