AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Highest Pay: ಯಾವ ನಗರಗಳಲ್ಲಿ ಹೆಚ್ಚು ಸಂಬಳ; ಯಾವ ಹುದ್ದೆಗಳಿಗೆ ಹೆಚ್ಚು ಡಿಮ್ಯಾಂಡ್; ಇಲ್ಲಿದೆ ಡೀಟೇಲ್ಸ್

Bengaluru Tops List Of Highest Salary Hike In 2023fy: ಟೀಮ್​ಲೀಸ್ ಸರ್ವಿಸಸ್ ಎಂಬ ಸಂಸ್ಥೆ ಬಿಡುಗಡೆ ಮಾಡಿದ ಒಂದು ವರದಿ ಪ್ರಕಾರ 2021-22ರ ವರ್ಷಕ್ಕೆ ಹೋಲಿಸಿದರೆ 2022-23ರಲ್ಲಿ ಬೆಂಗಳೂರಿನಲ್ಲಿ ಆಗಿರುವ ಸಂಬಳ ಹೆಚ್ಚಳ ಶೇ. 7.79ರಷ್ಟು. ಬೇರಾವ ನಗರಗಳಿಗಿಂತ ಹೆಚ್ಚು ಸಂಬಳ ಹೆಚ್ಚಳ ಕಂಡಿದ್ದಾರೆ ಬೆಂಗಳೂರಿಗರು.

Highest Pay: ಯಾವ ನಗರಗಳಲ್ಲಿ ಹೆಚ್ಚು ಸಂಬಳ; ಯಾವ ಹುದ್ದೆಗಳಿಗೆ ಹೆಚ್ಚು ಡಿಮ್ಯಾಂಡ್; ಇಲ್ಲಿದೆ ಡೀಟೇಲ್ಸ್
ಸಂಬಳ ಹೆಚ್ಚಳ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 26, 2023 | 5:32 PM

Share

ಬೆಂಗಳೂರು: ಭಾರತದ ಔದ್ಯಮಿಕ ವಲಯದಲ್ಲಿ ಒಟ್ಟಾರೆ ಸಂಬಳ ಪ್ರಮಾಣದ ಏರಿಕೆಯಲ್ಲಿ (Salary Hike) ತುಸು ಕಡಿಮೆ ಆಗಿದ್ದರೂ ಮುಂಬೈ, ಡೆಲ್ಲಿ, ಬೆಂಗಳೂರು, ಚೆನ್ನೈ, ಹೈದರಾಬಾದ್ ನಗರಗಳು ಹೆಚ್ಚು ಸಂಬಳ ಕೊಡುವ ನಗರಗಳೆನಿಸಿವೆ. ಅದರಲ್ಲೂ ಬೆಂಗಳೂರು ಅತಿ ಹೆಚ್ಚು ಸಂಬಳ ಕೊಡುವ ನಗರವಾಗಿದೆ. ಇದು ಟೀಮ್​ಲೀಸ್ ಸರ್ವಿಸಸ್ ಎಂಬ ಸಂಸ್ಥೆ ಬಿಡುಗಡೆ ಮಾಡಿದ ಒಂದು ವರದಿಯಲ್ಲಿ ಕಂಡು ಬಂದ ಅಂಶ. ಈ ವರದಿ ಪ್ರಕಾರ 2021-22ರ ವರ್ಷಕ್ಕೆ ಹೋಲಿಸಿದರೆ 2022-23ರಲ್ಲಿ ಬೆಂಗಳೂರಿನಲ್ಲಿ ಆಗಿರುವ ಸಂಬಳ ಹೆಚ್ಚಳ ಶೇ. 7.79ರಷ್ಟು. ಬೇರಾವ ನಗರಗಳಿಗಿಂತ ಹೆಚ್ಚು ಸಂಬಳ ಹೆಚ್ಚಳ ಕಂಡಿದ್ದಾರೆ ಬೆಂಗಳೂರಿಗರು. ಭಾರತದಲ್ಲಿ ಒಟ್ಟಾರೆ ಆಗಿರುವ ಸಂಬಳ ಹೆಚ್ಚಳ ಶೇ. 3.20 ಮಾತ್ರ. ಅತಿಹೆಚ್ಚು ಸಂಬಳ ಕೊಟ್ಟಿರುವ ನಗರಗಳನ್ನು ಕ್ರಮವಾಗಿ ಪಟ್ಟಿ ಮಾಡುವುದಾದರೆ ಬೆಂಗಳೂರು, ಮುಂಬೈ, ಚೆನ್ನೈ, ದೆಹಲಿ ಮತ್ತು ಹೈದರಾಬಾದ್ ನಿಲ್ಲುತ್ತವೆ.

