Angel Tax: 21 ದೇಶಗಳಿಗೆ ಏಂಜೆಲ್ ಟ್ಯಾಕ್ಸ್​ನಿಂದ ವಿನಾಯಿತಿ ಕೊಟ್ಟ ಭಾರತ; ಏನಿದು ಏಂಜೆಲ್ ತೆರಿಗೆ? ಇಲ್ಲಿದೆ ಡೀಟೇಲ್ಸ್

21 Nations Exempted From Angel Tax In India: ಭಾರತಕ್ಕೆ ಅತಿಹೆಚ್ಚು ವಿದೇಶೀ ನೇರ ಹೂಡಿಕೆ ಬರುವ ದೇಶಗಳೆನಿಸಿದ ಸಿಂಗಾಪುರ, ಐರ್ಲೆಂಡ್, ಮಾರಿಷಸ್ ಮೊದಲಾದವಕ್ಕೆ ಏಂಜೆಲ್ ಟ್ಯಾಕ್ಸ್ ವಿನಾಯಿತಿ ಪಟ್ಟಿಯಲ್ಲಿ ಸ್ಥಾನ ಇಲ್ಲದಿರುವುದು ಕೆಲವರಿಗೆ ಅಚ್ಚರಿ ಮೂಡಿಸಿದೆ.

Angel Tax: 21 ದೇಶಗಳಿಗೆ ಏಂಜೆಲ್ ಟ್ಯಾಕ್ಸ್​ನಿಂದ ವಿನಾಯಿತಿ ಕೊಟ್ಟ ಭಾರತ; ಏನಿದು ಏಂಜೆಲ್ ತೆರಿಗೆ? ಇಲ್ಲಿದೆ ಡೀಟೇಲ್ಸ್
ಏಂಜೆಲ್ ತೆರಿಗೆ
Follow us
|

Updated on: May 26, 2023 | 3:49 PM

ನವದೆಹಲಿ: ಅಮೆರಿಕ, ಬ್ರಿಟನ್ ಸೇರಿದಂತೆ 21 ದೇಶಗಳಿಂದ ಬರುವ ಹೂಡಿಕೆಗಳಿಗೆ ಏಂಜೆಲ್ ಟ್ಯಾಕ್ಸ್​ನಿಂದ (Angel Tax) ಭಾರತ ವಿನಾಯಿತಿ ನೀಡಿದೆ. ಈ ಸಂಬಂಧ ಮೇ 24ರಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಅಧಿಸೂಚನೆ ಹೊರಡಿಸಿದೆ. ಷೇರುಪೇಟೆಯಲ್ಲಿ ಲಿಸ್ಟ್ ಆಗದ ಭಾರತೀಯ ಕಂಪನಿಗಳಲ್ಲಿ ಬೇರೆ ದೇಶಗಳ ಸಂಸ್ಥೆಗಳು ಮಾಡುವ ಹೂಡಿಕೆಗಳಿಗೆ ಏಂಜೆಲ್ ಟ್ಯಾಕ್ಸ್ ವಿಧಿಸಲಾಗುತ್ತದೆ. ಈಗ 21 ದೇಶಗಳ ಹೂಡಿಕೆಗಳಿಗೆ ಏಂಜೆಲ್ ಟ್ಯಾಕ್ಸ್ ಅನ್ವಯ ಆಗುವುದಿಲ್ಲ. ಭಾರತಕ್ಕೆ ಅತಿಹೆಚ್ಚು ವಿದೇಶೀ ನೇರ ಹೂಡಿಕೆ ಬರುವ ದೇಶಗಳೆನಿಸಿದ ಸಿಂಗಾಪುರ, ಐರ್ಲೆಂಡ್, ಮಾರಿಷಸ್ ಮೊದಲಾದವಕ್ಕೆ ಏಂಜೆಲ್ ಟ್ಯಾಕ್ಸ್ ವಿನಾಯಿತಿ ಪಟ್ಟಿಯಲ್ಲಿ ಸ್ಥಾನ ಇಲ್ಲದಿರುವುದು ಕೆಲವರಿಗೆ ಅಚ್ಚರಿ ಮೂಡಿಸಿದೆ.

ಏಂಜೆಲ್ ಟ್ಯಾಕ್ಸ್ ಎಂದರೇನು?

