Sign In

By signing in or creating an account, you agree with Associated Broadcasting Company's Terms & Conditions and Privacy Policy.

Hotstar Free: ಕ್ರಿಕೆಟ್ ಪ್ರಿಯರಿಗೆ ಖುಷಿ ಸುದ್ದಿ; ಜಿಯೋ ಹಾದಿ ಹಿಡಿದ ಹಾಟ್​ಸ್ಟಾರ್; ಏಷ್ಯಾಕಪ್, ವಿಶ್ವಕಪ್ ಫ್ರೀ ಸ್ಟ್ರೀಮಿಂಗ್

Watch World Cup Cricket Matches Free: ಮುಂಬರುವ ಏಷ್ಯಾಕಪ್ ಮತ್ತು ಐಸಿಸಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗಳ ಡಿಜಿಟಲ್ ಪ್ರಸಾರದ ಹಕ್ಕು ಹೊಂದಿರುವ ಡಿಸ್ನಿ ಹಾಟ್​ಸ್ಟಾರ್ ಈಗ ಆ ಪಂದ್ಯಗಳನ್ನು ತನ್ನ ಪ್ಲಾಟ್​ಫಾರ್ಮ್​ನಲ್ಲಿ ಉಚಿತವಾಗಿ ಪ್ರಸಾರ ಮಾಡಲು ನಿರ್ಧರಿಸಿದೆ.

Hotstar Free: ಕ್ರಿಕೆಟ್ ಪ್ರಿಯರಿಗೆ ಖುಷಿ ಸುದ್ದಿ; ಜಿಯೋ ಹಾದಿ ಹಿಡಿದ ಹಾಟ್​ಸ್ಟಾರ್; ಏಷ್ಯಾಕಪ್, ವಿಶ್ವಕಪ್ ಫ್ರೀ ಸ್ಟ್ರೀಮಿಂಗ್
ವರ್ಲ್ಡ್ ಟೆಸ್ಟ್ ಚಾಂಪಿಯನ್​ಶಿಪ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 09, 2023 | 6:02 PM

ನವದೆಹಲಿ: ಐಪಿಎಲ್ ಟೂರ್ನಿಯ ಡಿಜಿಟಲ್ ಸ್ಟ್ರೀಮಿಂಗ್ ಪ್ರಸಾರ ಮಾಡಿದ್ದ ಜಿಯೋಸಿನಿಮಾ (JioCinema) ಹೊಸ ವಿಶ್ವದಾಖಲೆ ಬರೆದದ್ದು ನೆನಪಿರಬಹುದು. ಐಪಿಎಲ್ ಪಂದ್ಯಗಳ ಪ್ರಸಾರ ಜಿಯೋಸಿನಿಮಾದಲ್ಲಿ ಉಚಿತವಾಗಿ ನೀಡಿದ್ದರಿಂದ ಡಿಜಿಟಲ್ ಪ್ಲಾಟ್​ಫಾರ್ಮ್​ನಲ್ಲಿ ಸುಮಾರು 45 ಕೋಟಿಯಷ್ಟು ಜನರು ಐಪಿಎಲ್ ವೀಕ್ಷಿಸಿದ್ದರು. ಫೈನಲ್ ಪಂದ್ಯದಲ್ಲಿ 3 ಕೋಟಿಗೂ ಹೆಚ್ಚು ಮಂದಿ ಲೈವ್ ವೀಕ್ಷಣೆ ಮಾಡಿ ದಾಖಲೆ ಬರೆಯಲಾಗಿತ್ತು. ಅದಕ್ಕೂ ಹಿಂದೆ ಐಪಿಎಲ್ ಪಂದ್ಯಗಳ ಡಿಜಿಟಲ್ ಪ್ರಸಾರದ ಹಕ್ಕು ಪಡೆದಿದ್ದ ಡಿಸ್ನಿ ಹಾಟ್​ಸ್ಟಾರ್​ಗೆ (Disney+ Hotstar) ಹೆಚ್ಚಿನ ವೀಕ್ಷಕರು ಸಿಕ್ಕಿರಲಿಲ್ಲ. ಸಬ್​ಸ್ಕ್ರೈಬಿಂಗ್ ಆಗಬೇಕಿದ್ದರಿಂದ ಹಾಟ್​ಸ್ಟಾರ್​ಗೆ ವೀಕ್ಷಕರ ಸಂಖ್ಯೆ ಕಡಿಮೆ ಆಗಿದ್ದರು. ಈಗ ಜಿಯೋಸಿನಿಮಾ ಪಡೆದಿರುವ ಅಪಾರ ಯಶಸ್ಸು ಹಾಟ್​ಸ್ಟಾರ್ ಕಾರ್ಯತಂತ್ರವನ್ನು ಬದಲಿಸುವಂತೆ ಮಾಡಿದೆ. ವರದಿಗಳ ಪ್ರಕಾರ ಮುಂಬರುವ ಏಷ್ಯಾಕಪ್ ಮತ್ತು ಐಸಿಸಿ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗಳ (Asia Cup and ICC World Cup Cricket) ಡಿಜಿಟಲ್ ಪ್ರಸಾರದ ಹಕ್ಕು ಹೊಂದಿರುವ ಡಿಸ್ನಿ ಹಾಟ್​ಸ್ಟಾರ್ ಈಗ ಆ ಪಂದ್ಯಗಳನ್ನು ತನ್ನ ಪ್ಲಾಟ್​ಫಾರ್ಮ್​ನಲ್ಲಿ ಉಚಿತವಾಗಿ ಪ್ರಸಾರ ಮಾಡಲು ನಿರ್ಧರಿಸಿದೆ.

