After IPL: ವೀಕ್ಷಣೆಯಲ್ಲಿ ದಾಖಲೆ ಬರೆದಿರುವ ಜಿಯೋ ಸಿನಿಮಾ ಒಟಿಟಿಯ ಕಥೆ ಐಪಿಎಲ್ ಮುಗಿದ ಬಳಿಕ ಏನಾಗುತ್ತೆ?

JioCinema Plans For Post IPL: 2023ರ ಐಪಿಎಲ್ ಟೂರ್ನಿಗೆ ಮುನ್ನ ಹೆಚ್ಚು ಮಂದಿಗೆ ಗೊತ್ತೇ ಇಲ್ಲದಿದ್ದ ಜಿಯೋಸಿನಿಮಾ ಈಗ ಬಹಳಷ್ಟು ವೀಕ್ಷಕರ ಬಳಗ ಸಂಪಾದಿಸಿದೆ. ಐಪಿಎಲ್ ಮುಗಿದ ಬಳಿಕ ಇಷ್ಟು ವೀಕ್ಷಕರನ್ನು ಜಿಯೋಸಿನಿಮಾ ಹೇಗೆ ಉಳಿಸಿಕೊಳ್ಳುತ್ತದೆ ಎಂಬುದು ಕುತೂಹಲದ ಸಂಗತಿ.

After IPL: ವೀಕ್ಷಣೆಯಲ್ಲಿ ದಾಖಲೆ ಬರೆದಿರುವ ಜಿಯೋ ಸಿನಿಮಾ ಒಟಿಟಿಯ ಕಥೆ ಐಪಿಎಲ್ ಮುಗಿದ ಬಳಿಕ ಏನಾಗುತ್ತೆ?
ಜಿಯೋಸಿನಿಮಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 26, 2023 | 6:47 PM

ನವದೆಹಲಿ: 16ನೇ ಸೀಸನ್​ನ ಟಾಟಾ ಐಪಿಎಲ್ (IPL 2023) ಮೊದಲಿಂದ ಕೊನೆಯವರೆಗೂ ರೋಚಕತೆ ಉಳಿಸಿಕೊಂಡು ಬಂದಿರುವ ಟೂರ್ನಿ. ಆದರೆ, ಅದರ ಆನ್​ಲೈನ್ ಸ್ಟ್ರೀಮಿಂಗ್ ಈಗ ವಿಶ್ವದ ಕಣ್ಣು ಕುಕ್ಕಿದೆ. ಜಿಯೋಸಿನಿಮಾ ಆ್ಯಪ್​ನಲ್ಲಿ ಪ್ರಸಾರವಾದ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ 2.5 ಕೋಟಿ ಲೈವ್ ವೀಕ್ಷಣೆ (Concurrent Viewers) ಇತ್ತು. ಅಷ್ಟೊಂದು ದೊಡ್ಡ ಸಂಖ್ಯೆಯ ನೇರ ವೀಕ್ಷಣೆ ಬೇರೆ ಯಾವ ಕ್ರೀಡೆಗೂ ಸಿಕ್ಕಿಲ್ಲ. 2023ರ ಐಪಿಎಲ್​ನ ಮೊದಲ ಐದು ವಾರದಲ್ಲಿ ಜಿಯೋಸಿನಿಮಾ 1,300 ಕೋಟಿ ವಿಡಿಯೋ ವೀಕ್ಷಣೆ ಪಡೆದಿದೆ. ಒಂದು ಪಂದ್ಯವನ್ನು ಒಬ್ಬ ವ್ಯಕ್ತಿ ಸರಾಸರಿ 60 ನಿಮಿಷಕ್ಕೂ ಹೆಚ್ಚು ಕಾಲ ನೋಡಿದ್ದಾನೆ. ಇದು ವಿಶ್ವದಾಖಲೆಯೇ ಸರಿ. ಅಷ್ಟೇ ಅಲ್ಲ, ಈ ಸೀಸನ್​ನಯಲ್ಲಿ ಡಿಜಿಟಲ್ ಸ್ಟ್ರೀಮಿಂಗ್ ವೇಳೆ ಬಂದ ಪ್ರಾಯೋಜಕರ ಸಂಖ್ಯೆ ಬರೋಬ್ಬರಿ 26. ವಿಶ್ವದ ಯಾವುದೇ ಕ್ರೀಡಾಕೂಟಕ್ಕೂ ಈ ಭಾಗ್ಯ ಸಿಕ್ಕಿರಲಿಲ್ಲ.

