ಬೆಂಗಳೂರು: 10 ವರ್ಷಕ್ಕಿಂತ ಹೆಚ್ಚು ಕಾಲದಿಂದ ಅಪ್ಡೇಟ್ ಆಗದೇ ಇರುವ ಆಧಾರ್ ಕಾರ್ಡನ್ನು ಅಪ್ಡೇಟ್ (Aadhaar Card Updation) ಮಾಡುವಂತೆ ಸರ್ಕಾರ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಕೋಟ್ಯಂತರ ಜನರು ಆಧಾರ್ ಕಾರ್ಡ್ನಲ್ಲಿರುವ ತಮ್ಮ ಮಾಹಿತಿಯನ್ನು ನವೀಕರಿಸುವ ಕೆಲಸ ಮಾಡುತ್ತಿದ್ದಾರೆ. ಆಧಾರ್ ಕೇಂದ್ರಕ್ಕೆ ಹೋಗಿ 50 ರೂ ಕೊಟ್ಟು ನಮ್ಮ ಡೆಮಾಗ್ರಾಫಿಕ್ ಮಾಹಿತಿ ಅಪ್ಡೇಟ್ ಮಾಡಬಹುದು. ಆದರೆ, ಹೆಚ್ಚಿನ ಜನರು ಶೀಘ್ರದಲ್ಲಿ ಈ ಅಪ್ಡೇಟ್ ಮಾಡಲು ಸಾಧ್ಯವಾಗುವಂತೆ ಆನ್ಲೈನ್ನಲ್ಲೂ ಅವಕಾಶ ಮಾಡಿಕೊಡಲಾಗಿದೆ. ಜೂನ್ 14ರವರೆಗೂ ನೀವು ಆನ್ಲೈನ್ನಲ್ಲಿ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಬಹುದು. ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಇದು ಯುಐಡಿಎಐನ ಅಧಿಕೃತ ವೆಬ್ಸೈಟ್ನಲ್ಲಿ (UIDAI Website) ಇರುವ ಆಫರ್. ಇನ್ನೈದು ದಿನದಲ್ಲಿ ಈ ಆಫರ್ ಮುಗಿಯುತ್ತದೆ. ಜೂನ್ 14ರವರೆಗೂ ಉಚಿತವಾಗಿ ನಮ್ಮ ಆಧಾರ್ನ ಡೆಮೋಗ್ರಾಫಿಕ್ ವಿವರಗಳನ್ನು ಅಪ್ಡೇಟ್ ಮಾಡಬಹುದು. ಡೆಮಾಗ್ರಾಫಿಕ್ ವಿವರ ಎಂದರೆ ನಮ್ಮ ವಿಳಾಸ, ಹೆಸರು, ಜನ್ಮದಿನಾಂಕ ಇತ್ಯಾದಿ. ಆದರೆ, ಈ ಉಚಿತ ಸೇವೆ ಕೇವಲ ಮೈ ಆಧಾರ್ ಪೋರ್ಟಲ್ನಲ್ಲಿ ಮಾತ್ರವೇ.
ನಮ್ಮಲ್ಲಿ ಹೆಚ್ಚಿನ ಜನರು ಆಧಾರ್ ಕಾರ್ಡ್ ಮಾಡಿಸಿದಾಗಿನಿಂದ ಒಮ್ಮೆಯೂ ಅಪ್ಡೇಟ್ ಮಾಡಿಲ್ಲ. 10 ವರ್ಷಗಳಿಂದ ಅಪ್ಡೇಟ್ ಆಗದ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಬೇಕೆಂದು ಸರ್ಕಾರ ಜನಸಾಮಾನ್ಯರಿಗೆ ಸೂಚಿಸಿದೆ. ಐಡಿ ಪ್ರೂಫ್, ಅಡ್ರೆಸ್ ಪ್ರೂಫ್ ದಾಖಲೆಗಳನ್ನು ಆಧಾರ್ಗೆ ಮತ್ತೊಮ್ಮೆ ಸಲ್ಲಿಸಬೇಕಾಗುತ್ತದೆ. ಇದರಿಂದ ಆಧಾರ್ ಡಾಟಾಬೇಸ್ನಲ್ಲಿ ಸಮರ್ಪಕ ಮಾಹಿತಿ ಸಂಗ್ರಹವಾಗಿರುತ್ತದೆ.
ಜೂನ್ 14ರೊಳಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡದೇ ಹೋದರೆ ಉಚಿತ ಎಂಬುದು ರದ್ದಾಗುವುದು ಬಿಟ್ಟರೆ ಬೇರೇನೂ ವ್ಯತ್ಯಾಸವಾಗದು. ಮಾಮೂಲಿಯ ರೀತಿಯಲ್ಲಿ ನೀವು ಆಧಾರ್ ಸೆಂಟರ್ಗೆ ಹೋಗಿ ಆಧಾರ್ ವಿವರ ಅಪ್ಡೇಟ್ ಮಾಡಿಸಬೇಕೆಂದರೆ 50 ರೂ ಶುಲ್ಕ ಪಾವತಿಸಲೇಬೇಕು. ಜೂನ್ 14ರ ನಂತರ ಮೈ ಆಧಾರ್ ಪೋರ್ಟಲ್ನಲ್ಲೂ ನೀವು 50 ರೂ ಶುಲ್ಕ ಪಾವತಿಸಿಯೇ ಆಧಾರ್ ಅಪ್ಡೇಶನ್ ಮಾಡಬೇಕಾಗುತ್ತದೆ.
ಕೆಲ ದಿನಗಳ ಬಳಿಕ ಆಧಾರ್ ಕಾರ್ಡ್ನಲ್ಲಿ ನಿಮ್ಮ ಹೊಸ ಮಾಹಿತಿ ಅಪ್ಡೇಟ್ ಆಗಿರುತ್ತದೆ. ಅದನ್ನು ನೀವು ಯುಆರ್ಎನ್ ನಂಬರ್ ಬಳಸಿ ಟ್ರ್ಯಾಕ್ ಮಾಡಬಹುದು. ಅಪ್ಡೇಟ್ ಆದ ಆಧಾರ್ ಕಾರ್ಡ್ನ ಪ್ರಿಂಟೌಟ್ ಪಡೆದು ನಿಮ್ಮ ಬಳಿ ಇಟ್ಟುಕೊಳ್ಳಿ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