ಹಣದುಬ್ಬರ: ಪಾಕಿಸ್ತಾನದಲ್ಲಿ ಒಂದು ಡಜನ್ ಮೊಟ್ಟೆಗೆ 400 ರೂ., ಕೆಜಿ ಈರುಳ್ಳಿಗೆ 250 ರೂ. ಚಿಕನ್ ಬೆಲೆಯಂತೂ ಕೇಳಲೇಬೇಡಿ

ಪಾಕಿಸ್ತಾನದಲ್ಲಿ ಆರ್ಥಿಕ ಸಮಸ್ಯೆ ನಿರಂತರವಾಗಿ ಉಲ್ಬಣಗೊಳ್ಳುತ್ತಲೇ ಇದೆ. ಸಾಮಾನ್ಯ ಜನರಿಗೆ ಎರಡು ಹೊತ್ತಿನ ಊಟ ಸಿಗುವುದೇ ದುಸ್ತರವಾಗಿದೆ. ಪಾಕಿಸ್ತಾನದ ವಿವಿಧ ನಗರಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರುತ್ತಿದೆ. ಪಾಕಿಸ್ತಾನದ ಲಾಹೋರ್ ನಗರದಲ್ಲಿ ಒಂದು ಮೊಟ್ಟೆಯ ಬೆಲೆ 33 ರೂ.ಗೆ ತಲುಪಿದೆ. 12 ಮೊಟ್ಟೆಯ ಬೆಲೆ 400 ರೂ.ಗೆ ತಲುಪಿದೆ. ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಗೆ ಒಂದು ತಿಂಗಳಿಗಿಂತ ಕಡಿಮೆ ಸಮಯವಿದ್ದು, ದೇಶದ ಸ್ಥಿತಿ ಇನ್ನಷ್ಟು ಗಂಭೀರವಾಗುತ್ತಿದೆ.

ಹಣದುಬ್ಬರ: ಪಾಕಿಸ್ತಾನದಲ್ಲಿ ಒಂದು ಡಜನ್ ಮೊಟ್ಟೆಗೆ 400 ರೂ., ಕೆಜಿ ಈರುಳ್ಳಿಗೆ 250 ರೂ. ಚಿಕನ್ ಬೆಲೆಯಂತೂ ಕೇಳಲೇಬೇಡಿ
ಮೊಟ್ಟೆ

Updated on: Jan 15, 2024 | 8:34 AM

ಪಾಕಿಸ್ತಾನ(Pakistan)ದಲ್ಲಿ ಆರ್ಥಿಕ ಸಮಸ್ಯೆ ನಿರಂತರವಾಗಿ ಉಲ್ಬಣಗೊಳ್ಳುತ್ತಲೇ ಇದೆ. ಸಾಮಾನ್ಯ ಜನರಿಗೆ ಎರಡು ಹೊತ್ತಿನ ಊಟ ಸಿಗುವುದೇ ದುಸ್ತರವಾಗಿದೆ. ಪಾಕಿಸ್ತಾನದ ವಿವಿಧ ನಗರಗಳಲ್ಲಿ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರುತ್ತಿದೆ. ಪಾಕಿಸ್ತಾನದ ಲಾಹೋರ್ ನಗರದಲ್ಲಿ ಒಂದು ಮೊಟ್ಟೆಯ ಬೆಲೆ 33 ರೂ.ಗೆ ತಲುಪಿದೆ. 12 ಮೊಟ್ಟೆಯ ಬೆಲೆ 400 ರೂ.ಗೆ ತಲುಪಿದೆ. ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆಗೆ ಒಂದು ತಿಂಗಳಿಗಿಂತ ಕಡಿಮೆ ಸಮಯವಿದ್ದು, ದೇಶದ ಸ್ಥಿತಿ ಇನ್ನಷ್ಟು ಗಂಭೀರವಾಗುತ್ತಿದೆ.

