Yamaha RX100: ಬಿಡುಗಡೆಯಾಗಲಿರುವ ಹೊಸ ಯಮಹಾ ಆರ್‌ಎಕ್ಸ್100 ವಿಶೇಷತೆಗಳೇನು?

|

Updated on: Feb 21, 2024 | 10:02 PM

90ರ ದಶಕದಲ್ಲಿ ಯುವಕರ ಹಾಟ್ ಫೇವರಿಟ್ ಆಗಿದ್ದ ಯಮಹಾ RX100 ಬೈಕ್ ಮಾದರಿಯು ಮಾರಾಟದಿಂದ ಸ್ಥಗಿತವಾಗಿಯೇ ಹಲವು ವರ್ಷಗಳೇ ಕಳೆದಿವೆ. ಆದರೆ RX100 ಬೈಕ್ ಮೇಲಿನ ಕ್ರೇಜ್ ಮಾತ್ರ ಇಗಲೂ ಹಾಗೆಯೇ ಇದ್ರೆ ತಪ್ಪಾಗುವುದಿಲ್ಲ. 2 ಸ್ಟ್ರೋಕ್ ಎಂಜಿನ್ ಮೂಲಕ ಯುವಕರ ನಿದ್ದೆಗೆಡಿಸಿದ್ದ ಐಕಾನಿಕ್ ಬೈಕ್ ಇದೀಗ ಮತ್ತೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿದೆ ಎನ್ನಲಾಗಿದೆ.

Yamaha RX100:  ಬಿಡುಗಡೆಯಾಗಲಿರುವ ಹೊಸ ಯಮಹಾ ಆರ್‌ಎಕ್ಸ್100 ವಿಶೇಷತೆಗಳೇನು?
ಯಮಹಾ ಆರ್‌ಎಕ್ಸ್100
Follow us on

ಟು ಸ್ಟ್ರೋಕ್ ಎಂಜಿನ್ ಬೈಕ್ ಪ್ರಿಯರ ಹಾಟ್ ಫೆವರಿಟ್ ಆಗಿರುವ ಯಮಹಾ ಆರ್‌ಎಕ್ಸ್100 (Yamaha RX100)  ಬೈಕ್‌ ಸದ್ಯ ಮಾರಾಟಕ್ಕೆ ಲಭ್ಯವಿಲ್ಲವಾದರೂ ಅದರ ಜನಪ್ರಿಯ ಮಾತ್ರ ತಗ್ಗಿಲ್ಲ. ಯೂಸ್ಡ್ ಬೈಕ್ ವಿಭಾಗದಲ್ಲಿ ಸದ್ಯ ಅತಿ ಬೇಡಿಕೆಯಲ್ಲಿರುವ ಇದು ತನ್ನ ಮೂಲ ಬೆಲೆಗಿಂತಲೂ ಎರಡ್ಮೂರು ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗುತ್ತಿದೆ. ಆದ್ರೆ ಇದೀಗ ಗ್ರಾಹಕರಿಗೆ ಸರ್ಪ್ರೈಸ್ ನೀಡಲು ಮುಂದಾಗಿರುವ ಯಮಹಾ ಕಂಪನಿ ತನ್ನ ಐಕಾನಿಕ್ ಬೈಕ್ ಅನ್ನು ಮರಳಿ ಪರಿಚಯಿಸುವ ಸುಳಿವು ನೀಡಿದೆ.

ಹೌದು, ಯಮಹಾ ಕಂಪನಿ ತನ್ನ ಜನಪ್ರಿಯ ಆರ್‌ಎಕ್ಸ್100 ಬೈಕ್ ಮಾದರಿಯನ್ನು ಹೊಸ ಮಾಲಿನ್ಯ ನಿಯಂತ್ರಣ ಮಾನದಂಡಗಳೊಂದಿಗೆ ಮರುಬಿಡುಗಡೆಗೆ ಸಿದ್ದವಾಗುತ್ತಿದೆ. ನವೀಕರಿಸಿದ ಆರ್‌ಎಕ್ಸ್100 ಬೈಕ್ ಬಿಡುಗಡೆಗೆ ಇಷ್ಟು ದಿನಗಳ ಕಾಲ ಹಿಂದೇಟು ಹಾಕುತ್ತಲೇ ಬಂದಿದ್ದ ಯಮಹಾ ಕಂಪನಿ, ಇದೀಗ ಬದಲಾದ ಮಾರುಕಟ್ಟೆ ಸನ್ನಿವೇಶಕ್ಕೆ ಅನುಗುಣವಾಗಿ ಹೊಸ ತಂತ್ರಜ್ಞಾನದೊಂದಿಗೆ ಮರುಬಿಡುಗಡೆಗೊಳಿಸಲು ಯೋಜನೆ ರೂಪಿಸುತ್ತಿದೆ. ಆದರೆ ಹೊಸ ಬೈಕ್ ಈ ಹಿಂದಿನಂತೆ ಸೌಂಡ್ ಮಾಡುವುದಿಲ್ಲವಾದರೂ ಅತ್ಯುತ್ತಮ ಪರ್ಫಾಮೆನ್ಸ್ ಒದಗಿಸಲಿದೆ.

