
ಸಾವಿರ ನೀಡಿ ಖರೀದಿ ಮಾಡಲಾಗುತ್ತಿದೆ. ಮಾದಕ ವಸ್ತು ಮಾರಾಟಗಾರರು ಇದನ್ನು 1 ಗ್ರಾಂಗೆ 4 ಸಾವಿರದಂತೆ ಗ್ರಾಹಕರ ಕೈ ಸೇರಿಸುತ್ತಿದ್ದಾರೆ. ಒಂದು ಗ್ರಾಂ ಚಿತ್ತ(ಹೆರಾಯಿನ್) ಮೂರರಿಂದ ನಾಲ್ಕು ಡೋಸ್ಗಳನ್ನು ನೀಡುತ್ತದೆ. ಇದನ್ನು ಒಮ್ಮೆ ಬಳಸಿದವರು ಮತ್ತೊಮ್ಮೆ ಬೇಕೆಂಬ ಚಡಪಡಿಕೆಯಲ್ಲಿ ತೊಡಗುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಮಾರಾಟಗಾರರು, ತಮ್ಮ ಜಾಲವನ್ನು ವಿಸ್ತರಿಸುತ್ತಾ ಹೋಗುತ್ತಿದ್ದಾರೆ. ಹೆರಾಯಿನ್ ತೆಗೆದುಕೊಂಡ ಯುವಕರು ಯಾವುದೇ ಕುಕೃತ್ಯಕ್ಕೂ ಸಿದ್ಧರಿರುತ್ತಾರೆ. ಹೀಗಾಗಿ ಈ ಅಮಲು ಪದಾರ್ಥವನ್ನು ನೀಡಿ, ತಮ್ಮ ಬೇಳೆ ಬೇಯಿಸಿಕೊಳ್ಳುವ ಒಂದಷ್ಟು ರೌಡಿ ಟೀಂಗಳು ಕೂಡ ಇದರ ಹಿಂದೆ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಲಾಗುತ್ತಿದೆ.
Published On - 8:55 am, Thu, 28 March 19