ಭಾರತದಲ್ಲಿ ಸಾಧ್ಯವಾದಷ್ಟು ಹೆಚ್ಚು ಜನರು ಕ್ರಿಕೆಟ್ ಪಂದ್ಯಗಳನ್ನು ನೋಡುವ ಅವಕಾಶ ಸಿಗಲಿ ಎಂಬ ಕಾರಣಕ್ಕೆ ಸ್ಟ್ರೀಮಿಂಗ್ ಅನ್ನು ಉಚಿತವಾಗಿ ನೀಡಲು ನಿರ್ಧರಿಸಿರುವುದಾಗಿ ಡಿಸ್ನಿ ಹಾಟ್​ಸ್ಟಾರ್ ಸಂಸ್ಥೆ ಜೂನ್ 8ರಂದು ಘೋಷಿಸಿದೆ. ಇದರಿಂದ ಐಪಿಎಲ್ ಟೂರ್ನಿ ವೇಳೆ ತಾನು ಕಳೆದುಕೊಂಡಿದ್ದ ಕೋಟಿಗಟ್ಟಲೆ ವೀಕ್ಷಕರನ್ನು ಮರಳಿ ಪಡೆಯುವ ನಿರೀಕ್ಷೆಯಲ್ಲಿ ಹಾಟ್​ಸ್ಟಾರ್ ಇದೆ.

ಇದನ್ನೂ ಓದಿHAL: ಷೇರುವಿಭಜನೆ ಅಂತ ಹೇಳಿದ್ದೇ ತಡ ಎಚ್​ಎಎಲ್ ಷೇರಿಗೆ ಭರ್ಜರಿ ಬೇಡಿಕೆ; ಏನಿದು ಷೇರುವಿಭಜನೆ? ಯಾರಿಗೆ ಲಾಭ?

2023ರ ಐಪಿಎಲ್ ಪಂದ್ಯಗಳನ್ನು ಡಿಜಿಟಲ್ ಪ್ಲಾಟ್​ಫಾರ್ಮ್​ನಲ್ಲಿ ಉಚಿತವಾಗಿ ಪ್ರಸಾರ ಮಾಡಿದ್ದು ಇದೇ ಮೊದಲು. ಈ ಹಿನ್ನೆಲೆಯಲ್ಲಿ ಜಿಯೋಸಿನಿಮಾ ದಿಟ್ಟ ಹಾಗು ಅಪಾಯಕಾರಿ ಹೆಜ್ಜೆ ಇಟ್ಟಿತ್ತು. ವೀಕ್ಷಕರನ್ನು ತನ್ನ ಪ್ಲಾಟ್​ಫಾರ್ಮ್​ಗೆ ಸೆಳೆಯಲು ಕ್ರಿಕೆಟ್​ಗಿಂತ ಬೇರೆ ಸಾಧನ ಇಲ್ಲ ಎಂಬುದು ಜಿಯೋಗೆ ಗೊತ್ತಿದ್ದರಿಂದ ಈ ರಿಸ್ಕ್ ತೆಗೆದುಕೊಂಡಿತ್ತು. ಈಗ ತನ್ನ ಪ್ಲಾಟ್​ಫಾರ್ಮ್​ಗೆ ಕ್ರಿಕೆಟ್ ವೀಕ್ಷಿಸಲು ಬಂದಿದ್ದ ಬಳಕೆದಾರರನ್ನು ಹಿಡಿದಿಟ್ಟುಕೊಳ್ಳುವುದು ಜಿಯೋ ಮುಂದಿರುವ ಸವಾಲು.