ಜಿಯೋಸಿನಿಮಾದಲ್ಲಿ ಐಪಿಎಲ್ ಸ್ಟ್ರೀಮಿಂಗ್ ಆಗಿದ್ದು ಜಾಹೀರಾತುದಾರರಿಗೆ ಸುಗ್ಗಿಯೇ ಆಗಿದೆ. ಟಿವಿ ಪ್ರಸಾರದಲ್ಲಿ ಜಾಹೀರಾತು ಎಂದರೆ ಕೆಲವೇ ಪ್ರಬಲ ಸಂಸ್ಥೆಗಳಿಗೆ ಸೀಮಿತವಾಗಿತ್ತು. ಪ್ರಮುಖ ಕ್ರಿಕೆಟ್ ಪಂದ್ಯಗಳ ಪ್ರಸಾರದ ವೇಳೆ ಟಿವಿಯಲ್ಲಿ ಜಾಹೀರಾತಿಗೆ ದೊಡ್ಡ ಡಿಮ್ಯಾಂಡ್ ಇರುತ್ತದೆ. ದುಬಾರಿ ಹಣ ತೆರಬೇಕು. ಈಗ ಜಿಯೋಸಿನಿಮಾದಲ್ಲಿನ ಡಿಜಿಟಲ್ ಸ್ಟ್ರೀಮಿಂಗ್ ಬಹಳ ದೊಡ್ಡ ಸಂಖ್ಯೆಯ ಜಾಹೀರಾತುದಾರರಿಗೆ ಅವಕಾಶ ಮಾಡಿಕೊಟ್ಟಿದೆ. ಕಡಿಮೆ ಬೆಲೆಗೆ ಜಾಹೀರಾತು ಪ್ರಸಾರವಾಗುತ್ತದೆ. ಹೀಗಾಗಿ, ಜಾಹೀರಾತು ಉದ್ಯಮವು ಐಪಿಎಲ್​ನ ಡಿಜಿಟಲ್ ಸ್ಟ್ರೀಮಿಂಗ್​ನಿಂದ ಗರಿಗೆದರಿ ನಿಂತುಕೊಂಡಿದೆ.

ಇದನ್ನೂ ಓದಿHighest Pay: ಯಾವ ನಗರಗಳಲ್ಲಿ ಹೆಚ್ಚು ಸಂಬಳ; ಯಾವ ಹುದ್ದೆಗಳಿಗೆ ಹೆಚ್ಚು ಡಿಮ್ಯಾಂಡ್; ಇಲ್ಲಿದೆ ಡೀಟೇಲ್ಸ್

ವರದಿಯೊಂದರ ಪ್ರಕಾರ, ಭಾರತದಲ್ಲಿ ಈಗಲೂ ಕೂಡ ಶೇ. 44ರಷ್ಟು ಕ್ರೀಡಾಪ್ರೇಮಿಗಳು ಟಿವಿಯಲ್ಲೇ ಪಂದ್ಯಗಳನ್ನು ವೀಕ್ಷಿಸಲು ಇಷ್ಟಪಡುತ್ತಾರೆ. ಆದರೆ, ಪಂದ್ಯ ನೋಡೋಕೆ ಟಿವಿಯಾದರೂ ಸರಿ, ಡಿಜಿಟಲ್ ಆದರೂ ಸರಿ ಎನ್ನುವವರ ಸಂಖ್ಯೆ ಶೇ. 36ಇದೆ. ಇನ್ನು, ಶೇ. 20ರಷ್ಟು ಜನರು ತಮಗೆ ಡಿಜಿಟಲ್ ಮೂಲಕವೇ ಪಂದ್ಯ ವೀಕ್ಷಿಸಲು ಬಯಸುತ್ತಾರಂತೆ. ಈಗ ಜಿಯೋ ಸಿನಿಮಾದಲ್ಲಿ ಐಪಿಎಲ್ ಪಂದ್ಯಗಳು ಉಚಿತವಾಗಿ ಪ್ರಸಾರವಾಗಿರುವುದು ಕ್ರೀಡಾಪ್ರೇಮಿಗಳ ಡಿಜಿಟಲ್ ವೀಕ್ಷಣೆ ಪ್ರಮಾಣ ಹೆಚ್ಚಾಗುವಂತೆ ಆಡಿದೆ.

