Father’s Day 2022: ಎಲ್ಲ ಕೊಡಿಸುವ ಸಾಹುಕಾರ ಅಪ್ಪ                    

ಮಕ್ಕಳು  ಏನನ್ನಾದರೂ ನೋಡಿ ಭಯ ಮಗ್ದರಾದಗ  ತನ್ನ ತಂದೆಯನ್ನು ಅಪ್ಪಿಕೊಳ್ಳುತ್ತಾರೆ. ಅದನ್ನು ನೋಡಿದವರಿಗೆ ಅಪ್ಪಿಕೊಂಡಾಗ ಕಂಡರು ಅವರ ನಡುವೆ ಇರುವ ವಿಶ್ವಾಸ ,ಪ್ರೀತಿ ,ನಂಬಿಕೆ ಯನ್ನು ಕಾಣಬಹುದು.

Father’s Day 2022: ಎಲ್ಲ ಕೊಡಿಸುವ ಸಾಹುಕಾರ ಅಪ್ಪ                    
ಸಾಂದರ್ಭಿಕ ಚಿತ್ರ
Edited By:

Updated on: Jun 19, 2022 | 8:02 AM

ಅಪ್ಪ ಎನ್ನುವ ಪದದಲ್ಲಿಯೇ ಇದೇ ಅತೀವವಾದ ಒಲವು ತನ್ನ ಸಹನೆ , ಪ್ರೀತಿ , ಮಮತೆಯಿಂದ ಬದುಕಿನಲ್ಲಿ ಬರುವ ಎಲ್ಲಾ ಹಾಗುಹೋಗುಗಳನ್ನು  ಸಾವಿರ ಆನೆಗಳ ಬಲದಂತೆ  ತನ್ನ ಕಷ್ಟ-ಸುಖಗಳನ್ನೆಲ್ಲ ತಾನೊಬ್ಬನೇ  ನಿಭಾಯಿಸುವ  ಅಪ್ರತಿಮ  ಕರ್ಣ ಅವನು. ಸದಾ ತನ್ನ ಕುಟುಂಬವನ್ನು ಖುಷಿ- ಖುಷಿಯಲ್ಲಿ ಕೊಂಡೊಯ್ಯುತ್ತ , ತನಗೆ ಎಷ್ಟೇ ಕಷ್ಟವಿರಲಿ ಸುಖದ ರೀತಿಯಲ್ಲಿ ಜೀವನದ ಪಯಣವನ್ನು ಸಾಗುತ್ತಿರುತ್ತಾನೆ. ಹೆಚ್ಚಾಗಿ ಹೆಣ್ಣು ಮಕ್ಕಳು ಅಪ್ಪನನ್ನು ನೆಚ್ಚಿಕೊಳ್ಳುವಂತದ್ದು ಅದಕ್ಕೆ ಪ್ರತಿಯಾಗಿ ತಂದೆಯು ಕೂಡ ಅದರ ದುಪ್ಪಟ್ಟು ತನ್ನ ಮಕ್ಕಳನ್ನು ಪ್ರೀತಿಸುತ್ತಾನೆ. ಪ್ರತಿದಿನವೂ ತನ್ನ ಹೆಂಡತಿ ಮಕ್ಕಳ  ಯೋಗ-ಕ್ಷೇಮವನ್ನು ವಿಚಾರಿಸುತ್ತಾ ಅವರಿಗೆ ಸದಾ  ಖುಷಿ, ಸಂತೋಷವನ್ನೇ  ನೀಡಲು ಬಯಸುತ್ತಾನೆ.

ಮಕ್ಕಳು  ಏನನ್ನಾದರೂ ನೋಡಿ ಭಯ ಮಗ್ದರಾದಗ  ತನ್ನ ತಂದೆಯನ್ನು ಅಪ್ಪಿಕೊಳ್ಳುತ್ತಾರೆ. ಅದನ್ನು ನೋಡಿದವರಿಗೆ ಅಪ್ಪಿಕೊಂಡಾಗ ಕಂಡರು ಅವರ ನಡುವೆ ಇರುವ ವಿಶ್ವಾಸ ,ಪ್ರೀತಿ ,ನಂಬಿಕೆಯನ್ನು ಕಾಣಬಹುದು. ಮಕ್ಕಳಿಗೆ ಪ್ರತ್ಯಕ್ಷ-ಪರೋಕ್ಷವಾಗಿ  ಧೈರ್ಯ ತುಂಬುವ  ಬದುಕಿಗೆ ಮಾರ್ಗದರ್ಶಕನಾದಂತಹ  ತಂದೆಗೆ ಒಂದು ಸಲಾಂ ನೀಡಲೆಂದೇ ವಿಶ್ವದಾದ್ಯಂತ  ಜೂನ್19  ರಂದು ತಂದೆಯರ ದಿನವೆಂದು ಆಚರಿಸಲಾಗುತ್ತದೆ.

