AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Xiaomi YU7 SUV: 3 ನಿಮಿಷಗಳಲ್ಲಿ 2 ಲಕ್ಷ ಬುಕಿಂಗ್: ಅಟೋ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ ಈ ಎಲೆಕ್ಟ್ರಿಕ್ ಕಾರು

ಶಿಯೋಮಿ YU7 ನ ಬ್ಯಾಟರಿ ಸಾಮರ್ಥ್ಯ ಮತ್ತು ವ್ಯಾಪ್ತಿಯ ಬಗ್ಗೆ ಹೇಳುವುದಾದರೆ, YU7 ರೂಪಾಂತರವು 96.3 kWh ಬ್ಯಾಟರಿಯನ್ನು ಹೊಂದಿದ್ದು, ಇದು ಒಂದೇ ಚಾರ್ಜ್‌ನಲ್ಲಿ 835 ಕಿ.ಮೀ ವರೆಗೆ ಚಲಿಸುವ ವ್ಯಾಪ್ತಿಯನ್ನು ಹೊಂದಿದೆ. ಅದೇ ಸಮಯದಲ್ಲಿ, YU7 Pro 96.3 kWh ಬ್ಯಾಟರಿಯನ್ನು ಹೊಂದಿದ್ದು, ಇದು ಒಂದೇ ಚಾರ್ಜ್‌ನಲ್ಲಿ 770 ಕಿ.ಮೀ ವರೆಗೆ ಚಲಿಸಬಲ್ಲದು.

Xiaomi YU7 SUV: 3 ನಿಮಿಷಗಳಲ್ಲಿ 2 ಲಕ್ಷ ಬುಕಿಂಗ್: ಅಟೋ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿದ ಈ ಎಲೆಕ್ಟ್ರಿಕ್ ಕಾರು
Xiaomi Yu7 Suv
Vinay Bhat
|

Updated on: Jun 28, 2025 | 2:43 PM

Share

ಬೆಂಗಳೂರು (ಜೂ. 28): ಚೀನಾದ ಪ್ರಸಿದ್ಧ ಎಲೆಕ್ಟ್ರಾನಿಕ್ಸ್ ಕಂಪನಿ ಶಿಯೋಮಿ (Xiaomi) ಈಗ ಆಟೋಮೊಬೈಲ್ ವಲಯದಲ್ಲೂ ಧೂಳೆಬ್ಬಿಸುತ್ತಿದೆ. ತನ್ನ SU7 ಎಲೆಕ್ಟ್ರಿಕ್ ಸೆಡಾನ್ ನಂತರ, ಕಂಪನಿಯು ಈಗ ಮತ್ತೊಂದು ಹೊಸ YU7 ಎಲೆಕ್ಟ್ರಿಕ್ SUV ಅನ್ನು ಬಿಡುಗಡೆ ಮಾಡಿದೆ. ಇದು ಕೆಲವೇ ನಿಮಿಷಗಳಲ್ಲಿ ಸಂಚಲನ ಸೃಷ್ಟಿಸಿದೆ. ಪ್ರಸ್ತುತ, ಈ SUV ಚೀನಾದಲ್ಲಿ ಮಾತ್ರ ಲಭ್ಯವಿದೆ, ಆದರೆ ಅದನ್ನು ಬುಕ್ ಮಾಡಿದ ವೇಗವು ಜಾಗತಿಕ ಮಾರುಕಟ್ಟೆಯ ಗಮನ ಸೆಳೆದಿದೆ. ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಚೀನಾದಲ್ಲಿ ಅತ್ಯಂತ ಜನಪ್ರಿಯ ಟೆಸ್ಲಾ ಮಾಡೆಲ್ Y ಯ ಅತಿದೊಡ್ಡ ಪ್ರತಿಸ್ಪರ್ಧಿಯಾಗಿದೆ. ಕೈಗೆಟುಕುವ ಬೆಲೆಯಲ್ಲಿ ಸ್ಪೋರ್ಟ್ಸ್ ಕಾರುಗಳಂತೆ ಕಾಣು ಇದರಲ್ಲಿ ಕೋಟಿ ಮೌಲ್ಯದ ಐಷಾರಾಮಿ ಫೀಚರ್ಸ್ ಇದೆ.