ಇದನ್ನೂ ಓದಿ: ಭರ್ಜರಿ ಮೈಲೇಜ್ ನೀಡುವ ಕೈನೆಟಿಕ್ ಇ-ಲೂನಾ ಮೊಪೆಡ್ ಬಿಡುಗಡೆ

ಸದ್ಯ ಮಾರುಕಟ್ಟೆಯಲ್ಲಿ ಹೊಸ ಮಾಲಿನ್ಯ ನಿಯಂತ್ರಣ ಮಾನದಂಡಗಳು ಕಡ್ಡಾಯವಾಗಿರುವುದರಿಂದ ಹೊಸ ಆರ್‌ಎಕ್ಸ್100 ಬೈಕಿನಲ್ಲಿ ಭಾರೀ ಬದಲಾವಣೆಯಾಗಲಿದೆ. ಈ ಹಿಂದಿನ ಟು ಸ್ಟ್ರೋಕ್ ಎಂಜಿನ್ ಬದಲಾಗಿ ಫೋರ್ ಸ್ಟ್ರೋಕ್ ಎಂಜಿನ್ ನೀಡಲಾಗಿದ್ದು, ಇದು ಅತ್ಯುತ್ತಮ ಪರ್ಫಾಮೆನ್ಸ್ ನೊಂದಿಗೆ ಇಂಧನ ದಕ್ಷತೆಯಲ್ಲೂ ಗಮನಸೆಳೆಯಲಿದೆ. ಮಾಹಿತಿಗಳ ಪ್ರಕಾರ ಹೊಸ ಬೈಕಿನಲ್ಲಿ 225.9 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ನೀಡಲಾಗುತ್ತಿದ್ದು, ಇದು 5-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 20.1 ಹಾರ್ಸ್ ಪವರ್ ಮತ್ತು 19.93 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಆದರೇ ಹೊಸ ಬದಲಾವಣೆಯೊಂದಿಗೆ ಆರ್‌ಎಕ್ಸ್100 ಮರುಪರಿಚಯಿಸುತ್ತಿರುವ ಯಮಹಾ ಕಂಪನಿಯ ಹಲವು ಸವಾಲುಗಳಿವೆ. ಈ ಹಿಂದಿನ ಜನಪ್ರಿಯತೆಯನ್ನು ಬಳಸಿಕೊಂಡು ಹೊಸ ಬೈಕ್ ಪರಿಚಯಿಸುವುದು ಅಷ್ಟು ಸುಲಭದ ಮಾತಲ್ಲ. ಸ್ವಲ್ಪ ಎಡವಿದರೂ ಹೊಸ ಬೈಕ್ ಫ್ಲಾಪ್ ಆಗುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಹಳೆಯ RX100 ಬೈಕಿನಿಂದ ಕೆಲವು ಫೀಚರ್ಸ್ ಗಳನ್ನು ಉಳಿಸಿಕೊಳ್ಳಲು ಯತ್ನಿಸಲಾಗುತ್ತಿದ್ದು, ಬೆಲೆ ಕೂಡಾ ಆಕರ್ಷಕವಾಗಿರಲಿದೆ. ಹೊಸ ಬೈಕ್ ಮಾದರಿಯು ಎಕ್ಸ್ ಶೋರೂಂ ಪ್ರಕಾರ ವಿವಿಧ ವೆರಿಯೆಂಟ್ ಗಳಿಗೆ ಅನುಗುಣವಾಗಿ ರೂ.1.30 ಲಕ್ಷದಿಂದ ರೂ. 1.50 ಲಕ್ಷ ತನಕ ಬೆಲೆ ಹೊಂದಿರುವ ಸಾಧ್ಯತೆಗಳಿವೆ.

ಇದನ್ನೂ ಓದಿ: ಬಿಡುಗಡೆಯಾಗಲಿರುವ ಟಾಪ್ 5 ಹೊಸ ಎಸ್ ಯುವಿ ಕಾರುಗಳಿವು!

ಇನ್ನು ಹೊಸ ಆರ್‌ಎಕ್ಸ್100 ಬೈಕ್ ಪ್ರತಿಸ್ಪರ್ಧಿ ಬೈಕ್ ಮಾದರಿಗಳಿಗೆ ಪೈಪೋಟಿಯಾಗಿ ಹಲವಾರು ಹೊಸ ಫೀಚರ್ಸ್ ಹೊಂದಿರಲಿದೆ. ಸುರಕ್ಷೆಗೂ ಇದರಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಸಿಂಗಲ್ ಚಾನಲ್ ಎಬಿಎಸ್ ಸೇರಿದಂತೆ ಎರಡು ಬದಿ ಚಕ್ರದಲ್ಲೂ ಡಿಸ್ಕ್ ಬ್ರೇಕ್ ಪಡೆದುಕೊಳ್ಳಲಿದೆ. ಜೊತೆಗೆ ಡಿಜಿಟಲ್ ಕನ್ಸೊಲ್ ಮತ್ತು ಅನಲಾಗ್ ಮೀಟರ್ ನೀಡಲಾಗುತ್ತಿದ್ದು, ದಿನನಿತ್ಯ ಸವಾರಿ ಜೊತೆಗೆ ದೂರದ ಪ್ರಯಾಣಕ್ಕೂ ಅನುಕೂಲಕರವಾಗುವಂತೆ ಆಸನ ಸೌಲಭ್ಯ ಹೊಂದಿರಲಿದೆ.

Published On - 9:58 pm, Wed, 21 February 24