ಇದು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 56(2) (7ಬಿ) ವ್ಯಾಪ್ತಿಗೆ ಬರುತ್ತದೆ. ಷೇರುಪೇಟೆಯಲ್ಲಿ ಲಿಸ್ಟ್ ಆಗದ, ಅಂದರೆ ಸಂಪೂರ್ಣ ಖಾಸಗಿ ಒಡೆತನದಲ್ಲಿರುವ ಕಂಪನಿಯ ಷೇರುಗಳನ್ನು ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಿನ ದರಕ್ಕೆ ನೀಡಿದರೆ ಈ ತೆರಿಗೆ ವಿಧಿಸಲಾಗುತ್ತದೆ. ಈ ಹೆಚ್ಚುವರಿ ಮೊತ್ತದ ಮೇಲೆ ಶೇ. 30.9ರಷ್ಟು ಟ್ಯಾಕ್ಸ್ ಹಾಕಲಾಗುತ್ತದೆ. ಸ್ಟಾರ್ಟಪ್​ಗಳೇ ಈ ತೆರಿಗೆ ಪಾವತಿಸಬೇಕು.

ಇದನ್ನೂ ಓದಿRs 2,000 Bank Rules: ಎರಡು ಸಾವಿರ ರೂ ನೋಟು ಬದಲಾವಣೆಗೆ ಯಾವ್ಯಾವ ಬ್ಯಾಂಕಲ್ಲಿ ಹೇಗಿದೆ ನಿಯಮ?

ಭಾರತದಲ್ಲಿ ಏಂಜೆಲ್ ಟ್ಯಾಕ್​​ನಿಂದ ವಿನಾಯಿತಿ ಪಡೆದಿರುವ ದೇಶಗಳು

  1. ಅಮೆರಿಕಕ್ಕೆ
  2. ಬ್ರಿಟನ್
  3. ಫ್ರಾನ್ಸ್
  4. ಜರ್ಮನಿ
  5. ಆಸ್ಟ್ರೇಲಿಯಾ
  6. ಸ್ಪೇನ್
  7. ಆಸ್ಟ್ರಿಯಾ
  8. ಕೆನಡಾ
  9. ಚೆಕ್ ರಿಪಬ್ಲಿಕ್
  10. ಬೆಲ್ಜಿಯಂ
  11. ಡೆನ್ಮಾರ್ಕ್
  12. ಫಿನ್ಲೆಂಡ್
  13. ಇಸ್ರೇಲ್
  14. ಇಟೆಲಿ
  15. ಐಸ್ಲೆಂಡ್
  16. ಜಪಾನ್
  17. ಕೊರಿಯಾ
  18. ರಷ್ಯಾ
  19. ನಾರ್ವೆ
  20. ನ್ಯೂಜಿಲೆಂಡ್
  21. ಸ್ವೀಡನ್

ಇದನ್ನೂ ಓದಿUS Indians: ಅಮೆರಿಕದಲ್ಲಿ ಕೆಲಸ ಕಳೆದುಕೊಂಡ ಭಾರತೀಯರು ಎಷ್ಟು? 2 ತಿಂಗಳೊಳಗೆ ಬೇರೆ ಕೆಲಸ ಗಿಟ್ಟಿಸಿಕೊಳ್ಳದಿದ್ದರೆ ಗತಿ ಏನು?

2012ರಲ್ಲಿ ಭಾರತದಲ್ಲಿ ಏಂಜೆಲ್ ತೆರಿಗೆ ಜಾರಿಗೆ ಬಂದಿತ್ತು. ಈಗ 21 ದೇಶಗಳ ಹೂಡಿಕೆಗಳಿಗೆ ವಿನಾಯಿತಿ ನೀಡಲಾಗಿದೆ ಎಂದರೆ ಈ ಮೇಲಿನ ದೇಶಗಳಿಂದ ಅನ್​ಲಿಸ್ಟೆಡ್ ಸ್ಟಾರ್ಟಪ್​ಗಳಿಗೆ ಬರುವ ಹೂಡಿಕೆಗಳಿಗೆ ಏಂಜೆಲ್ ತೆರಿಗೆ ಇರುವುದಿಲ್ಲ.

