AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Friendship day: ಕಾಲೇಜು ಜೀವನ ಮುಗಿದರೂ ಅದೇ ಸ್ನೇಹ ಬಾಂಧವ್ಯ, ಅದೇ ತಮಾಷೆಯ ಮಾತುಗಳು

Friendship day: ಕಾಲೇಜು ಸ್ನೇಹ ಜೀವನವೇ ಹಾಗೆ, ತರಗತಿಯ ಹೊರಗೆ, ಒಳಗೂ ತಮಾಷೆ. ಶಿಕ್ಷಕರು ಪಾಠಮಾಡುವಾಗಲೂ ಸುಮ್ಮನಾಗದ ಸ್ನೇಹಿತರ ಬಾಯಿ ತಮಾಷೆಯ ಮಾತುಗಳನ್ನಾಡಿ ಶಿಕ್ಷಕರ ಬಾಯಿಯಿಂದ ಹೊಟ್ಟೆತುಂಬಾ ಬೈಗುಳ ತಿನ್ನದೆ ಸಮಾಧಾನವೇ ಇಲ್ಲ. ಇಂತಹ ಅನೇಕ ನೆನಪಿನ ಗುಚ್ಚ ಸ್ನೇಹ ಬಳಗದಲ್ಲಿ ಇದ್ದೇ ಇರುತ್ತದೆ.

Friendship day: ಕಾಲೇಜು ಜೀವನ ಮುಗಿದರೂ ಅದೇ ಸ್ನೇಹ ಬಾಂಧವ್ಯ, ಅದೇ ತಮಾಷೆಯ ಮಾತುಗಳು
ಸಾಂಕೇತಿಕ ಚಿತ್ರ
TV9 Web
| Updated By: Rakesh Nayak Manchi|

Updated on:Aug 07, 2022 | 11:01 AM

Share

ಸ್ನೇಹಿತರು ಜೊತೆ ಇದ್ದಾಗ ಮನಸ್ಸಿಗೆ ಎಲ್ಲಿಲ್ಲದ ಉತ್ಸಾಹ, ಉಲ್ಲಾಸ. ಜೇನು ಗೂಡಿನಂತಿರುವ ಸ್ನೇಹ ಬಳಗದಲ್ಲಿ ಸಾವಿರ ನೆನಪುಗಳಿರುತ್ತವೆ. ಸ್ನೇಹದ ಕೊಂಡಿ ಶಾಲೆಗಳಲ್ಲಿ ಆರಂಭವಾಗಿ ಕಾಲೇಜು ಮಟ್ಟಕ್ಕೆ ಬೆಳೆದಾಗ ಗಟ್ಟಿಯಾಗುತ್ತದೆ. ಕಾಲೇಜು ಜೀವನದಲ್ಲಿ ಸ್ನೇಹಿತರೊಂದಿಗಿನ ಮೋಜು, ಬೇಕುಬೇಕಂತಲೇ ಶಿಕ್ಷಕರ ಬಾಯಿಯಿಂದ ಬೈಗುಳ ತಿನ್ನಿಸುವಂತೆ ಮಾಡುವುದು, ಒಬ್ಬನನ್ನು ತರಗತಿಯಿಂದ ಹೊರಗೆ ಕಳುಹಿಸಿದಾಗ ಇತರ ಸ್ನೇಹಿತರು ಕೂಡ ನಾನು ಕೂಡ ನೋಟ್ಸ್ ಬರೆದಿಲ್ಲ ಎಂದು ಕುಂಟು ನೆಪ ಹೇಳಿ ಶಿಕ್ಷಕರ ಬಾಯಿಯಿಂದ ಗೆಟ್ ಔಟ್ ಎಂದು ಹೇಳಿಸಿಕೊಳ್ಳದೆ ಸಮಾಧಾನವೇ ಇಲ್ಲ. ಇಂತಹ ಘಟನೆಗಳು ಸ್ನೇಹ ಬಳಗದಲ್ಲಿ ನಡೆಯುತ್ತಿರುತ್ತದೆ.

ತರಗತಿಯಲ್ಲಿ ಒಂದೇ ಬೆಂಚ್​ನಲ್ಲಿ ಕುಳಿತಿದ್ದಾಗ ತಮಾಷೆಯ ಮಾತುಗಳನ್ನು ಆಡುವುದು ಸಾಮಾನ್ಯ. ಅದರಲ್ಲೂ ಶಿಕ್ಷಕರು ಪಾಠ ಮಾಡುತ್ತಿರುವಾಗ ಹೀಗೆ ತಮಾಷೆಯ ಮಾತುಗಳನ್ನಾಡುತ್ತಾ, ನಗಾಡುತ್ತಾ ಶಿಕ್ಷಕರ ಕೈಯಿಂದ ಪೆಟ್ಟು, ಬೈಗುಳ ತಿಂದದ್ದೇ ಹೆಚ್ಚು. ರಜೆ ಇದ್ದಾಗ ಹೇಳುವುದು ಬೇಡ, ಬ್ಯಾಟ್ ಬಾಲ್ ಹಿಡಿದುಕೊಂಡು ಮೈದಾನಕ್ಕೆ ಹಾಜರು. ತರಗತಿಗೆ ಸರಿಯಾಗಿ ಹೋಗದಿದ್ದರೂ ಮೈದಾನಕ್ಕೆ ಮಾತ್ರ ಚಾಚುತಪ್ಪದೇ ಹೋಗುತ್ತಿದ್ದೆವು. ಮೈದಾನದಲ್ಲಿ ಸೋಲು ಗೆಲುವನ್ನು ಲೆಕ್ಕಿಸದೆ ಆಟವಾಡುತ್ತಿದ್ದಾಗ ಸಮಯ ಕಳೆಯುವುದೇ ಗೊತ್ತಾಗುತ್ತಿರಲಿಲ್ಲ. ನಂತರ ಮನೆಗೆ ಹೋದಾಗ ಕೈ ಕಾಲು ನೋವು ಸಹಜ. ಮರುದಿನ ಕಾಲೇಜಿಗೆ ಚಕ್ಕರ್ ಹಾಕಲು ಇದು ಕೂಡ ಒಂದು ಕಾರಣ.