ಕೇವಲ ಆ ಒಂದು ದಿನವನ್ನು ಮಾತ್ರ ತಂದೆಯನ್ನು ನೆನೆಯದೇ ಪ್ರತಿದಿನವೂ ನಮ್ಮ ನಮ್ಮ ತಂದೆಯನ್ನು ನೆನೆಯೋಣ.
ಪ್ರತಿದಿನವೂ ,ಪ್ರತಿ ಕ್ಷಣವೂ ತಂದೆಯರ ದಿನವೇ  ಯಾಕೆಂದರೆ ತನ್ನ ಕಾಲಿಗೆ ಶೋಕಿಯ ಶೂ, ಚಪ್ಪಲಿ ಹಾಕದೇ ತನ್ನ ಕಾಲಲ್ಲಿ ಮೊಳೆ ಹೊಕ್ಕಿದ್ದರು ,ಕಲ್ಲು ಚುಚ್ಚಿದರೂ, ತನ್ನ ಹೆಂಡತಿ ಮಕ್ಕಳನ್ನು ಸುಖ, ಸಂತೋಷವಾಗಿ ನಗು ನಗುತ್ತಿರಲಿ ಎಂದು ಆಶಿಸುವ ತಂದೆಗೆ ನಾವೆಂದಿಗೂ ಚಿರಋಣಿಯಾಗಿರಬೇಕು. ತನ್ನ ಅಂಗಿ ಅರಿದು ಹೋಗಿದ್ದರು ಅದೇ ಅಂಗಿಯನ್ನು ಪುನಃ ಹೊಲಿಗೆ ಹಾಕಿಸಿ ತೊಡುವ , ಆ ದೇಹಕ್ಕೆ ಎಂದಿಗೂ ನೆರಳಾಗಿ ನಾವಿರಬೇಕು.

ಇದನ್ನೂ ಓದಿ

ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ಅಪ್ಪ ಎಂಬ ಪದವೇ ಸುಂದರ, ಶಾಂತ ಸ್ವಭಾವದ ಗಂಗೆ ಅಪ್ಪ

ತನ್ನ ಮಕ್ಕಳನ್ನು ಎಳೆಯ ವಯಸ್ಸಿನಿಂದಲೂ ಪ್ರೀತಿ ವಿಶ್ವಾಸ, ನಂಬಿಕೆ ಇಟ್ಟು. ತನ್ನ ಮಕ್ಕಳು  ಜವಾಬ್ದಾರಿ ಹಂತಕ್ಕೆ ಬರುವ ತನಕ ಶಿಸ್ತಿನಿಂದ ಬೆಳೆಸುತ್ತಾ  ಬಂದಿರುತ್ತಾನೆ . ತಾನು ಬಡವನಾದರೂ ಕೂಡ ತನ್ನ ಮಕ್ಕಳು ಬಡತನದಲ್ಲಿ ಇರಬಾರದೆಂದು ಬಡತನದ  ಅರಿವು  ಮಕ್ಕಳಿಗೆ ಒಂದು ಚೂರು ತಗುಲಾದಾಗೇ  ಶ್ರೀಮಂತಿಕೆಯ ಜೀವನದಲ್ಲಿ ಬೆಳೆಸುವ ಏಕೈಕ ಜೀವವೆಂದರೆ ಅದು ತಂದೆ ಮಾತ್ರ. ಎಂದೆಂದಿಗೂ ಆ ತಂದೆಯ ವಿಶ್ವಾಸವನ್ನು ಸದಾ  ಗಳಿಸುವ ಮತ್ತು ಉಳಿಸುವ ಕರ್ತವ್ಯ   ಮಕ್ಕಳದಾಗಿರಬೇಕು.

ತನ್ನ ಮಕ್ಕಳ ಬಗ್ಗೆ ಚಿರಕಾಲ ಯೋಚಿಸುವ ಆ ಮುದ್ದು ಮನಸ್ಸಿಗೆ ಕೇಡು ಬಗೆಯದಿರಿ ತನ್ನ ಮಕ್ಕಳನ್ನೇ ನಂಬಿರುವ ಆ ಜೀವ ತನ್ನ ಕಾಲಲ್ಲಿ ಕಲ್ಲು ಹೊಕ್ಕಿ ರಕ್ತ ಸುರಿದರು , ಮುಂದೊಂದು ದಿನ ನನ್ನ ಮಕ್ಕಳು ನನ್ನನ್ನು ರಾಜನಾಗೆ ಚಿರಕಾಲ ನೋಡಿಕೊಳ್ಳುತ್ತಾರೆಂದು ನಂಬಿದ ಆ ಜೀವಕ್ಕೆ ಪ್ರೀತಿ ಪ್ರೇಮವೆಂಬ ಬಲೆಯಲ್ಲಿ ಬೀಳದೆ. ತನ್ನ ಮಕ್ಕಳ ಯೋಗ-ಕ್ಷೇಮವನ್ನು  ಸದಾ ಉಪಚರಿಸುವ ಈ ನಿಷ್ಕಲ್ಮಶವಾದ ಪ್ರೀತಿಯನ್ನು ಎಂದಿಗೂ ಮರೆಯಬೇಡಿ “ಚಿರಕಾಲ ಯೋಚಿಸುವ ತಂದೆಯೆಂಬ ಮುದ್ದ ಮನಸ್ಸಿಗೆ ಎಂದಿಗೂ ಕೇಡು ಬಗೆಯ ಬೇಡಿ”

“ದೇವರು ನಾನು ಎಲ್ಲಾ ಕಡೆ ಚಲಿಸಲು ಸಾಧ್ಯವಿಲ್ಲವೆಂದು  ತಾಯಿಯನ್ನು ಸೃಷ್ಟಿಸಿದ,
 ಹಾಗೇ ಏಕಕಾಲದಲ್ಲಿ  ತನ್ನಿಂದ ಎಲ್ಲರನ್ನು ಸಲಹಲೆಂದು ತಂದೆಯನ್ನು ಸೃಷ್ಟಿಸಿದ್ದಾನೆ”

ದೀಕ್ಷಿತ ಗಿರೀಶ್
ಪತ್ರಿಕೋದ್ಯಮ ವಿದ್ಯಾರ್ಥಿನಿ

Published On - 6:45 am, Sun, 19 June 22