3 ನಿಮಿಷಗಳಲ್ಲಿ 2 ಲಕ್ಷ ಬುಕಿಂಗ್

ಶಿಯೋಮಿ YU7 ಫೋನ್ ಬುಕಿಂಗ್ ಆರಂಭವಾದ ತಕ್ಷಣ, ಕೇವಲ 3 ನಿಮಿಷಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಯೂನಿಟ್‌ಗಳು ಬುಕ್ ಆಗಿವೆ. ಮತ್ತು ಈ ಸಂಖ್ಯೆ ಒಂದು ಗಂಟೆಯಲ್ಲಿಯೇ 3 ಲಕ್ಷ ತಲುಪಿದೆ. ಈ ಮೂಲಕ ನೀವು ಅದರ ಜನಪ್ರಿಯತೆಯನ್ನು ಊಹಿಸಬಹುದು. ಇದಕ್ಕೆ ಹೋಲಿಸಿದರೆ, ಹಿಂದಿನ ಶಿಯೋಮಿ SU7 27 ನಿಮಿಷಗಳಲ್ಲಿ 50,000 ಬುಕಿಂಗ್‌ಗಳನ್ನು ಮತ್ತು 24 ಗಂಟೆಗಳಲ್ಲಿ 90,000 ಬುಕಿಂಗ್‌ಗಳನ್ನು ಪಡೆದಿತ್ತು. ಇದರಿಂದ YU7 ಮಾರುಕಟ್ಟೆಯಲ್ಲಿ ಅದ್ಭುತ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.

ಇದನ್ನೂ ಓದಿ
Image
ತನ್ನ ಮೊದಲ CNG ಪಿಕ್-ಅಪ್ ಬಿಡುಗಡೆ ಮಾಡಿದ ಮಹೀಂದ್ರಾ
Image
ಕಾರು ಕೆಸರಿನಲ್ಲಿ ಜಾರಲು ಕಾರಣವೇನು?: ಈ 5 ಪ್ರಮುಖ ವಿಷಯಗಳು ತಿಳಿದಿರಲಿ
Image
ವಿಶ್ವದ ಮೊದಲ CNG ಬೈಕ್ ಮೇಲೆ ಬಂಪರ್ ಆಫರ್: ಇದರ ಮೈಲೇಜ್ 102 ಕಿ.ಮೀ
Image
ತಗ್ಗುತ್ತಿದೆ ಪೆಟ್ರೋಲ್‌ ಕಾರುಗಳ ಬೇಡಿಕೆ: CNGಯಲ್ಲಿ ಬರುತ್ತಿದೆ 3 ಹೊಸ SUV

ಬೆಲೆ ಮತ್ತು ರೂಪಾಂತರಗಳು:

ಶಿಯೋಮಿ YU7 ಅನ್ನು ಮೂರು ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ:

  • ಸ್ಟ್ಯಾಂಡರ್ಡ್ ರೂಪಾಂತರದ ಬೆಲೆ CNY 253,500 (ಅಂದಾಜು ₹30.25 ಲಕ್ಷ)
  • ಪ್ರೊ ರೂಪಾಂತರದ ಬೆಲೆ CNY 279,900 (ಅಂದಾಜು ₹33.4 ಲಕ್ಷ)
  • ಟಾಪ್ ರೂಪಾಂತರದ ಬೆಲೆ CNY 329,900 (ಅಂದಾಜು ₹39.37 ಲಕ್ಷ)

Mahindra Pick-up: ತನ್ನ ಮೊದಲ CNG ಪಿಕ್-ಅಪ್ ಬಿಡುಗಡೆ ಮಾಡಿದ ಮಹೀಂದ್ರಾ: ಪೂರ್ಣ ಟ್ಯಾಂಕ್ನಲ್ಲಿ 400 ಕಿ.ಮೀ ಓಡುತ್ತೆ