ಮಾಧ್ಯಮ ವರದಿಗಳ ಪ್ರಕಾರ, ಜನವರಿ 15 ರಂದು, ಲಾಹೋರ್ ಪಂಜಾಬ್‌ನಲ್ಲಿ ಒಂದು ಡಜನ್ ಮೊಟ್ಟೆಗಳ ಬೆಲೆ 400 ಪಾಕಿಸ್ತಾನಿ ರೂಪಾಯಿಗಳನ್ನು ದಾಟಿದೆ. ಸರ್ಕಾರದ ದರ ಪಟ್ಟಿಯನ್ನು ಅನುಷ್ಠಾನಗೊಳಿಸುವಲ್ಲಿ ಸ್ಥಳೀಯ ಅಧಿಕಾರಿಗಳು ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

ಈರುಳ್ಳಿಯನ್ನು ಪ್ರತಿ ಕಿಲೋಗ್ರಾಂಗೆ PKR 230 ರಿಂದ 250 ಕ್ಕೆ ಮಾರಾಟ ಮಾಡಲಾಗುತ್ತಿದೆ, ಇದು ಪ್ರತಿ ಕಿಲೋಗ್ರಾಂಗೆ PKR 175 ರ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಾಗಿದೆ. ಒಂದು ಕೆಜಿ ಚಿಕನ್ ಬೆಲೆ 615 ರೂ. ತಲುಪಿದೆ. ARY ನ್ಯೂಸ್‌ನ ವರದಿಯ ಪ್ರಕಾರ, 2023-24 ರ ಆರ್ಥಿಕ ವರ್ಷದಲ್ಲಿ ಕಳೆದ ವರ್ಷದ ನವೆಂಬರ್ ಅಂತ್ಯದ ವೇಳೆಗೆ ಪಾಕಿಸ್ತಾನದ ಮೇಲಿನ ಒಟ್ಟು ಸಾಲದ ಹೊರೆ 63,399 ಟ್ರಿಲಿಯನ್ ಪಾಕಿಸ್ತಾನಿ ರೂಪಾಯಿಗಳಿಗೆ (PKR) ಹೆಚ್ಚಾಗಿದೆ.

ಮತ್ತಷ್ಟು ಓದಿ: Pakistan Economic Crisis: ಸೈನಿಕರಿಗೆ ಆಹಾರ ನೀಡಲು ಸಾಧ್ಯವಾಗುತ್ತಿಲ್ಲ, ಅಕ್ಷರಶಃ ತತ್ತರಿಸಿದ ಪಾಕಿಸ್ತಾನ

PDM ಮತ್ತು ಉಸ್ತುವಾರಿ ಸರ್ಕಾರದ ಅವಧಿಯಲ್ಲಿ, ಪಾಕಿಸ್ತಾನದ ಒಟ್ಟು ಸಾಲವು 12.430 ಟ್ರಿಲಿಯನ್ PKR ಗಿಂತ ಹೆಚ್ಚಾಗಿದೆ. ಒಟ್ಟು ಸಾಲದ ಹೊರೆಯು PKR 63.390 ಟ್ರಿಲಿಯನ್‌ಗೆ ಏರಿತು, ಇದರಲ್ಲಿ PKR 40.956 ಟ್ರಿಲಿಯನ್ ದೇಶೀಯ ಸಾಲ ಮತ್ತು PKR 22.434 ಟ್ರಿಲಿಯನ್ ಅಂತಾರಾಷ್ಟ್ರೀಯ ಸಾಲವನ್ನು ಒಳಗೊಂಡಿದೆ. ಇತ್ತೀಚೆಗಷ್ಟೇ ವಿಶ್ವಬ್ಯಾಂಕ್ ವರದಿಯೊಂದು ಪಾಕಿಸ್ತಾನದ ಆರ್ಥಿಕ ಅಭಿವೃದ್ಧಿಯು ಗಣ್ಯ ವರ್ಗಕ್ಕೆ ಸೀಮಿತವಾಗಿದೆ.

ಹೆಚ್ಚಿನ ಸರಕುಗಳ ಬೆಲೆಗಳು ಗಗನಕ್ಕೇರುತ್ತಿರುವ ಕಾರಣ ಸ್ಥಳೀಯ ಆಡಳಿತವು ಸರ್ಕಾರದ ದರ ಪಟ್ಟಿಯನ್ನು ಜಾರಿಗೊಳಿಸಲು ವಿಫಲವಾಗಿದೆ.

 

ವಾಣಿಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us