ಬೆಂಗಳೂರು: ನಾಳೆ ಶುಕ್ರವಾರ ಬಸವರಾಜ ಬೊಮ್ಮಾಯಿ ಅವರು ಬಜೆಟ್ (Karnataka Budget 2023) ಮಂಡನೆ ಮಾಡುತ್ತಿದ್ದಾರೆ. ಚುನಾವಣೆ ಸಮೀಪ ಇರುವುದರಿಂದ ಇದು ಬಹುತೇಕ ಚುನಾವಣಾ ಬಜೆಟ್ ಆಗಿರುವ ಸಾಧ್ಯತೆ ಇದೆ. ಆದರೂ ವಿವಿಧ ಉದ್ಯಮಗಳು ಬಜೆಟ್ನಿಂದ ಉತ್ತೇಜನಕ್ಕಾಗಿ ಕಾಯುತ್ತಿರುವುದು ಹೌದು. ಆರ್ಥಿಕತೆಯ ಬೆನ್ನೆಲುಬಾಗಿರುವ ಎಂಎಸ್ಎಂಇ (MSME) ಕ್ಷೇತ್ರವಂತೂ ಬಹಳಷ್ಟು ನಿರೀಕ್ಷೆಗಳಿವೆ.
ಈ ಬಗ್ಗೆ ಮನಿ9 ಕನ್ನಡದ ಜೊತೆ ಮಾತನಾಡಿದ ಛೇಂಬರ್ ಆಫ್ ಕಾಮರ್ಸ್ನ ಮಾಜಿ ಅಧ್ಯಕ್ಷ ಮುರಳೀಧರ್, ರಾಜ್ಯದ ಶೇ. 40ಕ್ಕಿಂತಲೂ ಹೆಚ್ಚು ಉದ್ಯೋಗಗಳು ಎಂಎಸ್ಎಂಇ ಕ್ಷೇತ್ರದಲ್ಲಿವೆ. ಹೀಗಾಗಿ, ಈ ಕ್ಷೇತ್ರದ ಬಗ್ಗೆ ಸರ್ಕಾರ ಹೆಚ್ಚು ಗಮನ ಕೊಡಬೇಕು ಎಂದಿದ್ದಾರೆ. ಹಾಗೆಯೇ, ಒಂದಷ್ಟು ನಿರೀಕ್ಷೆಗಳನ್ನೂ ಅವರು ನೀಡಿದ್ದಾರೆ.
ಬಜೆಟ್ ಮತ್ತು ವ್ಯವಹಾರ ಬಗ್ಗೆ ಹೆಚ್ಚಿನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ.
Published On - 6:54 pm, Thu, 16 February 23