
ಬೆಂಗಳೂರು (ಜೂ. 28): ಚೀನಾದ ಪ್ರಸಿದ್ಧ ಎಲೆಕ್ಟ್ರಾನಿಕ್ಸ್ ಕಂಪನಿ ಶಿಯೋಮಿ (Xiaomi) ಈಗ ಆಟೋಮೊಬೈಲ್ ವಲಯದಲ್ಲೂ ಧೂಳೆಬ್ಬಿಸುತ್ತಿದೆ. ತನ್ನ SU7 ಎಲೆಕ್ಟ್ರಿಕ್ ಸೆಡಾನ್ ನಂತರ, ಕಂಪನಿಯು ಈಗ ಮತ್ತೊಂದು ಹೊಸ YU7 ಎಲೆಕ್ಟ್ರಿಕ್ SUV ಅನ್ನು ಬಿಡುಗಡೆ ಮಾಡಿದೆ. ಇದು ಕೆಲವೇ ನಿಮಿಷಗಳಲ್ಲಿ ಸಂಚಲನ ಸೃಷ್ಟಿಸಿದೆ. ಪ್ರಸ್ತುತ, ಈ SUV ಚೀನಾದಲ್ಲಿ ಮಾತ್ರ ಲಭ್ಯವಿದೆ, ಆದರೆ ಅದನ್ನು ಬುಕ್ ಮಾಡಿದ ವೇಗವು ಜಾಗತಿಕ ಮಾರುಕಟ್ಟೆಯ ಗಮನ ಸೆಳೆದಿದೆ. ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಚೀನಾದಲ್ಲಿ ಅತ್ಯಂತ ಜನಪ್ರಿಯ ಟೆಸ್ಲಾ ಮಾಡೆಲ್ Y ಯ ಅತಿದೊಡ್ಡ ಪ್ರತಿಸ್ಪರ್ಧಿಯಾಗಿದೆ. ಕೈಗೆಟುಕುವ ಬೆಲೆಯಲ್ಲಿ ಸ್ಪೋರ್ಟ್ಸ್ ಕಾರುಗಳಂತೆ ಕಾಣು ಇದರಲ್ಲಿ ಕೋಟಿ ಮೌಲ್ಯದ ಐಷಾರಾಮಿ ಫೀಚರ್ಸ್ ಇದೆ.
3 ನಿಮಿಷಗಳಲ್ಲಿ 2 ಲಕ್ಷ ಬುಕಿಂಗ್
ಶಿಯೋಮಿ YU7 ಫೋನ್ ಬುಕಿಂಗ್ ಆರಂಭವಾದ ತಕ್ಷಣ, ಕೇವಲ 3 ನಿಮಿಷಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಯೂನಿಟ್‌ಗಳು ಬುಕ್ ಆಗಿವೆ. ಮತ್ತು ಈ ಸಂಖ್ಯೆ ಒಂದು ಗಂಟೆಯಲ್ಲಿಯೇ 3 ಲಕ್ಷ ತಲುಪಿದೆ. ಈ ಮೂಲಕ ನೀವು ಅದರ ಜನಪ್ರಿಯತೆಯನ್ನು ಊಹಿಸಬಹುದು. ಇದಕ್ಕೆ ಹೋಲಿಸಿದರೆ, ಹಿಂದಿನ ಶಿಯೋಮಿ SU7 27 ನಿಮಿಷಗಳಲ್ಲಿ 50,000 ಬುಕಿಂಗ್‌ಗಳನ್ನು ಮತ್ತು 24 ಗಂಟೆಗಳಲ್ಲಿ 90,000 ಬುಕಿಂಗ್‌ಗಳನ್ನು ಪಡೆದಿತ್ತು. ಇದರಿಂದ YU7 ಮಾರುಕಟ್ಟೆಯಲ್ಲಿ ಅದ್ಭುತ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.
ಬೆಲೆ ಮತ್ತು ರೂಪಾಂತರಗಳು:
ಶಿಯೋಮಿ YU7 ಅನ್ನು ಮೂರು ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ:
ವ್ಯಾಪ್ತಿಯಲ್ಲಿ ಅದ್ಭುತ
ಶಿಯೋಮಿ YU7 ನ ಬ್ಯಾಟರಿ ಸಾಮರ್ಥ್ಯ ಮತ್ತು ವ್ಯಾಪ್ತಿಯ ಬಗ್ಗೆ ಹೇಳುವುದಾದರೆ, YU7 ರೂಪಾಂತರವು 96.3 kWh ಬ್ಯಾಟರಿಯನ್ನು ಹೊಂದಿದ್ದು, ಇದು ಒಂದೇ ಚಾರ್ಜ್‌ನಲ್ಲಿ 835 ಕಿ.ಮೀ ವರೆಗೆ ಚಲಿಸುವ ವ್ಯಾಪ್ತಿಯನ್ನು ಹೊಂದಿದೆ. ಅದೇ ಸಮಯದಲ್ಲಿ, YU7 Pro 96.3 kWh ಬ್ಯಾಟರಿಯನ್ನು ಹೊಂದಿದ್ದು, ಇದು ಒಂದೇ ಚಾರ್ಜ್‌ನಲ್ಲಿ 770 ಕಿ.ಮೀ ವರೆಗೆ ಚಲಿಸಬಲ್ಲದು. ಟಾಪ್ ರೂಪಾಂತರ YU7 ಮ್ಯಾಕ್ಸ್ 101.7 kWh ಬ್ಯಾಟರಿಯನ್ನು ಹೊಂದಿದ್ದು, ಇದು ಒಂದೇ ಪೂರ್ಣ ಚಾರ್ಜ್‌ನಲ್ಲಿ 760 ಕಿ.ಮೀ ವರೆಗೆ ಚಲಿಸುತ್ತದೆ.
ಶಕ್ತಿ ಮತ್ತು ಕಾರ್ಯಕ್ಷಮತೆ
YU7 ಒಂದೇ ಮೋಟಾರ್ ಹೊಂದಿದ್ದು, ಇದು 319 ಅಶ್ವಶಕ್ತಿ ಮತ್ತು 528 ನ್ಯೂಟನ್ ಮೀಟರ್ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. YU7 ಪ್ರೊ ಮಾದರಿಯು ಡ್ಯುಯಲ್ ಮೋಟಾರ್ ಅನ್ನು ಹೊಂದಿದೆ. 496 ಅಶ್ವಶಕ್ತಿ ಮತ್ತು 690 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ನಂತರ YU7 ಮ್ಯಾಕ್ಸ್ ಬರುತ್ತದೆ, ಇದು ಆಲ್-ವೀಲ್ ಡ್ರೈವ್ ಮಾದರಿಯಾಗಿದೆ ಮತ್ತು ಅದರ ಡ್ಯುಯಲ್ ಮೋಟಾರ್ ಸೆಟಪ್ 690 ಅಶ್ವಶಕ್ತಿ ಮತ್ತು 866 ನ್ಯೂಟನ್ ಮೀಟರ್ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಅಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