ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ (LIC) ತನ್ನ ಬಹು ನಿರೀಕ್ಷೆಯ ಮೆಗಾ ಆರಂಭಿಕ ಷೇರು ಬಿಡುಗಡೆ (ಐಪಿಒ) ಇಂದಿನಿಂದ ( ಮೇ. 4) ಆರಂಭವಾಗಿದೆ. ಇದು ಭಾರತದ ಅತೀದೊಡ್ಡ ಐಪಿಒ ಎಂಬ ಹೆಗ್ಗಳಿಕೆ ಗಳಿಸಿದ್ದು, ಈಗಾಗಲೇ ಆ್ಯಂಕರ್ ಹೂಡಿಕೆದಾರರಿಗೆ ಆರಂಭಿಕ ಷೇರುಗಳನ್ನು ಬಿಡುಗಡೆ ಮಾಡಲಾಗಿದೆ. ಇದಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದ್ದು, ಆ್ಯಂಕರ್ ಹೂಡಿಕೆದಾರರಿಂದ 5,627 ಕೋಟಿ ರೂ. ಸಂಗ್ರಹಿಸಲಾಗಿದೆ ಎಂದು ಎಲ್ಐಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಎಲ್ಐಸಿ ಶೇ. 3.5ರಷ್ಟು ಷೇರುಗಳನ್ನು ಬಿಡುಗಡೆಗೊಳಿಸಿ 20,557 ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿ ಹೊಂದಿದೆ. ರಿಟೇಲ್ ಹೂಡಿಕೆದಾರರಿಗೂ, ಪಾಲಿಸಿದಾರರಿಗೂ, ಜನಸಾಮಾನ್ಯರಿಗೂ ಎಲ್‌ಐಸಿಯ ಷೇರುಗಳನ್ನು ತಮ್ಮದಾಗಿಸುವ ಅವಕಾಶ ಸೃಷ್ಟಿಯಾಗಿದೆ. ಆದಾಗ್ಯೂ, 28 ದೇಶೀಯ ಮ್ಯೂಚುಯಲ್ ಫಂಡ್‌ಗಳು (Mutual Funds) ಆಂಕರ್ ಬುಕ್ನಲ್ಲಿ (Anchor Book) ಭಾಗವಹಿಸುತ್ತಿಲ್ಲ.
ಗೈರುಹಾಜರಾದ ಕೆಲವು ಪ್ರಮುಖ ಹೆಸರುಗಳಲ್ಲಿ ಡಿಎಸ್‌ಪಿ ಮ್ಯೂಚುಯಲ್ ಫಂಡ್, ಮಿರೇ ಅಸೆಟ್ ಮ್ಯಾನೇಜ್‌ಮೆಂಟ್, ಎಡೆಲ್‌ವೀಸ್ ಮ್ಯೂಚುಯಲ್ ಫಂಡ್, ಕೆನರಾ ರೋಬೆಕೊ ಮ್ಯೂಚುಯಲ್ ಫಂಡ್, ಮೋತಿಲಾಲ್ ಓಸ್ವಾಲ್ ಮ್ಯೂಚುಯಲ್ ಫಂಡ್, ಪಿಪಿಎಫ್‌ಎಎಸ್ ಮ್ಯೂಚುಯಲ್ ಫಂಡ್, ಎಲ್‌ಐಸಿ ಮ್ಯೂಚುಯಲ್ ಫಂಡ್, ಪಿಜಿಐಎಮ್ ಮ್ಯೂಚುಯಲ್ ಫಂಡ್, ಹೆಚ್ಎಸ್ಬಿಸಿ ಮ್ಯೂಚುಯಲ್ ಫಂಡ್, ಮಹೀಂದ್ರಾ ಮನುಲೈಫ್, ಯೂನಿಯನ್ ಮ್ಯೂಚುಯಲ್ ಫಂಡ್, ಕ್ಯೂನತ್, ಎನ್ಜೆ ಮ್ಯೂಚುಯಲ್ ಫಂಡ್, ಐಐಎಫ್ಎಲ್, ಐಡಿಬಿಐ ಮ್ಯೂಚುಯಲ್ ಫಂಡ್, ಬಿಓಐ ಎಸಕ್ಸ್ಎ, ಐಟಿಐ ಮ್ಯೂಚುಯಲ್ ಫಂಡ್, ಜೆಎಮ್, ಕ್ವಾಂಟಮ್ ಮ್ಯೂಚುಯಲ್ ಫಂಡ್, ಐಎಲ್ ಮತ್ತು ಎಫ್ಎಸ್, ಟ್ರಸ್ಟ್ ಮ್ಯೂಚುಯಲ್ ಫಂಡ್, ನೇವಿ ಮ್ಯೂಚುಯಲ್ ಫಂಡ್, ಇಂಡಿಯಾ ಬುಲ್ಸ್, ಟೌರಸ್, ಸ್ಯಾಮ್ಕೊ ಮ್ಯೂಚುಯಲ್ ಫಂಡ್, ಶ್ರೀರಾಮ್ ಮ್ಯೂಚುಯಲ್ ಫಂಡ್, ವೈಟ್ವೋಕ್ ಕ್ಯಾಪಿಟಲ್ ಹೀಗೆ ಒಟ್ಟು 28 ಮ್ಯೂಚುಯಲ್ ಫಂಡ್‌ಗಳು ಆಂಕರ್ ಬುಕ್ನಲ್ಲಿ ಪಾಲ್ಗೊಂಡಿಲ್ಲ.