ಈಗ ನಡೆಯುತ್ತಿರುವ ವರ್ಲ್ಡ್ ಟೆಸ್ಟ್ ಚಾಂಪಿಯನ್​ಶಿಪ್​ನ ಟಿವಿ ಮತ್ತು ಡಿಜಿಟಲ್ ಪ್ರಸಾರದ ಹಕ್ಕು ಸ್ಟಾರ್ ಗ್ರೂಪ್​ಗೆ ಇದೆ. ಡಿಸ್ನಿ ಹಾಟ್​ಸ್ಟಾರ್​ನಲ್ಲಿ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯ ಸ್ಟ್ರೀಮಿಂಗ್ ಆಗುತ್ತಿದೆ. ಕೆಲವೊಂದಿಷ್ಟು ವೀಕ್ಷಕರನ್ನು ಮರಳಿ ಪಡೆದಿದೆ. ಮುಂಬರುವ ಏಷ್ಯಾ ಕಪ್ ಮತ್ತು ಐಸಿಸಿ ವರ್ಲ್ಡ್ ಕಪ್ ಟೂರ್ನಿಗಳು ಹೆಚ್ಚು ಜನಪ್ರಿಯವಾಗಿರುವುದರಿಂದ ಹೆಚ್ಚಿನ ವೀಕ್ಷಕರನ್ನು ಸೆಳೆಯುವ ಅವಕಾಶ ಹಾಟ್​ಸ್ಟಾರ್​ಗೆ ಇದೆ. ಹೀಗಾಗಿ ಆ ಟೂರ್ನಿಯ ಪಂದ್ಯಗಳನ್ನು ಉಚಿತವಾಗಿ ಪ್ರಸಾರ ಮಾಡಲು ಹೊರಟಿದೆ ಹಾಟ್​ಸ್ಟಾರ್.

ಇದನ್ನೂ ಓದಿWTC Final 2023: ಭಾರತ ಗೆಲ್ಲಲು ಸಾಧ್ಯವೇ ಇಲ್ಲ: ರಿಕಿ ಪಾಂಟಿಂಗ್

ಐಪಿಎಲ್​ನಲ್ಲಿ ಹಾಟ್​ಸ್ಟಾರ್​ದೂ ದಾಖಲೆಯೇ….

ಐಪಿಎಲ್ 2023 ಟೂರ್ನಿಯಲ್ಲಿ ಭರ್ಜರಿ ಲಾಭ ಮಾಡಿದ್ದು ಜಿಯೋಸಿನಿಮಾ ಮಾತ್ರವಲ್ಲ, ಸ್ಟಾರ್ ಗ್ರೂಪ್ ಕೂಡ ಹೌದು. ಜಿಯೋ ಬಳಿ ಡಿಜಿಟಲ್ ಪ್ರಸಾರ ಹಕ್ಕು ಇದ್ದರೆ, ಸ್ಟಾರ್ ಬಳಿ ಟಿವಿ ಪ್ರಸಾರ ಹಕ್ಕು ಇತ್ತು. ಜಿಯೋದಲ್ಲಿ ಕ್ರಿಕೆಟ್ ನೋಡಿದವರ ಸಂಖ್ಯೆ 44 ಕೋಟಿಯಷ್ಟಿದ್ದರೆ, ಟಿವಿಯಲ್ಲಿ ಸ್ಟಾರ್ ವಾಹಿನಿಗಳಲ್ಲಿ ಐಪಿಎಲ್ ವೀಕ್ಷಿಸಿದವರ ಸಂಖ್ಯೆ 50 ಕೋಟಿ ಎಂದು ಅಂದಾಜು ಮಾಡಲಾಗಿದೆ. ಜಿಯೋ ಮತ್ತು ಸ್ಟಾರ್ ಇಬ್ಬರದ್ದೂ ದಾಖಲೆ ವೀಕ್ಷಕರ ಸಂಖ್ಯೆಯೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:56 pm, Fri, 9 June 23

