Friendship Day: ಎಂದೆಂದಿಗೂ ನಮ್ಮ ಈ ಸ್ನೇಹದ ಕೊಂಡಿ ಕಳಚದಿರಲಿ, ಜೀವನದುದ್ದಕ್ಕೂ ಸಾಗುತಲಿರಲಿ

| Updated By: Rakesh Nayak Manchi

Updated on: Aug 07, 2022 | 9:43 AM

Friendship Day : ಆಟ ಪಾಠಗಳ ಜೊತೆಗೆ ವ್ಯಯಕ್ತಿಕ ವಿಚಾರಗಳಲ್ಲೂ ಜೊತೆಯಾಗಿದ್ದುಕೊಂಡು, ಸದಾ ಎಲ್ಲಾ ಕೆಲಸಗಳಿಗೂ ಹುರಿದುಂಬಿಸುವ, ಸಮಸ್ಯೆ ಬಂತೆಂದರೆ ಸಾಕು ಅದನ್ನ ಎದುರಿಸಲು ಬೆನ್ನು ತಟ್ಟಿ ಶಕ್ತಿ ತುಂಬುವ ಆ ಸ್ನೇಹಿತರಿಗೆ ಕೋಟಿ ವಂದನೆಗಳು.

Friendship Day: ಎಂದೆಂದಿಗೂ ನಮ್ಮ ಈ ಸ್ನೇಹದ ಕೊಂಡಿ ಕಳಚದಿರಲಿ, ಜೀವನದುದ್ದಕ್ಕೂ ಸಾಗುತಲಿರಲಿ
ಸ್ನೇಹ ಬಳಗ
Follow us on

ಗೆಳೆತನ ಎಂಬುದು ಕೇವಲ ಒಂದು ಪದವಲ್ಲ, ಈ ಸ್ನೇಹ ಜೀವನದಲ್ಲಿ ಅದ್ಭುತ ಭಾವನೆಗಳನ್ನು ಹೊಂದಿರುವ ಜಗತ್ತು. ಅಲ್ಲಿರುವುದು ನಿಷ್ಕಲ್ಮಶ ಸ್ನೇಹ. ಅಂದು ಪದವಿ ಕಾಲೇಜಿನ ಮೊದಲ ದಿನ. ನನ್ನಿಬ್ಬರು ಸ್ನೇಹಿತೆಯರೊಂದಿಗೆ ನಾನು ಕಾಲೇಜಿಗೆ ಮೊದಲ ಹೆಜ್ಜೆ ಇರಿಸಿದೆ. ನನಗೆ ನನ್ನ ಕಾಲೇಜಿನ ಪರಿಚಯ ಚೆನ್ನಾಗಿಯೇ ಇತ್ತು. ಕಾರಣ ನಾನು ಪಿಯುಸಿ ಮುಗಿಸಿದ್ದು ಅದೇ ಕಾಲೇಜಿನಲ್ಲಿ. ಆದರೆ ಪದವಿ ಅಂದರೆ ಅದೊಂದು ಬೇರೆಯದ್ದೇ ಪ್ರಪಂಚ. ಎಲ್ಲವೂ ಹೊಸತು. ಆ ನನ್ನ ಸುಂದರ ಪ್ರಪಂಚಕ್ಕೆ ಕಾಲಿಟ್ಟವರು ನನ್ನೆಲ್ಲ ಸ್ನೇಹಿತರು.

ಆಟ ಪಾಠಗಳ ಜೊತೆಗೆ ನನ್ನ ವ್ಯಯಕ್ತಿಕ ವಿಚಾರಗಳಲ್ಲೂ ಜೊತೆಯಾಗಿದ್ದುಕೊಂಡು, ಸದಾ ಎಲ್ಲಾ ಕೆಲಸಗಳಿಗೂ ಹುರಿದುಂಬಿಸುವ, ನನ್ನೆಲ್ಲಾ ಸಮಸ್ಯೆಗಳನ್ನು ಎದುರಿಸಲು ಬೆನ್ನು ತಟ್ಟುವ ನಲ್ಮೆಯ ಸ್ನೇಹಿತರಿವರು. ನಾನು ಜೀವನದಲ್ಲಿ ಅತೀ ಹೆಚ್ಚು ಬೆರೆಯುವ ಜನರಿವರು. ಇವರ ಬಗ್ಗೆ ಅದೆಷ್ಟು ಹೇಳಿದರೂ ಮುಗಿಯದು.

ಎಲ್ಲಿಂದಲೋ ಬಂದ ನಾವೆಲ್ಲರೂ ಒಂದೇ ಕುಟುಂಬದವರಾದೆವು. ಒಟ್ಟಿಗೆ ಕುಳಿತು ಊಟ ಮಾಡಿದೆವು. ಪಟ್ಟಾಂಗ ಹಾಕಿದೆವು. ತಮಾಷೆ, ನಗು, ಕಿರುಚಾಟ ಇವೆಲ್ಲದರ ನಡುವೆ ಕೆಲವೊಂದು ವಿಷಯದಲ್ಲಿ ಜಗಳವೂ ಮಾಡಿಕೊಂಡೆವು. ನಮ್ಮೀ ಪದವಿಯ ಮೂರು ವರ್ಷಗಳಲ್ಲಿ ಅದೆಷ್ಟೋ ಸಿಹಿ-ಕಹಿ ನೆನಪುಗಳು ಇವೆ. ಕಹಿಗಿಂತ ಹೆಚ್ಚು ಸಿಹಿ ನೆನಪುಗಳೇ ಹೇರಳವಾಗಿವೆ. ನಮ್ಮಲ್ಲಿ ಒಂದಷ್ಟು ಮರೆಯಲಾಗದಷ್ಟು ವಿಷಯಗಳು ಇವೆ. ಆದರೆ ಇನ್ನು ಅವೆಲ್ಲವೂ ಬರೀ ನೆನಪುಗಳು ಮಾತ್ರ. ಯಾಕೆಂದರೆ ನಮ್ಮ ಕಾಲೇಜು ಜೀವನ ಉಳಿದಿರುವುದು ಕೇವಲ 15 ದಿನಗಳಷ್ಟೇ.

ನಮ್ಮ ಸ್ನೇಹ ಜೀವನ ಇಷ್ಟಕ್ಕೆ ಕೊನೆಯಾಗದು, ಕಾಲೇಜು ಜೀವನದ ಹೊರತಾಗಿಯೂ ನಮ್ಮ ಗೆಳೆತನ ಮುಂದುವರೆಯಲಿದೆ. ನಮ್ಮ ಈ ಸ್ನೇಹದ ಕೊಂಡಿ ಎಂದೆಂದಿಗೂ ಕಳಚದಿರಲಿ ಎಂದು ದೇವರಲ್ಲಿ ಸದಾ ಬೇಡಿಕೊಳ್ಳುತ್ತೇನೆ. ಐ ಮಿಸ್ ಯೂ ಆಲ್…!!

ಲೇಖನ: ತನುಶ್ರೀ, ಬೆಳ್ಳಾರೆ