Credit Score: ಸಾಲ ಪಡೆಯುವುದಕ್ಕೆ ಮುಖ್ಯವಾದ ಕ್ರೆಡಿಟ್ ಸ್ಕೋರ್ ಹೆಚ್ಚಿಸಿಕೊಳ್ಳಲು ಇಲ್ಲಿದೆ 5 ಮಾರ್ಗಗಳು
ಒಟ್ಟಾರೆಯಾಗಿ, ಆಂಕರ್ ಪುಸ್ತಕದಲ್ಲಿ 59.2 ಮಿಲಿಯನ್ ಷೇರುಗಳನ್ನು ನೀಡಲಾಗಿದೆ. ಇದರಲ್ಲಿ 42.1 ಮಿಲಿಯನ್ ಷೇರುಗಳನ್ನು ಮ್ಯೂಚುವಲ್ ಫಂಡ್‌ಗಳು ಖರೀದಿಸಿವೆ. ಒಟ್ಟು 99 ಯೋಜನೆಗಳ ಮೂಲಕ 15 ದೇಶೀಯ ಮ್ಯೂಚುವಲ್ ಫಂಡ್‌ಗಳು ಭಾಗವಹಿಸಿದ್ದವು. ರೂ 21,000-ಕೋಟಿ ಸಂಚಿಕೆಯು ಆ್ಯಂಕರ್ ಹೂಡಿಕೆದಾರರಿಂದ ರೂ 5,627 ಕೋಟಿಗಳನ್ನು ಸಂಗ್ರಹಿಸಿದೆ. ಇವುಗಳಲ್ಲಿ, ಮ್ಯೂಚುವಲ್ ಫಂಡ್‌ಗಳು 4,002 ಕೋಟಿ ರೂ. ಗಳನ್ನು ಕೊಡುಗೆಯಾಗಿ ನೀಡಿವೆ.
ಎಸ್‌ಬಿಐ ಮ್ಯೂಚುಯಲ್ ಫಂಡ್, ಐಸಿಐಸಿಐ ಪ್ರುಡೆನ್ಶಿಯಲ್, ಎಸ್‌ಬಿಐ ಲೈಫ್ ಇನ್ಶುರೆನ್ಸ್, ಆದಿತ್ಯ ಬಿರ್ಲಾ ಸನ್ ಲೈಫ್, ಆಕ್ಸಿಸ್ ಮ್ಯೂಚುಯಲ್ ಫಂಡ್, ಎಚ್‌ಡಿಎಫ್‌ಸಿ ಟ್ರಸ್ಟಿ, ನಿಪ್ಪಾನ್ ಲೈಫ್, ಕೋಟಕ್ ಮಹೀಂದ್ರಾ ಲೈಫ್ ಇನ್ಶುರೆನ್ಸ್, ಎಲ್ & ಟಿ ಮ್ಯೂಚುಯಲ್ ಫಂಡ್, ಟಾಟಾ ಇನ್ವೆಸ್ಟ್‌ಮೆನೆಟ್ ಕಾರ್ಪೊರೇಷನ್, ಯುಟಿಐ ಮ್ಯೂಚುಯಲ್ ಫಂಡ್, ಸುಂದರಂ, ಮ್ಯುಚುಯಲ್ ಫಂಡ್ ಸೇರಿದಂತೆ ದೇಶೀಯ ಹೂಡಿಕೆದಾರರು IDFC MF, ಮತ್ತು Bajaj Allianz General Insurance, LIC ನಲ್ಲಿ ಬಲವಾದ ಆಸಕ್ತಿಯನ್ನು ತೋರಿಸಿದ್ದಾರೆ.
ವಿದೇಶಿ ಹೂಡಿಕೆದಾರರಲ್ಲಿ ಬಿಎನ್ಪಿ ಇನ್ವೆಸ್ಟ್ ಮೆಂಟ್ಸ್ (BNP Investments) 449.99 ಕೋಟಿ ರೂ. ಮೌಲ್ಯದ ಷೇರುಗಳನ್ನು, ನಾರ್ವೆ ಸರ್ಕಾರಿ ಪಿಂಚಣಿ ನಿಧಿ ಗ್ಲೋಬಲ್ ಆಫ್ ನಾರ್ವೆ 224.99 ಕೋಟಿ ರೂ., ಸಿಂಗಾಪುರ ಸರ್ಕಾರ 151.67 ಕೋಟಿ ರೂ. ಹಾಗೂ ಸಿಂಗಾಪುರದ ಹಣಕಾಸು ಪ್ರಾಧಿಕಾರ 38.32 ಕೋಟಿ ರೂ. ಹೂಡಿಕೆ ಮಾಡಿವೆ. ಆ್ಯಂಕರ್ ಹೂಡಿಕೆದಾರರಿಗೆ ಮೀಸಲಿಟ್ಟ 5,627 ಕೋಟಿ ರೂ.ಗಿಂತಲೂ ಹೆಚ್ಚಿನ 7,000 ಕೋಟಿ ರೂ. ತನಕ ಹೂಡಿಕೆದಾರರು ಬಿಡ್ ಮಾಡಿದ್ದರು ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. ಐಪಿಒ ಮೇ 9ರಂದು ಮುಕ್ತಾಯವಾದರೆ, ಮೇ 12ರಂದು ಷೇರುಗಳ ಮಂಜೂರಾತಿ ಅಂತಿಮವಾಗಲಿದೆ. ಐಪಿಒ ಮುಕ್ತಾಯವಾದ ಒಂದು ವಾರದ ಬಳಕ, ಷೇರು ವಿನಿಮಯ ಕೇಂದ್ರಗಳಲ್ಲಿ ಮೇ 17ರಂದು ಎಲ್‌ಐಸಿ ಷೇರು ನೋಂದಣಿಯಾಗಲಿದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:52 am, Wed, 4 May 22