ಜಾಬ್ಸ್ ಅಂಡ್ ಸ್ಯಾಲರಿ ಪ್ರೈಮರ್ ರಿಪೋರ್ಟ್ ಹೆಸರಿನ ಈ ವರದಿಯಲ್ಲಿ ಕಂಡ ಒಂದು ಬಹು ಅಚ್ಚರಿಯ ಅಂಶ ಎಂದರೆ ಅದು ಗುತ್ತಿಗೆ ಉದ್ಯೋಗಿಗಳು (Contract Employees) ಮತ್ತು ಖಾಯಂ ಉದ್ಯೋಗಿಗಳ ನಡುವಿನ ಸಂಬಳದಲ್ಲಿ ಇದ್ದ ಅಂತರ ಕಡಿಮೆ ಆಗಿರುವುದು. ಶೇ. 41ರಷ್ಟು ಹುದ್ದೆಗಳಲ್ಲಿ ಗುತ್ತಿಗೆ ಮತ್ತು ಖಾಯಂ ನೌಕರರ ನಡುವಿನ ಸಂಬಳ ವ್ಯತ್ಯಾಸ ಶೇ. 5 ಅಥವಾ ಅದಕ್ಕಿಂತಲೂ ಕಡಿಮೆ ಎನ್ನಲಾಗಿದೆ.

2022-23ರಲ್ಲಿ ಸೇಲ್ಸ್ ಮತ್ತು ಐಟಿ ಹುದ್ದೆಗಳಿಗೆ ಹೆಚ್ಚು ಡಿಮ್ಯಾಂಡ್ ಸೃಷ್ಟಿಯಾಗಿತ್ತು. ಬಿಎಫ್​ಎಸ್​ಐ ಎಂದು ಹೇಳಲಾಗುವ ಬ್ಯಾಂಕಿಂಗ್, ಹಣಕಾಸು ಸೇವೆ ಮತ್ತು ಇನ್ಷೂರೆನ್ಸ್ ವಲಯದಲ್ಲಿ ಸಂಬಳ ಹೆಚ್ಚಳ ಕಡಿಮೆ ಆಗಿದೆ.

ಇದನ್ನೂ ಓದಿLeave Encashment Tax: ಲೀವ್ ಎನ್​ಕ್ಯಾಶ್ಮೆಂಟ್​ಗೆ ತೆರಿಗೆ: ಬದಲಾವಣೆ ತಂದ ಹಣಕಾಸು ಇಲಾಖೆ; ಏನಿದು ಹೊಸ ರೂಲ್ಸ್?

ಬೆಂಗಳೂರಿನಲ್ಲಿ ಟೆಲಿಕಾಂ ವಲಯದಲ್ಲಿ ರಿಲೇಶನ್​ಶಿಪ್ ಮ್ಯಾನೇಜರ್ ಹುದ್ದೆಗಳಿಗೆ ಶೇ. 10.19ರಷ್ಟು ಸಂಬಳ ಹೆಚ್ಚಳವಾಗಿದೆ. ಮ್ಯಾನೇಜರ್​ಗಳ ಪೈಕಿ ಈ ಹುದ್ದೆಗೆ ಅತಿ ಹೆಚ್ಚು ಸಂಬಳ ಇದೆ.