ಜಾತಿಗಣತಿ ವರದಿ ಜಾರಿ ವಿಚಾರ: ಸ್ವಪಕ್ಷದ ವಿರುದ್ಧ ಶಾಮನೂರು ವಾಗ್ದಾಳಿ
ಜಾತಿಗಣತಿ ವರದಿ ಜಾರಿ ವಿಚಾರ: ಸ್ವಪಕ್ಷದ ವಿರುದ್ಧ ಶಾಮನೂರು ವಾಗ್ದಾಳಿ
28 ಸೆಕೆಂಡಲ್ಲಿ 20 ಹೊಡೆತ; ಉತ್ತರಾಖಂಡದ ಮೆಡಿಕಲ್ ಶಾಪ್ ಮಾಲೀಕರ ಮೇಲೆ ಹಲ್ಲೆ
28 ಸೆಕೆಂಡಲ್ಲಿ 20 ಹೊಡೆತ; ಉತ್ತರಾಖಂಡದ ಮೆಡಿಕಲ್ ಶಾಪ್ ಮಾಲೀಕರ ಮೇಲೆ ಹಲ್ಲೆ
ಕಾಮಿಡಿ ಶೋಗಳಲ್ಲಿ ಅಡಲ್ಟ್ ಭಾಷೆ ಯಾಕೆ? ಸಮರ್ಥನೆ ನೀಡಿದ ನಿರೂಪ್, ಶ್ರವಣ್
ಕಾಮಿಡಿ ಶೋಗಳಲ್ಲಿ ಅಡಲ್ಟ್ ಭಾಷೆ ಯಾಕೆ? ಸಮರ್ಥನೆ ನೀಡಿದ ನಿರೂಪ್, ಶ್ರವಣ್
ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ
ಲೋಕಾಯುಕ್ತ ಬಿ ರಿಪೋರ್ಟ್ ಸಲ್ಲಿಕೆ ಪ್ರಶ್ನಿಸಿ ದೂರುದಾರರಿಂದ ತಕರಾರು ಅರ್ಜಿ
ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಗೃಹಲಕ್ಷ್ಮಿ ಹಣದಿಂದ ತೋಟದಲ್ಲಿ ಬೋರ್​ವೆಲ್ ಕೊರೆಸಿದ ದಂಪತಿ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸಿದ್ದರಾಮಯ್ಯ ದಲಿತರ ಕೈ ಬಿಟ್ಟು ಮುಸಲ್ಮಾನರ ಕೈ ಹಿಡಿದಿದ್ದಾರೆ: ಅಶೋಕ
ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?
ಸ್ಟ್ಯಾಂಡಪ್ ಕಾಮಿಡಿಯನ್ ನಿರೂಪ್ ಮೋಹನ್ ಬಗ್ಗೆ ನಿಮಗೆಷ್ಟು ಗೊತ್ತು?
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ಮತೀಯ ಭಾವನೆಗಳನ್ನು ಯಾರೂ ಕೆರಳಿಸಬಾರದು: ಕೋಲಾರ ಮಸೀದಿಯೊಂದರ ಮೌಲ್ವಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ವರದಿ ಮೇಲಿನ ಚರ್ಚೆಗೆ ಸಿಎಂ ವಿಶೇಷ ಅಧಿವೇಶನ ಕರೆಯಲು ಮನವಿ: ಜಾರಕಿಹೊಳಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ
ಮಧ್ಯಂತರ ವರದಿಯನ್ನು ಅಧಿಕಾರಿಗಳು ಅಂತಿಮ ವರದಿ ಅಂದಿದ್ದಾರೆ: ಸ್ನೇಹಮಯಿ