ಐಪಿಎಲ್ ಮುಗಿಯುತ್ತಿದೆ, ಜಿಯೋ ಸಿನಿಮಾ ಕಥೆ ಮುಂದೇನು?

ಐಪಿಎಲ್ ಟೂರ್ನಿಯ ಡಿಜಿಟಲ್ ರೈಟ್ಸ್ ಸಿಗುವ ಮುನ್ನ ಜಿಯೋಸಿನಿಮಾ ಆ್ಯಪ್ ಹೆಸರು ಕೇಳಿದವರು ವಿರಳ. ಡಿಜಿಟಲ್ ಸ್ಟ್ರೀಮಿಂಗ್ ಶುರುವಾಗಿದ್ದೇ ಬಂತು ಜಿಯೋಸಿನಿಮಾ ಜನಮಾನಸದಲ್ಲಿ ಕೂತುಹೋಗಿರುವುದು ಹೌದು. ಆದರೆ, ಮೇ 28ಕ್ಕೆ ಐಪಿಎಲ್ ಟೂರ್ನಿ ಮುಗಿಯುತ್ತದೆ. ಅದರ ನಂತರ ಜಿಯೋಸಿನಿಮಾ ಏನು ಮಾಡುತ್ತದೆ? ಐಪಿಎಲ್ ಟೂರ್ನಿ ಮೂಲಕ ತಾನು ಸಂಪಾದಿಸಿದ್ದ ಕೋಟ್ಯಂತರ ವೀಕ್ಷಕ ಬಳಗವನ್ನು ಹೇಗೆ ಉಳಿಸಿಕೊಳ್ಳುತ್ತದೆ ಎಂಬುದು ಪ್ರಶ್ನೆ. ನೆಟ್​ಫ್ಲಿಕ್ಸ್, ಅಮೇಜಾನ್ ಪ್ರೈಮ್, ಹಾಟ್​ಸ್ಟಾರ್, ಝೀ5 ಮೊದಲಾದ ಒಟಿಟಿ ಪ್ಲಾಟ್​ಫಾರ್ಮ್​ಗಳ ಪೈಪೋಟಿಯಲ್ಲಿ ಜಿಯೋಸಿನಿಮಾ ಮುಂದಡಿ ಇಡಲು ಸಾಧ್ಯವಾ?

ಇದನ್ನೂ ಓದಿIPL 2023 Closing Ceremony: ವಿಭಿನ್ನವಾಗಿ ನಡೆಯಲ್ಲಿದೆ ಈ ಐಪಿಎಲ್​ನ ಸಮಾರೋಪ ಸಮಾರಂಭ

ಈಗ ಇರುವ ಮಾಹಿತಿ ಪ್ರಕಾರ, ಜಿಯೋಸಿನಿಮಾ 100ಕ್ಕೂ ಹೆಚ್ಚು ಚಲನಚಿತ್ರಗಳು ಮತ್ತು ಟಿವಿ ಸೀರೀಸ್​ಗಳನ್ನು ಇಟ್ಟುಕೊಂಡಿದೆ. ಐಪಿಎಲ್ ಟೂರ್ನಿ ಮುಗಿಯುತ್ತಲೇ ಇವುಗಳನ್ನು ಬಿಡುತ್ತಾ ಹೋಗುತ್ತದೆ.

ಇದಲ್ಲದೇ, ವೂಟ್ ಆ್ಯಪ್ ಮತ್ತು ಜಿಯೋಸಿನಿಮಾ ವಿಲೀನಗೊಳ್ಳುತ್ತಿವೆ. ಎರಡೂ ಕೂಡ ವಯಾಕಾಮ್18 ಸಂಸ್ಥೆಗೆ ಸೇರಿದವೇ. ವೂಟ್ ಆ್ಯಪ್​ನಲ್ಲಿ ಹಲವಾರು ಜನಪ್ರಿಯ ಸೀರಿಯಲ್ ಮತ್ತು ಟಿವಿ ಶೋಗಳಿವೆ. ವಿಲೀನಗೊಂಡ ಬಳಿಕ ಜಿಯೋಸಿನಿಮಾ ಬ್ರ್ಯಾಂಡ್ ಅಡಿಯಲ್ಲಿ ಅದು ಮುಂದುವರಿಯುತ್ತದೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್