ಇನ್ನು ಗೇಮ್ ಡೆವಲಪರ್ಸ್ ಹುದ್ದೆಗಳಿಗೂ ಒಳ್ಳೆಯ ಆದ್ಯತೆ ಸಿಕ್ಕಿದೆ. ಬೆಂಗಳೂರಿನಲ್ಲಿ ಗೇಮ್ ಡೆವಲಪರ್​ಗೆ ಸಿಕ್ಕ ಸರಾಸರಿ ಸಂಬಳ ಹೆಚ್ಚಳ ಶೇ. 9.30 ಎಂದು ಟೀಮ್​ಲೀಸ್ ಸರ್ವಿಸಸ್​ನ ಈ ವರದಿ ಹೇಳುತ್ತದೆ.

ಟ್ರೆಂಡಿಂಗ್​ನಲ್ಲಿರುವ ಉದ್ಯಮಗಳು ಯಾವುವು?

ಇಂಡಸ್ಟ್ರಿಯಲ್ ಮ್ಯಾನುಫ್ಯಾಕ್ಚರಿಂಗ್ ವಲಯ ಬಹಳ ಉತ್ತಮವಾಗಿ ಗಮನ ಸೆಳೆಯುತ್ತಿದೆ. ರಿಯಲ್ ಎಸ್ಟೇಟ್, ಕಟ್ಟಡ ನಿರ್ಮಾಣ, ಹೆಲ್ತ್​ಕೇರ್, ಮೀಡಿಯಾ ಅಂಡ್ ಎಂಟರ್ಟೈನ್ಮೆಂಟ್, ಆಟೊಮೊಬೈಲ್, ಇಕಾಮರ್ಸ್ ವಲಯದಲ್ಲಿ ಒಳ್ಳೆಯ ಸಂಬಳ ಸಿಗುತ್ತಿವೆ. ಹೊಸ ಹೊಸ ರೀತಿಯ ಹುದ್ದೆಗಳು ರಚನೆಯಾಗುತ್ತಿವೆ. ಭವಿಷ್ಯದ ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೆಯಾಗುವ ಹುದ್ದೆಗಳ ಸೃಷ್ಟಿಯಾಗುತ್ತಿವೆ. ಇವುಗಳ ಹೆಸರೂ ಕೂಡ ಹೊಸತೇ.

ಇದನ್ನೂ ಓದಿAngel Tax: 21 ದೇಶಗಳಿಗೆ ಏಂಜೆಲ್ ಟ್ಯಾಕ್ಸ್​ನಿಂದ ವಿನಾಯಿತಿ ಕೊಟ್ಟ ಭಾರತ; ಏನಿದು ಏಂಜೆಲ್ ತೆರಿಗೆ? ಇಲ್ಲಿದೆ ಡೀಟೇಲ್ಸ್

ಟೆಲಿಕಾಂ ವಲಯದಲ್ಲಿ ಸೀನಿಯರ್ ಗೋಲ್ಯಾಂಡ್ ಡೆವಲಪರ್ ಎಂಬ ಹುದ್ದೆ ಒಂದು ಉದಾಹರಣೆ. ಬಯೋಸ್ಟಾಟಿಶಿಯನ್, ಲೀಡ್ ಮಜೆಂಟೋ ಡೆವಲಪರ್, ರೋಬೋಟಿಕ್ಸ್ ಇನ್ಸ್​ಟ್ರಕ್ಟರ್ ಇತ್ಯಾದಿ ಹೆಸರಿನ ಹುದ್ದೆಗಳಿವೆ. ಇವೆಲ್ಲವೂ ಆಯಾ ಉದ್ಯಮಕ್ಕೆ ಮಾತ್ರ ಹೊಂದಿಕೆಯಾಗುವ ಹೆಸರಿನ ಹುದ್ದೆಗಳು. ಆನ್​ಲೈನ್ ಶಿಕ್ಷಣ ಕ್ಷೇತ್ರದಲ್ಲಿ ರೋಬೋಟಿಕ್ಸ್ ಇನ್ಸ್​ಟ್ರಕ್ಟರ್ ಹುದ್ದೆ ಕುತೂಹಲ ಮೂಡಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