ಒಂದು ಬಾರಿ ಹೊಸ ವರ್ಷವನ್ನು ಮನೆಯಲ್ಲಿ ಆಚರಿಸೋಣ ಎಂದು ಎಲ್ಲರೂ ಒಟ್ಟಿಗೆ ಸೇರಿದೆವು. ಅದು ಮಧ್ಯರಾತ್ರಿಯಾಗಿತ್ತು. ಕೇಕ್, ಗೋಬಿ ಮಂಚೂರಿ ತಿಂದು ಹೊಸ ವರ್ಷವನ್ನು ಸಂಭ್ರಮಿಸಿದೆವು. ಇದು ಸಾವಿರ ನೆನಪುಗಳಲ್ಲಿ ಒಂದಾಗಿದೆ. ವಿಶೇಷವಾಗಿ ನಮ್ಮ ಸ್ನೇಹಿತ ವೃಂದದಲ್ಲಿ ಯಾರದ್ದಾದರೂ ಹುಟ್ಟುಹಬ್ಬ ಇದ್ದರೆ, ಬ್ಯಾಚುಲರ್ ಲೈಫ್​ಗೆ ಗುಡ್​ಬೈ ಹೇಳಿದರೆ ಆಗ ಎಲ್ಲರೂ ಒಟ್ಟಿಗೆ ಸೇರಿ ಸಂಭ್ರಮಿಸಿ ಪಾರ್ಟಿ ಮಾಡುವ ಮಜಾನೇ ಬೇರೆ.

ಇನ್ನೂ ಪರೀಕ್ಷೆ ಸಮಯದಲ್ಲಿ ಫೋನ್​ನಲ್ಲಿ ಅಥವಾ ಒಟ್ಟಿಗೆ ಸೇರಿ ವಿಷಯದ ಕುರಿತು ಚರ್ಚೆ ಮಾಡುತ್ತಿದ್ದೆವು. ಹಾಗಾಗಿ ಎಲ್ಲರಿಗೂ ಉತ್ತಮ ಫಲಿತಾಂಶ ಬರುತ್ತಿತ್ತು. ಕಾಲೇಜ್ ಮುಗಿದಾಗ ಸ್ನೇಹ ಬಳಗದಲ್ಲಿದ್ದವರು ಒಬ್ಬೊಬ್ಬರು ಒಂದೊಂದು ಕೋರ್ಸ್ ಅನ್ನು ಆಯ್ಕೆ ಮಾಡಿಕೊಂಡರು. ಪರಿಣಾಮವಾಗಿ ಬೇರೆಬೇರೆ ಕಡೆಗಳಿಗೆ ಹೋಗುವಂತಾಯಿತು.

ಅದಾಗ್ಯೂ, ನಮ್ಮ ಸ್ನೇಹಜೀವನಕ್ಕೇನು ಅಡಚಣೆಯಾಗಿಲ್ಲ. ಅದೇ ಮೊದಲಿನ ಬಾಂಧವ್ಯ, ಅದೇ ತಮಾಷೆಯ ಮಾತುಗಳು ಇಂದಿಗೂ ಮುಂದುವರೆದಿದೆ. ನಾನೊಂದು ತೀರ ನೀನೊಂದು ತೀರ ಎಂಬಂತೆ ನಾವೆಲ್ಲರೂ ಬೇರೆಬೇರೆ ಕಡೆಗಳಲ್ಲಿ ಇದ್ದರೂ ಬಿಡುವಿನ ಸಮಯದಲ್ಲಿ ಎಲ್ಲರೂ ಕಾನ್ಫರೆನ್ಸ್ ಕಾಲ್ ಮಾಡಿ ಗಂಟೆಗಟ್ಟಲೆ ಮಾತಿನ ಹರಟೆ ಹೊಡೆಯುತ್ತೇವೆ.

ಮುಖವಾಡದ ಪ್ರಪಂಚದಲ್ಲಿ ಒಳ್ಳೆಯ ಸ್ನೇಹಿತರು ಸಿಗುವುದು ಕಡಿಮೆ, ಆದರೆ ನನ್ನ ಶಾಲೆ, ಕಾಲೇಜಿನ ಸ್ನೇಹಿತರ ಬಳಗ ಚಿಕ್ಕದಾದರೂ, ಅವರೊಡನೆ ಕಳೆದ ಸಮಯ, ಈಗ ಕಳೆಯುತ್ತಿರುವ ಸಮಯ ಎಲ್ಲವೂ ಸವಿಸವಿಯಾಗಿದೆ. ನನ್ನೀ ಸ್ನೇಹ ಬಳಗಕ್ಕೆ ಸ್ನೇಹಿತರ ದಿನದ ಶುಭಾಶಯಗಳು.

ಲೇಖನ: ಆನಂದ ಜೇವೂರ್, ಕಲಬುರಗಿ

Published On - 11:01 am, Sun, 7 August 22

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!