ವ್ಯಾಪ್ತಿಯಲ್ಲಿ ಅದ್ಭುತ

ಶಿಯೋಮಿ YU7 ನ ಬ್ಯಾಟರಿ ಸಾಮರ್ಥ್ಯ ಮತ್ತು ವ್ಯಾಪ್ತಿಯ ಬಗ್ಗೆ ಹೇಳುವುದಾದರೆ, YU7 ರೂಪಾಂತರವು 96.3 kWh ಬ್ಯಾಟರಿಯನ್ನು ಹೊಂದಿದ್ದು, ಇದು ಒಂದೇ ಚಾರ್ಜ್‌ನಲ್ಲಿ 835 ಕಿ.ಮೀ ವರೆಗೆ ಚಲಿಸುವ ವ್ಯಾಪ್ತಿಯನ್ನು ಹೊಂದಿದೆ. ಅದೇ ಸಮಯದಲ್ಲಿ, YU7 Pro 96.3 kWh ಬ್ಯಾಟರಿಯನ್ನು ಹೊಂದಿದ್ದು, ಇದು ಒಂದೇ ಚಾರ್ಜ್‌ನಲ್ಲಿ 770 ಕಿ.ಮೀ ವರೆಗೆ ಚಲಿಸಬಲ್ಲದು. ಟಾಪ್ ರೂಪಾಂತರ YU7 ಮ್ಯಾಕ್ಸ್ 101.7 kWh ಬ್ಯಾಟರಿಯನ್ನು ಹೊಂದಿದ್ದು, ಇದು ಒಂದೇ ಪೂರ್ಣ ಚಾರ್ಜ್‌ನಲ್ಲಿ 760 ಕಿ.ಮೀ ವರೆಗೆ ಚಲಿಸುತ್ತದೆ.

ಶಕ್ತಿ ಮತ್ತು ಕಾರ್ಯಕ್ಷಮತೆ

YU7 ಒಂದೇ ಮೋಟಾರ್ ಹೊಂದಿದ್ದು, ಇದು 319 ಅಶ್ವಶಕ್ತಿ ಮತ್ತು 528 ನ್ಯೂಟನ್ ಮೀಟರ್ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. YU7 ಪ್ರೊ ಮಾದರಿಯು ಡ್ಯುಯಲ್ ಮೋಟಾರ್ ಅನ್ನು ಹೊಂದಿದೆ. 496 ಅಶ್ವಶಕ್ತಿ ಮತ್ತು 690 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ನಂತರ YU7 ಮ್ಯಾಕ್ಸ್ ಬರುತ್ತದೆ, ಇದು ಆಲ್-ವೀಲ್ ಡ್ರೈವ್ ಮಾದರಿಯಾಗಿದೆ ಮತ್ತು ಅದರ ಡ್ಯುಯಲ್ ಮೋಟಾರ್ ಸೆಟಪ್ 690 ಅಶ್ವಶಕ್ತಿ ಮತ್ತು 866 ನ್ಯೂಟನ್ ಮೀಟರ್ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅಟೋಮೊಬೈಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Vinay Bhat
Vinay Bhat

Tv9 ಕನ್ನಡ ಡಿಜಿಟಲ್‌ನಲ್ಲಿ 2021ರ ಜುಲೈನಿಂದ ಕ್ರೀಡಾ ಹಾಗೂ ತಂತ್ರಜ್ಞಾನ ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಡಿಜಿಟಲ್ ವಿಭಾಗದಲ್ಲಿ 6 ವರ್ಷ ಅನುಭವ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನವ. ಕ್ರೀಡಾ ಸುದ್ದಿ, ಕ್ರೀಡಾ ಲೇಖನ, ಟೆಕ್ನಾಲಜಿ, ಸಿನಿಮಾ ಸುದ್ದಿ ಬರೆಯುವುದು ನನ್ನ ಆಸಕ್ತದಾಯಕ ವಿಷಯಗಳು.

Read More
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