ಪಟ್ಟಿಯಲ್ಲಿ ಯುಎಇ, ಸಿಂಗಾಪುರ್, ನೆದರ್​ಲೆಂಡ್ಸ್, ಮಾರಿಷಸ್ ಇತ್ಯಾದಿ ದೇಶಗಳು ಇಲ್ಲದಿರುವುದು ಅಚ್ಚರಿ ತಂದಿರುವುದು ಹೌದು. ಯಾಕೆಂದರೆ, ಭಾರತಕ್ಕೆ ಬರುವ ಒಟ್ಟು ಎಫ್​ಡಿಐನಲ್ಲಿ ಅರ್ಧಕ್ಕಿಂತ ಹೆಚ್ಚು ಭಾಗ ಸಿಂಗಾಪುರ, ಮಾರಿಷಸ್ ಮತ್ತು ಯುಎಇಯಿಂದ ಬರುತ್ತದೆ. ಈ ದೇಶಗಳಿಂದ ಹೂಡಿಕೆ ಪಡೆಯುವ ಭಾರತೀಯ ಸ್ಟಾರ್ಟಪ್​ಗಳಿಗೆ ಈಗ ಆತಂಕ ಶುರುವಾಗಿದೆ. ಈ ಸಂಬಂಧ ಅಧಿಕೃತ ಸ್ಪಷ್ಟೀಕರಣಕ್ಕಾಗಿ ಉದ್ಯಮ ವಲಯ ಕಾಯುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಉದ್ಯೋಗ/ಶಿಕ್ಷಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಬೇಕು: ಶ್ರೀಗಳು
ಉದ್ಯೋಗ/ಶಿಕ್ಷಣದಲ್ಲಿ ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಬೇಕು: ಶ್ರೀಗಳು
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಸುಪರ್ದಿಗೆ ಬಿಟ್ಟಿದ್ದು: ಸಚಿವ
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ತಮ್ಮ ಸ್ಪರ್ಶ ಕಂಡುಕೊಳ್ಳುವರೇ?
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಮೆಜೆಸ್ಟಿಕ್​​ನಲ್ಲಿ ರಸ್ತೆ ಗುಂಡಿಗಳ ದರ್ಬಾರ್, ಸ್ವಲ್ಪ ಯಾಮಾರಿದರೆ ಡೇಂಜರ್
ಶಿವಮೊಗ್ಗ: 20 ಕೆಜಿ ಕೇಕ್​ ಕತ್ತರಿಸಿ ಗೂಳಿಯ ಜನ್ಮದಿನ ಆಚರಣೆ
ಶಿವಮೊಗ್ಗ: 20 ಕೆಜಿ ಕೇಕ್​ ಕತ್ತರಿಸಿ ಗೂಳಿಯ ಜನ್ಮದಿನ ಆಚರಣೆ
ದಾವಣಗೆರೆಯಲ್ಲಿ ರೈತರ ಬೆಳೆ ಹಾಳು, ಮಳೆಯಾದರೂ ರೈತನಿಗೆ ಸಂಕಷ್ಟ ತಪ್ಪಿದ್ದಲ್ಲ
ದಾವಣಗೆರೆಯಲ್ಲಿ ರೈತರ ಬೆಳೆ ಹಾಳು, ಮಳೆಯಾದರೂ ರೈತನಿಗೆ ಸಂಕಷ್ಟ ತಪ್ಪಿದ್ದಲ್ಲ
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
‘ಇನ್ನೊಂದು ಅವಕಾಶ ಕೊಡಿ ಬಿಗ್ ಬಾಸ್’; ರಂಜಿತ್ ಹೊರಹೋಗುತ್ತಿದ್ದಂತೆ ಕಣ್ಣೀರು
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಪೂಜೆ ಸಮಯದಲ್ಲಿ ರೇಷ್ಮೆ ವಸ್ತ್ರ ಧರಿಸುವುದರ ಮಹತ್ವ ತಿಳಿಯಿರಿ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಈ ರಾಶಿಯವರು ಇಂದು ಕೆಲಸ ಕಾರ್ಯಗಳಲ್ಲಿ ಜಯಶಾಲಿಯಾಗುತ್ತಾರೆ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ
ಪಂತ್ ಇಂಜುರಿ ಬಗ್ಗೆ ಬಿಗ್ ಅಪ್​ಡೇಟ್ ನೀಡಿದ ರೋಹಿತ್ ಶರ್ಮಾ